Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೇವಲ ಹಣಕ್ಕಾಗಿ ರಾಜ್​ ಕುಂದ್ರಾ ಜೊತೆ ಮದುವೆ ಆದ್ರಾ ಶಿಲ್ಪಾ ಶೆಟ್ಟಿ?

ಶಿಲ್ಪಾ ಶೆಟ್ಟೊ ಅವರಿ ರಾಜ್​ಕುಂದ್ರಾ ಅವರನ್ನು ಮದುವೆ ಆಗಿ ಹಾಯಾಗಿ ಸಂಸಾರ ನಡೆಸುತ್ತಿದ್ದಾರೆ. ಪರಸ್ಪರ ಆರೋಪ-ಪ್ರತ್ಯಾರೋಪ ಮಾಡಿದರೂ ಇಬ್ಬರೂ ಒಬ್ಬರನ್ನೊಬ್ಬರು ಬಿಟ್ಟಿಲ್ಲ. ಇಂದು ಇಬ್ಬರೂ ಸಂತೋಷದ ಜೀವನ ನಡೆಸುತ್ತಿದ್ದಾರೆ. ಅವರು ರಾಜ್ ಕುಂದ್ರಾನ ಮದುವೆ ಆಗಿದ್ದೇಕೆ ಎಂಬುದನ್ನು ಹೇಳಿದ್ದಾರೆ.

ಕೇವಲ ಹಣಕ್ಕಾಗಿ ರಾಜ್​ ಕುಂದ್ರಾ ಜೊತೆ ಮದುವೆ ಆದ್ರಾ ಶಿಲ್ಪಾ ಶೆಟ್ಟಿ?
ಶಿಲ್ಪಾ-ರಾಜ್
Follow us
 ಶ್ರೀಲಕ್ಷ್ಮೀ ಎಚ್
| Updated By: ರಾಜೇಶ್ ದುಗ್ಗುಮನೆ

Updated on: Aug 19, 2024 | 9:08 AM

ನಟಿ ಶಿಲ್ಪಾ ಶೆಟ್ಟಿ ಹಲವು ಸಿನಿಮಾಗಳಲ್ಲಿ ಪ್ರಮುಖ ಪಾತ್ರಗಳಲ್ಲಿ ನಟಿಸಿ ಅಭಿಮಾನಿಗಳನ್ನು ರಂಜಿಸಿದ್ದಾರೆ. ಇಂದಿಗೂ ಒಂದಿಲ್ಲೊಂದು ಕಾರಣಕ್ಕೆ ನಟಿ ಸುದ್ದಿಯಲ್ಲಿದ್ದಾರೆ. ಫಿಟ್​ನೆಸ್​ನಿಂದಾಗಿ ಸದಾ ಸುದ್ದಿಯಲ್ಲಿರುವ ಶಿಲ್ಪಾ ಒಂದು ಕಾಲದಲ್ಲಿ ತಮ್ಮ ವೈಯಕ್ತಿಕ ಬದುಕಿನಿಂದ ಸುದ್ದಿಯಾಗಿದ್ದರು. ಅವರ ಪತಿ ಮತ್ತು ಉದ್ಯಮಿ ರಾಜ್ ಕುಂದ್ರಾ ಅವರನ್ನು ಅಶ್ಲೀಲ ಸಿನಿಮಾ ನಿರ್ಮಾಣ ಪ್ರಕರಣದಲ್ಲಿ ಬಂಧಿಸಿದ ನಂತರ, ಶಿಲ್ಪಾ ಬಗ್ಗೆ ಹಲವು ಚರ್ಚೆಗಳು ಪ್ರಾರಂಭವಾದವು. ಹಣಕ್ಕಾಗಿಯೇ ಅವರು ರಾಜ್ ಕುಂದ್ರಾನ ಮದುವೆಯಾಗಿದ್ದಾರೆ ಎಂದು ಹಲವರು ನಟಿಯನ್ನು ಟ್ರೋಲ್ ಮಾಡಿದ್ದರು.

ನಟಿ ಸಂದರ್ಶನದ ಮೂಲಕ ಜನರಿಗೆ ವಿವರವಾದ ಉತ್ತರವನ್ನೂ ನೀಡಿದ್ದರು. ಶಿಲ್ಪಾ ಮದುವೆ ಸಂದರ್ಭಲ್ಲಿ ರಾಜ್ ಕುಂದ್ರಾ 108ನೇ ಶ್ರೀಮಂತ ಬ್ರಿಟಿಷ್ ಭಾರತೀಯರಾಗಿದ್ದರು. ‘ನಾನು ಆಗಲೂ ಶ್ರೀಮಂತನಾಗಿದ್ದೆ ಮತ್ತು ಈಗಲೂ ಶ್ರೀಮಂತನಾಗಿಯೇ ಇದ್ದೇನೆ. ಹಣದ ಕಾರಣಕ್ಕೆ ನಾನು ರಾಜ್ ನನ್ನು ಮದುವೆಯಾಗಲೇ ಇಲ್ಲ’ ಎಂದಿದ್ದರು ಶಿಲ್ಪಾ.

