‘ಬ್ರಾಹ್ಮಣ ಅನ್ನೋದು ಅಬ್ರಾಹಂ ಶಬ್ದದಿಂದ ಹುಟ್ಟಿದೆ’; ವಿವಾದ ಮಾಡಿ ಕ್ಷಮೆ ಕೇಳಿದ ಗಾಯಕ ಲಕ್ಕಿ ಅಲಿ

|

Updated on: Apr 12, 2023 | 11:36 AM

Singer Lucky Ali: ಈ ಪೋಸ್ಟ್​ ವೈರಲ್ ಆದ ಬೆನ್ನಲ್ಲೇ ಲಕ್ಕಿ ಅಲಿ ಅವರು ಸಾಕಷ್ಟು ಟೀಕೆ ಎದುರಿಸಿದ್ದರು. ಅವರು ಕ್ಷಮೆ ಕೇಳಬೇಕು ಎನ್ನುವ ಒತ್ತಾಯ ಜೋರಾಯಿತು. ಈ ಪೋಸ್ಟ್​ ಡಿಲೀಟ್ ಮಾಡಿ ಅವರು ಕ್ಷಮೆ ಕೇಳಿದ್ದಾರೆ.

‘ಬ್ರಾಹ್ಮಣ ಅನ್ನೋದು ಅಬ್ರಾಹಂ ಶಬ್ದದಿಂದ ಹುಟ್ಟಿದೆ’; ವಿವಾದ ಮಾಡಿ ಕ್ಷಮೆ ಕೇಳಿದ ಗಾಯಕ ಲಕ್ಕಿ ಅಲಿ
ಲಕ್ಕಿ ಅಲಿ
Follow us on

ಕೆಲವೊಮ್ಮೆ ಸೆಲೆಬ್ರಿಟಿಗಳು ನೀಡುವ ಹೇಳಿಕೆ ಸಾಕಷ್ಟು ವಿವಾದ ಹುಟ್ಟುಹಾಕುತ್ತದೆ. ಅದರಲ್ಲೂ ಧರ್ಮ, ಜಾತಿ ಬಗ್ಗೆ ನೀಡುವ ಹೇಳಿಕೆಯಿಂದ ಟೀಕೆ ಎದುರಿಸಬೇಕಾಗುತ್ತದೆ. ಈಗ ಗಾಯಕ ಲಕ್ಕಿ ಅಲಿ (Lucky Ali) ನೀಡಿದ ಹೇಳಿಕೆ ದೊಡ್ಡ ಮಟ್ಟದ ಚರ್ಚೆ ಹುಟ್ಟುಹಾಕಿದೆ. ‘ಬ್ರಾಹ್ಮಣ್ (Brahman)​ ಹೆಸರು ಅಬ್ರಾಹಂ ಶಬ್ದದಿಂದ ಹುಟ್ಟಿದೆ ಎಂದು ಅವರು ಬರೆದುಕೊಂಡಿದ್ದರು. ಇದಕ್ಕೆ ಅನೇಕರಿಂದ ಟೀಕೆ ವ್ಯಕ್ತವಾಯಿತು. ಪ್ರಕರಣ ಗಂಭೀರ ಸ್ವರೂಪ ಪಡೆದುಕೊಂಡ ಹಿನ್ನೆಲೆಯಲ್ಲಿ ಅವರು ಕ್ಷಮೆ ಕೇಳಿದ್ದಾರೆ. ಆದರೂ ಅವರ ಬಗ್ಗೆ ಟೀಕೆಗಳು ವ್ಯಕ್ತವಾಗುತ್ತಿರುವುದು ನಿಂತಿಲ್ಲ.

‘ಬ್ರಾಹ್ಮಣ​ (Brahman) ಎಂಬ ಶಬ್ದ ಬ್ರಹ್ಮನಿಂದ (Brahma) ಹುಟ್ಟಿದೆ. ಬ್ರಹ್ಮ ಶಬ್ದ ಹುಟ್ಟಿದ್ದು ಅಬ್ರಾಮ್​ನಿಂದ​ (Abram). ಅಬ್ರಾಮ್ ಹುಟ್ಟಿದ್ದು ಅಬ್ರಾಹಂ (Abraham)​ ಅಥವಾ ಇಬ್ರಾಹಿಮ್​ನಿಂದ (Ibrahim). ಅಲ್ಲಾಹಿ ಸಲಾಂ, ಎಲ್ಲಾ ರಾಷ್ಟ್ರಗಳ ಪಿತಾಮಹ. ಎಲ್ಲರೂ ತಮ್ಮ ತಮ್ಮೊಳಗೆ ತರ್ಕಿಸದೆ ಸುಮ್ಮನೆ ಜಗಳವಾಡುತ್ತಿರುವುದೇಕೆ?’ ಎಂದು ಲಕ್ಕಿ ಅಲಿ ಬರೆದುಕೊಂಡಿದ್ದರು.

