ಪ್ರಭಾವಿ ರಾಜಕಾರಣಿಯಿಂದ ರಿಯಾಗೆ 44 ಬಾರಿ ಕರೆ? ಸುಶಾಂತ್ ಸಿಂಗ್ ಸಾವಿಗೆ ರಾಜಕೀಯದ ಲಿಂಕ್
ತನಿಖೆ ನಡೆಯುವ ಸಂದರ್ಭದಲ್ಲಿ ರಿಯಾಗೆ ‘ಎಯು’ ಹೆಸರಿನ ವ್ಯಕ್ತಿಯಿಂದ 44 ಬಾರಿ ಕರೆ ಬಂದಿದೆ. ಎಯು ಎಂದರೆ ಆದಿತ್ಯ ಉದ್ಧವ್ ಠಾಕ್ರೆ ಎಂದು ಬಿಹಾರ್ ಪೊಲೀಸರು ಹೇಳಿದ್ದಾರೆ. ಇದರಿಂದಾಗಿ ಈ ಪ್ರಕರಣಕ್ಕೆ ಹಾಗೂ ಆದಿತ್ಯ ಠಾಕ್ರೆಗೆ ಲಿಂಕ್ ಆಗಿದೆ.
ಸುಶಾಂತ್ ಸಿಂಗ್ ರಜಪೂತ್ (Sushant Singh Rajput) ನಿಧನ ಹೊಂದಿ ಬಹಳ ಸಮಯ ಕಳೆದಿದೆ. ಇದು ಆತ್ಮಹತ್ಯೆ ಎಂದು ಕೆಲವರು ಹೇಳಿದರೆ ಇನ್ನೂ ಕೆಲವರು ಕೊಲೆ ಎನ್ನುತ್ತಿದ್ದಾರೆ. ಆರಂಭದಲ್ಲಿ ಮುಂಬೈ ಪೊಲೀಸರು ಈ ಪ್ರಕರಣದ ತನಿಖೆ ನಡೆಸಿದರು. ನಂತರ ಪ್ರಕರಣ ಸಿಬಿಐಗೆ (CBI) ಹಸ್ತಾಂತರ ಆಯಿತು. ಸಿಬಿಐ ಈ ಪ್ರಕರಣದಲ್ಲಿ ತನಿಖೆ ನಡೆಸುತ್ತಿದೆ. ಆದಷ್ಟು ಬೇಗ ತನಿಖೆ ಮುಗಿದು ಸುಶಾಂತ್ ಸಿಂಗ್ ಸಾವಿಗೆ ನ್ಯಾಯ ಸಿಗಲಿ ಅನ್ನೋದು ಫ್ಯಾನ್ಸ್ ಬಯಕೆ. ಹೀಗಿರುವಾಗಲೇ ಈ ಪ್ರಕರಣಕ್ಕೆ ರಾಜಕೀಯದ ಜತೆ ನಂಟಿರುವ ವಿಚಾರ ಬೆಳಕಿಗೆ ಬಂದಿದೆ. ಮಹಾರಾಷ್ಟ್ರದ ಮಾಜಿ ಸಿಎಂ ಉದ್ಧವ್ ಠಾಕ್ರೆ ಮಗ ಆದಿತ್ಯ ಠಾಕ್ರೆಗೂ ಈ ಪ್ರಕರಣಕ್ಕೂ ಲಿಂಕ್ ಮಾಡಲಾಗಿದೆ.
ಸುಶಾಂತ್ ಸಿಂಗ್ ರಜಪೂತ್ ಅವರ ಗರ್ಲ್ಫ್ರೆಂಡ್ ಆಗಿದ್ದ ರಿಯಾ ಚಕ್ರವರ್ತಿ ಈ ಪ್ರಕರಣದ ಪ್ರಮುಖ ಆರೋಪಿ. ಅವರು ಈ ಪ್ರಕರಣದಲ್ಲಿ ಅರೆಸ್ಟ್ ಆಗಿದ್ದರು. ಸದ್ಯ ಜಾಮೀನು ಪಡೆದು ಅವರು ಹೊರಗಿದ್ದಾರೆ. ತನಿಖೆ ನಡೆಯುವ ಸಂದರ್ಭದಲ್ಲಿ ರಿಯಾಗೆ ‘ಎಯು’ ಹೆಸರಿನ ವ್ಯಕ್ತಿಯಿಂದ 44 ಬಾರಿ ಕರೆ ಬಂದಿದೆ. ಎಯು ಎಂದರೆ ಆದಿತ್ಯ ಉದ್ಧವ್ ಠಾಕ್ರೆ ಎಂದು ಬಿಹಾರ್ ಪೊಲೀಸರು ಹೇಳಿದ್ದಾರೆ. ಇದರಿಂದಾಗಿ ಈ ಪ್ರಕರಣಕ್ಕೆ ಹಾಗೂ ಆದಿತ್ಯ ಠಾಕ್ರೆಗೆ ಲಿಂಕ್ ಆಗಿದೆ.
