Sunny Deol: ಸನ್ನಿ ಡಿಯೋಲ್ ಸಿಟ್ಟು, ಶಕ್ತಿಗೆ ಒಡೆದೇ ಹೋಯ್ತು ಕಾರಿನ ಗಾಜು

| Updated By: ರಾಜೇಶ್ ದುಗ್ಗುಮನೆ

Updated on: May 06, 2024 | 1:08 PM

ಸನ್ನಿ ಡಿಯೋಲ್​ನ ಅತ್ಯಂತ ಶಕ್ತಿಶಾಲಿ ವ್ಯಕ್ತಿಗೆ ಹೋಲಿಕೆ ಮಾಡಿದ್ದಾರೆ ಬಾಬಿ ಡಿಯೋಲ್. ಅವರನ್ನು ಸೂಪರ್​ಮ್ಯಾನ್ ಎಂದು ಕೂಡ ಕರೆದಿದ್ದಾರೆ. ‘ಸೂಪರ್​ಮ್ಯಾನ್ ರೀತಿ ಯಾರಾದರೂ ಸ್ಟ್ರಾಂಗ್​ ವ್ಯಕ್ತಿಯನ್ನು ನಾನು ನನ್ನ ಜೀವನದಲ್ಲಿ ನೋಡಿದ್ದೇನೆ ಎಂದರೆ ಅದು ಸನ್ನಿ ಅಣ್ಣ’ ಎಂದು ಅಣ್ಣನ ಗುಣಗಾನ ಮಾಡಿದ್ದಾರೆ.

Sunny Deol: ಸನ್ನಿ ಡಿಯೋಲ್ ಸಿಟ್ಟು, ಶಕ್ತಿಗೆ ಒಡೆದೇ ಹೋಯ್ತು ಕಾರಿನ ಗಾಜು
ಸನ್ನಿ
Follow us on

ನಟ ಸನ್ನಿ ಡಿಯೋಲ್ (Sunny Deol) ಅವರಿಗೆ ಈಗ 66 ವರ್ಷ ವಯಸ್ಸು. ಅವರಿಗೆ ವಯಸ್ಸಾಗುತ್ತಿದ್ದರೂ ಶಕ್ತಿ ಮಾತ್ರ ಕಡೆಮೆ ಆಗಿಲ್ಲ. ಬಾಬಿ ಡಿಯೋಲ್ ಅವರು ‘ದಿ ಗ್ರೇಟ್ ಇಂಡಿಯನ್ ಕಪಿಲ್ ಶೋ’ನಲ್ಲಿ ಈ ವಿಚಾರ ರಿವೀಲ್ ಮಾಡಿದ್ದಾರೆ. ಡಿಯೋಲ್ ಬ್ರದರ್ ಅವರು ಕಳೆದ ವರ್ಷ ‘ಗದರ್ 2’ ಹಾಗೂ ‘ಅನಿಮಲ್’ ಮೂಲಕ ತಲಾ ಒಂದೊಂದು ಗೆಲುವು ಕಂಡಿದ್ದಾರೆ. ಬಾಬಿ ಅವರು ಸನ್ನಿಯ ಶಕ್ತಿ ಬಗ್ಗೆ ರಿಯಾಲಿಟಿ ಶೋನಲ್ಲಿ ವಿವರಿಸಿದ್ದಾರೆ.

ಸನ್ನಿ ಡಿಯೋಲ್​ನ ಅತ್ಯಂತ ಶಕ್ತಿಶಾಲಿ ವ್ಯಕ್ತಿಗೆ ಹೋಲಿಕೆ ಮಾಡಿದ್ದಾರೆ ಬಾಬಿ ಡಿಯೋಲ್. ಅವರನ್ನು ಸೂಪರ್​ಮ್ಯಾನ್ ಎಂದು ಕೂಡ ಕರೆದಿದ್ದಾರೆ. ‘ಸೂಪರ್​ಮ್ಯಾನ್ ರೀತಿ ಯಾರಾದರೂ ಸ್ಟ್ರಾಂಗ್​ ವ್ಯಕ್ತಿಯನ್ನು ನಾನು ನನ್ನ ಜೀವನದಲ್ಲಿ ನೋಡಿದ್ದೇನೆ ಎಂದರೆ ಅದು ಸನ್ನಿ ಅಣ್ಣ. ಅವರಷ್ಟು ಶಕ್ತಿಶಾಲಿ ವ್ಯಕ್ತಿಯನ್ನು ನೋಡಿಯೇ ಇಲ್ಲ. ಅವರ ಬೆನ್ನಿಗೆ ಅನೇಕ ಸರ್ಜರಿಗಳು ಆಗಿವೆ. ಆದಾಗ್ಯೂ ಯಾರನ್ನಾದರೂ ಎತ್ತಬೇಕು ಎಂದರೆ ಸುಲಭದಲ್ಲಿ ಎತ್ತುತ್ತಾರೆ. ಅವರು ಭಾರವೇ ಇಲ್ಲವೇನೋ ಅನಿಸುತ್ತದೆ’ ಎಂದಿದ್ದಾರೆ ಬಾಬಿ ಡಿಯೋಲ್.

