ಶಸ್ತ್ರ ಚಿಕಿತ್ಸೆ ಮಾಡಿಸಿಕೊಳ್ಳುತ್ತಾ ಹಾಡು ಹಾಡಿದ ಸೋನು ನಿಗಂ

Sonu Nigam health: ಖ್ಯಾತ ಗಾಯಕ ಸೋನು ನಿಗಂ ಅವರ ವಿಡಿಯೋ ಒಂದು ವೈರಲ್ ಆಗಿದ್ದು, ವಿಡಿಯೋನಲ್ಲಿ ಸೋನು ನಿಗಂ ಅವರು ಆಪರೇಷನ್ ಥಿಯೇಟರ್​​ನಲ್ಲಿ ಮಲಗಿದ್ದಾರೆ. ಸೋನು ನಿಗಂ ಅವರು ಶಸ್ತ್ರಚಿಕಿತ್ಸೆಗೆ ಒಳಗಾಗುತ್ತಿದ್ದಾರೆ, ಶಸ್ತ್ರ ಚಿಕಿತ್ಸೆ ನಡೆಯುತ್ತಿರುವಾಗಲೇ ಸೋನು ನಿಗಂ ಅವರು ಹಾಡು ಹಾಡುತ್ತಿದ್ದಾರೆ. ಈ ವಿಡಿಯೋ ನೋಡಿ ಅಭಿಮಾನಿಗಳು ಆತಂಕ ವ್ಯಕ್ತಪಡಿಸಿದ್ದಾರೆ.

ಶಸ್ತ್ರ ಚಿಕಿತ್ಸೆ ಮಾಡಿಸಿಕೊಳ್ಳುತ್ತಾ ಹಾಡು ಹಾಡಿದ ಸೋನು ನಿಗಂ
Sonu Nigam

Updated on: Aug 09, 2026 | 7:00 PM

ಭಾರತದ ಸಿನಿಮಾ (Indian Cinema) ಸಂಗೀತದಲ್ಲಿ ಮಧುರವಾದ ಧ್ವನಿಯುಳ್ಳ ಗಾಯಕ ಸೋನು ನಿಗಂ. ಸಾವಿರಾರು ಅತ್ಯದ್ಭುತ ಹಾಡುಗಳನ್ನು ಅವರು ಹಾಡಿದ್ದಾರೆ. ಕನ್ನಡದಲ್ಲಿ ಸಹ ನೂರಾರು ಹಾಡುಗಳನ್ನು ಸೋನು ನಿಗಂ ಹಾಡಿದ್ದಾರೆ. ಇತ್ತೀಚೆಗೆ ಅವರ ಲೈವ್ ಕಾನ್ಸರ್ಟ್​​ಗಳು ಸಹ ಬಹಳ ಜನಪ್ರಿಯತೆ ಪಡೆದುಕೊಳ್ಳುತ್ತಿವೆ. ಆದರೆ ಇದೀಗ ಸೋನು ನಿಗಂ ಅವರ ವಿಡಿಯೋ ಒಂದು ವೈರಲ್ ಆಗಿದ್ದು, ವಿಡಿಯೋನಲ್ಲಿ ಸೋನು ನಿಗಂ ಅವರು ಆಪರೇಷನ್ ಥಿಯೇಟರ್​​ನಲ್ಲಿ ಮಲಗಿದ್ದಾರೆ. ಸೋನು ನಿಗಂ ಅವರು ಶಸ್ತ್ರಚಿಕಿತ್ಸೆಗೆ ಒಳಗಾಗುತ್ತಿದ್ದಾರೆ, ಶಸ್ತ್ರ ಚಿಕಿತ್ಸೆ ನಡೆಯುತ್ತಿರುವಾಗಲೇ ಸೋನು ನಿಗಂ ಅವರು ಹಾಡು ಹಾಡುತ್ತಿದ್ದಾರೆ. ಈ ವಿಡಿಯೋ ನೋಡಿ ಅಭಿಮಾನಿಗಳು ಆತಂಕ ವ್ಯಕ್ತಪಡಿಸಿದ್ದಾರೆ.

ಭಾನುವಾರ, ಈ ವಿಡಿಯೋವನ್ನು ಸೋನು ನಿಗಂ ಹಂಚಿಕೊಂಡಿದ್ದಾರೆ, ಸೋನು ನಿಗಂ ಅವರು ‘ದುಲಾರಿ’ ಸಿನಿಮಾದ ಮೊಹಮ್ಮದ್ ರಫಿ ಅವರ ಜನಪ್ರಿಯ ಹಾಡು ‘ಸುಹಾನಿ ರಾತ್ ದಲ್ ಚುಕಿ’ ಹಾಡನ್ನು ಶಸ್ತ್ರ ಚಿಕಿತ್ಸೆ ಮಾಡಿಸಿಕೊಳ್ಳುತ್ತಾ ಹಾಡುತ್ತಿದ್ದಾರೆ. ತಾವು ತಮ್ಮ ವೈದ್ಯರು ಮತ್ತು ವೈದ್ಯಕೀಯ ತಂಡಕ್ಕಾಗಿ ಈ ಹಾಡನ್ನು ಹಾಡುತ್ತಿರುವುದಾಗಿ ಸೋನು ತಿಳಿಸಿದ್ದಾರೆ. ‘ನನ್ನ ಶಸ್ತ್ರಚಿಕಿತ್ಸೆಯ ಸಮಯದಲ್ಲಿ ಪ್ರಿಯ ಡಾ ನಿಲೇಶ್ ಸತ್ಭಾಯ್ ಮತ್ತು ಅವರ ತಂಡಕ್ಕಾಗಿ ಒಂದು ಹಠಾತ್ ಪ್ರದರ್ಶನ. ನೋವಿನಲ್ಲೂ ಸಂಗೀತದ ಆನಂದ’ ಎಂದು ಅವರು ಇನ್​​ಸ್ಟಾಗ್ರಾಂನಲ್ಲಿ ಬರೆದುಕೊಂಡಿದ್ದಾರೆ.

