ಗರ್ಭಿಣಿ ಪತ್ನಿಯ ಫೋಟೋ ತೆಗೆಯಲು ಮುಗಿಬಿದ್ದ ಜನರ ಮೇಲೆ ಗರಂ ಆದ ಸ್ಟಾರ್ ನಟ

‘ಟಾಕ್ಸಿಕ್’ ಸಿನಿಮಾದ ನಟಿ ಕಿಯಾರಾ ಅಡ್ವಾಣಿ ಅವರು ಪ್ರೆಗ್ನೆಂಟ್ ಆಗಿದ್ದು, ಪತಿ ಸಿದ್ದಾರ್ಥ್ ಮಲ್ಹೋತ್ರಾ ಜೊತೆ ಆಸ್ಪತ್ರೆಗೆ ಬಂದಿದ್ದಾರೆ. ಈ ವೇಳೆ ಅವರ ಫೋಟೋ ತೆಗೆಯಲು ಪಾಪರಾಜಿಗಳು ಮುಗಿಬಿದ್ದಿದ್ದಾರೆ. ಇದರಿಂದ ಸಿದ್ದಾರ್ಥ್​ ಅವರಿಗೆ ಕೋಪ ಬಂದಿದೆ. ಮಿತಿ ಮೀರಿ ವರ್ತಿಸಲು ಬಂದ ಪಾಪರಾಜಿಗಳಿಗೆ ಅವರು ಬೈಯ್ದಿದ್ದಾರೆ. ವೈರಲ್ ಆಗಿರುವ ವಿಡಿಯೋ ನೋಡಿ ಜನರು ಹಲವು ರೀತಿ ಕಮೆಂಟ್ ಮಾಡಿದ್ದಾರೆ.

ಗರ್ಭಿಣಿ ಪತ್ನಿಯ ಫೋಟೋ ತೆಗೆಯಲು ಮುಗಿಬಿದ್ದ ಜನರ ಮೇಲೆ ಗರಂ ಆದ ಸ್ಟಾರ್ ನಟ
Kiara Advani, Sidharth Malhotra

Updated on: Apr 23, 2025 | 8:42 PM

ಬಾಲಿವುಡ್ನ ಸ್ಟಾರ್ ಕಪಲ್ ಆದಂತಹ ಸಿದ್ದಾರ್ಥ್ ಮಲ್ಹೋತ್ರಾ ಮತ್ತು ಕಿಯಾರಾ ಅಡ್ವಾಣಿ (Kiara Advani) ಅವರು ಶೀಘ್ರದಲ್ಲೇ ತಂದೆ-ತಾಯಿ ಆಗಲಿದ್ದಾರೆ. ಇತ್ತೀಚೆಗೆ ಅವರು ಗುಡ್ ನ್ಯೂಸ್ ನೀಡಿದರು. ಕಿಯಾರಾ ಅಡ್ವಾಣಿ ಅವರು ಪ್ರೆಗ್ನೆಂಟ್ (Pregnant) ಆಗಿದ್ದು, ಸಿನಿಮಾ ಕೆಲಸಗಳಿಗೆ ಬ್ರೇಕ್ ನೀಡಿದ್ದಾರೆ. ಈ ನಡುವೆ ಅವರು ಆಸ್ಪತ್ರೆಗೆ ಹೋಗಿ ಬರುತ್ತಿದ್ದಾರೆ. ಆಸ್ಪತ್ರೆಗೆ ಬಂದ ಕಿಯಾರಾ ಅಡ್ವಾಣಿ ಅವರ ಫೋಟೋ ತೆಗೆಯಲು ಜನರು ಮುಗಿಬಿದ್ದಿದ್ದಾರೆ. ಇದರಿಂದ ಸಿದ್ದಾರ್ಥ್ ಮಲ್ಹೋತ್ರಾ (Sidharth Malhotra) ಅವರಿಗೆ ವಿಪರೀತ ಕೋಪ ಬಂದಿದೆ. ಪಾಪರಾಜಿಗಳ ಮೇಲೆ ಅವರು ಗರಂ ಆಗಿದ್ದಾರೆ. ಈ ಸಂದರ್ಭದ ವಿಡಿಯೋ ವೈರಲ್ ಆಗಿದೆ.

ಸಾಮಾನ್ಯವಾಗಿ ಸಿದ್ದಾರ್ಥ್ ಮಲ್ಹೋತ್ರಾ ಅವರು ಕೂಲ್ ಆಗಿರುತ್ತಾರೆ. ಅವರು ಸಿಟ್ಟಾಗಿ ಗದರುವುದು ಕಡಿಮೆ. ಆದರೆ ಈಗ ಗರ್ಭಿಣಿ ಪತ್ನಿಯ ವಿಚಾರದಲ್ಲಿ ಅವರು ಗರಂ ಆಗಿದ್ದಾರೆ. ರೆಗ್ಯುಲರ್ ಚೆಕಪ್ ಸಲುವಾಗಿ ಆಸ್ಪತ್ರೆಗೆ ಬಂದು ವಾಪಸ್ ತೆರಳುವಾಗ ಕಿಯಾರಾ ಅಡ್ವಾಣಿ ಅವರು ಕಾರಿನೊಳಗೆ ಬಂದು ಕುಳಿತುಕೊಂಡರು. ಆಗ ಅವರ ಫೋಟೋ ಮತ್ತು ವಿಡಿಯೋ ತೆಗೆಯುವ ಸಲುವಾಗಿ ಪಾಪರಾಜಿಗಳು ಮುಗಿಬಿದ್ದರು.

