ಐಪಿಎಲ್ನಿಂದ ಸಿರಿಯಲ್ ಟಿಆರ್ಪಿ ಮೇಲೆ ಭರ್ಜರಿ ಎಫೆಕ್ಟ್; ಯಾವ ಧಾರಾವಾಹಿಗೆ ಮೊದಲ ಸ್ಥಾನ?
Kannada Serial TRP: ಜೀ ಕನ್ನಡದಲ್ಲಿ ಇತ್ತೀಚೆಗೆ ಆರಂಭ ಆದ ‘ಲಕ್ಷ್ಮೀ ನಿವಾಸ’ ಧಾರಾವಾಹಿ ಟಿಆರ್ಪಿಯಲ್ಲಿ ಮೊದಲ ಸ್ಥಾನದಲ್ಲಿ ಇದೆ. ಈ ಧಾರಾವಾಹಿಗೆ ಕಳೆದ ವಾರಕ್ಕಿಂತ ಕಡಿಮೆ ಟಿಆರ್ಪಿ ಸಿಕ್ಕಿದೆ. ಉಳಿದ ಧಾರಾವಾಹಿಗಳ ರೇಟಿಂಗ್ ಕೂಡ ಕಡಿಮೆ ಆಗಿರುವುದರಿಂದ ಈ ಧಾರಾವಾಹಿ ಮೊದಲ ಸ್ಥಾನದಲ್ಲೇ ಇದೆ.
ಐಪಿಎಲ್ (IPL) ಹಂಗಾಮಾ ಶುರುವಾಗಿದೆ. ಜನರು ಹೆಚ್ಚಿನ ಸಂಖ್ಯೆಯಲ್ಲಿ ಐಪಿಎಲ್ ವೀಕ್ಷಣೆ ಮಾಡುತ್ತಾರೆ. ಇದರ ಪ್ರಭಾವ ಧಾರಾವಾಹಿ ಟಿಆರ್ಪಿಗಳ ಮೇಲಾಗಿದೆ ಎಂದರೂ ತಪ್ಪಿಲ್ಲ. ಈ ಮೊದಲು ಧಾರಾವಾಹಿಗಳು ಎರಡು ಡಿಜಿಟ್ ಸಂಖ್ಯೆಯಲ್ಲಿ ಟಿಆರ್ಪಿ (TRP) ಪಡೆದ ಉದಾಹರಣೆ ಇದೆ. ಆದರೆ, ಈಗ ಹಾಗಿಲ್ಲ. ವಾರ ಕಳೆದಂತೆ ಎಲ್ಲಾ ಧಾರಾವಾಹಿಗಳ ಟಿಆರ್ಪಿಯಲ್ಲಿ ಇಳಿಕೆ ಕಾಣುತ್ತಿದೆ. ಇದಕ್ಕೆ ಐಪಿಎಲ್ ಕಾರಣ ಎಂದು ಹೇಳಲಾಗುತ್ತಿದೆ.
ಈ ಬಾರಿ ‘ಲಕ್ಷ್ಮೀ ನಿವಾಸ’ ಧಾರಾವಾಹಿ ಟಿಆರ್ಪಿಯಲ್ಲಿ ಮೊದಲ ಸ್ಥಾನದಲ್ಲಿ ಇದೆ. ಈ ಧಾರಾವಾಹಿಗೆ ಕಳೆದ ವಾರಕ್ಕಿಂತ ಕಡಿಮೆ ಟಿಆರ್ಪಿ ಸಿಕ್ಕಿದೆ. ಉಳಿದ ಧಾರಾವಾಹಿಗಳ ರೇಟಿಂಗ್ ಕೂಡ ಕಡಿಮೆ ಆಗಿರುವುದರಿಂದ ಈ ಧಾರಾವಾಹಿ ಮೊದಲ ಸ್ಥಾನದಲ್ಲೇ ಇದೆ. ಎರಡನೇ ಸ್ಥಾನದಲ್ಲಿ ‘ಪುಟ್ಟಕ್ಕನ ಮಕ್ಕಳು’ ಧಾರಾವಾಹಿ ಇದೆ. ಈ ಧಾರಾವಾಹಿ ಈ ಮೊದಲು ಎರಡಂಕಿ ಟಿಆರ್ಪಿ ಪಡೆಯುತ್ತಿತ್ತು. ಆದರೆ, ಇತ್ತೀಚೆಗೆ ಟಿಆರ್ಪಿ ಕುಸಿಯುತ್ತಿದೆ.
