ರಾಜ್ ಕುಂದ್ರಾ ನಡೆಸುತ್ತಿದ್ದ ಅಶ್ಲೀಲ ಸಿನಿಮಾ ದಂಧೆ ಬಯಲಿಗೆ ಬಂದ ನಂತರದಲ್ಲಿ ಸಾಕಷ್ಟು ಹೀರೋಯಿನ್ಗಳ ಹೆಸರು ಬೆಳಕಿಗೆ ಬರುತ್ತಿದೆ. ಬಾಲಿವುಡ್ನ ಸಾಕಷ್ಟು ನಟಿಯರು ಹಾಗೂ ಮಾಡೆಲ್ಗಳ ಹೆಸರು ಈ ಪ್ರಕರಣದಲ್ಲಿ ಸಿಲುಕಿದೆ ಎನ್ನಲಾಗುತ್ತಿದೆ. ಈ ಮಧ್ಯೆ ಸಲ್ಮಾನ್ ಖಾನ್ ಮಾಜಿ ಪ್ರೇಯಸಿ ಸೋಮಿ ಈ ಬಗ್ಗೆ ಮಾತನಾಡಿದ್ದು, ಮಹಿಳೆಯರು ಪಾರ್ನ್ ಕ್ಷೇತ್ರವನ್ನು ಆಯ್ಕೆ ಮಾಡಿಕೊಳ್ಳುವುದರಲ್ಲಿ ತಪ್ಪೇನು ಎಂದು ಪ್ರಶ್ನಿಸಿದ್ದಾರೆ.
‘ನೀಲಿ ಚಿತ್ರಗಳಲ್ಲಿ ನಟಿಸೋದನ್ನು ಯಾರಾದರೂ ಆಯ್ಕೆ ಮಾಡಿಕೊಳ್ಳುತ್ತಾರೆ ಎಂದರೆ ಅವರನ್ನು ನಾನು ಜಡ್ಜ್ ಮಾಡುವುದಿಲ್ಲ. ಮಹಿಳೆಯರನ್ನು ಒತ್ತಾಯಪೂರ್ವಕವಾಗಿ ಬಳಸಿಕೊಳ್ಳುತ್ತಿದ್ದಾರೆ ಎಂದರೆ ಅದು ತಪ್ಪು. ಅವರೇ ಆ ಕ್ಷೇತ್ರವನ್ನು ಆಯ್ಕೆ ಮಾಡಿಕೊಂಡರೆ ಅದರಲ್ಲಿ ತಪ್ಪೇನಿದೆ?’ ಎಂದು ಸೋಮಿ ಪ್ರಶ್ನೆ ಮಾಡಿದ್ದಾರೆ.
1992-97ರ ಅವಧಿಯಲ್ಲಿ ಸೋಮಿ ಚಿತ್ರರಂಗದಲ್ಲಿ ಆ್ಯಕ್ಟಿವ್ ಆಗಿದ್ದರು. ಈ ವೇಳೆ ಸಲ್ಮಾನ್ ಖಾನ್ ಜತೆ ಅವರು ರಿಲೇಶನ್ಶಿಪ್ನಲ್ಲಿದ್ದರು. ನಂತರ ಇಬ್ಬರ ಸಂಬಂಧ ಮುರಿದು ಬಿದ್ದಿತ್ತು.
ಚಾರ್ಜ್ ಶೀಟ್ನಲ್ಲಿದೆ ಶಾಕಿಂಗ್ ವಿಚಾರ
ಮುಂಬೈ ಪೊಲೀಸರು ರಾಜ್ ಕುಂದ್ರಾ ವಿರುದ್ಧ ದೋಷಾರೋಪಪಟ್ಟಿ ಸಲ್ಲಿಕೆ ಮಾಡಿದ್ದಾರೆ. ಈ ಚಾರ್ಜ್ಶೀಟ್ನಲ್ಲಿ ರಾಜ್ ಕುಂದ್ರಾ ಅವರ ಕರ್ಮಕಾಂಡವನ್ನು ಬಿಚ್ಚಿಡಲಾಗಿದೆ. ಮುಂದಿನ ಮೂರು ವರ್ಷಗಳಲ್ಲಿ ಎಷ್ಟು ಹಣ ಗಳಿಕೆ ಮಾಡಬೇಕು ಎನ್ನುವ ರಾಜ್ ಕುಂದ್ರಾ ಲೆಕ್ಕಾಚಾರದ ಬಗ್ಗೆ ಈ ಚಾರ್ಜ್ಶೀಟ್ನಲ್ಲಿದೆಯಂತೆ.
ಹಾಟ್ಶಾಟ್ಸ್ ಆ್ಯಪ್ನಲ್ಲಿ ಪಾರ್ನ್ ಸಿನಿಮಾಗಳ ಪ್ರಸಾರವನ್ನು ರಾಜ್ಕುಂದ್ರಾ ಮಾಡುತ್ತಿದ್ದರು. ಈ ಕಾರಣಕ್ಕೆ ಗೂಗಲ್ ಪ್ಲೇಸ್ಟೋರ್ ಈ ಆ್ಯಪ್ಅನ್ನು ತೆಗೆದು ಹಾಕಿತ್ತು. ಇದಾದ ನಂತರದಲ್ಲಿ ಬಾಲಿಫೇಮ್ ಹೆಸರಿನ ಆ್ಯಪ್ಅನ್ನು ರಾಜ್ ಕುಂದ್ರಾ ಲಾಂಚ್ ಮಾಡಿದ್ದರು. 2023-24ರ ವೇಳೆಗೆ ಈ ಉದ್ಯಮದಿಂದ 146 ಕೋಟಿ ಒಟ್ಟು ಆದಾಯ ಹಾಗೂ 34 ಕೋಟಿ ರೂಪಾಯಿ ಲಾಭಾಂಶ ಗಳಿಕೆ ಮಾಡುವ ಗುರಿ ಅವರದ್ದಾಗಿತ್ತು.
2021-22ರ ಅವಧಿಯಲ್ಲಿ 36.50 ಕೋಟಿ ಒಟ್ಟು ಆದಾಯ ಹಾಗೂ ಹಾಗೂ 4.77 ಕೋಟಿ ರೂಪಾಯಿ ಲಾಭ, 2021-22 ಅವಧಿಯಲ್ಲಿ 73 ಕೋಟಿ ಒಟ್ಟು ಆದಾಯ ಗಳಿಕೆ ಮಾಡುವ ಗುರಿಯನ್ನು ರಾಜ್ ಹೊಂದಿದ್ದರು.
ಇದನ್ನೂ ಓದಿ: ನನ್ನ ಕರೀಯರ್, ಬದುಕು ಮತ್ತು ವ್ಯವಹಾರವನ್ನು ಮಣ್ಣು ಪಾಲು ಮಾಡಿಬಿಟ್ಟೆ ಅಂತ ಕುಂದ್ರಾ ಮೇಲೆ ಕೂಗಾಡಿದರು ಶಿಲ್ಪಾ ಶೆಟ್ಟಿ
ತಿಳಿದಷ್ಟು ಚಿಕ್ಕದಿಲ್ಲ ರಾಜ್ ಕುಂದ್ರಾ ಅಶ್ಲೀಲ ಸಿನಿಮಾ ದಂಧೆ; ಚಾರ್ಜ್ಶೀಟ್ನಿಂದ ಬಯಲಾಯ್ತು ಅಚ್ಚರಿಯ ವಿಚಾರ