ಇದನ್ನೂ ಓದಿ
ಟಾಕ್ಸಿಕ್ ಶೂಟಿಂಗ್ ನಡೆಯುವಾಗಲೇ ಪ್ರೆಗ್ನೆನ್ಸಿ ಘೋಷಿಸಿದ ಕಿಯಾರಾ; ಮುಂದೇನು?
ತಾಯಿ ಆಗುತ್ತಿರುವ ‘ಟಾಕ್ಸಿಕ್’ ನಟಿ ಕಿಯಾರಾ ಅಡ್ವಾಣಿ; ಸಿಕ್ತು ಗುಡ್ ನ್ಯೂಸ್
ಈ ಫೋಟೋದಲ್ಲಿರುವ ಸ್ಟಾರ್ ನಟಿ ಯಾರು? ಯಶ್ ಜೊತೆ ನಟಿಸುತ್ತಿದ್ದಾರೆ
ಮದುವೆಯಲ್ಲಿ ಲೆಹೆಂಗಾ ತೊಟ್ಟ ಕಿಯಾರಾ ಅಡ್ವಾಣಿ ಎಷ್ಟೊಂದು ಕ್ಯೂಟ್​; ಇಲ್ಲಿವೆ ಫೋಟೋಸ್

ಈ ವೇಳೆ ಸಿದ್ದಾರ್ಥ್ ಮಲ್ಹೋತ್ರ ಅವರಿಗೆ ವಿಪರೀತ ಕೋಪ ಬಂತು. ಪತ್ನಿಯ ಫೋಟೋ ತೆಗೆಯಲು ಬಂದ ಜನರನ್ನು ಅವರು ದೂರ ಓಡಿಸಿದರು. ‘ಈಗ ನೀವೆಲ್ಲ ಸರಿಯಾಗಿ ವರ್ತಿಸಿ. ಒಂದು ಸೆಕೆಂಡ್, ಹಿಂದೆ ಹೋಗಿ. ನಾನು ಈಗ ಸಿಟ್ಟಾಗಬೇಕಾ?’ ಎಂದು ಸಿದ್ದಾರ್ಥ್ ಮಲ್ಹೋತ್ರಾ ಅವರು ಕೂಗಾಡಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಈ ವಿಡಿಯೋ ವೈರಲ್ ಆಗಿದ್ದು, ನೆಟ್ಟಿಗರು ಹಲವು ರೀತಿಯಲ್ಲಿ ಕಮೆಂಟ್ ಮಾಡುತ್ತಿದ್ದಾರೆ.

‘ಸಿದ್ದಾರ್ಥ್ ಮಾಡಿದ್ದು ಸರಿಯಾಗಿದೆ. ಅವರು ಉತ್ತಮ ಗಂಡನಾಗಿ ಕರ್ತವ್ಯ ಮಾಡುತ್ತಿದ್ದಾರೆ. ಈ ದಂಪತಿಗೆ ಪ್ರೈವೆಸಿ ನೀಡಿ. ಸರಿಯಾಗಿ ವರ್ತಿಸುವುದನ್ನು ಜನರು ಕಲಿಯಬೇಕು. ಪಾಪರಾಜಿಗಳಿಗೆ ಏನಾಗಿದೆ?’ ಎಂದು ನೆಟ್ಟಿಗರು ಕಮೆಂಟ್ ಮಾಡಿದ್ದಾರೆ.

ಇದನ್ನೂ ಓದಿ: ಪ್ರೆಗ್ನೆಂಟ್ ಆದ ಬಳಿಕ ಮಹತ್ವದ ಸಿನಿಮಾದಿಂದ ಹೊರಬಿದ್ದ ಟಾಕ್ಸಿಕ್ ನಟಿ ಕಿಯಾರಾ?

ಚಿತ್ರರಂಗದಲ್ಲಿ ಕಿಯಾರಾ ಅಡ್ವಾಣಿ ಮತ್ತು ಸಿದ್ದಾರ್ಥ್ ಮಲ್ಹೋತ್ರಾ ಅವರಿಗೆ ಸಖತ್ ಬೇಡಿಕೆ ಇದೆ. ಸದ್ಯ ‘ಪರಮ್ ಸುಂದರಿ’ ಸಿನಿಮಾದ ಶೂಟಿಂಗ್​ನಲ್ಲಿ ಸಿದ್ದಾರ್ಥ್ ಬ್ಯುಸಿ ಆಗಿದ್ದಾರೆ. ಹಾಗೆಯೇ, ಕಿಯಾರಾ ಅಡ್ವಾಣಿ ಅವರ ಕೈಯಲ್ಲಿ ‘ಟಾಕ್ಸಿಕ್’, ‘ವಾರ್ 2’ ಮುಂತಾದ ಸಿನಿಮಾಗಳು ಇವೆ. ಪ್ರೆಗ್ನೆಂಟ್ ಆದ ಕಾರಣ ಅವರು ಸಿನಿಮಾದ ಕೆಲಸಗಳಿಂದ ದೂರ ಉಳಿದುಕೊಂಡಿದ್ದಾರೆ. ವೈಯಕ್ತಿಕ ಜೀವನದ ಕಡೆಗೆ ಹೆಚ್ಚು ಗಮನ ಹರಿಸುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಮದನ್​ ಕುಮಾರ್​

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Loading...
Unable to load recommendations.
Follow Us