
ಇಂಡಿಯನ್ ಪ್ರೀಮಿಯರ್ ಲೀಗ್ (IPL) ಸ್ಥಾಪಕ ಲಲಿತ್ ಮೋದಿ ಅವರು ಬಾಲಿವುಡ್ ನಟಿ, ಮಾಜಿ ವಿಶ್ವ ಸುಂದರಿ ಸುಶ್ಮಿತಾ ಸೇನ್ (Sushmita Sen) ಜತೆ ಡೇಟಿಂಗ್ ಆರಂಭಿಸಿದ್ದಾರೆ. ಈ ವಿಚಾರವನ್ನು ಲಲಿತ್ ಮೋದಿ ಅವರು ಸೋಶಿಯಲ್ ಮೀಡಿಯಾದಲ್ಲಿ ಅಧಿಕೃತ ಮಾಡಿದ್ದಾರೆ. ಸುಶ್ಮಿತಾ ಅವರನ್ನು ಲಲಿತ್ ಮೋದಿ ಅರ್ಧಾಂಗಿ ಎಂದು ಕರೆದಿದ್ದರು. ಈ ಕಾರಣಕ್ಕೆ ಇಬ್ಬರ ನಡುವೆ ಮದುವೆ ಆಗಿದೆ ಎಂದೇ ಫ್ಯಾನ್ಸ್ ಭಾವಿಸಿದ್ದರು. ಆ ಬಳಿಕ ತಾವಿಬ್ಬರೂ ಡೇಟಿಂಗ್ ಮಾಡುತ್ತಿದ್ದೇವೆ ಅಷ್ಟೇ ಎನ್ನುವ ಸ್ಪಷ್ಟನೆ ಲಲಿತ್ ಮೋದಿ (Lalit Modi) ಕಡೆಯಿಂದ ಬಂತು. ಈ ಮಧ್ಯೆ ಸುಶ್ಮಿತಾ ಸೇನ್ ಅವರ ಆಸ್ತಿ ಎಷ್ಟು ಎಂಬ ಬಗ್ಗೆ ಫ್ಯಾನ್ಸ್ ಹುಡುಕಾಟ ನಡೆಸುತ್ತಿದ್ದಾರೆ.
ಲಲಿತ್ ಮೋದಿ ಅವರು ಸಾವಿರಾರು ಕೋಟಿ ಒಡೆಯ. ಅವರು ಸಾಕಷ್ಟು ಉದ್ಯಮ ಹೊಂದಿದ್ದಾರೆ. ಅವರ ಒಟ್ಟೂ ಆಸ್ತಿ 4000 ಕೋಟಿ ರೂಪಾಯಿಗೂ ಹೆಚ್ಚಿದೆ. ಅನೇಕ ಕಡೆಗಳಲ್ಲಿ ಅವರು ಐಷಾರಾಮಿ ಬಂಗಲೆ ಹೊಂದಿದ್ದಾರೆ. ವಿದೇಶದಲ್ಲೂ ಆಸ್ತಿ ಹೊಂದಿದ್ದಾರೆ. ಸುಶ್ಮಿತಾ ಆಸ್ತಿ ಕೂಡ ಕಡಿಮೆ ಏನಿಲ್ಲ. ಇವರು ನಟಿಯಾಗಿ, ಅನೇಕ ಬ್ರ್ಯಾಂಡ್ಗಳಿ ರಾಯಭಾರಿ ಆಗಿ ಸಾಕಷ್ಟು ದುಡ್ಡು ಮಾಡಿದ್ದಾರೆ.
ಸುಶ್ಮಿತಾ ಸೇನ್ ಅವರು ನಟನೆಯಿಂದ ದೂರ ಉಳಿದಿದ್ದಾರೆ. ಆದರೆ, ಅವರು ಸಾಕಷ್ಟು ಉದ್ಯಮಗಳಲ್ಲಿ ಹೂಡಿಕೆ ಮಾಡಿದ್ದಾರೆ. ಪ್ರತಿ ತಿಂಗಳು ಅವರು 60 ಲಕ್ಷ ರೂಪಾಯಿಗೂ ಅಧಿಕ ಗಳಿಕೆ ಮಾಡುತ್ತಾರೆ. ವರ್ಷಕ್ಕೆ ಅವರು 9 ಕೋಟಿ ರೂಪಾಯಿಗೂ ಅಧಿಕ ಗಳಿಕೆ ಮಾಡುತ್ತಾರೆ.
ಇದನ್ನೂ ಓದಿ: ನಟಿ ಸುಶ್ಮಿತಾ ಸೇನ್ ಜೊತೆ ಡೇಟಿಂಗ್ನಲ್ಲಿರುವ ಲಲಿತ್ ಮೋದಿ ಯಾರು? ಎಷ್ಟು ಸಾವಿರ ಕೋಟಿ ಒಡೆಯ ಗೊತ್ತಾ?
ಸುಶ್ಮಿತಾ ಅವರ ನೆಟ್ವರ್ತ್ 74 ಕೋಟಿ ರೂಪಾಯಿ ಎಂದು ಕೆಲ ಮಾಧ್ಯಮಗಳು ವರದಿ ಮಾಡಿವೆ. ಲಲಿತ್ ಮೋದಿ ಅವರ ಆಸ್ತಿಗೆ ಹೋಲಿಕೆ ಮಾಡಿದರೆ ಸುಶ್ಮಿತಾ ಆಸ್ತಿ ತುಂಬಾನೇ ಕಡಿಮೆ. ಆದರೆ, ಅವರು ಯಾವ ನಟಿಗೂ ಕಡಿಮೆ ಏನಿಲ್ಲ. ಮುಂಬೈನಲ್ಲಿ ಐಷಾರಾಮಿ ಫ್ಲಾಟ್ ಹೊಂದಿದ್ದಾರೆ. ದೇಶದ ಅನೇಕ ಕಡೆಗಳಲ್ಲಿ ಅವರು ಮನೆ ಹೊಂದಿದ್ದಾರೆ.
ಸುಶ್ಮಿತಾ ಅವರಿಗೆ ಕಾರ್ ಕ್ರೇಜ್ ಇದೆ. ಅವರ ಬಳಿ ದುಬಾರಿ ಕಾರುಗಳಿವೆ. ಬಿಎಂಡಬ್ಲ್ಯೂ X7 ಕಾರು ಇದೆ. ಇದರ ಬೆಲೆ 1.42 ಕೋಟಿ ರೂಪಾಯಿ. ಇದಲ್ಲದೆ, ಬಿಎಂಡಬ್ಲ್ಯೂ X6, ಆಡಿ ಕ್ಯೂ 7, ಲೆಕ್ಸಸ್ ಎಲ್ಎಕ್ಸ್ 470 ಮೊದಲಾದ ಕಾರುಗಳೂ ಇವೆ.