ವರುಣ್ ಧವನ್ಗೆ ಶ್ರದ್ಧಾ ಕಪೂರ್ ಪ್ರಪೋಸ್ ಮಾಡಿದ್ದ ವಿಚಾರ ನಿಮಗೆ ಗೊತ್ತೇ?
ಪ್ರಾಥಮಿಕ ಶಾಲೆಯಿಂದ ವರುಣ್ ಧವನ್ ಹಾಗೂ ಶ್ರದ್ಧಾ ಕಪೂರ್ ಒಟ್ಟಿಗೆ ಬೆಳೆದವರು. ಈ ಕಾರಣಕ್ಕೆ ಇಬ್ಬರ ಮಧ್ಯೆ ಒಳ್ಳೆಯ ಬಾಂಡಿಂಗ್ ಬೆಳೆದಿದೆ. ವರುಣ್ ಧವನ್ಗೂ ಶ್ರದ್ಧಾ ಕಪೂರ್ ಮೇಲೆ ಕ್ರಶ್ ಇತ್ತು. ಆದರೆ, ಇದನ್ನು ಅವರು ಎಕ್ಸ್ಪ್ರೆಸ್ ಮಾಡಿರಲಿಲ್ಲ. ಆದರೆ, ಶ್ರದ್ಧಾ ಈ ಬಗ್ಗೆ ಹೇಳಿಕೊಂಡಿದ್ದರು.

ಶ್ರದ್ಧಾ ಕಪೂರ್ ಹಾಗೂ ವರುಣ್ ಧವನ್ ಅವರು ಮೊದಲಿನಿಂದಲೂ ಗೆಳೆಯರು. ಇವರು ಸಿನಿಮಾಗಳಲ್ಲಿ ಒಟ್ಟಾಗಿ ನಟಿಸಿದ್ದಾರೆ. ಆದರೆ, ವರುಣ್ ಧವನ್ ಮೇಲೆ ಶ್ರದ್ಧಾ ಕಪೂರ್ಗೆ ಪ್ರೀತಿ ಇತ್ತು ಎನ್ನುವ ವಿಚಾರ ನಿಮಗೆ ಗೊತ್ತೇ? ಈ ವಿಚಾರವನ್ನು ಸ್ವತಃ ಶ್ರದ್ಧಾ ಕಪೂರ್ ಅವರು ಹೇಳಿಕೊಂಡಿದ್ದರು. ಅವರು ಸದ್ಯ ‘ಸ್ತ್ರೀ 2’ ಚಿತ್ರದ ಗೆಲುವಿನ ಅಲೆಯಲ್ಲಿ ತೇಲುತ್ತಿದ್ದಾರೆ. ಈ ಸಿನಿಮಾದಲ್ಲಿ ವರುಣ್ ಧವನ್ ಅವರು ಅತಿಥಿ ಪಾತ್ರ ಮಾಡಿದ್ದರು.
ವರುಣ್ ಧವನ್ ಹಾಗೂ ಶ್ರದ್ಧಾ ಕಪೂರ್ ಪ್ರಾಥಮಿಕ ಶಾಲೆಯಿಂದ ಒಟ್ಟಿಗೆ ಓದಿದವರು. ಈ ಕಾರಣಕ್ಕೆ ಇಬ್ಬರ ಮಧ್ಯೆ ಒಳ್ಳೆಯ ಬಾಂಡಿಂಗ್ ಬೆಳೆದಿತ್ತು. ವರುಣ್ ಧವನ್ಗೂ ಶ್ರದ್ಧಾ ಕಪೂರ್ ಮೇಲೆ ಕ್ರಶ್ ಇತ್ತು. ಆದರೆ, ಇದನ್ನು ಅವರು ಎಕ್ಸ್ಪ್ರೆಸ್ ಮಾಡಿರಲಿಲ್ಲ. ಶ್ರದ್ಧಾ ಕಪೂರ್ ಅವರು ಹಾಗಲ್ಲ. ಅವರು ಪ್ರೀತಿ ವಿಚಾರವನ್ನು ಒಪ್ಪಿಕೊಂಡಿದ್ದರು. ‘ನಾನು ಮಾತ್ರ ವರುಣ್ ಧವನ್ನ ಇಷ್ಟಪಟ್ಟಿದ್ದೆ’ ಎಂದು ಅವರು ಹೇಳಿಕೊಂಡಿದ್ದಾರೆ.
