ಮಗಳಿಗೆ ಸರಾಯಾಹ್ ಎಂದು ಹೆಸರಿಟ್ಟ ಸಿದ್ದಾರ್ಥ್ ಮಲ್ಹೋತ್ರಾ, ಕಿಯಾರಾ ಅಡ್ವಾಣಿ

ಕಿಯಾರಾ ಅಡ್ವಾಣಿ ಮತ್ತು ಸಿದ್ದಾರ್ಥ್ ಮಲ್ಹೋತ್ರಾ ದಂಪತಿಯ ಮಗಳಿಗೆ ಈಗ ನಾಮಕರಣ ಮಾಡಲಾಗಿದೆ. ತಮ್ಮ ಮಗುವಿಗೆ ಸರಾಯಾಹ್ ಮಲ್ಹೋತ್ರಾ ಎಂದು ಹೆಸರು ಇಟ್ಟಿರುವುದಾಗಿ ಈ ದಂಪತಿ ಹೇಳಿದ್ದಾರೆ. ಅಭಿಮಾನಿಗಳು ಅಭಿನಂದನೆ ತಿಳಿಸಿದ್ದಾರೆ. ಹೆಸರಿನ ಅರ್ಥ ಏನು ಎಂಬುದನ್ನು ಈ ದಂಪತಿ ವಿವರಿಸಿಲ್ಲ.

ಮಗಳಿಗೆ ಸರಾಯಾಹ್ ಎಂದು ಹೆಸರಿಟ್ಟ ಸಿದ್ದಾರ್ಥ್ ಮಲ್ಹೋತ್ರಾ, ಕಿಯಾರಾ ಅಡ್ವಾಣಿ
Kiara Advani, Saraayah Malhotra

Updated on: Nov 28, 2025 | 4:41 PM

ಬಾಲಿವುಡ್​​ನ ಸೆಲೆಬ್ರಿಟಿ ದಂಪತಿ ಕಿಯಾರಾ ಅಡ್ವಾಣಿ ಹಾಗೂ ಸಿದ್ದಾರ್ಥ್ ಮಲ್ಹೋತ್ರಾ (Sidharth Malhotra) ಅವರು ತಮ್ಮ ಮಗುವಿಗೆ ನಾಮಕರಣ ಮಾಡಿದ್ದಾರೆ. ಈ ವರ್ಷ ಜುಲೈ 15ರಂದು ಅವರಿಗೆ ಹೆಣ್ಣು ಮಗು ಜನಿಸಿತ್ತು. ಮಗು ಹುಟ್ಟಿದ 4 ತಿಂಗಳ ಬಳಿಕ ನಾಮಕರಣ ಮಾಡಲಾಗಿದೆ. ತಮ್ಮ ಮಗುವಿನ ಹೆಸರು ಏನು ಎಂಬುದನ್ನು ಸಿದ್ದಾರ್ಥ್ ಮಲ್ಹೋತ್ರಾ ಹಾಗೂ ಕಿಯಾರಾ ಅಡ್ವಾಣಿ (Kiara Advani) ಅವರು ಸೋಶಿಯಲ್ ಮೀಡಿಯಾ ಮೂಲಕ ತಿಳಿಸಿದ್ದಾರೆ. ಮಗುವಿಗೆ ಸರಾಯಾಹ್ ಮಲ್ಹೋತ್ರಾ (Saraayah Malhotra) ಎಂದು ಹೆಸರು ಇಡಲಾಗಿದೆ. ಈ ವಿಷಯವನ್ನು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿರುವ ಅವರು ಒಂದು ಫೋಟೋವನ್ನು ಕೂಡ ಹಂಚಿಕೊಂಡಿದ್ದಾರೆ.

ಮಗುವಿನ ಪಾದಗಳಿರುವ ಫೋಟೋವನ್ನು ಸಿದ್ದಾರ್ಥ್ ಮಲ್ಹೋತ್ರಾ ಹಾಗೂ ಕಿಯಾರಾ ಅಡ್ವಾಣಿ ಅವರು ಪೋಸ್ಟ್ ಮಾಡಿದ್ದಾರೆ. ‘ನಮ್ಮ ಪ್ರಾರ್ಥನೆಯಿಂದ ನಮ್ಮ ಕೈಗಳ ತನಕ. ನಮ್ಮ ದೈವಿ ಆಶೀರ್ವಾದ, ನಮ್ಮ ರಾಜಕುಮಾರಿ.. ಸರಾಯಾಹ್ ಮಲ್ಹೋತ್ರಾ’ ಎಂದು ಈ ದಂಪತಿ ಬರೆದುಕೊಂಡಿದ್ದಾರೆ. ಅಭಿಮಾನಿಗಳು ಕಮೆಂಟ್ ಮೂಲಕ ಅಭಿನಂದನೆ ತಿಳಿಸುತ್ತಿದ್ದಾರೆ.