ಕಲರ್ಸ್ ಕನ್ನಡದ ‘ರಾಮಾಚಾರಿ’ ಧಾರಾವಾಹಿ ಟಿಆರ್ಪಿ ರೇಸ್ನಲ್ಲಿದೆ. ಈ ಧಾರಾವಾಹಿ ಮೂರನೇ ಸ್ಥಾನ ಪಡೆದುಕೊಂಡಿದೆ. ಈ ಧಾರಾವಾಹಿಯ ಟಿಆರ್ಪಿಯಲ್ಲಿ ಏರಿಳಿತ ಆಗುತ್ತಲೇ ಇದೆ. ‘ಸೀತಾ ರಾಮ’ ಧಾರಾವಾಹಿ ಹೊಸ ಹೊಸ ತಿರುವುಗಳನ್ನು ಪಡೆದುಕೊಂಡು ಸಾಗುತ್ತಿದೆ. ಈ ಧಾರಾವಾಹಿ ನಾಲ್ಕನೇ ಸ್ಥಾನದಲ್ಲಿದೆ. ಗಗನ್ ಚಿನ್ನಪ್ಪ, ವೈಷ್ಣವಿ ಗೌಡ, ಅಶೋಕ್ ಮೊದಲಾದವರು ಈ ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ. ಈ ಧಾರಾವಾಹಿ ಕನ್ಸಿಸ್ಟನ್ಸಿ ಕಾಪಾಡಿಕೊಂಡು ಹೋಗುತ್ತಿದೆ.
ಇದನ್ನೂ ಓದಿ: ಕಲರ್ಸ್ ಕನ್ನಡ ಧಾರಾವಾಹಿಗೆ ಎಂಟ್ರಿಕೊಟ್ಟ ವಿನಯ್ ಗೌಡ; ಇಲ್ಲಿದೆ ವಿವರ
ಹೊಸದಾಗಿ ಎಂಟ್ರಿಕೊಟ್ಟಿರೋ ‘ಶ್ರಾವಣಿ ಸುಬ್ರಹ್ಮಣ್ಯ’ ಧಾರಾವಾಹಿ ರೇಸ್ನಲ್ಲಿ ಐದನೇ ಸ್ಥಾನದಲ್ಲಿ ಇದೆ. ಈ ಧಾರಾವಾಹಿ ಟಿಆರ್ಪಿ ರೇಸ್ನಲ್ಲಿ ಸ್ಥಾನ ಪಡೆದುಕೊಂಡು ಮಿಂಚುತ್ತಿದೆ. ಎಲ್ಲಾ ಧಾರಾವಾಹಿಗಳ ಟಿಆರ್ಪಿ ಕಡಿಮೆ ಆಗಿರುವುದಕ್ಕೆ ಐಪಿಎಲ್ ಮುಖ್ಯ ಕಾರಣ ಅನ್ನೋದು ಕೆಲವರ ಅಭಿಪ್ರಾಯ. ಈ ಮೊದಲು ಬಿಗ್ ಬಾಸ್ ಬಂದಾಗ ಇತರ ವಾಹಿನಿಗಳಲ್ಲಿ ಆ ಸಂದರ್ಭದಲ್ಲಿ ಪ್ರಸಾರ ಆಗುತ್ತಿದ್ದ ಧಾರಾವಾಹಿಗಳ ಟಿಆರ್ಪಿ ಕಡಿಮೆ ಆಗಿತ್ತು.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 2:19 pm, Fri, 19 April 24