ಜಾಕ್ವೆಲಿನ್​ಗೆ ಬಿಟ್ಟು ಬಿಡದೇ ಕಾಡುತ್ತಿರುವ ಸುಕೇಶ್; ಜೈಲಿನಿಂದ ಮತ್ತೊಂದು ಪ್ರೇಮಪತ್ರ

ಸುಕೇಶ್ ಚಂದ್ರಶೇಖರ್ ಪತ್ರದಲ್ಲಿ ತಮ್ಮ ಭಾವನೆಯನ್ನು ವಿವರವಾಗಿ ಬರೆದುಕೊಂಡಿದ್ದಾನೆ. ‘ಬೇಬಿ ಓ ನನ್ನ ಬೇಬಿ.. ನಿನ್ನ ಹೊಸ ಫೋಟೋಗಳನ್ನು ನೋಡಿದೆ. ಯಾರು ಇಷ್ಟು ಸುಂದರವಾಗಿ ಇರಲು ಸಾಧ್ಯ’ ಎಂದಿರುವ ಆತ ‘ಸಜ್ನಿ..’ ಹಾಡನ್ನು ಬರೆದಿದ್ದಾನೆ.

ಜಾಕ್ವೆಲಿನ್​ಗೆ ಬಿಟ್ಟು ಬಿಡದೇ ಕಾಡುತ್ತಿರುವ ಸುಕೇಶ್; ಜೈಲಿನಿಂದ ಮತ್ತೊಂದು ಪ್ರೇಮಪತ್ರ
ಸುಕೇಶ್-ಜಾಕ್ವೆಲಿನ್
Follow us
ರಾಜೇಶ್ ದುಗ್ಗುಮನೆ
|

Updated on: Sep 21, 2024 | 7:00 AM

ನಟಿ ಜಾಕ್ವೆಲಿನ್ ಫರ್ನಾಂಡಿಸ್​ಗೆ ಸುಕೇಶ್ ಚಂದ್ರಶೇಖರ್ ನಿರಂತರವಾಗಿ ಕಾಡುತ್ತಿದ್ದಾನೆ. 200 ಕೋಟಿ ರೂಪಾಯಿ ವಂಚನೆ ಪ್ರಕರಣದಲ್ಲಿ ಜೈಲು ಸೇರಿರುವ ಸುಕೇಶ್, ಜಾಕ್ವೆಲಿನ್ ಅವರನ್ನು ಪ್ರೇಯಸಿ ಎಂದು ಕರೆದಿದ್ದಾನೆ. ಈ ಕಾರಣದಿಂದಲೇ ಒಂದಾದಮೇಲೆ ಒಂದರಂತೆ ಪತ್ರಗಳನ್ನು ಬರೆಯುತ್ತಿದ್ದಾನೆ. ಜಾಕ್ವೆಲಿನ್ ಅವರು ಆಗಸ್ಟ್ 11ರಂದು ಬರ್ತ್​ಡೇ ಆಚರಿಸಿಕೊಂಡರು. ಆಗ ಸುಕೇಶ್ ಪತ್ರ ಬರೆದಿದ್ದ ವಿಚಾರ ಈಗ ರಿವೀಲ್ ಆಗಿದೆ. ‘ಲಾಪತಾ ಲೇಡಿಸ್’ ಚಿತ್ರದ ‘ಸಜ್ನಿ..’ ಹಾಡನ್ನು ಸುಕೇಶ್ ಬರೆದಿದ್ದ.

ಸುಕೇಶ್ ಚಂದ್ರಶೇಖರ್ ಪತ್ರದಲ್ಲಿ ತಮ್ಮ ಭಾವನೆಯನ್ನು ವಿವರವಾಗಿ ಬರೆದುಕೊಂಡಿದ್ದಾನೆ. ‘ಬೇಬಿ ಓ ನನ್ನ ಬೇಬಿ.. ನಿನ್ನ ಹೊಸ ಫೋಟೋಗಳನ್ನು ನೋಡಿದೆ. ಯಾರು ಇಷ್ಟು ಸುಂದರವಾಗಿ ಇರಲು ಸಾಧ್ಯ. ನೀನು ಸಾಕಷ್ಟು ಸುಂದರವಾಗಿ ಇದ್ದೀಯಾ. ನಿನಗೆ ಅರ್ಪಿಸಲು ಎರಡು ವಿಷಯ ಇದೆ’ ಎಂದಿದ್ದಾನೆ ಆತ.