ಶಿವ ಸೇನೆಯ ಏಕನಾಥ್ ಶಿಂಧೆ ಬಣದ ಎಂಪಿ ರಾಹುಲ್ ಶೆವಾಲೆ ಅವರು ಲೋಕಸಭೆಯಲ್ಲಿ ಈ ಬಗ್ಗೆ ಮಾತನಾಡಿದ್ದಾರೆ. ‘ರಿಯಾ ಚಕ್ರವರ್ತಿ ಅವರು ಎಯು ನಿಂದ 44 ಬಾರಿ ಕರೆ ಸ್ವೀಕರಿಸಿದ್ದಾರೆ. ಎಯು ಎಂದರೆ ಆದಿತ್ಯ ಉದ್ಧವ್ ಠಾಕ್ರೆ ಎಂದು ಬಿಹಾರ ಪೊಲೀಸರು ಹೇಳಿದ್ದಾರೆ. ಸಿಬಿಐ ತನಿಖೆ ಯಾವ ಹಂತದಲ್ಲಿದೆ?’ ಎಂದು ಅವರು ಪ್ರಶ್ನೆ ಮಾಡಿದ್ದಾರೆ.
ಇದನ್ನೂ ಓದಿ: ಸುಶಾಂತ್ ಸಿಂಗ್ ಪುಣ್ಯತಿಥಿ: ಮೃತಪಟ್ಟು ಎರಡು ವರ್ಷ ಕಳೆದರೂ ಹೊರಬೀಳಲೇ ಇಲ್ಲ ನಟನ ಸಾವಿನ ರಹಸ್ಯ
ಈ ಹೇಳಿಕೆಯನ್ನು ಆದಿತ್ಯ ತಳ್ಳಿ ಹಾಕಿದ್ದಾರೆ. ‘ಲವ್ ಯೂ ಮೋರ್ ಎಂದಷ್ಟೇ ನಾನು ಹೇಳಲು ಸಾಧ್ಯ. ತಮ್ಮ ಪಕ್ಷಕ್ಕೆ ಅವರು ನಿಷ್ಠಾಂವತರಾಗಿಲ್ಲ. ಅಂಥವರಿಂದ ಇನ್ನು ಏನನ್ನು ನಿರೀಕ್ಷಿಸಲು ಸಾಧ್ಯ? ಸಿಎಂ ಏಕನಾಥ್ ಶಿಂಧೆ ವಿರುದ್ಧ ಮಾಡಲಾಗುತ್ತಿರುವ ಆರೋಪವನ್ನು ಮುಚ್ಚಿ ಹಾಕಲು ಈ ರೀತಿಯ ಆರೋಪಗಳನ್ನು ಮಾಡಲಾಗುತ್ತಿದೆ’ ಎಂದಿದ್ದಾರೆ ಅವರು.
2020ರ ಜೂನ್ 14ರಂದು ಸುಶಾಂತ್ ಸಿಂಗ್ ರಜಪೂತ್ ನಿಧನ ಹೊಂದಿದರು. ಮುಂಬೈನ ಫ್ಲಾಟ್ನಲ್ಲಿ ಅವರ ಶವ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ ಆಗಿದೆ. ಈ ಫ್ಲಾಟ್ಗೆ ಬಾಡಿಗೆ ಬರಲು ಎಲ್ಲರೂ ಹೆದರುತ್ತಿದ್ದಾರೆ ಎಂದು ಇತ್ತೀಚೆಗೆ ವರದಿ ಆಗಿತ್ತು.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 7:08 am, Fri, 23 December 22