‘ಕೆಲವು ದಿನಗಳ ಹಿಂದೆ ನಾನು ಮನೆಯ ಹೊರಗೆ ವಾಕ್ ಮಾಡಲು ಹೋದೆ. ಸನ್ನಿ ಅಣ್ಣನ ಕಾರಿನ ಕಿಟಕಿ ಗಾಜು ಒಡೆದಿತ್ತು. ತೆಂಗಿನ ಕಾಯಿ ಬಿದ್ದು ಒಡೆಯಿತಾ ಎಂದು ಡ್ರೈವರ್​ನ ಕೇಳಿದೆ. ಸನ್ನಿ ಅವರು ಸಿಟ್ಟಿನಿಂದ ಗಾಜಿನ ಮೇಲೆ ಕೈ ಇಟ್ಟರು, ಹೀಗಾಗಿ ಒಡೆಯಿತು ಎಂದು ಚಾಲಕ ಹೇಳಿದ್ದ. ಇದು ಸನ್ನಿ ಭಾಯ್​ ಶಕ್ತಿ’ ಎಂದು ವಿವರಿಸಿದ್ದಾರೆ ಬಾಬಿ ಡಿಯೋಲ್.

ಬಾಬಿ ಡಿಯೋಲ್ ಹೊಗಳಿಕೆ ಕೇಳಿ ಸನ್ನಿ ಡಿಯೋಲ್ ಅವರು ನಾಚಿಕೆ ಮಾಡಿಕೊಂಡರು. ಅರ್ಚಾನಾ ಪುರಾನಾ ಸಿಂಗ್ ಅವರು ಶಾಕ್​ ಆದರು. ಧರ್ಮೇಂದ್ರ ಅವರು ಎಂದಾದರೂ ಮಕ್ಕಳಿಗೆ ಹೊಡೆದಿದ್ದಾರಾ ಎಂದು ಬಾಬಿನ ಕೇಳಲಾಯಿತು. ‘ಅವರು ಎಂದಿಗೂ ನಮ್ಮ ಮೇಲೆ ಕೈ ಮಾಡಿಲ್ಲ. ಅವರ ಕಣ್ಣುಗಳೇ ನಮ್ಮನ್ನು ಹೆದರಿಸುತ್ತವೆ’ ಎಂದಿದ್ದಾರೆ ಬಾಬಿ.  ಸನ್ನಿ ಡಿಯೋಲ್ ಹಾಗೂ ಬಾಬಿ ಧರ್ಮೇಂದ್ರ ಅವರ ಮಕ್ಕಳು.

ಇದನ್ನೂ ಓದಿ: ‘ಅನಿಮಲ್ ಸಿನಿಮಾದ ಕೆಲ ದೃಶ್ಯಗಳು ನನಗೆ ಇಷ್ಟ ಆಗಿಲ್ಲ’; ನೇರವಾಗಿ ಹೇಳಿದ ಸನ್ನಿ ಡಿಯೋಲ್

ಸನ್ನಿ ಡಿಯೋಲ್ ಅವರು ‘ಗದರ್ 2’ ಚಿತ್ರದ ಮೂಲಕ ದೊಡ್ಡ ಗೆಲುವು ಕಂಡರು. ಈ ಸಿನಿಮಾ ಬಾಕ್ಸ್ ಆಫೀಸ್​ನಲ್ಲಿ 500 ಕೋಟಿ ರೂಪಾಯಿ ಗಳಿಕೆ ಮಾಡಿದೆ. ಬಾಬಿ ಡಿಯೋಲ್ ಅವರು ‘ಅನಿಮಲ್’ ಸಿನಿಮಾ ಮೂಲಕ ಗೆದ್ದು ಬೀಗಿದರು. ಸನ್ನಿ ಡಿಯೋಲ್ ಅವರು ‘ಲಾಹೋರ್ 1947 ಚಿತ್ರದಲ್ಲಿ ನಟಿಸುತ್ತಿದ್ದಾರೆ. ಇದನ್ನು ಆಮಿರ್ ಖಾನ್ ನಿರ್ಮಾಣ ಮಾಡುತ್ತಿದ್ದಾರೆ. ಬಾಬಿ ಡಿಯೋಲ್ ಅವರು ‘ಕಂಗುವ’ ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.