‘ಅಂಥ ಸೀನ್ ಮಾಡಲು ಭಯ ಆಗುತ್ತಿತ್ತು’: ಮೌನ ಮುರಿದ ಮೃಣಾಲ್ ಠಾಕೂರ್
ಕಿಸ್ಸಿಂಗ್ ದೃಶ್ಯಗಳು ಇವೆ ಎಂಬ ಕಾರಣದಿಂದಲೇ ಮೃಣಾಲ್ ಠಾಕೂರ್ ಅವರು ಅನೇಕ ಸಿನಿಮಾಗಳ ಅವಕಾಶವನ್ನು ಕೈ ಚೆಲ್ಲಿದ್ದಾರೆ. ಅಂಥ ಸಿನಿಮಾಗಳಲ್ಲಿ ನಟಿಸಲು ಅವರ ತಂದೆ-ತಾಯಿ ಅನುಮತಿ ಕೊಡಲಿಲ್ಲ. ಈಗ ಪೋಷಕರಿಗೆ ಮೃಣಾಲ್ ಠಾಕೂರ್ ಮನವರಿಕೆ ಮಾಡಿಕೊಡಲು ಪ್ರಯತ್ನಿಸಿದ್ದಾರೆ. ಈ ಕುರಿತು ಅವರು ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ.
ಖ್ಯಾತ ನಟಿ ಮೃಣಾಲ್ ಠಾಕೂರ್ ಅವರು ಬಾಲಿವುಡ್ (Bollywood) ಮತ್ತು ದಕ್ಷಿಣ ಭಾರತದ ಚಿತ್ರರಂಗದಲ್ಲಿ ಹೆಸರು ಮಾಡಿದ್ದಾರೆ. ‘ಸೂಪರ್ 30’, ‘ಸೀತಾ ರಾಮಂ’, ‘ಹಾಯ್ ನಾನ್ನ’ ಮುಂತಾದ ಸೂಪರ್ ಹಿಟ್ ಸಿನಿಮಾಗಳಲ್ಲಿ ಅವರು ನಟಿಸಿದ್ದಾರೆ. ‘ಸೀತಾ ರಾಮಂ’ ಸಿನಿಮಾದಲ್ಲಿ ಅವರು ಮಾಡಿದ ಪಾತ್ರ ಜನರಿಗೆ ಹೆಚ್ಚು ಇಷ್ಟ. ಅವರನ್ನು ಆ ರೀತಿಯ ಡಿ-ಗ್ಲಾಮ್ ಪಾತ್ರದಲ್ಲಿ ನೋಡಲು ಅಭಿಮಾನಿಗಳು ಬಯಸುತ್ತಾರೆ. ಹಸಿಬಿಸಿ ದೃಶ್ಯಗಳಲ್ಲಿ ನಟಿಸಲು ಸ್ವತಃ ಮೃಣಾಲ್ ಠಾಕೂರ್ (Mrunal Thakur) ಅವರಿಗೂ ಇಷ್ಟ ಇಲ್ಲ. ಮಾಧ್ಯಮವೊಂದಕ್ಕೆ ನೀಡಿದ ಸಂದರ್ಭದಲ್ಲಿ ಅವರು ಈ ಕುರಿತು ಮಾತನಾಡಿದ್ದಾರೆ.
ಕಿಸ್ಸಿಂಗ್ ಅಥವಾ ಬೆಡ್ರೂಮ್ ದೃಶ್ಯಗಳಲ್ಲಿ ನಟಿಸಲು ಮೃಣಾಲ್ ಠಾಕೂರ್ ಹಿಂದೇಟು ಹಾಕುತ್ತಾರೆ. ಆ ರೀತಿಯ ಸೀನ್ಗಳು ಅವರಿಗೆ ಇಷ್ಟ ಇಲ್ಲ ಎಂಬುದು ಒಂದು ಕಾರಣ. ಪೋಷಕರು ಅನುಮತಿ ನೀಡುವುದಿಲ್ಲ ಎಂಬುದು ಮತ್ತೊಂದು ಕಾರಣ. ಹೌದು, ಅಂಥ ದೃಶ್ಯಗಳು ಇರುವ ಸಿನಿಮಾಗಳನ್ನು ಒಪ್ಪಿಕೊಳ್ಳಲು ಮೃಣಾಲ್ ಠಾಕೂರ್ ಅವರ ತಂದೆ-ತಾಯಿ ಅನುಮತಿ ನೀಡುವುದಿಲ್ಲ. ಆ ವಿಚಾರವನ್ನು ಅವರು ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ. ಅಲ್ಲದೇ, ಇಂಥ ಸೀನ್ನಲ್ಲಿ ನಟಿಸುವಾಗ ಭಯ ಆಗುತ್ತಿತ್ತು ಎಂದು ಕೂಡ ಅವರು ಹೇಳಿದ್ದಾರೆ.