‘ಯಶಸ್ವಿ ಮಹಿಳೆ ತನ್ನ ಷರತ್ತುಗಳ ಪ್ರಕಾರ ಜೀವನ ನಡೆಸಲು ಸಹಾಯ ಮಾಡುವ ವ್ಯಕ್ತಿಯನ್ನು ಮದುವೆಯಾಗುತ್ತಾಳೆ. ಅದಕ್ಕಾಗಿಯೇ ನಾನು ರಾಜ್ ಅವರನ್ನು ಮದುವೆಯಾಗಿದ್ದೇನೆ. ಸಂಗಾತಿಯಲ್ಲಿ ನಾನು ಬಯಸಿದ ಎಲ್ಲ ಗುಣಗಳೂ ರಾಜ್ ಅವರಲ್ಲಿದ್ದವು’ ಎಂದು ಹೇಳಿದ್ದರು.

‘ರಾಜ್ ಅವರನ್ನು ಮದುವೆಯಾಗುವ ಮುನ್ನ ನನ್ನ ಬಳಿ ಶ್ರೀಮಂತರ ಸರತಿ ಸಾಲು ಇತ್ತು. ಆದರೆ ಜೀವನದಲ್ಲಿ ಹಣಕಾಸಿನ ವಿಷಯಗಳಿಗೆ ನಾನು ಎಂದಿಗೂ ಪ್ರಾಮುಖ್ಯತೆ ನೀಡಿಲ್ಲ. ಜೀವನದಲ್ಲಿ ಎಲ್ಲವೂ ಹಣಕ್ಕಾಗಿ ಅಲ್ಲ.’ ಎಂದು ನಟಿ ಶಿಲ್ಪಾ ಶೆಟ್ಟಿ ಹೇಳಿದ್ದರು. ಶಿಲ್ಪಾ ಯಾವಾಗಲೂ ತಮ್ಮ ಅಭಿಮಾನಿಗಳಿಗೆ ವೈಯಕ್ತಿಕ ಜೀವನದ ಪ್ರಮುಖ ವಿಷಯಗಳನ್ನು ಹೇಳುತ್ತಾರೆ.

ಶಿಲ್ಪಾ-ರಾಜ್ ಲವ್ ಸ್ಟೋರಿ ಸಿನಿಮಾ ಕಥೆಗಿಂತ ಕಡಿಮೆ ಇಲ್ಲ. ಪರಸ್ಪರ ಆರೋಪ-ಪ್ರತ್ಯಾರೋಪ ಮಾಡಿದರೂ ಇಬ್ಬರೂ ಒಬ್ಬರನ್ನೊಬ್ಬರು ಬಿಟ್ಟಿಲ್ಲ. ಇಂದು ಇಬ್ಬರೂ ಸಂತೋಷದ ಜೀವನ ನಡೆಸುತ್ತಿದ್ದಾರೆ.

ಇದನ್ನೂ ಓದಿ: ರಿಯಾಲಿಟಿ ಶೋನ ಒಂದು ಎಪಿಸೋಡ್​ಗೆ ಶಿಲ್ಪಾ ಶೆಟ್ಟಿ ಪಡೆವ ಸಂಭಾವನೆ ಎಷ್ಟು?

