‘ಖಾನ್ಗಳ ಬಗ್ಗೆ ನನಗೆ ಯಾವುದೇ ದ್ವೇಷವಿಲ್ಲ, ಆದರೂ ಅವರ ಸಿನಿಮಾದಲ್ಲಿ ನಟಿಸಲ್ಲ’; ಕಂಗನಾ
ನಟಿಯಾಗಿ ಯಶಸ್ವಿ ಆದ ಬಳಿಕ ಕಂಗನಾ ರಣಾವತ್ ಅವರು ರಾಜಕೀಯದಲ್ಲೂ ಗೆಲುವು ಕಂಡಿದ್ದಾರೆ. ಹಿಮಾಚಲ ಪ್ರದೇಶದ ಮಂಡಿ ಕ್ಷೇತ್ರದಿಂದ ಅವರು ಸಂಸದೆ ಆಗಿದ್ದು, ಸಂಪೂರ್ಣ ರಾಜಕೀಯದಲ್ಲಿ ಸಕ್ರಿಯರಾಗಿದ್ದಾರೆ. ಅವರು ಈಗ ತಮ್ಮ ಸಿನಿಮಾ ಆಯ್ಕೆಗಳ ಬಗ್ಗೆ ಮಾತನಾಡಿದ್ದಾರೆ.
ನಟಿ ಕಂಗನಾ ರಣಾವತ್ ಅವರು ಭಿನ್ನವಾಗಿ ಗುರುತಿಸಿಕೊಳ್ಳುತ್ತಾರೆ. ಅವರ ಸಿನಿಮಾಗಳ ಆಯ್ಕೆ ಕೂಡ ಭಿನ್ನವಾಗಿಯೇ ಇರುತ್ತವೆ. ಅವರು ಈವರೆಗೆ ಬಾಲಿವುಡ್ನ ಪ್ರಮುಖ ಹೀರೋಗಳ ಜೊತೆ ನಟಿಸಿಲ್ಲ. ಅವರ ಮೇಲೆ ಏನಾದರೂ ದ್ವೇಷವೇ ಎನ್ನುವ ಪ್ರಶ್ನೆ ಇತ್ತು. ಇದಕ್ಕೆ ಕಂಗನಾ ರಣಾವತ್ ಅವರು ಉತ್ತರ ನೀಡಿದ್ದಾರೆ. ಹೀಗೇಕೆ ಎನ್ನುವುದಕ್ಕೆ ಅವರು ವಿವರಣೆ ನೀಡಿದ್ದಾರೆ. ಅವರ ಉತ್ತರದಲ್ಲಿ ಅರ್ಥವಿದೆ ಎಂದು ಅನೇಕರು ಮಾತನಾಡಿಕೊಂಡಿದ್ದಾರೆ.
ಕಂಗನಾ ರಣಾವತ್ ಅವರು ಈವರೆಗೆ ಸಲ್ಮಾನ್ ಖಾನ್, ಶಾರುಖ್ ಖಾನ್, ಆಮಿರ್ ಖಾನ್, ರಣಬೀರ್ ಕಪೂರ್ ಹಾಗೂ ಅಕ್ಷಯ್ ಕುಮಾರ್ ಜೊತೆ ತೆರೆ ಹಂಚಿಕೊಂಡಿಲ್ಲ. ಇವರ ಜೊತೆ ಸಿನಿಮಾ ಮಾಡದೆಯೂ ಬಾಲಿವುಡ್ನಲ್ಲಿ ಹೆಸರು ಮಾಡಬಹುದು ಎಂಬುದನ್ನು ಇತರ ನಾಯಕಿಯರಿಗೆ ತೋರಿಸುವ ಉದ್ದೇಶ ಕಂಗನಾ ರಣಾವತ್ಗೆ ಇದೆ.
