‘ಇಂಡಸ್ಟ್ರಿಯಲ್ಲಿ ಅಮಿತಾಭ್ ಬಳಿಕ ಅತಿ ಹೆಚ್ಚು ಗೌರವಿಸಲ್ಪಟ್ಟ ನಟಿ ನಾನು’; ಕಂಗನಾ ರಣಾವತ್
‘ಕಂಗನಾ ಅವರ ಸೂಪರ್ ಹಿಟ್ ಸಿನಿಮಾ ಬಂದಿದ್ದು 2015ರಲ್ಲಿ. 9 ವರ್ಷಗಳಲ್ಲಿ 15 ಫ್ಲಾಪ್ ಸಿನಿಮಾ ನೀಡಿದ್ದಾರೆ. ಅವರು ಅಮಿತಾಭ್ ಬಚ್ಚನ್ ಜೊತೆ ಹೋಲಿಕೆ ಮಾಡಿಕೊಳ್ಳುತ್ತಿದ್ದಾರೆ. ಇದೆಂಥ ವಿಚಿತ್ರ ಎಂದು ಕೆಲವರು ಕಮೆಂಟ್ ಮಾಡುತ್ತಿದ್ದಾರೆ. ‘ಕಂಗನಾಗೆ ತಮ್ಮ ಬಗ್ಗೆ ಸಾಕಷ್ಟು ತಪ್ಪು ಕಲ್ಪನೆ ಇದೆ. ಇದು ಬೆಸ್ಟ್ ಜೋಕ್’ ಎಂದು ಕೆಲವರು ಬರೆದುಕೊಂಡಿದ್ದಾರೆ.
ನಟಿ ಕಂಗನಾ ರಣಾವತ್ (Kangana Ranaut) ಅವರು ಸದ್ಯ ಸುದ್ದಿಯಲ್ಲಿದ್ದಾರೆ. ಅವರು ಹಿಮಾಚಲ ಪ್ರದೇಶದ ಮಂಡಿ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದಾರೆ. ಸಿನಿಮಾರಂಗ ತೊರೆದು ಅವರು ರಾಜಕೀಯದತ್ತ ಮುಖ ಮಾಡಿದ್ದಾರೆ. ಅವರು ಇತ್ತೀಚೆಗೆ ತೇಜಸ್ವಿ ಯಾದವ್ ಅವರನ್ನು ರೌಡಿ ಎನ್ನುವ ಬದಲು ತೇಜಸ್ವಿ ಸೂರ್ಯ ಹೆಸರನ್ನು ತೆಗೆದುಕೊಂಡಿದ್ದರು. ಬಾಯ್ತಪ್ಪಿನಿಂದ ಆದ ಈ ಪ್ರಮಾದ ಸಾಕಷ್ಟು ಚರ್ಚೆ ಆಗಿತ್ತು. ಈಗ ಅವರು ತಮ್ಮನ್ನು ತಾವು ಅಮಿತಾಭ್ ಬಚ್ಚನ್ಗೆ ಹೋಲಿಕೆ ಮಾಡಿಕೊಂಡಿದ್ದಾರೆ.
‘ರಾಜಸ್ಥಾನ, ಪಶ್ಚಿಮ ಬಂಗಾಳ, ದೆಹಲಿ ಅಥವಾ ಮಣಿಪುರಕ್ಕೆ ಹೋದಾಗ ಇಡೀ ದೇಶವೇ ಅಚ್ಚರಿ ವ್ಯಕ್ತಪಡಿಸುತ್ತದೆ. ನನಗೆ ಸಾಕಷ್ಟು ಪ್ರೀತಿ ಹಾಗೂ ಗೌರವ ಇದೆ ಎಂದು ಖುಷಿ ಆಗುತ್ತದೆ. ಅಮಿತಾಭ್ ಬಚ್ಚನ್ ಬಳಿಕ ಇಂಡಸ್ಟ್ರಿಯಲ್ಲಿ ಯಾರಿಗಾದರೂ ಸಾಕಷ್ಟು ಪ್ರೀತಿ, ಗೌರವ ಸಿಕ್ಕಿದೆ ಎಂದರೆ ಅದು ನನಗೆ ಮಾತ್ರ’ ಎಂದು ಕಂಗನಾ ಹೇಳಿಕೊಂಡಿದ್ದಾರೆ.
ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಇದಾದ ಬಳಿಕ ಕಂಗನಾ ಅವರನ್ನು ಟ್ರೋಲ್ ಮಾಡುವ ಕೆಲಸ ಆಗುತ್ತಿದೆ. ‘ಕಂಗನಾ ಅವರ ಸೂಪರ್ ಹಿಟ್ ಸಿನಿಮಾ ಬಂದಿದ್ದು 2015ರಲ್ಲಿ. 9 ವರ್ಷಗಳಲ್ಲಿ 15 ಫ್ಲಾಪ್ ಸಿನಿಮಾ ನೀಡಿದ್ದಾರೆ. ಅವರು ಅಮಿತಾಭ್ ಬಚ್ಚನ್ ಜೊತೆ ಹೋಲಿಕೆ ಮಾಡಿಕೊಳ್ಳುತ್ತಿದ್ದಾರೆ. ಇದೆಂಥ ವಿಚಿತ್ರ ಎಂದು ಕೆಲವರು ಕಮೆಂಟ್ ಮಾಡುತ್ತಿದ್ದಾರೆ. ‘ಕಂಗನಾಗೆ ತಮ್ಮ ಬಗ್ಗೆ ಸಾಕಷ್ಟು ತಪ್ಪು ಕಲ್ಪನೆ ಇದೆ. ಇದು ಬೆಸ್ಟ್ ಜೋಕ್’ ಎಂದು ಕೆಲವರು ಬರೆದುಕೊಂಡಿದ್ದಾರೆ.
ಇದನ್ನೂ ಓದಿ: ‘ತೇಜಸ್ವಿ ಸೂರ್ಯ ಗೂಂಡಾಗಿರಿ ಮಾಡ್ತಾರೆ’; ಬಾಯಿ ತಪ್ಪಿ ತಮ್ಮದೇ ಪಕ್ಷದ ಸಂಸದನ ವಿರುದ್ಧ ಹರಿಹಾಯ್ದರೇ ಕಂಗನಾ?
ಕಂಗನಾ ರಣಾವತ್ ನಟನೆಯ ‘ತೇಜಸ್’, ‘ಮಣಿಕರ್ಣಿಕಾ’, ‘ಧಾಕಡ್’ ಸೇರಿ ಅನೇಕ ಸಿನಿಮಾಗಳು ಫ್ಲಾಪ್ ಎನಿಸಿಕೊಂಡಿದೆ. ‘ಧಾಕಡ್’ ಚಿತ್ರವಂತೂ ಹೇಳ ಹೆಸರಿಲ್ಲದೆ ಕಳೆದು ಹೋಗಿದೆ. ಅವರು ನಟಿಸಿ ನಿರ್ದೇಶಿಸಿರೋ ‘ಎಮರ್ಜೆನ್ಸಿ’ ಸಿನಿಮಾ ಯಾವ ರೀತಿಯಲ್ಲಿ ಮೂಡಿಬರಲಿದೆ ಎನ್ನುವ ಕುತೂಹಲ ಮೂಡಿದೆ. ಈಗ ಅವರು ರಾಜಕೀಯದತ್ತ ಹೊರಳಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.