300 ಕೋಟಿ ರೂಪಾಯಿ ಕ್ಲಬ್ ಸೇರಿದ ‘ಗದರ್ 2’ ಸಿನಿಮಾ; ‘ಕೆಜಿಎಫ್ 2’, ‘ಪಠಾಣ್’ ದಾಖಲೆ ಉಡೀಸ್

ಮೊದಲ ಶುಕ್ರವಾರ ಸಿನಿಮಾ ಭರ್ಜರಿ ಕಲೆಕ್ಷನ್ ಮಾಡುತ್ತದೆ. ಎರಡನೇ ಶುಕ್ರವಾರ ಎನ್ನುವಾಗ ಸಿನಿಮಾದ ಅಬ್ಬರ ಕೊಂಚ ಕಡಿಮೆ ಆಗಿರುತ್ತದೆ. ಆದರೆ, ‘ಗದರ್ 2’ ಚಿತ್ರಕ್ಕೆ ಇದು ಅನ್ವಯ ಆಗುವುದಿಲ್ಲ. ಆಗಸ್ಟ್ 11ರಿಂದ ಇಲ್ಲಿಯವರೆಗೆ ಸಿನಿಮಾ ಭರ್ಜರಿ ಗಳಿಕೆ ಮಾಡುತ್ತಿದೆ. ಈ ಮೂಲಕ ಸಿನಿಮಾ ಸಖತ್ ಕಮಾಯಿ ಮಾಡುತ್ತಿದೆ.

300 ಕೋಟಿ ರೂಪಾಯಿ ಕ್ಲಬ್ ಸೇರಿದ ‘ಗದರ್ 2’ ಸಿನಿಮಾ; ‘ಕೆಜಿಎಫ್ 2’, ‘ಪಠಾಣ್’ ದಾಖಲೆ ಉಡೀಸ್
ಯಶ್-ಸನ್ನಿ ಡಿಯೋಲ್-ಶಾರುಖ್ ಖಾನ್

Updated on: Aug 19, 2023 | 10:39 AM

ಸನ್ನಿ ಡಿಯೋಲ್ ನಟನೆಯ ‘ಗದರ್ 2’ ಸಿನಿಮಾ (Gadar 2 Movie) ಬಾಕ್ಸ್ ಆಫೀಸ್​ನಲ್ಲಿ ಸದ್ದು ಮಾಡುತ್ತಿದೆ. ಈ ಚಿತ್ರದ ಅಬ್ಬರ ಕಡಿಮೆ ಆಗುತ್ತಿಲ್ಲ. ಭಾರತದ ಬಾಕ್ಸ್ ಆಫೀಸ್​ನಲ್ಲಿ ಕೇವಲ ಎಂಟು ದಿನಕ್ಕೆ ಈ ಚಿತ್ರ 300 ಕೋಟಿ ರೂಪಾಯಿ ಗಳಿಕೆ ಮಾಡಿದೆ. ಈ ಮೂಲಕ ‘ಗದರ್ 2’ ಯಶ್ ನಟನೆಯ ‘ಕೆಜಿಎಫ್ 2’ ಹಾಗೂ ಶಾರುಖ್ ಖಾನ್ ನಟನೆಯ ‘ಪಠಾಣ್’ ಚಿತ್ರ (Pathaan Movie) ಮಾಡಿದ್ದ ದಾಖಲೆಯನ್ನು ಉಡೀಸ್ ಮಾಡಿದೆ. ಶನಿವಾರ (ಆಗಸ್ಟ್ 19) ಹಾಗೂ ನಾಳೆ (ಆಗಸ್ಟ್ 20) ಚಿತ್ರಕ್ಕೆ ಮತ್ತಷ್ಟು ಕಲೆಕ್ಷನ್ ಆಗಲಿದೆ.

