ಎಗ್ ಫ್ರೀಜ್ ಮಾಡಿ ಮಗು ಪಡೆಯೋ ಆಲೋಚನೆಯಲ್ಲಿದ್ದಾರೆ ಮೃಣಾಲ್ ಠಾಕೂರ್
ಅನೇಕರು ಎಗ್ ಫ್ರೀಜಿಂಗ್ ತಂತ್ರಜ್ಞಾನದ ಮೊರೆ ಹೋಗುತ್ತಾರೆ. ನಟಿ ಮೋನಾ ಸಿಂಗ್ ಅವರಿಗೆ 42 ವರ್ಷ. 34ನೇ ವಯಸ್ಸಿಗೆ ಅವರು ಎಗ್ ಫ್ರೀಜ್ ಮಾಡಿದ್ದಾಗಿ ಹೇಳಿದ್ದರು. ನಟಿ ಮೃಣಾಲ್ಗೂ ಇದೇ ರೀತಿಯ ಆಲೋಚನೆ ಇದೆ. ಈ ಬಗ್ಗೆ ಅವರು ಮಾತನಾಡಿದ್ದಾರೆ.
ನಟಿ ಮೃಣಾಲ್ ಠಾಕೂರ್ (Mrunal Thakur) ಅವರು ‘ಸೀತಾ ರಾಮಂ’ ಸಿನಿಮಾ ಮೂಲಕ ಸಾಕಷ್ಟು ಜನಪ್ರಿಯತೆ ಪಡೆದರು. ಅನೇಕ ಅಭಿಮಾನಿಗಳು ಅವರು ಆ ರೀತಿಯಲ್ಲೇ ಕಾಣಿಸಿಕೊಳ್ಳಬೇಕು ಎಂದು ಇಚ್ಛಿಸಿದ್ದು ಇದೆ. ಆದರೆ, ಅದು ಅವರ ನಿಜವಾದ ಕ್ಯಾರೆಕ್ಟರ್ ಅಲ್ಲ. ಅವರು ಬೋಲ್ಡ್ ಫೋಟೋ ಹಂಚಿಕೊಂಡು ಗಮನ ಸೆಳೆದಿದ್ದು ಇದೆ. ಈ ಕಾರಣಕ್ಕೆ ಅವರು ಟ್ರೋಲ್ ಆಗಿದ್ದಾರೆ. ಈಗ ಅವರು ನೀಡಿರೋ ಹೇಳಿಕೆ ಚರ್ಚೆ ಹುಟ್ಟುಹಾಕಿದೆ. ಎಗ್ ಫ್ರೀಜ್ ಮಾಡಿ ಮಕ್ಕಳನ್ನು ಪಡೆಯೋ ಆಲೋಚನೆ ಅವರಿಗೆ ಇದೆ.
ಹಲವು ಸೆಲೆಬ್ರಿಟಿಗಳು ಎಗ್ ಫ್ರೀಜ್ ಮಾಡಿ ಮಗುವನ್ನು ಪಡೆದಿದ್ದು ಇದೆ. ವೃತ್ತಿ ಜೀವನದಲ್ಲಿ ಬ್ಯುಸಿ ಇರುವುದರಿಂದ ಅನೇಕ ಸೆಲೆಬ್ರಿಟಿಗಳು ಮಗುವನ್ನು ಪಡೆಯಲು ವಿಳಂಬ ಮಾಡುತ್ತಾರೆ. ಆ ಸಂದರ್ಭದಲ್ಲಿ ಎಗ್ ಫ್ರೀಜಿಂಗ್ ತಂತ್ರಜ್ಞಾನದ ಮೊರೆ ಹೋಗುತ್ತಾರೆ. ನಟಿ ಮೋನಾ ಸಿಂಗ್ ಅವರಿಗೆ 42 ವರ್ಷ. 34ನೇ ವಯಸ್ಸಿಗೆ ಅವರು ಎಗ್ ಫ್ರೀಜ್ ಮಾಡಿದ್ದಾಗಿ ಹೇಳಿದ್ದರು. ನಟಿ ಮೃಣಾಲ್ಗೂ ಇದೇ ರೀತಿಯ ಆಲೋಚನೆ ಇದೆ.
