ಸೆಲೆಬ್ರಿಟಿಗಳ ಮದುವೆ ಎಂದರೆ ಅದ್ದೂರಿತನ ಇರಲೇಬೇಕು. ಚಿಕ್ಕ ವಿಚಾರಗಳಿಗೂ ದೊಡ್ಡದಾಗಿ ಖರ್ಚು ಮಾಡಲಾಗುತ್ತದೆ. ಈಗ ಕತ್ರಿನಾ ಕೈಫ್ (Katrina Kaif) ಮತ್ತು ವಿಕ್ಕಿ ಕೌಶಲ್ (Vicky Kaushal) ಅವರ ಮದುವೆ ಕೂಡ ಅದ್ದೂರಿಯಾಗಿ ನಡೆಯಲಿದೆ. ಡಿಸೆಂಬರ್ನಲ್ಲಿ ಇವರಿಬ್ಬರ ಮದುವೆ (Katrina Kaif Vicky Kaushal Wedding) ಸಮಾರಂಭ ನೆರವೇರಲಿದ್ದು, ಈಗಾಗಲೇ ಭರ್ಜರಿ ತಯಾರಿ ನಡೆಯುತ್ತಿದೆ. ಇದಕ್ಕೆಲ್ಲ ಕೋಟ್ಯಂತರ ರೂಪಾಯಿ ಮೀಸಲು ಇಡಲಾಗಿದೆ. ಮದುವೆಗೂ ಮುನ್ನ ನಡೆಯುವ ಮೆಹಂದಿ (Mehendi) ಶಾಸ್ತ್ರಕ್ಕೆ ಹೆಚ್ಚು ಮಹತ್ವ ನೀಡಲಾಗುತ್ತಿದೆ. ಲಕ್ಷಾಂತರ ರೂ. ಬೆಲೆಯ ಮೆಹಂದಿ ತರಿಸಲಾಗುತ್ತಿರುವುದು ವಿಶೇಷ. ಸದ್ಯ ಈ ವಿಚಾರದ ಬಗ್ಗೆ ಗುಸುಗುಸು ಕೇಳಿಬರುತ್ತಿದೆ. ಬರೋಬ್ಬರಿ 1 ಲಕ್ಷ ರೂಪಾಯಿಯನ್ನು ಮೆಹಂದಿಗಾಗಿ ಖರ್ಚು ಮಾಡಲಾಗುತ್ತಿದೆ.
ವಿಕ್ಕಿ ಕೌಶಲ್ ಹಿಂದು, ಕತ್ರಿನಾ ಕೈಫ್ ಮುಸ್ಲಿಂ ಸಮುದಾಯಕ್ಕೆ ಸೇರಿದವರು. ಎರಡೂ ಧರ್ಮದ ಸಂಪ್ರದಾಯದ ಪ್ರಕಾರ ಮದುವೆ ನಡೆಯಲಿದೆ. ಇದಕ್ಕಾಗಿ ರಾಜಸ್ಥಾನದ ಐಷಾರಾಮಿ ಹೋಟೆಲ್ ಬುಕ್ ಆಗಿದೆ. ಜೋಧ್ಪುರದ ಪಾಲಿ ಜಿಲ್ಲೆಯಿಂದ ವಿಶೇಷ ಮೆಹಂದಿಯನ್ನು ತರಿಸಲಾಗುತ್ತಿದೆ ಎಂದು ಸುದ್ದಿ ಆಗಿದೆ. ಈ ಮೆಹಂದಿ ಬೆಲೆ ಒಂದು ಲಕ್ಷ ರೂಪಾಯಿ ಎಂಬುದನ್ನು ತಿಳಿದು ಅಭಿಮಾನಿಗಳು ಕಣ್ಣರಳಿಸುತ್ತಿದ್ದಾರೆ.
ಮದುವೆ ಬಳಿಕ ಕತ್ರಿನಾ ಕೈಫ್ ಹೆಸರು ಕೊಂಚ ಬದಲಾಗಲಿದೆ. ಇನ್ಮುಂದೆ ಅವರನ್ನು KKK ಎಂದು ಅಭಿಮಾನಿಗಳು ಕರೆಯಬಹುದು. ಏನಿದು KKK? ಕತ್ರಿನಾ ಕೈಫ್ ಕೌಶಲ್! ಹೌದು, ಈ ಬಗ್ಗೆ ಬಾಲಿವುಡ್ ಅಂಗಳದಿಂದ ಈಗಾಗಲೇ ಗುಸುಗುಸು ಕೇಳಿಬರುತ್ತಿದೆ. ಮದುವೆ ಬಳಿಕ ತಮ್ಮ ಹೆಸರಿನ ಜೊತೆಯಲ್ಲಿ ಕೌಶಲ್ ಎಂಬ ಸರ್ನೇಮ್ ಸೇರಿಸಿಕೊಳ್ಳಲು ಕತ್ರಿನಾ ನಿರ್ಧರಿಸಿದ್ದಾರೆ ಎನ್ನಲಾಗಿದೆ. ಆದರೆ ಈ ಬಗ್ಗೆ ಅವರು ಎಲ್ಲಿಯೂ ಅಧಿಕೃತವಾಗಿ ಹೇಳಿಕೊಂಡಿಲ್ಲ.
ಮದುವೆ ಬಳಿಕ ಅನೇಕ ನಟಿಯರು ತಮ್ಮ ಹೆಸರಿನ ಜೊತೆ ಗಂಡನ ಹೆಸರು ಅಥವಾ ಗಂಡನ ಕುಟುಂಬದ ಸರ್ನೇಮ್ ಸೇರಿಸಿಕೊಂಡಿದ್ದಾರೆ. ಐಶ್ವರ್ಯಾ ರೈ ಬಚ್ಚನ್, ಕರೀನಾ ಕಪೂರ್ ಖಾನ್ ಮುಂತಾದವರೇ ಈ ಮಾತಿಗೆ ಉದಾಹರಣೆ. ಅದೇ ರೀತಿ ಕತ್ರಿನಾ ಕೈಫ್ ಕೂಡ ತಮ್ಮ ಹೆಸರಿನ ಜೊತೆ ಕೌಶಲ್ ಎಂಬ ಸರ್ನೇಮ್ ಸೇರಿಸಿಕೊಳ್ಳಲಿದ್ದು, ಮುಂಬರುವ ಎಲ್ಲ ಸಿನಿಮಾದ ಟೈಟಲ್ ಕಾರ್ಡ್ನಲ್ಲಿ ಅವರು ಇದೇ ಹೆಸರಿನಿಂದ ಗುರುತಿಸಿಕೊಳ್ಳುತ್ತಾರೆ ಎನ್ನಲಾಗಿದೆ.
ಇದನ್ನೂ ಓದಿ:
ಮದುವೆ ಬಳಿಕ ಹನಿಮೂನ್ಗೆ ಹೋಗಲ್ಲ ಕತ್ರಿನಾ ಕೈಫ್-ವಿಕ್ಕಿ ಕೌಶಲ್; ಕಾರಣ ಏನು?
ಕತ್ರಿನಾ-ವಿಕ್ಕಿ ವಿವಾಹ: ವೈರಲ್ ಆಗಿದ್ದ ಸಲ್ಮಾನ್-ಕತ್ರಿನಾ ಮದುವೆ ವಿಡಿಯೋದ ಅಸಲಿಯತ್ತೇನು?