ಸೋನು ಸೂದ್ ವಾಟ್ಸಾಪ್ ಖಾತೆ ಬ್ಲಾಕ್; ಈ ತಪ್ಪು ಮಾಡಿದರೆ ನಿಮಗೂ ಇದೇ ಗತಿ

|

Updated on: Apr 29, 2024 | 7:02 AM

‘ನನ್ನ ವಾಟ್ಸಾಪ್​ನಲ್ಲಿ ನಂಬರ್ ಬ್ಲಾಕ್ ಆಗಿದೆ. ಈ ಸಮಸ್ಯೆಯನ್ನು ನಾನು ಹಲವು ಬಾರಿ ಎದುರಿಸಿದ್ದೇನೆ. ವಾಟ್ಸಾಪ್ ತಮ್ಮ ಸೇವೆಯನ್ನು ಅಪ್‌ಗ್ರೇಡ್ ಮಾಡಬೇಕಾಗಿದೆ ಎಂದು ನಾನು ಭಾವಿಸುತ್ತೇನೆ’ ಎಂದು ಸೋನು ಸೂದ್​ ಟ್ವೀಟ್ ಮಾಡಿದ್ದರು. ನಂತರ ಅವರು ವಾಟ್ಸಾಪ್​ ಸರಿ ಆದ ಬಗ್ಗೆ ಮಾಹಿತಿ ನೀಡಿದ್ದಾರೆ.

ಸೋನು ಸೂದ್ ವಾಟ್ಸಾಪ್ ಖಾತೆ ಬ್ಲಾಕ್; ಈ ತಪ್ಪು ಮಾಡಿದರೆ ನಿಮಗೂ ಇದೇ ಗತಿ
ಸೋನು ಸೂದ್
Follow us on

ಜನಪ್ರಿಯ ನಟ ಸೋನು ಸೂದ್ (Sonu Sood) ಅವರ ವಾಟ್ಸಾಪ್ ಖಾತೆಯನ್ನು ಬ್ಲಾಕ್ ಮಾಡಲಾಗಿತ್ತು. 61 ಗಂಟೆಗಳ ಬಳಿಕ ಅವರ ವಾಟ್ಸಾಪ್ ಸರಿ ಹೋಗಿದೆ. ಬರೋಬ್ಬರಿ 9483 ವಾಟ್ಸಾಪ್​ ಮೆಸೇಜ್​ಗಳು ಅವರಿಗಾಗಿ ಕಾದು ಕುಳಿತಿದ್ದವು. ಸಹಾಯ ಬೇಕಾದವರು ಅವರನ್ನು ವಾಟ್ಸಾಪ್ ಮೂಲಕ ಸಂಪರ್ಕಿಸುತ್ತಿದ್ದಾರೆ. ಈಗ ಅವರ ಖಾತೆ ಬಂದ್ ಆಗಿದ್ದರಿಂದ ಸಾಕಷ್ಟು ಜನರಿಗೆ ತೊಂದರೆ ಆಗಿದೆ.

ಸೋನು ಸೂದ್ ಅವರು ವಾಟ್ಸಾಪ್ ಬ್ಯಾನ್ ಆದ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಮಾಹಿತಿ ನೀಡಿದ್ದರು. ‘ವಾಟ್ಸಾಪ್​ನಲ್ಲಿ ನನ್ನ ನಂಬರ್ ಬ್ಲಾಕ್ ಆಗಿದೆ. ನಾನು ಈ ಸಮಸ್ಯೆಯನ್ನು ಹಲವು ಬಾರಿ ಎದುರಿಸಿದ್ದೇನೆ. ವಾಟ್ಸಾಪ್ ಈಗ ತಮ್ಮ ಸೇವೆಯನ್ನು ಅಪ್‌ಗ್ರೇಡ್ ಮಾಡಬೇಕಾಗಿದೆ ಎಂದು ನಾನು ಭಾವಿಸುತ್ತೇನೆ’ ಎಂದು ಅವರು ಟ್ವೀಟ್ ಮಾಡಿದ್ದರು. ನಂತರ ಅವರು ವಾಟ್ಸಾಪ್​ ಸರಿ ಆದ ಬಗ್ಗೆ ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: ಮೆಸೇಜ್ ಟ್ರೇಸ್ ಮಾಡೋಕ್ಕಾಗಲ್ಲ; ಬಲವಂತಪಡಿಸಿದರೆ ಭಾರತವನ್ನೇ ತೊರೆಯಬೇಕಾಗುತ್ತೆ: ವಾಟ್ಸಾಪ್ ಬೆದರಿಕೆ

