ಪ್ರೇಯಸಿಯ ಫ್ಯಾನ್ಸ್​ಗೆ 25 ಕಾರು, 200 ಐಫೋನ್ ಗಿಫ್ಟ್ ಕೊಡುವೆ ಎಂದ ಸುಕೇಶ್ ಚಂದ್ರಶೇಖರ್

ನೂರಾರು ಕೋಟಿ ರೂಪಾಯಿ ವಂಚನೆ ಆರೋಪದಲ್ಲಿ ಜೈಲು ಸೇರಿರುವ ಸುಕೇಶ್ ಚಂದ್ರಶೇಖರ್​, ಜೈಲಿನಿಂದಲೇ ಸುದ್ದಿ ಆಗುತ್ತಿದ್ದಾನೆ. ನಟಿ ಜಾಕ್ವೆಲಿನ್ ಫರ್ನಾಂಡಿಸ್​ ಜೊತೆ ಆತನಿಗೆ ಆಪ್ತತೆ ಇತ್ತು ಎಂಬುದಕ್ಕೆ ಫೋಟೋಗಳು ಸಾಕ್ಷಿ ಇವೆ. ಈಗ ನಟಿಯ ಅಭಿಮಾನಿಗಳಿಗೆ ಸುಕೇಶ್​ ಭರ್ಜರಿ ಆಫರ್​ ನೀಡಿದ್ದಾನೆ. 25 ಕಾರು, 200 ಐಫೋನ್ ಕೊಡುವುದಾಗಿ ಆತ ಹೇಳಿದ್ದಾನೆ.

ಪ್ರೇಯಸಿಯ ಫ್ಯಾನ್ಸ್​ಗೆ 25 ಕಾರು, 200 ಐಫೋನ್ ಗಿಫ್ಟ್ ಕೊಡುವೆ ಎಂದ ಸುಕೇಶ್ ಚಂದ್ರಶೇಖರ್
ಜಾಕ್ವೆಲಿನ್ ಫರ್ನಾಂಡಿಸ್​, ಸುಕೇಶ್​ ಚಂದ್ರಶೇಖರ್​

Updated on: Oct 31, 2024 | 8:51 PM

ಸುಕೇಶ್​ ಚಂದ್ರಶೇಖರ್ ಸಹವಾಸ ಮಾಡಿದ್ದಕ್ಕಾಗಿ ನಟಿ ಜಾಕ್ವೆಲಿನ್ ಫರ್ನಾಂಡಿಸ್ ಅವರ ಕೊರಳಿಗೆ ವಿವಾದ ಸುತ್ತಿಕೊಂಡಿತು. ಈಗ ಸುಕೇಶ್ ಚಂದ್ರಶೇಖರ್​ ಜೈಲಿನಲ್ಲಿ ಇದ್ದಾನೆ. ಆದರೆ ಆತನ ಹಾವಳಿ ಕಡಿಮೆ ಆಗಿಲ್ಲ. ಜಾಕ್ವೆಲಿನ್ ಫರ್ನಾಂಡಿಸ್ ಅವರನ್ನು ಆತ ಪ್ರೇಯಸಿ ಎಂದು ಕರೆಯುತ್ತಾನೆ. ಜೈಲಿನಿಂದಲೇ ಆಗಾಗ ಪತ್ರ ಬರೆಯುತ್ತಾನೆ. ದೀಪಾವಳಿ ಹಬ್ಬದ ಪ್ರಯುಕ್ತ ಆತ ಹೊಸ ಪತ್ರ ಬರೆದಿದ್ದಾನೆ. ಅಚ್ಚರಿ ಏನೆಂದರೆ, ಈ ಬಾರಿ ಜಾಕ್ವೆಲಿನ್ ಫರ್ನಾಂಡಿಸ್ ಅವರ ಅಭಿಮಾನಿಗಳಿಗೆ ದುಬಾರಿ ಬೆಲೆಯ ಉಡುಗೊರೆಗಳನ್ನು ನೀಡುವುದಾಗಿ ಸುಕೇಶ್ ಚಂದ್ರಶೇಖರ್​ ಘೋಷಿಸಿದ್ದಾನೆ.