ಸಿನಿಮಾದಲ್ಲಿ ಕಿಸ್ಸಿಂಗ್ ದೃಶ್ಯ ಇದೆ ಎಂಬ ಕಾರಣಕ್ಕೆ ಮೃಣಾಲ್ ಠಾಕೂರ್ ಅವರು ಅನೇಕ ಆಫರ್ಗಳನ್ನು ಮಿಸ್ ಮಾಡಿಕೊಂಡಿದ್ದು ಉಂಟು. ಆದರೆ ಎಲ್ಲಿಯವರೆಗೂ ಅವಕಾಶಗಳನ್ನು ಕೈ ಚೆಲ್ಲಲು ಸಾಧ್ಯ. ಈಗ ಅವರು ತಮ್ಮ ಪೋಷಕರಿಗೆ ಈ ವಿಚಾರವನ್ನು ಮನವರಿಕೆ ಮಾಡಿಕೊಡಲು ಪ್ರಯತ್ನಿಸಿದ್ದಾರೆ. ಸಿನಿಮಾಗೆ ಅಂಥ ದೃಶ್ಯ ಅಗತ್ಯವಿದೆ ಎಂದಾದರೆ ಅದನ್ನು ಮಾಡುವುದು ಅನಿವಾರ್ಯ ಎಂದು ಮೃಣಾಲ್ ಠಾಕೂರ್ ತಿಳಿಸಿ ಹೇಳಿದ್ದಾರಂತೆ.
ಇದನ್ನೂ ಓದಿ: ಕಂಗನಾ ಕುಟುಂಬದ ಆಸ್ತಿ ಖರೀದಿಸಿದ ಮೃಣಾಲ್ ಠಾಕೂರ್; ಇದಪ್ಪ ಬೆಳವಣಿಗೆ ಅಂದ್ರೆ
ಮೃಣಾಲ್ ಠಾಕೂರ್ ಅವರು ಮೊದಲು ನಟಿಸಿದ್ದು ಮರಾಠಿ ಚಿತ್ರದಲ್ಲಿ. ಆ ಬಳಿಕ ಅವರಿಗೆ ಬಾಲಿವುಡ್ನಲ್ಲಿ ನಟಿಸುವ ಅವಕಾಶ ಸಿಕ್ಕಿತು. ‘ಸೂಪರ್ 30’ ಸಿನಿಮಾದಲ್ಲಿ ಅವರು ಹೃತಿಕ್ ರೋಷನ್ಗೆ ಜೋಡಿಯಾಗಿ ಅಭಿನಯಿಸಿದ ಬಳಿಕ ಜನಪ್ರಿಯತೆ ಹೆಚ್ಚಾಯಿತು. ‘ಸೀತಾ ರಾಮಂ’ ಸಿನಿಮಾದಲ್ಲಿ ಅವರು ಮಾಡಿದ ಸೀತಾ ಮಹಾಲಕ್ಷ್ಮಿ ಅಲಿಯಾಸ್ ಪ್ರಿನ್ಸೆಸ್ ನೂರ್ ಜಹಾನ್ ಪಾತ್ರಕ್ಕೆ ಹೆಚ್ಚಿನ ಪ್ರಶಂಸೆ ಸಿಕ್ಕಿತು. ತೆಲುಗಿನಲ್ಲಿ ಅವರಿಗೆ ಸಖತ್ ಡಿಮ್ಯಾಂಡ್ ಇದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.