‘ವರುಣ್ ಧವನ್ ಅವರು ನನ್ನ ಪ್ರಪೋಸ್ ರಿಜೆಕ್ಟ್ ಮಾಡಿದ್ದರು. ಚಿಕ್ಕ ವಯಸ್ಸಿನಲ್ಲಿ ನನಗೆ ವರುಣ್ ಮೇಲೆ ಕ್ರಶ್ ಇತ್ತು. ಒಮ್ಮೆ ನಾವು ಒಂದು ಕಡೆ ಪಿಕ್ನಿಕ್ಗೆ ತೆರಳಿದ್ದೆವು. ವರುಣ್ ನಾನು ನಿನ್ನ ಬಳಿ ಒಂದು ಮಾತನ್ನು ಹೇಳುತ್ತೇನೆ. ಅದನ್ನು ಉಲ್ಟಾ ಹೇಳುತ್ತೇನೆ. ನೀನು ಅದರ ಅರ್ಥವನ್ನು ಕಂಡು ಹಿಡಿಯಬೇಕು ಎಂದಿದ್ದೆ. ಜೊತೆಗೆ ಯೂ ಲವ್ ಐ ಎಂದಿದ್ದೆ. ನನಗೆ ಇಷ್ಟ ಆಗಲ್ಲ ಎಂದು ಆತ ಓಡಿ ಹೋಗಿದ್ದ’ ಎಂದಿದ್ದರು ಶ್ರದ್ಧಾ ಕಪೂರ್.
ವರುಣ್ ಧವನ್ ಅವರು ನತಾಶಾ ದಲಾಲ್ನ ಮದುವೆ ಆಗಿದ್ದಾರೆ. ವರುಣ್ ಹಾಗೂ ನತಾಶಾ ಚಿಕ್ಕ ವಯಸ್ಸಿನಿಂದ ಗೆಳೆಯರಾಗಿದ್ದರು. ಇನ್ನು, ಶ್ರದ್ಧಾ ಕಪೂರ್ ಕೂಡ ಪ್ರೀತಿಯಲ್ಲಿ ಇದ್ದಾರೆ. ರಾಹುಲ್ ಮೋದಿ ಜೊತೆ ಶ್ರದ್ಧಾ ಡೇಟಿಂಗ್ ಮಾಡುತ್ತಿದ್ದಾರೆ. ಇಬ್ಬರೂ ಸುತ್ತಾಡುತ್ತಿರುವ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಇದನ್ನೂ ಓದಿ: ‘ಸ್ತ್ರೀ 2’ ಚಿತ್ರದಿಂದ ಬಹುದೊಡ್ಡ ಗೆಲುವು ಕಂಡ ನಟಿ ಶ್ರದ್ಧಾ ಕಪೂರ್
ಶ್ರದ್ಧಾ ಕಪೂರ್ ನಟನೆಯ ‘ಸ್ತ್ರೀ 2’ ಸಿನಿಮಾ ಮೆಚ್ಚುಗೆ ಪಡೆಯುತ್ತಿದೆ. ಈ ಸಿನಿಮಾ ಭಾರತದ ಬಾಕ್ಸ್ ಆಫೀಸ್ನಲ್ಲಿ 190.55 ಕೋಟಿ ರೂಪಾಯಿ ಗಳಿಕೆ ಮಾಡಿದೆ. ಭಾನುವಾರ ಈ ಸಿನಿಮಾ ಬರೋಬ್ಬರಿ 55 ಕೋಟಿ ರೂಪಾಯಿ ಕಲೆಕ್ಷನ್ ಮಾಡಿ ಬೀಗಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.