ಇತ್ತೀಚೆಗೆ ಜಾಕ್ವೆಲಿನ್ ಫರ್ನಾಂಡಿಸ್​ ಅವರ ಹೊಸ ಹಾಡು ಬಿಡುಗಡೆ ಆಯಿತು. ಯೂಟ್ಯೂಬ್​ನಲ್ಲಿ ಆ ಹಾಡಿಗೆ ಕಮೆಂಟ್​ ಮಾಡಿ ಪ್ರೋತ್ಸಾಹಿಸುವ ಅದೃಷ್ಟವಂತ ಅಭಿಮಾನಿಗಳಿಗೆ ತಾನು 25 ಮಹೀಂದ್ರ ಥಾರ್, 200 ಐಫೋನ್​ 16 ಪ್ರೋ ಉಡುಗೊರೆಯಾಗಿ ನೀಡುವುದಾಗ ಸುಕೇಶ್ ಚಂದ್ರಶೇಖರ್​ ತಿಳಿಸಿದ್ದಾನೆ ಎಂದು ಸುದ್ದಿ ಆಗಿದೆ. ಆತನ ಹುಚ್ಚುತನಕ್ಕೆ ಜನರು ನಗುತ್ತಿದ್ದಾರೆ.

ಜಾಕ್ವೆಲಿನ್ ಫರ್ನಾಂಡಿಸ್ ಅವರು ಸುಕೇಶ್​ ಚಂದ್ರಶೇಖರ್​ ಜೊತೆ ತಬ್ಬಿಕೊಂಡು ಮುದ್ದಾಡುತ್ತಾ ಇರುವ ಫೋಟೋಗಳು ವೈರಲ್ ಆಗಿದ್ದವು. ಆ ಬಳಿಕ ಜೈಲಿನಿಂದ ಅನೇಕ ಬಾರಿ ಆತ ಪತ್ರ ಬರೆದಿದ್ದಾನೆ. ಈಗಿನ ಪತ್ರದಲ್ಲಿ ಜಾಕ್ವೆಲಿನ್ ಅವರ ಬಗ್ಗೆ ಆತ ಪ್ರೀತಿಯ ಮಾತುಗಳನ್ನು ಆಡಿದ್ದಾನೆ. ತನ್ನನ್ನು ತಾನು ರಾಮ ಎಂದುಕೊಂಡು, ಜಾಕ್ವೆಲಿನ್ ಅವರನ್ನು ಸೀತೆ ಎಂದು ಸುಕೇಶ್​ ಚಂದ್ರಶೇಖರ್​ ಬಣ್ಣಿಸಿದ್ದಾನೆ.

ಇದನ್ನೂ ಓದಿ: ಹೇಗಿದೆ ನೋಡಿ ಜಾಕ್ವೆಲಿನ್ ಫರ್ನಾಂಡಿಸ್ ವೆಕೇಶನ್ ಫೋಟೋಸ್

ಶೀಘ್ರದಲ್ಲೇ ಜಾಮೀನು ಸಿಗಬಹುದು ಎಂಬ ನಿರೀಕ್ಷೆ ಸುಕೇಶ್​ ಚಂದ್ರಶೇಖರ್​ಗೆ ಇದೆ. ಹಾಗಾಗಿ ರಾಮ ವನವಾಸ ಮುಗಿಸಿ ಬಂದ ರೀತಿಯಲ್ಲೇ ತಾನು ಜೈಲುವಾಸ ಮುಗಿಸಿ ಬರುತ್ತೇನೆ ಎಂದು ಆತ ಪತ್ರದಲ್ಲಿ ಬರೆದಿದ್ದಾರೆ. ‘ನನ್ನನ್ನು ಜನರು ಹುಚ್ಚ ಎನ್ನುತ್ತಾರೆ. ಆದರೆ ನನ್ನ-ನಿನ್ನ ನಡುವೆ ಇರುವುದು ಈ ಜಗತ್ತಿಗೆ ಏನು ತಿಳಿಯುತ್ತದೆ? ನಮ್ಮ ಪ್ರೀತಿ ಇಡೀ ಜಗತ್ತಿಗೆ ಮಾದರಿ ಆಗಲಿದೆ’ ಎಂದು ಪತ್ರ ಬರೆದಿದ್ದಾನೆ ಸುಕೇಶ್ ಚಂದ್ರಶೇಖರ್​. ಈತನ ಈ ಹುಚ್ಚಾಟಗಳಿಂದ ಜಾಕ್ವೆಲಿನ್ ಫರ್ನಾಂಡಿಸ್​ ಅವರಿಗೆ ದಿನದಿನವೂ ತಲೆಬಿಸಿ ಆಗುತ್ತಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಮದನ್​ ಕುಮಾರ್​

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Loading...
Unable to load recommendations.
Follow Us