ನಟ ಸಿದ್ದಾರ್ಥ್ ಮಲ್ಹೋತ್ರಾ ಹಾಗೂ ನಟಿ ಕಿಯಾರಾ ಅಡ್ವಾಣಿ (Kiara Advani) ಅವರು ಹಾಯಾಗಿ ಸಂಸಾರ ಮಾಡುತ್ತಿದ್ದಾರೆ. ಚಿತ್ರರಂಗದಲ್ಲಿ ಈ ಸೆಲೆಬ್ರಿಟಿಗಳಿಗೆ ಸಖತ್ ಬೇಡಿಕೆ ಇದೆ. ಇಂದು (ಜನವರಿ 16) ಸಿದ್ದಾರ್ಥ್ ಮಲ್ಹೋತ್ರಾ ಅವರಿಗೆ ಜನ್ಮದಿನದ (Sidharth Malhotra Birthday) ಸಂಭ್ರಮ. 39ನೇ ವರ್ಷದ ಹುಟ್ಟುಹಬ್ಬವನ್ನು ಅವರು ಆಚರಿಸಿಕೊಂಡಿದ್ದಾರೆ. ಪತಿಯ ಜನ್ಮದಿನಕ್ಕೆ ಕಿಯಾರಾ ಅಡ್ವಾಣಿ ಅವರು ಮುತ್ತಿನ ಮಳೆ ಸುರಿಸಿದ್ದಾರೆ. ಆ ಸಂದರ್ಭದ ವಿಡಿಯೋವನ್ನು ಅವರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಅಭಿಮಾನಿಗಳ ವಲಯದಲ್ಲಿ ಈ ವಿಡಿಯೋ ವೈರಲ್ ಆಗಿದೆ. ಎಲ್ಲರೂ ಸಿದ್ದಾರ್ಥ್ ಮಲ್ಹೋತ್ರಾಗೆ (Sidharth Malhotra) ಜನ್ಮದಿನದ ಶುಭಾಶಯ ತಿಳಿಸುತ್ತಿದ್ದಾರೆ.
ಕಳೆದ ವರ್ಷ ಫೆಬ್ರವರಿಯಲ್ಲಿ ಸಿದ್ದಾರ್ಥ್ ಮಲ್ಹೋತ್ರಾ ಮತ್ತು ಕಿಯಾರಾ ಅಡ್ವಾಣಿ ಅವರ ಮದುವೆ ನೆರವೇರಿತ್ತು. ಇಬ್ಬರೂ ಪರಸ್ಪರ ಪ್ರೀತಿಸಿ ಮದುವೆ ಆದರು. ಗಂಡನ ಹುಟ್ಟುಹಬ್ಬವನ್ನು ಕಿಯಾರಾ ಅಡ್ವಾಣಿ ಅವರು ಬಹಳ ಸಡಗರದಿಂದ ಆಚರಿಸಿದ್ದಾರೆ. ‘ಹ್ಯಾಪಿ ಬರ್ತ್ಡೇ ಲವ್’ ಎಂದು ಕ್ಯಾಪ್ಷನ್ ನೀಡಿ, ಜನ್ಮದಿನದ ಸೆಲೆಬ್ರೇಷನ್ನ ವಿಡಿಯೋವನ್ನು ಅವರು ಹಂಚಿಕೊಂಡಿದ್ದಾರೆ.
ಇದನ್ನೂ ಓದಿ: ಸಿದ್ದಾರ್ಥ್ ಮಲ್ಹೋತ್ರ-ಕಿಯಾರಾ ಅಡ್ವಾಣಿ ಮಧ್ಯೆ ಇರೋ ವಯಸ್ಸಿನ ಅಂತರ ಇಷ್ಟೊಂದಾ?
ಸಿದ್ದಾರ್ಥ್ ಮಲ್ಹೋತ್ರಾ ಅವರ ಹುಟ್ಟುಹಬ್ಬಕ್ಕಾಗಿ ಕಿಯಾರಾ ಅಡ್ವಾಣಿ ಅವರು ವಿಶೇಷವಾದ ಕೇಕ್ ರೆಡಿ ಮಾಡಿಸಿದ್ದಾರೆ. ಸಿನಿಮಾ ರೀಲ್ನ ಥೀಮ್ನಲ್ಲಿ ಈ ಕೇಕ್ ವಿನ್ಯಾಸಗೊಂಡಿದೆ. ಅದರ ಮೇಲೆ ಸಿದ್ದಾರ್ಥ್ ಮಲ್ಹೋತ್ರಾ ಅವರ ಚಿಕ್ಕದಾದ ಪ್ರತಿಕೃತಿ ನಿಲ್ಲಿಸಲಾಗಿದೆ. ಒಟ್ಟಿನಲ್ಲಿ ಬಹಳ ಸಡಗರದಿಂದ ಗಂಡನ ಹುಟ್ಟುಹಬ್ಬವನ್ನು ಕಿಯಾರಾ ಅಡ್ವಾಣಿ ಆಚರಿಸಿದ್ದಾರೆ. ಪತ್ನಿಯ ಪ್ರೀತಿಗೆ ಸಿದ್ದಾರ್ಥ್ ಮಲ್ಹೋತ್ರಾ ಫಿದಾ ಆಗಿದ್ದಾರೆ.
This is wholesome 🥹🫶❤️
Happy Birthday to love of our life @SidMalhotra 🥳 @advani_kiara #HappyBirthdaySidharthMalhotra #SidharthMalhotra #KiaraAdvani #SidKiara pic.twitter.com/3ulGysSuDI
— Sidharth Malhotra FC (@SidharthFC_) January 16, 2024
ನಿರ್ಮಾಪಕ, ನಿರ್ದೇಶಕ ಕರಣ್ ಜೋಹರ್ ಕೂಡ ಸಿದ್ದಾರ್ಥ್ ಮಲ್ಹೋತ್ರಾ ಅವರ ಹುಟ್ಟುಹಬ್ಬದ ಪಾರ್ಟಿಯಲ್ಲಿ ಭಾಗಿ ಆಗಿದ್ದಾರೆ. ಆ ಫೋಟೋ ಕೂಡ ವೈರಲ್ ಆಗಿದೆ. ರೋಹಿತ್ ಶೆಟ್ಟಿ ನಿರ್ದೇಶನದ ‘ಇಂಡಿಯನ್ ಪೊಲೀಸ್ ಫೋರ್ಸ್’ ವೆಬ್ ಸರಣಿಯಲ್ಲಿ ಸಿದ್ದಾರ್ಥ್ ಮಲ್ಹೋತ್ರಾ ನಟಿಸುತ್ತಿದ್ದಾರೆ. ಆ ಮೂಲಕ ಅವರು ವೆಬ್ ಸಿರೀಸ್ ಲೋಕಕ್ಕೆ ಎಂಟ್ರಿ ನೀಡುತ್ತಿದ್ದಾರೆ. ಇದರಲ್ಲಿ ಅವರ ಜೊತೆ ಶಿಲ್ಪಾ ಶೆಟ್ಟಿ ಮತ್ತು ವಿವೇಕ್ ಒಬೆರಾಯ್ ಕೂಡ ಅಭಿನಯಿಸುತ್ತಿದ್ದಾರೆ. ‘ಅಮೇಜಾನ್ ಪ್ರೈಂ ವಿಡಿಯೋ’ ಮೂಲಕ ‘ಇಂಡಿಯನ್ ಪೊಲೀಸ್ ಫೋರ್ಸ್’ ವೀಕ್ಷಣೆಗೆ ಲಭ್ಯವಾಗಲಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