AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕರೀನಾಗೆ 44 ವರ್ಷ; ಇಂಡಸ್ಟ್ರಿಯಲ್ಲಿ ಅವರು ಮಾಡಿದ ಹಣ ಎಷ್ಟು?

ಕರೀನಾ ಅವರು ‘ಕಹೋ ನಾ ಪ್ಯಾರ್ ಹೇ’ ಸಿನಿಮಾ ಮೂಲಕ ಬಣ್ಣದ ಲೋಕಕ್ಕೆ ಕಾಲಿಡಬೇಕಿತ್ತು. ಆದರೆ, ಈ ಪ್ರಾಜೆಕ್ಟ್ ಅವರ ಕೈ ತಪ್ಪಿತು. ಅದೇ ವರ್ಷ ಅಭಿಷೇಕ್ ಬಚ್ಚನ್ ನಟನೆಯ ‘ರೆಫ್ಯೂಜಿ’ ಸಿನಿಮಾ ಮೂಲಕ ಬಣ್ಣದ ಬದುಕು ಆರಂಭಿಸಿದರು. ಈ ಸಿನಿಮಾದ ನಟನೆಗೆ ಫಿಲ್ಮ್​ಫೇರ್ ಸಿಕ್ಕಿತು.

ಕರೀನಾಗೆ 44 ವರ್ಷ; ಇಂಡಸ್ಟ್ರಿಯಲ್ಲಿ ಅವರು ಮಾಡಿದ ಹಣ ಎಷ್ಟು?
ಕರೀನಾ ಕಪೂರ್
 ಶ್ರೀಲಕ್ಷ್ಮೀ ಎಚ್
| Edited By: |

Updated on: Sep 21, 2024 | 7:45 AM

Share

ನಟಿ ಕರೀನಾ ಕಪೂರ್ ಅವರು ಬಾಲಿವುಡ್​ನಲ್ಲಿ 20 ವರ್ಷ ಕಳೆದಿದ್ದಾರೆ. ಅವರು ತಮ್ಮ ಸಿನಿಮಾ ಆಯ್ಕೆಗಳ ಮೂಲಕ ಅಚ್ಚರಿ ಮೂಡಿಸುತ್ತಾರೆ. ಈಗ ಅವರು ಬಾಲಿವುಡ್​ನಲ್ಲಿ ಬೇಡಿಕೆ ಉಳಿಸಿಕೊಂಡಿದ್ದಾರೆ. ಈ ವರ್ಷ ರಿಲೀಸ್ ಆದ ಅವರ ನಟನೆಯ ‘ಕ್ರ್ಯೂ’ ಸಿನಿಮಾ ಯಶಸ್ಸು ಕಂಡಿದೆ. ‘ದಿ ಬಕಿಂಗ್​ಹ್ಯಾಮ್ ಮರ್ಡರ್ಸ್’ ಸಿನಿಮಾ ಕೂಡ ಮೆಚ್ಚುಗೆ ಪಡೆದು, ಸಾಧಾರಣ ಗಳಿಕೆ ಮಾಡುತ್ತಾ ಇದೆ. ಕರೀನಾ ಅವರ ಆಸ್ತಿ ಬಗ್ಗೆ ಇಲ್ಲಿದೆ ವಿವರ.

ಕರೀನಾ ಕಪೂರ್ ಅವರು ‘ಜಬ್​ ವಿ ಮೆಟ್’, ‘ಕಭಿ ಖುಷಿ ಕಭಿ ಗಮ್’ ರೀತಿಯ ಸಿನಿಮಾಗಳನ್ನು ಮಾಡಿ ಮೆಚ್ಚುಗೆ ಪಡೆದರು. ಅವರು ಇತ್ತೀಚೆಗೆ ಬ್ಯಾಕ್ ಟು ಬ್ಯಾಕ್ ಸಿನಿಮಾ ಮಾಡುತ್ತಿದ್ದಾರೆ. ಅವರ ನಟನೆಯ ‘ಸಿಂಗಂ ಅಗೇನ್’ ರಿಲೀಸ್​ಗೆ ರೆಡಿ ಇದೆ. ಕರೀನಾ ಕಪೂರ್ ಅವರು ಬಾಲಿವುಡ್​ನಿಂದ ಹಣ ಮಾಡುವುದರ ಜೊತೆಗೆ ತಮ್ಮದೇ ಬ್ರ್ಯಾಂಡ್, ಬೇರೆ ಬ್ರ್ಯಾಂಡ್​ಗಳ ಪ್ರಚಾರದಿಂದ ಹಣ ಮಾಡುತ್ತಿದ್ದಾರೆ

ಕರೀನಾ ಜನಿಸಿದ್ದು 1980ರ ಸೆಪ್ಟೆಂಬರ್ 21ರಂದು. ಅವರು ಚಿನ್ನದ ಸ್ಪೂನ್ ಹಿಡಿದು ಜನಿಸಿದರು. ಅವರ ಕುಟುಂಬ ಚಿತ್ರರಂಗದಲ್ಲಿ ಆ್ಯಕ್ಟೀವ್ ಆಗಿತ್ತು. ಅವರ ತಂದೆ ರಣಧೀರ್ ಕಪೂರ್ ಸೂಪರ್​ಸ್ಟಾರ್. ಅವರ ತಾಯಿ ಬಬಿತಾ. ಕರೀನಾಗೆ ಸಣ್ಣ ವಯಸ್ಸಿನಲ್ಲೇ ನಾಯಕಿ ಆಗುವ ಕನಸು ಇತ್ತು. ವಿದೇಶದಲ್ಲಿ ಅವರು ಉನ್ನತ ಶಿಕ್ಷಣ ಪಡೆದು ಬಂದರು.