‘ಖಾನ್ಗಳು ಹೀರೋಗಳಾಗಿ ನಟಿಸಿದ ಸಿನಿಮಾಗಳನ್ನು ನಾನು ರಿಜೆಕ್ಟ್ ಮಾಡಿದೆ. ಎಲ್ಲಾ ಖಾನ್ಗಳೂ ನನ್ನ ಜೊತೆ ಚೆನ್ನಾಗಿಯೇ ಇದ್ದಾರೆ. ಅವರು ಯಾರೂ ನನ್ನ ಜೊತೆ ತಪ್ಪಾಗಿ ವರ್ತಿಸಿಲ್ಲ. ಕೆಲ ಬಾಲಿವುಡ್ ಹೀರೋಗಳು ನನ್ನ ಜೊತೆ ಕೆಟ್ಟದಾಗಿ ನಡೆದುಕೊಂಡಿದ್ದು ಇದೆ. ಆದರೆ ಖಾನ್ಗಳು ಹಾಗಲ್ಲ. ಆದಾಗ್ಯೂ ನಾನು ಅವರ ಸಿನಿಮಾಗಳಲ್ಲಿ ನಟಿಸಲು ಇಚ್ಛಿಸಿಲ್ಲ’ ಎಂದಿದ್ದಾರೆ ಕಂಗನಾ.
‘ಈ ಹೀರೋಗಳ ಸಿನಿಮಾಗಳಲ್ಲಿ ಹೀರೋಯಿನ್ಗಳಿಗೆ ಕೇವಲ ಎರಡು ದೃಶ್ಯ ಇರುತ್ತವೆ. ಅದನ್ನು ಮಾಡೋಕೆ ನನಗೆ ಇಷ್ಟ ಇಲ್ಲ. ಎ-ಲಿಸ್ಟ್ನಲ್ಲಿ ಇರುವ ನಟಿಯರಿಗೆ ನಾನು ಮಾದರಿ ಆಗಬೇಕು. ನಾನು ರಣಬೀರ್ ಕಪೂರ್, ಅಕ್ಷಯ್ ಕುಮಾರ್ ಸಿನಿಮಾಗಳಲ್ಲಿ ನಟಿಸಲು ನೋ ಹೇಳಿದ್ದೇನೆ. ಹೀರೋಯಿನ್ನ ಹೀರೋ ಮಾತ್ರ ಸಕ್ಸಸ್ಫುಲ್ ಮಾಡಬಲ್ಲ ಎನ್ನುವಂಥ ಸಿನಿಮಾಗಳು ನನಗೆ ಇಷ್ಟವಿಲ್ಲ. ನಾವಾಗೇ ಬೇಕಿದ್ದರೂ ಯಶಸ್ಸು ಕಾಣಬಹುದು’ ಎಂಬುದು ಕಂಗನಾ ಅಭಿಪ್ರಾಯ.
ಇದನ್ನೂ ಓದಿ: ಸಂಸದೆ, ನಟಿ ಕಂಗನಾ ರಣಾವತ್ ಮನೆ ಮಾರಿಕೊಳ್ಳುವ ಸ್ಥಿತಿ ಬಂತಾ? ಎಲ್ಲರಿಗೂ ಅಚ್ಚರಿ
ಕಂಗನಾ ರಣಾವತ್ ಅವರು ಸದ್ಯ ಸಂಸದೆ ಆಗಿದ್ದಾರೆ. ಹಿಮಾಚಲ ಪ್ರದೇಶದ ಮಂಡಿ ಕ್ಷೇತ್ರದಿಂದ ಸ್ಪರ್ಧಿಸಿ ಅವರು ಎಂಪಿ ಆಗಿ ಆಯ್ಕೆ ಆಗಿದ್ದಾರೆ. ಒಂದೊಮ್ಮೆ ಎಂಪಿ ಆದರೆ ಚಿತ್ರರಂಗ ತೊರೆಯೋದಾಗಿ ಅವರು ಚುನಾವಣೆಗೂ ಮೊದಲು ಹೇಳಿದ್ದರು. ಆದರೆ, ಈ ಬಗ್ಗೆ ಅವರು ಈಗ ಅಧಿಕೃತ ನಿರ್ಧಾರ ಪ್ರಕಟಿಸಿಲ್ಲ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.