‘ಸಂಬಂಧಗಳು ಕಷ್ಟ. ನನ್ನ ಕೆಲಸದ ಸ್ವರೂಪ ಅವರಿಗೆ ಅರ್ಥ ಆಗಬೇಕು. ನಾನು ಕೂಡ ನನ್ನ ಎಗ್ಗಳನ್ನು ಫ್ರೀಜ್ ಮಾಡುವ ವಿಚಾರದ ಬಗ್ಗೆ ಆಲೋಚಿಸುತ್ತಿದ್ದೇನೆ’ ಎಂದು ಅವರು ಹೇಳಿದ್ದಾರೆ. ಒಂದೊಮ್ಮೆ ಶೀಘ್ರವೇ ಮದುವೆ ಆದರೂ ಸದ್ಯಕ್ಕಂತೂ ಮಗು ಪಡೆಯೋ ಆಲೋಚನೆ ತಮಗಿಲ್ಲ ಎಂಬುದನ್ನು ಅವರು ಪರೋಕ್ಷವಾಗಿ ಹೇಳಿದ್ದಾರೆ.
ಟ್ರೋಲ್ಗಳ ಬಗ್ಗೆ, ಕುಟುಂಬ ನೀಡಿದ ಬೆಂಬಲದ ಬಗ್ಗೆಯೂ ಮೃಣಾಲ್ ಮಾತನಾಡಿದ್ದಾರೆ. ‘ಬೆಳಿಗ್ಗೆ ಏಳಲು ಮನಸ್ಸೇ ಇಲ್ಲದ ದಿನಗಳು ಇದ್ದವು. ನನಗೆ ಹಾಸಿಗೆಯಿಂದ ಏಳಲು ಮನಸ್ಸೇ ಬರುತ್ತಿರಲಿಲ್ಲ. ಆದಾಗ್ಯೂ ನಾನು ಎದ್ದೆ. ಬೇರೆಯವರಿಗಾಗಿ ಅಲ್ಲ, ನನಗಾಗಿ. ನಮಗೆ ಬೇಸರ ಆದರೆ, ನಮ್ಮ ಕುಟುಂಬದವರನ್ನು ಬಿಟ್ಟು ಬೇರಾರೂ ಆ ಬಗ್ಗೆ ಕೇರ್ ಮಾಡುವುದಿಲ್ಲ’ ಎಂದಿದ್ದಾರೆ ಮೃಣಾಲ್.
ಇದನ್ನೂ ಓದಿ: ಐಶ್ವರ್ಯಾ ರೈ, ಮೃಣಾಲ್ ಠಾಕೂರ್ ಸೇರಿ ಅನೇಕ ಸೆಲೆಬ್ರಿಟಿಗಳಿಗೆ ಆಗಿತ್ತು ಬಾಡಿ ಶೇಮಿಂಗ್
ಮೃಣಾಲ್ ಠಾಕೂರ್ ಅವರಿಗೆ ಅನೇಕ ಬಾರಿ ಬಾಡಿ ಶೇಮಿಂಗ್ ಆಗಿದ್ದಿದೆ. ಇದನ್ನು ಅವರು ಎದುರಿಸಿ ನಿಂತಿದ್ದಾರೆ. ಮೃಣಾಲ್ ಇತ್ತೀಚೆಗೆ ತೆಲುಗು ಸಿನಿಮಾಗಳಲ್ಲಿ ಬ್ಯುಸಿ ಇದ್ದಾರೆ. ಇತ್ತೀಚೆಗೆ ಅವರ ನಟನೆಯ ‘ದಿ ಫ್ಯಾಮಿಲಿ ಸ್ಟಾರ್’ ರಿಲೀಸ್ ಆಯಿತು. ಈ ಚಿತ್ರ ಹೇಳಿಕೊಳ್ಳುವಂಥ ಗೆಲುವು ಕಾಣಲಿಲ್ಲ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 12:27 pm, Thu, 25 April 24