ಕರೀನಾ ಅವರು ‘ಕಹೋ ನಾ ಪ್ಯಾರ್ ಹೇ’ ಸಿನಿಮಾ ಮೂಲಕ ಬಣ್ಣದ ಲೋಕಕ್ಕೆ ಕಾಲಿಡಬೇಕಿತ್ತು. ಆದರೆ, ಈ ಪ್ರಾಜೆಕ್ಟ್ ಅವರ ಕೈ ತಪ್ಪಿತು. ಅದೇ ವರ್ಷ ಅಭಿಷೇಕ್ ಬಚ್ಚನ್ ನಟನೆಯ ‘ರೆಫ್ಯೂಜಿ’ ಸಿನಿಮಾ ಮೂಲಕ ಬಣ್ಣದ ಬದುಕು ಆರಂಭಿಸಿದರು. ಈ ಸಿನಿಮಾದ ನಟನೆಗೆ ಫಿಲ್ಮ್​ಫೇರ್ ಸಿಕ್ಕಿತು.

‘ಕಭಿ ಖುಷಿ ಕಭಿ ಗಮ್’ ಸಿನಿಮಾದಲ್ಲಿ ಅವರು ಪೂ ಹೆಸರಿನ ಪಾತ್ರ ಮಾಡಿ ಗಮನ ಸೆಳೆದರು. ಆ ಬಳಿಕ ಯುವ ಓಂಕಾರ್, ದೇವ್ ಸೇರಿ ಹಲವು ಸಿನಿಮಾ ಮಾಡಿದ್ದಾರೆ. ‘ಜಬ್ ವಿ ಮೆಟ್’ ಸಿನಿಮಾ ಸಾಕಷ್ಟು ಗಮನ ಸೆಳೆಯಿತು. ‘3 ಈಡಿಯಟ್ಸ್’ ಕೂಡ ದೊಡ್ಡ ಗೆಲುವು ಕಂಡಿತು.

ಕರೀನಾ ಕಪೂರ್ ಅವರ ನೆಟ್​ವರ್ತ್​ 485 ಕೋಟಿ ರೂಪಾಯಿ. ಅವರು ಪ್ರತಿ ಚಿತ್ರಕ್ಕೆ 10-12 ಕೋಟಿ ರೂಪಾಯಿ ಕಮಾಯಿ ಮಾಡುತ್ತಾರೆ. ಅವರು ಬ್ರ್ಯಾಂಡ್ ಪ್ರಚಾರಕ್ಕೆ 5 ಕೋಟಿ ರೂಪಾಯಿ ಚಾರ್ಜ್ ಮಾಡುತ್ತಾರೆ. ಕರಿನಾ ಕಪೂರ್ ಅವರು ಕುಟುಂಬಕ್ಕೆ ಹೆಚ್ಚು ಆದ್ಯತೆ ನೀಡುತ್ತಾರೆ. ಮಕ್ಕಳ ಆರೈಕೆಯಲ್ಲೂ ಅವರು ಬ್ಯುಸಿ ಇದ್ದಾರೆ.