ಸದ್ಯಕ್ಕೆ ಸಿದ್ದಾರ್ಥ್ ಮಲ್ಹೋತ್ರಾ ಮತ್ತು ಕಿಯಾರಾ ಅಡ್ವಾಣಿ ಅವರು ಮಗಳ ಹೆಸರು ಏನು ಎಂಬುದನ್ನು ಮಾತ್ರ ತಿಳಿಸಿದ್ದಾರೆ. ಆದರೆ ಈ ಹೆಸರಿನ ಅರ್ಥ ಏನು ಎಂಬುದನ್ನು ಅವರು ವಿವರಿಸಿಲ್ಲ. ರಾಜಕುಮಾರಿ ಎಂಬುದು ಈ ಹೆಸರಿನ ಅರ್ಥ ಎಂದು ಕೆಲವು ಮಾಧ್ಯಮಗಳು ವರದಿ ಮಾಡಿವೆ. ಅಲ್ಲದೇ, ಸಿದ್ದಾರ್ಥ್ ಮತ್ತು ಕಿಯಾರಾ ಹೆಸರನ್ನು ಕೂಡಿಸಿ ಸರಾಯಾಹ್ ಎಂದು ಹೆಸರು ಹೆಸರು ಇಡಲಾಗಿದೆ ಎಂದು ಹಲವರು ಊಹಿಸಿದ್ದಾರೆ.

ಇನ್​ಸ್ಟಾಗ್ರಾಮ್​​ನಲ್ಲಿ ಸಿದ್ದಾರ್ಥ್ ಮಲ್ಹೋತ್ರಾ ಮತ್ತು ಕಿಯಾರಾ ಅಡ್ವಾಣಿ ಅವರು ಹಂಚಿಕೊಂಡ ಈ ಫೋಟೋ ಸಖತ್ ವೈರಲ್ ಆಗಿದೆ. ಕೆಲವೇ ಗಂಟೆಗಳಲ್ಲಿ 15 ಲಕ್ಷಕ್ಕೂ ಅಧಿಕ ಲೈಕ್ಸ್ ಪಡೆದಿದೆ. 5 ಸಾವಿರಕ್ಕೂ ಅಧಿಕ ಕಮೆಂಟ್​ಗಳು ಬಂದಿವೆ. ಅಭಿಮಾನಿಗಳು ಮಾತ್ರವಲ್ಲದೇ ಅನೇಕ ಸೆಲೆಬ್ರಿಟಿಗಳು ಕೂಡ ಈ ಫೋಟೋಗೆ ಕಮೆಂಟ್ ಮಾಡಿದ್ದಾರೆ.

ಇದನ್ನೂ ಓದಿ: ಕಿಯಾರಾ ಅಡ್ವಾಣಿ ಶ್ರಮವೆಲ್ಲ ವ್ಯರ್ಥ, ಅಭಿಮಾನಿಗಳಿಗೆ ತೀವ್ರ ನಿರಾಸೆ

ಸಿದ್ದಾರ್ಥ್ ಮಲ್ಹೋತ್ರಾ ಹಾಗೂ ಕಿಯಾರಾ ಅಡ್ವಾಣಿ ಪ್ರೀತಿಸಿ ಮದುವೆ ಆದವರು. 2020ರಿಂದಲೂ ಅವರಿಬ್ಬರು ಡೇಟಿಂಗ್ ಮಾಡುತ್ತಿದ್ದರು. 2023ರ ಫೆಬ್ರವರಿಯಲ್ಲಿ ಅವರ ಮದುವೆ ನೆರವೇರಿತ್ತು. 2025ರ ಫೆಬ್ರವರಿಯಲ್ಲಿ ಕಿಯಾರಾ ಅಡ್ವಾಣಿ ಅವರು ಪ್ರೆಗ್ನೆಂಟ್ ಎಂಬುದನ್ನು ತಿಳಿಸಿದರು. ಜುಲೈ ತಿಂಗಳಲ್ಲಿ ಅವರು ಮೊದಲ ಮಗುವಿಗೆ ಜನ್ಮ ನೀಡಿದರು. ಈಗ ನಾಮಕರಣ ಮಾಡಿ, ಸಿಹಿ ಸುದ್ದಿ ನೀಡಲಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.