ಕೋಟ್ಯಂತರ ಜನರ ಮನಸ್ಸಿನಲ್ಲಿ ನಟ ಸೋನು ಸೂದ್ ಅವರಿಗೆ ವಿಶೇಷ ಸ್ಥಾನವಿದೆ. ಸಿನಿಮಾ ಮೂಲಕ ಸಂಪಾದಿಸಿದ್ದಕ್ಕಿಂತಲೂ ಹೆಚ್ಚು ಅಭಿಮಾನಿಗಳನ್ನು ಅವರು ತಮ್ಮ ಸಮಾಜಸೇವೆಯ ಮುಖಾಂತರ ಸಂಪಾದಿಸಿದ್ದಾರೆ. ಲಾಕ್ಡೌನ್ ಸಮಯದಲ್ಲಿ ಅವರು ಮಾಡಿದ ಸಹಾಯ ಅಷ್ಟಿಷ್ಟಲ್ಲ. ಅಂಥ ರಿಯಲ್ ಹೀರೋಗೆ ಜನ್ಮ ನೀಡಿದವರು ಸರೋಜ್ ಸೂದ್. ಆದರೆ ಹಲವು ವರ್ಷಗಳ ಹಿಂದೆಯೇ ಅವರು ಇಹಲೋಕ ತ್ಯಜಿಸಿದರು. ಇಂದು (ಜು.21) ಸರೋಜ್ ಸೂದ್ ಜನ್ಮದಿನ. ಆ ಪ್ರಯುಕ್ತ ಅಮ್ಮನನ್ನು ನೆನಪಿಸಿಕೊಂಡು ಸೋನು ಸೂದ್ ಭಾವುಕ ಪತ್ರ ಬರೆದಿದ್ದಾರೆ.
‘ಹುಟ್ಟುಹಬ್ಬದ ಶುಭಾಶಯಗಳು ಅಮ್ಮ. ಪ್ರತಿ ವರ್ಷ ನಿಮ್ಮನ್ನು ತಬ್ಬಿಕೊಂಡು ನೇರವಾಗಿ ವಿಶ್ ಮಾಡುವಂತಿರಬೇಕಿತ್ತು ಎಂದು ಬಯಸುತ್ತೇನೆ. ಬದುಕಿನ ಪಾಠಗಳನ್ನು ಕಲಿಸಿದ್ದಕ್ಕೆ ಧನ್ಯವಾದ ಅರ್ಪಿಸಬೇಕು ಎಂದು ಬಯಸುತ್ತೇನೆ. ನನ್ನ ಕೆಲಸವನ್ನು ನಾನು ಉತ್ತಮವಾಗಿ ಮಾಡಿ, ನಿಮಗೆ ಹೆಮ್ಮೆ ತರುತ್ತೇನೆ ಎಂದು ಪ್ರಮಾಣ ಮಾಡುತ್ತೇನೆ’ ಎಂದು ಸೋನು ಸೂದ್ ಪತ್ರ ಬರೆದಿದ್ದಾರೆ.
‘ನಾನು ನಿಮ್ಮನ್ನು ಎಷ್ಟು ಮಿಸ್ ಮಾಡಿಕೊಳ್ಳುತ್ತೇನೆ ಎಂದು ಈ ಮೆಸೇಜ್ಗಳಿಂದ ತಿಳಿಸಲು ಸಾಧ್ಯವೇ ಇಲ್ಲ. ನೀವು ಇಲ್ಲದೇ ನನ್ನ ಬದುಕಿನಲ್ಲಿ ಖಾಲಿತನ ಉಂಟಾಗಿದೆ. ನಾನು ನಿಮ್ಮನ್ನು ಮತ್ತೆ ಭೇಟಿ ಆಗುವವರೆಗೂ ಆ ಖಾಲಿತನ ತುಂಬಲು ಸಾಧ್ಯವಿಲ್ಲ. ನೀವು ಎಲ್ಲೇ ಇದ್ದರೂ ಖುಷಿ ಆಗಿರಿ. ನನಗೆ ಮಾರ್ಗದರ್ಶನ ನೀಡುತ್ತಿರಿ. ಲವ್ ಯೂ ಅಮ್ಮ’ ಎಂದು ಸೋನು ಸೂದ್ ಪತ್ರ ಮುಗಿಸಿದ್ದಾರೆ.
ತಾಯಿಯ ಸುಂದರವಾದ ಮೂರು ಫೋಟೋಗಳನ್ನು ಸೋನು ಸೂದ್ ಶೇರ್ ಮಾಡಿಕೊಂಡಿದ್ದಾರೆ. ಸದ್ಯ ಈ ಪೋಸ್ಟ್ ವೈರಲ್ ಆಗುತ್ತಿದೆ. ಏಳೂವರೆ ಲಕ್ಷಕ್ಕೂ ಅಧಿಕ ಮಂದಿ ಈ ಪೋಸ್ಟ್ಗೆ ಲೈಕ್ ಮಾಡಿದ್ದಾರೆ. ಸಾವಿರಾರು ಜನರು ಕಮೆಂಟ್ ಮೂಲಕ ಸೋನು ಸೂದ್ ತಾಯಿಯ ಜನ್ಮದಿನಕ್ಕೆ ಶುಭ ಹಾರೈಸಿದ್ದಾರೆ.
ಸಮಾಜಮುಖಿ ಕೆಲಸಗಳನ್ನು ಮಾಡುತ್ತಲೇ ಅನೇಕ ಸಿನಿಮಾಗಳಲ್ಲಿ ಸೋನು ಸೂದ್ ಬ್ಯುಸಿ ಆಗಿದ್ದಾರೆ. ಮೊದಲೆಲ್ಲ ವಿಲನ್ ಪಾತ್ರಗಳಲ್ಲಿ ನಟಿಸುತ್ತಿದ್ದ ಅವರನ್ನು ಈಗ ನೆಗೆಟಿವ್ ಶೇಡ್ನಲ್ಲಿ ನೋಡಲು ಜನರು ಇಷ್ಟಪಡುತ್ತಿಲ್ಲ. ತೆಲುಗಿನ ಆಚಾರ್ಯ, ಹಿಂದಿಯ ಪೃಥ್ವಿರಾಜ್, ಕಿಸಾನ್ ಮುಂತಾದ ಸಿನಿಮಾಗಳಲ್ಲಿ ಅವರು ಅಭಿನಯಿಸುತ್ತಿದ್ದಾರೆ.
ಇದನ್ನೂ ಓದಿ:
ಸಿನಿಮಾ ಶೂಟಿಂಗ್ ಆರಂಭವಾದ ಬೆನ್ನಲ್ಲೇ ನಟ ಸೋನು ಸೂದ್ ತೆಗೆದುಕೊಂಡ್ರು ಮಹತ್ವದ ನಿರ್ಧಾರ
ಫಾದರ್ಸ್ ಡೇ ದಿನವೇ ಮಗನಿಗೆ 3 ಕೋಟಿ ರೂಪಾಯಿ ಕಾರು ಉಡುಗೊರೆ ನೀಡಿದ ಸೋನು ಸೂದ್?
Published On - 1:24 pm, Wed, 21 July 21