ನಟಿ ಸೋನಾಕ್ಷಿ ಸಿನ್ಹಾ (Sonakshi Sinha) ಅವರು ಇಂದು (ಜೂನ್ 2) ಬರ್ತ್ಡೇ ಆಚರಿಸಿಕೊಳ್ಳುತ್ತಿದ್ದಾರೆ. ಅವರಿಗೆ ಎಲ್ಲ ಕಡೆಗಳಿಂದ ಆಫರ್ ಬರುತ್ತಿದೆ. ಸೋನಾಕ್ಷಿ ಸಿನ್ಹಾ ಸ್ಟಾರ್ ಕಿಡ್ ಆದ ಹೊರತಾಗಿಯೂ ಅವರಿಗೆ ದೊಡ್ಡ ಯಶಸ್ಸು ಸಿಗಲಿಲ್ಲ. ಸಲ್ಮಾನ್ ಖಾನ್ ನಟನೆಯ ‘ದಬಾಂಗ್’ ಚಿತ್ರದ ಮೂಲಕ ಬಣ್ಣದ ಲೋಕಕ್ಕೆ ಅವರು ಎಂಟ್ರಿ ಕೊಟ್ಟರು. ವಿಶೇಷ ಎಂದರೆ ಸೋನಾಕ್ಷಿ ಸಿನ್ಹಾ ಅವರ ದೇಹದ ತೂಕ 95 ಕೆಜಿ ಇತ್ತು. ಅದನ್ನು ಅವರು 65 ಕೆಜಿಗೆ ಇಳಿಸಿಕೊಂಡಿದ್ದಾರು. ಆ ಸ್ಫೂರ್ತಿದಾಯಕ ಕಥೆ ಇಲ್ಲಿದೆ.
ಸೋನಾಕ್ಷಿ ಸಿನ್ಹಾ ಅವರಿಗೆ ದೊಡ್ಡ ಅಭಿಮಾನಿ ಬಳಗ ಸೃಷ್ಟಿ ಆಗಿದೆ. ಸೋಶಿಯಲ್ ಮೀಡಿಯಾದಲ್ಲಿ ಆ್ಯಕ್ಟೀವ್ ಆಗಿರುವ ಅವರು ಸಖತ್ ಗ್ಲಾಮರಸ್ ಫೋಟೋ ಹಂಚಿಕೊಳ್ಳುತ್ತಾರೆ. ಸೋನಾಕ್ಷಿ ಸಿನ್ಹಾ ಈ ರೀತಿ ಮಿಂಚೋಕೆ ಕಾರಣ ಅವರ ಶ್ರಮ. 18ನೇ ವಯುಸ್ಸಿಗೆ 95 ಕೆಜಿ ಇದ್ದ ಅವರು ನಂತರ ಶ್ರಮ ಹಾಕಿದರು. ಅವರ ಬಗ್ಗೆ ಅವರಿಗೇ ಬೇಸರ ಇತ್ತು. ಆದರೆ, ತಮ್ಮನ್ನು ತಾವು ಬದಲಾಯಿಸಿಕೊಳ್ಳಬೇಕು ಎಂಬುದು ಅವರ ಮನಸ್ಸಿನಲ್ಲಿ ಮೂಡಿತ್ತು. ಅದನ್ನು ಸಾಧಿಸಿದರು. ದೇಹದ ತೂಕ ಇಳಿಸಿಕೊಳ್ಳಲು ಸೋನಾಕ್ಷಿ ಕೊಟ್ಟ ಟಿಪ್ಸ್ ಇದು.
ಆರೋಗ್ಯಕರ ಆಹಾರ ತಿನ್ನಿ: ಇತ್ತೀಚೆಗೆ ಜಂಕ್ ಫುಡ್ ಕಡೆ ಯುವ ಜನತೆ ಹೆಚ್ಚು ಒಲವು ತೋರಿಸುತ್ತಿದೆ. ಆದರೆ, ಅದರ ಬದಲು ಆರೋಗ್ಯಕರ ಆಹಾರದ ಕಡೆ ಹೆಚ್ಚು ಒಲವು ತೋರಿಸಬೇಕು ಅನ್ನೋದು ಅವರ ಸೂಚನೆ.
ಇದನ್ನೂ ಓದಿ: ದಪ್ಪ ಎಂಬ ಕಾರಣಕ್ಕೆ ಸೋನಾಕ್ಷಿ ಸಿನ್ಹಾ ಎದುರಿಸಿದ ಟೀಕೆಗಳು ಒಂದೆರಡಲ್ಲ
ನಿತ್ಯ ವ್ಯಾಯಾಯಮ ಮಾಡಿ: ನಿತ್ಯವೂ ತಪ್ಪದೆ ವ್ಯಾಯಮ ಮಾಡಿ. ವಾಕಿಂಗ್, ಯೋಗ, ಜಿಮ್ ಇವುಗಳ ಪೈಕಿ ಯಾವುದಾದರೂ ಉತ್ತಮ ಎನ್ನುತ್ತಾರೆ ಸೋನಾಕ್ಷಿ.
ತಾಳ್ಮೆ ಇರಲಿ: ರಾತ್ರೋ ರಾತ್ರಿ ಯಾರೂ ದೇಹದ ತೂಕ ಇಳಿಸಿಕೊಳ್ಳುವುದಿಲ್ಲ. ಆ ಬಗ್ಗೆ ತಾಳ್ಮೆ ಇರಲಿ ಅನ್ನೋದು ಸೋನಾಕ್ಷಿ ಅವರ ಕೋರಿಕೆ.
ಸೋನಾಕ್ಷಿ ಸಿನ್ಹ ಅವರು ಸಿನಿಮಾ ಮೂಲಕ ದೊಡ್ಡ ಗೆಲುವು ಕಂಡಿಲ್ಲ. ಇತ್ತೀಚೆಗೆ ರಿಲೀಸ್ ಆದ ‘ದಹಾಡ್’ ವೆಬ್ ಸೀರಿಸ್ ಮೆಚ್ಚುಗೆ ಪಡೆದಿದೆ. ಇದು ಅವರ ಬರ್ತ್ಡೇ ಖುಷಿಯನ್ನು ಹೆಚ್ಚಿಸಿದೆ. ಅವರನ್ನು ಅನೇಕ ವೆಬ್ ಸೀರಿಸ್ ಆಫರ್ಗಳು ಹುಡುಕಿ ಬರುತ್ತಿವೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 10:42 am, Fri, 2 June 23