ಟಿಆರ್ಪಿಯಲ್ಲಿ ಮತ್ತೆ ಮೊದಲ ಸ್ಥಾನಕ್ಕೇರಿದ ‘ಪುಟ್ಟಕ್ಕನ ಮಕ್ಕಳು’; ಟಾಪ್ ಐದು ಧಾರಾವಾಹಿಗಳಿವು
‘ಲಕ್ಷ್ಮೀ ನಿವಾಸ’ ಧಾರಾವಾಹಿ ಈ ಬಾರಿ ಎರಡನೇ ಸ್ಥಾನದಲ್ಲಿ ಇದೆ. ಅಶೋಕ್ ಜಂಬೆ, ಶ್ವೇತಾ, ಮಧು ಹೆಗ್ಡೆ, ದಿಶಾ ಮದನ್ ಮೊದಲಾದವರು ನಟಿಸಿದ್ದಾರೆ. ಈ ಧಾರಾವಾಹಿ ಜನ ಮೆಚ್ಚುಗೆ ಪಡೆಯುತ್ತಿದೆ. ಆರಂಭ ಆದಾಗಿನಿಂದಲೂ ಈ ಧಾರಾವಾಹಿ ಮೊದಲ ಸ್ಥಾನದಲ್ಲೇ ಮುನ್ನಡೆಯುತ್ತಾ ಬರುತ್ತಿತ್ತು. ಈಗ ಧಾರಾವಾಹಿ ಎರಡನೇ ಸ್ಥಾನಕ್ಕೆ ಇಳಿದಿದೆ.
2024ರ 16ನೇ ವಾರದ ಟಿಆರ್ಪಿ ಲಿಸ್ಟ್ ಹೊರ ಬಿದ್ದಿದೆ. ಇಷ್ಟು ವಾರಗಳ ಕಾಲ ಎರಡನೇ ಸ್ಥಾನ ಪಡೆಯುತ್ತಾ ಬರುತ್ತಿದ್ದ ‘ಪುಟ್ಟಕ್ಕನ ಮಕ್ಕಳು’ ಧಾರಾವಾಹಿ (Puttakkana Makkalu Serial) 16ನೇ ವಾರದ ಟಿಆರ್ಪಿಯಲ್ಲಿ ಮೊದಲ ಸ್ಥಾನಕ್ಕೇರಿದೆ. ಪಾಯಿಂಟ್ ಒಂದು ಅಂಕಗಳ ಅಂತರದಲ್ಲಿ ಈ ಧಾರಾವಾಹಿ ಮೊದಲ ಸ್ಥಾನ ಪಡೆದುಕೊಂಡಿದೆ. ಉಮಾಶ್ರೀ, ಸಂಜನಾ ಬರ್ಲಿ, ಮಂಜು ಭಾಷಿಣಿ ಮೊದಲಾದವರು ಧಾರಾವಾಹಿಯಲ್ಲಿ ನಟಿಸಿದ್ದಾರೆ.
ಎರಡನೇ ಸ್ಥಾನದಲ್ಲಿ ಈ ಬಾರಿ ‘ಲಕ್ಷ್ಮೀ ನಿವಾಸ’ ಧಾರಾವಾಹಿ ಇದೆ. ಅಶೋಕ್ ಜಂಬೆ, ಶ್ವೇತಾ, ಮಧು ಹೆಗ್ಡೆ, ದಿಶಾ ಮದನ್ ಮೊದಲಾದವರು ನಟಿಸಿದ್ದಾರೆ. ಈ ಧಾರಾವಾಹಿ ಜನ ಮೆಚ್ಚುಗೆ ಪಡೆಯುತ್ತಿದೆ. ಆರಂಭ ಆದಾಗಿನಿಂದಲೂ ಈ ಧಾರಾವಾಹಿ ಮೊದಲ ಸ್ಥಾನದಲ್ಲೇ ಮುನ್ನಡೆಯುತ್ತಾ ಬರುತ್ತಿತ್ತು. ಈಗ ಧಾರಾವಾಹಿ ಎರಡನೇ ಸ್ಥಾನಕ್ಕೆ ಇಳಿದಿದೆ. ಮುಂದಿನ ವಾರಕ್ಕೆ ಮತ್ತೆ ಟಿಆರ್ಪಿಯಲ್ಲಿ ಬದಲಾವಣೆ ಆಗಬಹುದು.
ಮೂರನೇ ಸ್ಥಾನದಲ್ಲಿ ‘ಸೀತಾ ರಾಮ’ ಧಾರಾವಾಹಿ ಇದೆ. ಗಗನ್ ಚಿನ್ನಪ್ಪ ರಾಮನಾಗಿ, ವೈಷ್ಣವಿ ಗೌಡ ಸೀತೆಯಾಗಿ ಈ ಧಾರಾವಾಹಿಯಲ್ಲಿ ನಟಿಸಿದ್ದಾರೆ. ಈಗಾಗಲೇ ವಿವಾಹ ಆಗಿ ಗಂಡನಿಂದ ದೂರವಾದ ಸೀತೆಯ ಮೇಲೆ ರಾಮನಿಗೆ ಪ್ರೀತಿ ಆಗಿದೆ. ಆಕೆಯ ಬಳಿ ಪ್ರೀತಿಯನ್ನೂ ಹೇಳಿಕೊಳ್ಳಲಾಗಿದೆ. ಇಬ್ಬರ ನಡುವಿನ ತುಮುಲವನ್ನು ತೋರಿಸಲಾಗುತ್ತಿದೆ.
ಇದನ್ನೂ ಓದಿ: ಐಪಿಎಲ್ನಿಂದ ಸಿರಿಯಲ್ ಟಿಆರ್ಪಿ ಮೇಲೆ ಭರ್ಜರಿ ಎಫೆಕ್ಟ್; ಯಾವ ಧಾರಾವಾಹಿಗೆ ಮೊದಲ ಸ್ಥಾನ?
ನಾಲ್ಕನೇ ಸ್ಥಾನದಲ್ಲಿ ಕಲರ್ಸ್ ಕನ್ನಡದಲ್ಲಿ ಪ್ರಸಾರ ಆಗುತ್ತಿರುವ ‘ರಾಮಾಚಾರಿ’ ಧಾರಾವಾಹಿ ಇದೆ. ಮೌನಾ ಗುಡ್ಡೇಮನೆ, ರಿತ್ವಿಕ್ ಕೃಪಾಕರ್, ಪುನಿಥಾ ಗೌಡ ಮೊದಲಾದವರು ನಟಿಸಿದ್ದಾರೆ. ಈ ಧಾರಾವಾಹಿ ಮೆಚ್ಚುಗೆ ಪಡೆಯುತ್ತಿದೆ. ಐದನೇ ಸ್ಥಾನದಲ್ಲಿ ಈ ಬಾರಿ ಎರಡು ಧಾರಾವಾಹಿಗಳು ಸ್ಥಾನ ಪಡೆದಿವೆ. ಇತ್ತೀಚೆಗೆ ಆರಂಭ ಆಗಿರೋ ‘ಶ್ರಾವಣಿ ಸುಬ್ರಮಣ್ಯ’ ಹಾಗೂ ‘ಅಮೃತಧಾರೆ’ ಧಾರಾವಾಹಿ ಇದೆ. ಎರಡೂ ಧಾರಾವಾಹಿಗಳಿಗೆ ಈ ಬಾರಿ ಐದನೇ ಸ್ಥಾನ ಸಿಕ್ಕಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.