ಮೊದಲ ಶುಕ್ರವಾರ ಸಿನಿಮಾ ಭರ್ಜರಿ ಕಲೆಕ್ಷನ್ ಮಾಡುತ್ತದೆ. ಎರಡನೇ ಶುಕ್ರವಾರ ಎನ್ನುವಾಗ ಸಿನಿಮಾದ ಅಬ್ಬರ ಕೊಂಚ ಕಡಿಮೆ ಆಗಿರುತ್ತದೆ. ಆದರೆ, ‘ಗದರ್ 2’ ಚಿತ್ರಕ್ಕೆ ಇದು ಅನ್ವಯ ಆಗುವುದಿಲ್ಲ. ಆಗಸ್ಟ್ 11ರಿಂದ ಇಲ್ಲಿಯವರೆಗೆ ಸಿನಿಮಾ ಭರ್ಜರಿ ಗಳಿಕೆ ಮಾಡುತ್ತಿದೆ. ಈ ಮೂಲಕ ಸಿನಿಮಾ ಸಖತ್ ಕಮಾಯಿ ಮಾಡುತ್ತಿದೆ.

ಶುಕ್ರವಾರ ಈ ಸಿನಿಮಾ 20 ಕೋಟಿ ರೂಪಾಯಿ ಬಾಚಿಕೊಂಡಿದೆ. ಸಿನಿಮಾ ರಿಲೀಸ್ ಆದ ಎರಡನೇ ಶುಕ್ರವಾರ   ಇಷ್ಟು ದೊಡ್ಡ ಮಟ್ಟದಲ್ಲಿ ಗಳಿಕೆ ಮಾಡಿರೋದು ‘ಗದರ್ 2’ ಚಿತ್ರದ ಹೆಚ್ಚುಗಾರಿಕೆ. ಈ ಮೊದಲು ರಿಲೀಸ್ ಆದ ‘ದಿ ಕಾಶ್ಮೀರ್ ಫೈಲ್ಸ್’(19 ಕೋಟಿ ರೂಪಾಯಿ), ‘ದಂಗಲ್’ (18 ಕೋಟಿ ರೂಪಾಯಿ), ‘ಪಿಕೆ’ (15 ಕೋಟಿ ರೂಪಾಯಿ), ‘ಕೆಜಿಎಫ್ 2’ (11.25) ಕೋಟಿ ರೂಪಾಯಿ ಗಳಿಕೆ ಮಾಡಿತ್ತು. ಇದನ್ನು ‘ಗದರ್ 2’ ಹಿಂದಿಕ್ಕಿದೆ.

ಇದನ್ನೂ ಓದಿ: ಗಲ್ಲಾಪೆಟ್ಟಿಗೆಯಲ್ಲಿ ಹೊಸ ಇತಿಹಾಸ ಬರೆಯುತ್ತಿರುವ ‘ಗದರ್​ 2’; ನಿಲ್ಲುತ್ತಲೇ ಇಲ್ಲ ಸನ್ನಿ ಡಿಯೋಲ್​ ಅಬ್ಬರ

ಸನ್ನಿ ಡಿಯೋಲ್ ಅವರು ಹಲವು ವರ್ಷಗಳಿಂದ ಚಿತ್ರರಂಗದಲ್ಲಿ ಆ್ಯಕ್ಟೀವ್ ಆಗಿದ್ದಾರೆ. ಆದರೆ, ಅವರಿಗೆ ಇಷ್ಟು ದೊಡ್ಡ ಮಟ್ಟದ ಯಶಸ್ಸು ಸಿಕ್ಕಿರಲಿಲ್ಲ. ‘ಗದರ್ 2’ ಚಿತ್ರದ ಮೂಲಕ ಅವರು ಅತಿ ದೊಡ್ಡ ಗೆಲುವು ಕಂಡಿದ್ದಾರೆ. ಈ ಗೆಲುವಿನಿಂದ ಅವರಿಗೆ ಬರೋ ಆಫರ್​ಗಳ ಸಂಖ್ಯೆ ಹೆಚ್ಚಿದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 10:36 am, Sat, 19 August 23

ರಾಜೇಶ್ ದುಗ್ಗುಮನೆ

ರಾಜೇಶ್​ ಹೆಗಡೆಯವರು ಪತ್ರಿಕೋದ್ಯಮಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
Loading...
Unable to load recommendations.
Follow Us