ಸೋನು ನಿಗಂ ಅವರು ತಾವು ಯಾವ ಕಾರಣಕ್ಕೆ ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದು ಎಂಬ ಮಾಹಿತಿ ಹಂಚಿಕೊಂಡಿಲ್ಲ. ಆದರೆ ಅವರ ವಿಡಿಯೋಕ್ಕೆ ಹಲವಾರು ಮಂದಿ ಪ್ರತಿಕ್ರಿಯೆ ನೀಡಿದ್ದು ಸೋನು ನಿಗಂ ಅವರ ಆರೋಗ್ಯದ ಬಗ್ಗೆ ಕಾಳಜಿ ವ್ಯಕ್ತಪಡಿಸಿದ್ದಾರೆ. ಹಲವು ಸೆಲೆಬ್ರಿಟಿಗಳು ಸಹ ಸೋನು ನಿಗಂ ವಿಡಿಯೋಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ. ಗಾಯಕಿ ಶ್ರೇಯಾ ಘೋಷಾಲ್ ಅವರು ಕಮೆಂಟ್ ಮಾಡಿ, ‘ದಯವಿಟ್ಟು ಬೇಗ ಗುಣಮುಖರಾಗಿ ಸೋನು ಜೀ, ಇಂತಹ ಸ್ಥಿತಿಯಲ್ಲಿಯೂ ಸಂಗೀತ ಮತ್ತು ಪರಿಪೂರ್ಣತೆಯ ಬಗ್ಗೆ ನಿಮ್ಮ ಸಮರ್ಪಣೆ ನಿಜಕ್ಕೂ ಸ್ಫೂರ್ತಿಯಾಗಿದೆ’ ಎಂದು ಬರೆದಿದ್ದಾರೆ. ವಿಶಾಲ್ ಮಿಶ್ರಾ ಕಮೆಂಟ್ ಮಾಡಿ, ‘ಅದಕ್ಕಾಗಿಯೇ ನೀವು ನನ್ನ ದೇವರಾಗಿದ್ದೀರಿ, ಬೇಗ ಗುಣಮುಖರಾಗಿ ಅಣ್ಣ’ ಎಂದು ಕಾಮೆಂಟ್ ಮಾಡಿದ್ದಾರೆ. ರಣವೀರ್ ಅಲ್ಹಾಬಾದಿಯಾ ಕೂಡ ಕಮೆಂಟ್ ಮಾಡಿದ್ದು, ‘ಬೇಗ ಗುಣಮುಖರಾಗಿ ಸೋನು ಸರ್’ ಎಂದು ಹಾರೈಸಿದ್ದಾರೆ.

ಸೋನು ಅವರ ಶಸ್ತ್ರಚಿಕಿತ್ಸೆಗೆ ಕಾರಣ ಇನ್ನೂ ಸ್ಪಷ್ಟವಾಗಿಲ್ಲವಾದರೂ, ಈ ವರ್ಷದ ಜೂನ್ ತಿಂಗಳಲ್ಲಿ ಅವರು ತಮಗೆ ನರಗಳ ಸಮಸ್ಯೆಯಿದೆ (pinched nerves) ಎಂದು ವಿಡಿಯೋ ಮೂಲಕ ತಿಳಿಸಿದ್ದರು. ತಾವು ಎಂಆರ್‌ಐ ಮತ್ತು ಸಿಟಿ ಸ್ಕ್ಯಾನ್ ಮಾಡಿಸಿಕೊಂಡಿರುವುದಾಗಿ ಮತ್ತು ಸಮಸ್ಯೆಯನ್ನು ಅರ್ಥಮಾಡಿಕೊಳ್ಳಲು ಹಲವು ವೈದ್ಯಕೀಯ ಪರೀಕ್ಷೆಗಳಿಗೆ ಒಳಗಾಗಿರುವುದಾಗಿ ತಿಳಿಸಿದ್ದರು. ಫಿಸಿಯೋಥೆರಪಿ ತುಂಬಾ ನೋವಿನಿಂದ ಕೂಡಿದೆ ಎಂದು ಅವರು ಈ ಹಿಂದೆ ಹೇಳಿದ್ದರು. ಈಗ ಅದೇ ಕಾರಣಕ್ಕೆ ಶಸ್ತ್ರ ಚಿಕಿತ್ಸೆಗೆ ಒಳಗಾಗಿರುವ ಸಾಧ್ಯತೆ ಇದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us