ಸೋನು ಸೂದ್ ಟ್ವೀಟ್

ವಾಟ್ಸಾಪ್ ಬ್ಯಾನ್ ಆಗೋದೇಕೆ?

  1. ವಾಟ್ಸಾಪ್​ನ ನಿಯಮಗಳು ಮತ್ತು ಷರತ್ತುಗಳನ್ನು ಉಲ್ಲಂಘಿಸಿದರೆ ಕಂಪನಿಯು ನಿಮ್ಮ ಖಾತೆಯನ್ನು ಬ್ಯಾನ್​ ಮಾಡುತ್ತದೆ. ಆಗ ನಿಮಗೆ ವಾಟ್ಸಾಪ್ ಬಳಕೆ ಅಸಾಧ್ಯ.
  2. ವಾಟ್ಸಾಪ್​ಗಾಗಿ ಯಾವುದೇ ಥರ್ಡ್​ ಪಾರ್ಟಿ ಅಪ್ಲಿಕೇಷನ್ ಬಳಸಬೇಡಿ. GB WhatsApp, WhatsApp Plus ಮತ್ತು WhatsApp Delta ನಂತಹ ಅಪ್ಲಿಕೇಶನ್‌ಗಳನ್ನು ಬಳಸುವುದರಿಂದ ನಿಮ್ಮ ವಾಟ್ಸಾಪ್​ ನಿರ್ಬಂಧಕ್ಕೆ ಒಳಗಾಗಬಹುದು.
  3. ನೀವು ಬೇರೆ ವ್ಯಕ್ತಿಯ ಖಾಸಗಿ ಮಾಹಿತಿಯೊಂದಿಗೆ ವಾಟ್ಸಾಪ್​ ಖಾತೆಯನ್ನು ಕ್ರಿಯೇಟ್ ಮಾಡಿದರೆ ಅಂತಹ ಖಾತೆಯ ವಿರುದ್ಧ ಕ್ರಮ ತೆಗೆದುಕೊಳ್ಳಬಹುದು. ನಿಮ್ಮ ವಿವರಗಳೊಂದಿಗೆ ನೀವು ವಾಟ್ಸಾಪ್​ ಬಳಸಬಹುದು.
  4. ಯಾವುದೇ ಅಪರಿಚಿತ ವ್ಯಕ್ತಿಗೆ ನೀವು ಅಶ್ಲೀಲ ಸಂದೇಶ, ಬೆದರಿಕೆ ಸಂದೇಶ ಕಳುಹಿಸುವುದು ಸಹ ದುಬಾರಿಯಾಗಬಹುದು. ಮೆಸೇಜ್ ಸ್ವೀಕರಿಸಿದ ವ್ಯಕ್ತಿ ನಿಮ್ಮ ಖಾತೆಯನ್ನು ರಿಪೋರ್ಟ್ ಮಾಡಿದೆ ಅದು ನಿಮಗೆ ತೊಂದರೆ.
  5. ವಾಟ್ಸಾಪ್‌ನಲ್ಲಿ ಅಶ್ಲೀಲ ಫೋಟೋ-ವಿಡಿಯೋ ಅಥವಾ ಬೆದರಿಕೆ ಮೆಸೇಜ್ ಕಳುಹಿಸುವುದು ನಿಯಮಗಳಿಗೆ ವಿರುದ್ಧವಾಗಿದೆ. ಆಗಲೂ ನಿಮ್ಮ ಖಾತೆ ಬ್ಯಾನ್ ಆಗುವ ಸಾಧ್ಯತೆ ಇರುತ್ತದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.