‘ಸಜ್ನಿ.. ಹಾಡನ್ನು ಹಾಡಬೇಕು. ಈ ಹಾಡಿನ ಪ್ರತಿ ಸಾಲು ನಿನಗಾಗಿ. ನಿನ್ನ ಜೊತೆ ಮಾತನಾಡದೆ, ನೀನು ನನ್ನ ಬಳಿ ಇರದೆ ರಾತ್ರಿ ಹಗಲು ಹೇಗೆ ಸಾಗುತ್ತಿದೆ ತಿಳಿಯುತ್ತಿಲ್ಲ. ನಿನಗಾಗಿ ಬರೆದ ಆರ್ಟ್​ವರ್ಕ್ ಮತ್ತೊಂದು ಡೆಡಿಕೇಷನ್. ನಿನಗೆ ಇದು ಇಷ್ಟ ಆಗುತ್ತದೆ ಎಂದುಕೊಂಡಿದ್ದೇನೆ’ ಎಂದಿದ್ದಾನೆ ಆತ. ‘ನಾನು ಪ್ರತಿ ಕ್ಷಣ ನಿನ್ನ ಬಗ್ಗೆ ಯೋಚಿಸುತ್ತೇನೆ. ಸಜ್ನಿ ಐ ಲವ್​ಯೂ. ನನ್ನ ಬೊಟ್ಟ ಬೊಮ್ಮ ಲವ್ ಯೂ. ನೀನು ನಿಜಕ್ಕೂ ಅಮೇಜಿಂಗ್’ ಎಂದು ಬರೆದಿದ್ದಾನೆ ಆತ.

ಇದನ್ನೂ ಓದಿ: ವಯನಾಡು ಸಂತ್ರಸ್ತರಿಗೆ 15 ಕೋಟಿ ರೂ., 300 ಮನೆ ನೀಡಲು ಮುಂದಾದ ನಟಿ ಜಾಕ್ವೆಲಿನ್ ಗೆಳೆಯ ಸುಕೇಶ್ 

