
ಸಿದ್ದಾರ್ಥ್ ಮಲ್ಹೋತ್ರಾ ಅವರ ನಟನೆಯನ್ನು ಮೆಚ್ಚಿಕೊಂಡವರು ಸಾಕಷ್ಟು ಮಂದಿ ಇದ್ದಾರೆ. ಅವರ ಅಭಿಮಾನಿ ಬಳಗ ತುಂಬಾನೇ ದೊಡ್ಡದಿದೆ. ಕೆಲ ಸ್ಟಾರ್ ನಟರು ಕೂಡ ಅವರ ನಟನೆಯನ್ನು ಮೆಚ್ಚಿಕೊಂಡಿದ್ದಾರೆ. ಇತ್ತೀಚೆಗೆ ಟಾಲಿವುಡ್ ಸ್ಟಾರ್ ಅಲ್ಲು ಅರ್ಜುನ್ ನಟ ಸಿದ್ದಾರ್ಥ್ ಮಲ್ಹೋತ್ರಾ ಅವರನ್ನು ಪ್ರಶಂಸಿಸಿದ್ದರು. ಈಗ ಇದಕ್ಕೆ ಸಿದ್ದಾರ್ಥ್ ಧನ್ಯವಾದ ಹೇಳಿದ್ದಾರೆ.
‘ಶೇರ್ಷಾ’ ಬಯೋಪಿಕ್ ಸಾಕಷ್ಟು ಮೆಚ್ಚುಗೆ ಗಳಿಸಿಕೊಳ್ಳುತ್ತಿದೆ. ಕ್ಯಾಪ್ಟನ್ ವಿಕ್ರಮ್ ಬಾತ್ರ ಅವರ ಜೀವನ ಆಧರಿಸಿ ಸಿದ್ಧಗೊಂಡ ಈ ಸಿನಿಮಾ ಸಿದ್ದಾರ್ಥ್ ವೃತ್ತಿ ಜೀವನಕ್ಕೆ ಮೈಲೇಜ್ ನೀಡಿದೆ. ಈ ಸಿನಿಮಾ ವೀಕ್ಷಿಸಿದ್ದ ಅಲ್ಲು ಅರ್ಜುನ್ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಸಿದ್ದಾರ್ಥ್ ಮಲ್ಹೋತ್ರಾ ನಟನೆಯನ್ನು ಅವರು ಮನಃಪೂರ್ವಕವಾಗಿ ಹೊಗಳಿದ್ದರು.
‘ಸಂಪೂರ್ಣ ‘ಶೇರ್ಷಾ’ ತಂಡಕ್ಕೆ ಅಭಿನಂದನೆಗಳು. ಹೃದಯ ಮುಟ್ಟುವ ಚಿತ್ರ. ಸಿದ್ದಾರ್ಥ್ ವೃತ್ತಿಜೀವನದಲ್ಲೇ ಅವರು ಅತ್ಯುತ್ತಮ ಪ್ರದರ್ಶನ ನೀಡಿದ್ದಾರೆ. ಇಡೀ ಶೋ ಅವರದ್ದೇ. ಕಿಯಾರಾ ಕೂಡ ಅದ್ಭುತವಾಗಿ ನಟಿಸಿದ್ದಾರೆ. ಚಿತ್ರದ ಎಲ್ಲಾ ತಂತ್ರಜ್ಞರಿಗೆ ನನ್ನ ಗೌರವ’ ಎಂದಿದ್ದರು ಅಲ್ಲು.
ಈ ಟ್ವೀಟ್ಅನ್ನು ಸಿದ್ದಾರ್ಥ್ ರೀ-ಟ್ವೀಟ್ ಮಾಡಿಕೊಂಡಿದ್ದಾರೆ. ಅಲ್ಲದೆ, ಅವರು ಸಿದ್ದಾರ್ಥ್ಗೆ ಧನ್ಯವಾದ ಹೇಳಿದ್ದಾರೆ. ಸದ್ಯ, ಈ ಟ್ವೀಟ್ ನೋಡಿದ ಅಭಿಮಾನಿಗಳು ಖುಷಿಯಾಗಿದ್ದಾರೆ.
ಸಿದ್ದಾರ್ಥ್ ಹಾಗೂ ಅಲ್ಲು ಅರ್ಜುನ್ ಮುಂಬರುವ ಸಿನಿಮಾಗೆ ಒಂದು ಸಾಮ್ಯತೆ ಇದೆ. ಇಬ್ಬರ ಚಿತ್ರಕ್ಕೂ ರಶ್ಮಿಕಾ ನಾಯಕಿ. ಸಿದ್ದಾರ್ಥ್ ಮಲ್ಹೋತ್ರಾ ಅಭಿನಯದ ‘ಮಿಷನ್ ಮಜ್ನು’ ಚಿತ್ರದಲ್ಲಿ ರಶ್ಮಿಕಾ ನಟಿಸುತ್ತಿದ್ದಾರೆ. ಅಲ್ಲು ಅರ್ಜುನ್ ನಟನೆಯ ‘ಪುಷ್ಪ ಪಾರ್ಟ್ 1’ಗೂ ರಶ್ಮಿಕಾ ಹೀರೋಯಿನ್.
‘ಸ್ಟುಡೆಂಟ್ ಆಫ್ ದಿ ಇಯರ್’ ಸಿನಿಮಾ ಮೂಲಕ ಬಣ್ಣದ ಬದುಕು ಆರಂಭಿಸಿದ ಸಿದ್ದಾರ್ಥ್, ನಂತರ ಸಾಕಷ್ಟು ಚಿತ್ರಗಳಲ್ಲಿ ನಟಿಸಿದ್ದಾರೆ. ಆದರೆ, ಅವರ ನಟನೆಯನ್ನು ಇಷ್ಟು ದೊಡ್ಡ ಮಟ್ಟಕ್ಕೆ ಹೊಗಳುವಂತೆ ಮಾಡಿದ್ದು ‘ಶೇರ್ಷಾ’ ಸಿನಿಮಾ. ಇದಾದ ನಂತರದಲ್ಲಿ ಅವರಿಗೆ ಬರುತ್ತಿರೋ ಆಫರ್ಗಳ ಸಂಖ್ಯೆ ಹೆಚ್ಚಿದೆ.
ಇದನ್ನೂ ಓದಿ: ಪ್ರೇಯಸಿ ಮಡಿಲಲ್ಲೇ ಪ್ರಾಣ ಬಿಟ್ರಾ ಸಿದ್ದಾರ್ಥ್? ಹೃದಯಾಘಾತ ಆಗೋದಕ್ಕೂ ಮುನ್ನ ನಡೆದಿದ್ದೇನು? ಇಲ್ಲಿದೆ ವಿವರ
ಸೌತ್ ಹೀರೋಗಳಲ್ಲಿ ಅಲ್ಲು ಅರ್ಜುನ್ ನಂ.1, ಯಶ್ಗೆ 5ನೇ ಸ್ಥಾನ; ಇದು ಯಾವ ಹಣಾಹಣಿ?