ಇದನ್ನೂ ಓದಿ: ಯಶ್ ಸಿನಿಮಾ ನಿರಾಕರಿಸಿ ಪ್ರಭಾಸ್ ಸಿನಿಮಾಕ್ಕೆ ಯೆಸ್ ಎಂದರೇ ಕರೀನಾ

ಕರೀನಾ ಅವರು ಬಾಂದ್ರಾದಲ್ಲಿ ಅಪಾರ್ಟ್​ಮೆಂಟ್ ಹೊಂದಿದ್ದಾರೆ. ಇದು ನಾಲ್ಕು ಫ್ಲೋರ್ ಇದೆ. ಇದರ ಬೆಲೆ 55 ಕೋಟಿ ರೂಪಾಯಿ. ಸ್ವಿಜರ್​ಲೆಂಡ್​ನಲ್ಲಿ ಅವರು ಮನೆ ಹೊಂದಿದ್ದು 33 ಕೋಟಿ ರೂಪಾಯಿ ಇದರ ಬೆಲೆ. ಕರೀನಾ ಕಪೂರ್ ಬಳಿ ಮರ್ಸೀಡಿಸ್ ಬೆಂಜ್ ಎಸ್​ ಕ್ಲಾಸ್, ಲೆಕ್ಸಸ್​ ಎಲ್​ಎಕ್ಸ್, ಆಡಿ ಕ್ಯೂ 7 ಮೊದಲಾದ ಕಾರುಗಳು ಇವೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us
ಕೂನೋ ರಾಷ್ಟ್ರೀಯ ಉದ್ಯಾನವನದಲ್ಲಿ 4 ಚಿರತೆ ಮರಿಗಳ ಜನನ
ಕೂನೋ ರಾಷ್ಟ್ರೀಯ ಉದ್ಯಾನವನದಲ್ಲಿ 4 ಚಿರತೆ ಮರಿಗಳ ಜನನ
ಯಾದಗಿರಿಯಲ್ಲಿ ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರ: 6 ಜನರ ವಿರುದ್ಧ ಕೇಸ್​​
ಯಾದಗಿರಿಯಲ್ಲಿ ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರ: 6 ಜನರ ವಿರುದ್ಧ ಕೇಸ್​​
ಟಿ.ನರಸೀಪುರದಲ್ಲಿ ಶೋಭಾಯಾತ್ರೆಗೆ ಪ್ರತಿಯಾಗಿ ಸೌಹಾರ್ದ ಭೀಮಯಾತ್ರೆ
ಟಿ.ನರಸೀಪುರದಲ್ಲಿ ಶೋಭಾಯಾತ್ರೆಗೆ ಪ್ರತಿಯಾಗಿ ಸೌಹಾರ್ದ ಭೀಮಯಾತ್ರೆ
ದಕ್ಷಿಣ ಕನ್ನಡ ಜಿಲ್ಲೆ ಹೆಸರು ಬದಲಾವಣೆಗೆ ಮುಂದಾದ ಸರ್ಕಾರ
ದಕ್ಷಿಣ ಕನ್ನಡ ಜಿಲ್ಲೆ ಹೆಸರು ಬದಲಾವಣೆಗೆ ಮುಂದಾದ ಸರ್ಕಾರ
ತುಳು 2ನೇ ಭಾಷೆಯನ್ನಾಗಿ ಘೋಷಣೆ: ಕುಣಿದು ಕುಪ್ಪಳಿಸಿದ ಶಾಸಕ ಅಶೋಕ್ ರೈ
ತುಳು 2ನೇ ಭಾಷೆಯನ್ನಾಗಿ ಘೋಷಣೆ: ಕುಣಿದು ಕುಪ್ಪಳಿಸಿದ ಶಾಸಕ ಅಶೋಕ್ ರೈ
ಆ ಕಾಲದಲ್ಲೇ ಹಿಂದಿಯವರು ಅನಂತ್ ನಾಗ್ ಬಗ್ಗೆ ಮಾತಾಡುತ್ತಿದ್ದರು: ಉಪೇಂದ್ರ
ಆ ಕಾಲದಲ್ಲೇ ಹಿಂದಿಯವರು ಅನಂತ್ ನಾಗ್ ಬಗ್ಗೆ ಮಾತಾಡುತ್ತಿದ್ದರು: ಉಪೇಂದ್ರ
ಟಿ. ನರಸಿಪುರದಲ್ಲಿ ಗಣೇಶ ಮೂರ್ತಿ ಶೋಭಾಯಾತ್ರೆ ನೇರಪ್ರಸಾರ
ಟಿ. ನರಸಿಪುರದಲ್ಲಿ ಗಣೇಶ ಮೂರ್ತಿ ಶೋಭಾಯಾತ್ರೆ ನೇರಪ್ರಸಾರ
ತುಳು ರಾಜ್ಯದ 2ನೇ ಭಾಷೆ:ಮಂಗಳೂರಿನಲ್ಲಿ ಮುಗಿಲು ಮುಟ್ಟಿದ ಸಂಭ್ರಮ
ತುಳು ರಾಜ್ಯದ 2ನೇ ಭಾಷೆ:ಮಂಗಳೂರಿನಲ್ಲಿ ಮುಗಿಲು ಮುಟ್ಟಿದ ಸಂಭ್ರಮ
ಉಪೇಂದ್ರ ಹುಟ್ಟುಹಬ್ಬದ ಸಂಭ್ರಮ; ಹೊಸ ಸಿನಿಮಾ ಪೋಸ್ಟರ್ ಬಿಡುಗಡೆ
ಉಪೇಂದ್ರ ಹುಟ್ಟುಹಬ್ಬದ ಸಂಭ್ರಮ; ಹೊಸ ಸಿನಿಮಾ ಪೋಸ್ಟರ್ ಬಿಡುಗಡೆ
ಸಚಿವ ಸಂಪುಟ ಸಭೆ ಅಂತ್ಯ: ಸಿಎಂ ಡಿಕೆ ಶಿವಕುಮಾರ್ ಸುದ್ದಿಗೋಷ್ಠಿ ನೇರಪ್ರಸಾರ
ಸಚಿವ ಸಂಪುಟ ಸಭೆ ಅಂತ್ಯ: ಸಿಎಂ ಡಿಕೆ ಶಿವಕುಮಾರ್ ಸುದ್ದಿಗೋಷ್ಠಿ ನೇರಪ್ರಸಾರ