ಸುಕೇಶ್ ಹಾಗೂ ಜಾಕ್ವೆಲಿನ್ ಪ್ರೀತಿಯಲ್ಲಿ ಇದ್ದರು ಎನ್ನಲಾಗಿದೆ. ಇದಕ್ಕೆ ಸಂಬಂಧಿಸಿದ ಫೋಟೋ ವೈರಲ್ ಆಗಿತ್ತು. ಜಾಕ್ವೆಲಿನ್ ಜೊತೆ ಆಪ್ತವಾಗಿದ್ದ ಫೋಟೋಗಳನ್ನು ಸುಕೇಶ್ ಲೀಕ್ ಮಾಡಿದ್ದ ಎನ್ನಲಾಗಿದೆ. ಈ ಪ್ರಕರಣದಿಂದ ಜಾಕ್ವೆಲಿನ್ ಸಾಕಷ್ಟು ತೊಂದರೆ ಅನುಭವಿಸಿದ್ದರು. ಸುಕೇಶ್​ನಿಂದ ಗಿಫ್ಟ್ ಪಡೆದ ಆರೋಪದಲ್ಲಿ ವಿಚಾರಣೆ ಕೂಡ ಎದುರಿಸಿದ್ದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಗೆಳೆಯನನ್ನು ಕಚ್ಚಿ ಹಿಡಿದ ಸಿಂಹಕ್ಕೆ ಮನಬಂದಂತೆ ಥಳಿಸಿದ ವ್ಯಕ್ತಿ
ಗೆಳೆಯನನ್ನು ಕಚ್ಚಿ ಹಿಡಿದ ಸಿಂಹಕ್ಕೆ ಮನಬಂದಂತೆ ಥಳಿಸಿದ ವ್ಯಕ್ತಿ
ಮಹಾರಾಷ್ಟ್ರದಲ್ಲಿ ಪೊಲೀಸರ ಮೇಲೆ ಕಲ್ಲು ತೂರಾಟ
ಮಹಾರಾಷ್ಟ್ರದಲ್ಲಿ ಪೊಲೀಸರ ಮೇಲೆ ಕಲ್ಲು ತೂರಾಟ
ಸೋಮನಹಳ್ಳಿಯ ಚಿತಾಗಾರದಿಂದ ಭಾರವಾದ ಹೆಜ್ಜೆಹಾಕುತ್ತ ವಾಪಸ್ಸಾದರು ಪ್ರೇಮ
ಸೋಮನಹಳ್ಳಿಯ ಚಿತಾಗಾರದಿಂದ ಭಾರವಾದ ಹೆಜ್ಜೆಹಾಕುತ್ತ ವಾಪಸ್ಸಾದರು ಪ್ರೇಮ
ಒಕ್ಕಲಿಗ ಸಂಪ್ರದಾಯದಂತೆ ನಡೆದ ಅಂತಿಮ ಸಂಸ್ಕಾರದಲ್ಲಿ ಅನೇಕ ಗಣ್ಯರು ಭಾಗಿ
ಒಕ್ಕಲಿಗ ಸಂಪ್ರದಾಯದಂತೆ ನಡೆದ ಅಂತಿಮ ಸಂಸ್ಕಾರದಲ್ಲಿ ಅನೇಕ ಗಣ್ಯರು ಭಾಗಿ
ಉಗ್ರಂ ಮಂಜು ನಿಜವಾದ ಮುಖ ಬಯಲು ಮಾಡಿದ ಗೌತಮಿ; ಬದಲಾಯ್ತು ಆಟ
ಉಗ್ರಂ ಮಂಜು ನಿಜವಾದ ಮುಖ ಬಯಲು ಮಾಡಿದ ಗೌತಮಿ; ಬದಲಾಯ್ತು ಆಟ
ಮಗಳು ಮತ್ತು ಮೊಮ್ಮಗನೊಂದಿಗೆ ಆಗಮಿಸಿ ತಿರಂಗ ಸ್ವೀಕರಿಸಿದ ಪ್ರೇಮ ಕೃಷ್ಣ
ಮಗಳು ಮತ್ತು ಮೊಮ್ಮಗನೊಂದಿಗೆ ಆಗಮಿಸಿ ತಿರಂಗ ಸ್ವೀಕರಿಸಿದ ಪ್ರೇಮ ಕೃಷ್ಣ
ವಿಡಿಯೋ: ರಾಜಕೀಯ ಗುರುವಿಗೆ ಹೆಗಲು ಕೊಟ್ಟು ವಿದಾಯ ಹೇಳಿದ ಡಿಕೆ ಬ್ರದರ್ಸ್
ವಿಡಿಯೋ: ರಾಜಕೀಯ ಗುರುವಿಗೆ ಹೆಗಲು ಕೊಟ್ಟು ವಿದಾಯ ಹೇಳಿದ ಡಿಕೆ ಬ್ರದರ್ಸ್
ರಾಜ್ಯ ಮತ್ತು ರಾಷ್ಟ್ರದ ಹಲವಾರು ನಾಯಕರು ಕೃಷ್ಣರ ಅಂತ್ಯಕ್ರಿಯೆಯಲ್ಲಿ ಭಾಗಿ
ರಾಜ್ಯ ಮತ್ತು ರಾಷ್ಟ್ರದ ಹಲವಾರು ನಾಯಕರು ಕೃಷ್ಣರ ಅಂತ್ಯಕ್ರಿಯೆಯಲ್ಲಿ ಭಾಗಿ
ರಜತ್ ವಿರುದ್ಧ ಮುಗಿಬಿದ್ದ ಮಂಜು, ತ್ರಿವಿಕ್ರಮ್
ರಜತ್ ವಿರುದ್ಧ ಮುಗಿಬಿದ್ದ ಮಂಜು, ತ್ರಿವಿಕ್ರಮ್
ಅಂತ್ಯಕ್ರಿಯೆ ಉಸ್ತುವಾರಿ ವಹಿಸಿಕೊಂಡ ಡಿಕೆ ಶಿವಕುಮಾರ್​ರಿಂದ ಚುರುಕು ಓಡಾಟ
ಅಂತ್ಯಕ್ರಿಯೆ ಉಸ್ತುವಾರಿ ವಹಿಸಿಕೊಂಡ ಡಿಕೆ ಶಿವಕುಮಾರ್​ರಿಂದ ಚುರುಕು ಓಡಾಟ