ಇದನ್ನೂ ಓದಿ:  ಗಾಯಕ ಲಕ್ಕಿ ಅಲಿ ನಿಧನರಾಗಿದ್ದಾರೆ ಎಂಬುದು ಸುಳ್ಳುಸುದ್ದಿ: ನಫೀಸಾ ಅಲಿ

ಈ ಪೋಸ್ಟ್​ ವೈರಲ್ ಆದ ಬೆನ್ನಲ್ಲೇ ಲಕ್ಕಿ ಅಲಿ ಅವರು ಸಾಕಷ್ಟು ಟೀಕೆ ಎದುರಿಸಿದ್ದರು. ಅವರು ಕ್ಷಮೆ ಕೇಳಬೇಕು ಎನ್ನುವ ಒತ್ತಾಯ ಜೋರಾಯಿತು. ಈ ಪೋಸ್ಟ್​ ಡಿಲೀಟ್ ಮಾಡಿ ಅವರು ಕ್ಷಮೆ ಕೇಳಿದ್ದಾರೆ. ‘ನನ್ನ ಕೊನೆಯ ಪೋಸ್ಟ್‌ ವಿವಾದ ಹುಟ್ಟುಹಾಕಿದೆ. ನನ್ನ ಉದ್ದೇಶ ಯಾರಿಗೂ ಕೋಪವನ್ನು ಉಂಟುಮಾಡುವುದಲ್ಲ. ಎಲ್ಲರನ್ನೂ ಒಂದು ಮಾಡಬೇಕು ಅನ್ನೋದು ನನ್ನ ಉದ್ದೇಶ ಆಗಿತ್ತು. ಆದರೆ, ನಾನಂದುಕೊಂಡ ರೀತಿಯಲ್ಲಿ ಜನರು ಅದನ್ನು ಅರ್ಥಮಾಡಿಕೊಂಡಿಲ್ಲ. ಇದು ನನ್ನ ಹಿಂದೂ ಗೆಳೆಯರ ಭಾವನೆಗೆ ಧಕ್ಕೆ ಉಂಟು ಮಾಡಿದೆ. ಅದಕ್ಕಾಗಿ ನಾನು ತೀವ್ರವಾಗಿ ವಿಷಾದಿಸುತ್ತೇನೆ ಮತ್ತು ಕ್ಷಮೆ ಕೇಳುತ್ತೇನೆ. ನಾನು ನಿಮ್ಮೆಲ್ಲರನ್ನೂ ಪ್ರೀತಿಸುತ್ತೇನೆ’ ಎಂದು ಅವರು ಕ್ಷಮೆ ಕೇಳಿ ಪೋಸ್ಟ್ ಮಾಡಿದ್ದಾರೆ.

ಇದನ್ನೂ ಓದಿ: ಸಿಕ್ಸ್ ಪ್ಯಾಕ್​ ವಿಎಫ್​ಎಕ್ಸ್ ಎಂದವರಿಗೆ ವೇದಿಕೆ ಮೇಲೆ ಶರ್ಟ್​ ಬಿಚ್ಚಿ ತೋರಿಸಿದ ಸಲ್ಮಾನ್ ಖಾನ್

ಲಕ್ಕಿ ಅಲಿ ನಟನಾಗಿ, ಗಾಯಕನಾಗಿ ಗುರುತಿಸಿಕೊಂಡಿದ್ದಾರೆ. ‘ತಮಾಶಾ’ ಮೊದಲಾದ ಸಿನಿಮಾಗಳ ಹಾಡಿಗೆ ಅವರು ಧ್ವನಿ ಆಗಿದ್ದಾರೆ. ಈಗ ಅವರು ವಿವಾದದ ಮೂಲಕ ಸುದ್ದಿ ಆಗಿದ್ದಾರೆ. ಅವರು ಕ್ಷಮೆ ಕೇಳಿದ ಹೊರತಾಗಿಯೂ ಅವರ ಬಗ್ಗೆ ಟೀಕೆಗಳು ನಿಂತಿಲ್ಲ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 11:34 am, Wed, 12 April 23