ಶಿಲ್ಪಾ ಮತ್ತು ರಾಜ್ ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. ಅವರ ಹೆಸರು ವಿಯಾನ್ ಮತ್ತು ಅವರು 2020 ರಲ್ಲಿ ಜನಿಸಿದರು. ನಂತರ, ನಟಿ ಬಾಡಿಗೆ ತಾಯ್ತನದ ಮೂಲಕ ಹೆಣ್ಣು ಮಗುವಿಗೆ ಜನ್ಮ ನೀಡಿದರು. ಶಿಲ್ಪಾ ಮಗಳ ಹೆಸರು ಸಮಿಶಾ. ಶಿಲ್ಪಾ ಯಾವಾಗಲೂ ತಮ್ಮ  ಮಕ್ಕಳೊಂದಿಗೆ ಚಿತ್ರಗಳು ಅಥವಾ ವೀಡಿಯೊಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡುತ್ತಾರೆ. ಅವರು ಸದ್ಯ ‘ಕೆಡಿ’ ಸಿನಿಮಾದಲ್ಲಿ ಪ್ರಮುಖ ಪಾತ್ರ ಮಾಡುತ್ತಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ರಾಮನಗರ: ಮಾನವೀಯತೆ ಮೆರೆದ ಪೊಲೀಸ್​ ಪೇದೆಗೆ ಮೆಚ್ಚುಗೆ
ರಾಮನಗರ: ಮಾನವೀಯತೆ ಮೆರೆದ ಪೊಲೀಸ್​ ಪೇದೆಗೆ ಮೆಚ್ಚುಗೆ
ಈದ್ ಆಚರಿಸಿದ ಮುಸ್ಲಿಮರ ಮೇಲೆ ಹೂಮಳೆ ಸುರಿಸಿದ ಹಿಂದೂಗಳು
ಈದ್ ಆಚರಿಸಿದ ಮುಸ್ಲಿಮರ ಮೇಲೆ ಹೂಮಳೆ ಸುರಿಸಿದ ಹಿಂದೂಗಳು
ಪವರ್‌ಪ್ಲೇನಲ್ಲೇ ಪವರ್ ಕಳೆದುಕೊಂಡ ಕೆಕೆಆರ್
ಪವರ್‌ಪ್ಲೇನಲ್ಲೇ ಪವರ್ ಕಳೆದುಕೊಂಡ ಕೆಕೆಆರ್
ಉತ್ತರ ಕರ್ನಾಟಕದಲ್ಲಿ ನೀರಿಗಾಗಿ ಹಾಹಾಕಾರ ಈಗಾಗಲೇ ಶುರುವಾಗಿದೆ
ಉತ್ತರ ಕರ್ನಾಟಕದಲ್ಲಿ ನೀರಿಗಾಗಿ ಹಾಹಾಕಾರ ಈಗಾಗಲೇ ಶುರುವಾಗಿದೆ
ಪೊಲೀಸ್ ತಂಡದ ಕಾರ್ಯಕ್ಷಮತೆಗೆ ವ್ಯಾಪಕ ಮೆಚ್ಚುಗೆ, ಅಭಿನಂದಿಸಿದ ಐಜಿಪಿ
ಪೊಲೀಸ್ ತಂಡದ ಕಾರ್ಯಕ್ಷಮತೆಗೆ ವ್ಯಾಪಕ ಮೆಚ್ಚುಗೆ, ಅಭಿನಂದಿಸಿದ ಐಜಿಪಿ
ಸಚಿವ ಎಂಪಿ ಪಾಟೀಲ್​ಗೆ ಚಿನ್ನದ ಉಂಗುರ ತೊಡಿಸಿ ಆಶೀರ್ವದಿಸಿದ ಸ್ವಾಮೀಜಿ
ಸಚಿವ ಎಂಪಿ ಪಾಟೀಲ್​ಗೆ ಚಿನ್ನದ ಉಂಗುರ ತೊಡಿಸಿ ಆಶೀರ್ವದಿಸಿದ ಸ್ವಾಮೀಜಿ
ಪಕ್ಷದ ಸಂಘಟನೆ ವಿಜಯೇಂದ್ರ ನೇತೃತ್ವದಲ್ಲಿ ನಮ್ಮಆದ್ಯತೆಯಾಗಿದೆ: ಶ್ರೀರಾಮುಲು
ಪಕ್ಷದ ಸಂಘಟನೆ ವಿಜಯೇಂದ್ರ ನೇತೃತ್ವದಲ್ಲಿ ನಮ್ಮಆದ್ಯತೆಯಾಗಿದೆ: ಶ್ರೀರಾಮುಲು
ದೇಗುಲದ ಭಕ್ತಿಗೀತೆ ಸೌಂಡ್ ಕಡಿಮೆ ಮಾಡುವಂತೆ ಮುಸ್ಲಿಂ ಯುವಕರಿಂದ ಅವಾಜ್
ದೇಗುಲದ ಭಕ್ತಿಗೀತೆ ಸೌಂಡ್ ಕಡಿಮೆ ಮಾಡುವಂತೆ ಮುಸ್ಲಿಂ ಯುವಕರಿಂದ ಅವಾಜ್
ನೋಯ್ಡಾದಲ್ಲಿ ಬೆಂಕಿ ಅವಘಡ; 3 ಕಾರ್ಖಾನೆಗಳು ಸ್ಥಳದಲ್ಲೇ ಸುಟ್ಟು ಭಸ್ಮ
ನೋಯ್ಡಾದಲ್ಲಿ ಬೆಂಕಿ ಅವಘಡ; 3 ಕಾರ್ಖಾನೆಗಳು ಸ್ಥಳದಲ್ಲೇ ಸುಟ್ಟು ಭಸ್ಮ
ಅಬ್ಬಬ್ಬಾ ಚಿನ್ನವೋ ಚಿನ್ನ...ಬಂಗಾರದಂಗಡಿಯಾದ ದಾವಣಗೆರೆ ಎಸ್ಪಿ ಕಚೇರಿ!
ಅಬ್ಬಬ್ಬಾ ಚಿನ್ನವೋ ಚಿನ್ನ...ಬಂಗಾರದಂಗಡಿಯಾದ ದಾವಣಗೆರೆ ಎಸ್ಪಿ ಕಚೇರಿ!