
ನಟಿ ರಶ್ಮಿಕಾ ಮಂದಣ್ಣ (Rashmika Mandanna) ಇದೀಗ ಬಾಲಿವುಡ್ನ ಸ್ಟಾರ್ ನಟಿಯಾಗಿ ಮಿಂಚುತ್ತಿದ್ದಾರೆ. ರಣ್ಬೀರ್ ಕಪೂರ್, ಸಲ್ಮಾನ್ ಖಾನ್, ಕಾರ್ತಿಕ್ ಆರ್ಯನ್ ಅಂಥಹಾ ಸ್ಟಾರ್ಗಳ ಜೊತೆಗೆ ನಟಿಸಿದ್ದಾರೆ. ದಕ್ಷಿಣದಲ್ಲಿ ‘ಪಕ್ಕದ ಮನೆ ಹುಡುಗಿ’ ರೀತಿಯ ಪಾತ್ರಗಳಿಂದ ಗಮನ ಸೆಳೆದಿದ್ದ ರಶ್ಮಿಕಾ ಇದೀಗ ಬಾಲಿವುಡ್ಗೆ ಹೋಗಿ ಹಾಟ್ ನಟಿಯಾಗಿ ಗುರುತಿಸಿಕೊಳ್ಳುತ್ತಿದ್ದಾರೆ. ಇಷ್ಟು ವರ್ಷ ಗ್ಲಾಮರಸ್ ಪಾತ್ರಗಳಿಂದ ದೂರವಿದ್ದ ರಶ್ಮಿಕಾ ಇದೀಗ ಬಾಲಿವುಡ್ನ ಬೇಡಿಕೆಗೆ ತಕ್ಕಂತೆ ಮೈ ಚಳಿ ಬಿಟ್ಟಿದ್ದಾರೆ. ರಶ್ಮಿಕಾ ‘ಗ್ಲಾಮರಸ್’ ಆಗಿ ಕಾಣಿಸಿಕೊಂಡಿರುವ ‘ಥಮ’ ಸಿನಿಮಾ ಬಿಡುಗಡೆಗೆ ಸಜ್ಜಾಗಿದ್ದು, ಇತ್ತೀಚೆಗೆ ಸಿಬಿಎಫ್ಸಿ ಪ್ರಮಾಣ ಪತ್ರ ಪಡೆದುಕೊಂಡಿದೆ. ಸಿಬಿಎಫ್ಸಿಯು ರಶ್ಮಿಕಾರ ಹಾಟ್ ಅವತಾರಕ್ಕೆ ಕತ್ತರಿ ಹಾಕಿದ್ದಾರೆ.
‘ಥಮ’ ಸಿನಿಮಾನಲ್ಲಿ ದೆವ್ವದ ಪಾತ್ರದಲ್ಲಿ ರಶ್ಮಿಕಾ ನಟಿಸಿದ್ದು, ಬಲು ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ. ಸಿನಿಮಾನಲ್ಲಿ ಐಟಂ ಹಾಡೊಂದಕ್ಕೆ ಬಲು ಮಾದಕವಾಗಿ ಹೆಜ್ಜೆ ಸಹ ಹಾಕಿದ್ದಾರೆ. ಅಲ್ಲದೆ ನಾಯಕ ಆಯುಷ್ಮಾನ್ ಖುರಾನಾ ಜೊತೆಗೆ ಶೃಂಗಾರ ದೃಶ್ಯಗಳಲ್ಲಿ ನಟಿಸಿದ್ದಾರೆ. ಕೆಲವು ಕಿಸ್ಸಿಂಗ್ ದೃಶ್ಯಗಳಲ್ಲಿಯೂ ಸಹ ಭಾಗಿ ಆಗಿದ್ದಾರೆ. ಆದರೆ ರಶ್ಮಿಕಾರ ಹಾಟ್ನೆಸ್ಗೆ ಸಿಬಿಎಫ್ಸಿ ಬ್ರೇಕ್ ಹಾಕಿದ್ದು, ಕಿಸ್ಸಿಂಗ್ ದೃಶ್ಯಕ್ಕೆ ಕತ್ತರಿ ಹಾಕಿದೆ.
ಸಿಬಿಎಫ್ಸಿ ಅವರು ರಶ್ಮಿಕಾ ಹಾಗೂ ಆಯುಷ್ಮಾನ್ ಅವರ ಕಿಸ್ಸಿಂಗ್ ದೃಶ್ಯದ ಅವಧಿಯನ್ನು ಕಡಿಮೆ ಮಾಡಿದ್ದಾರೆ. ಕಿಸ್ಸಿಂಗ್ ದೃಶ್ಯದ ಐದು ಸೆಕೆಂಡ್ಗೆ ಕತ್ತರಿ ಹಾಕಿದ್ದಾರೆ ಅಲ್ಲದೆ, ಕೆಲ ತೀರಾ ಗ್ಲಾಮರಸ್ ಆದ ದೃಶ್ಯಗಳಿಗೂ ಸಹ ಕತ್ತರಿ ಹಾಕುವಂತೆ ಸೂಚಿಸಿದ್ದಾರೆ.
ಇದನ್ನೂ ಓದಿ:ಸಿಹಿ ತಿನಿಸು ಕಂಡು ಮುಖ ಹಿಂಡಿದ ರಶ್ಮಿಕಾ ಮಂದಣ್ಣ
ಇವು ಮಾತ್ರವೇ ಅಲ್ಲದೆ ಸಿನಿಮಾನಲ್ಲಿ ‘ಆಜಾದಿ’ ಎಂಬ ಪದಕ್ಕೂ ಸಹ ಸಿಬಿಎಫ್ಸಿ ಕತ್ತರಿ ಹಾಕಿದೆ. ‘ಆಜಾದಿ ದೂಂಗಾ’ (ಸ್ವಾತಂತ್ರ್ಯ ಕೊಡಿಸುತ್ತೇನೆ) ಎಂಬ ಡೈಲಾಗ್ ಅನ್ನು ತೆಗೆಯುವಂತೆ ಸೂಚಿಸಿದ್ದು ಅದರ ಬದಲಿಗೆ ಚಿತ್ರತಂಡವು ‘ಅಯ್ಯಾಷಿ ಕರಾತಾ ಹೂ’ (ಮಜಾ ಮಾಡಿಸುತ್ತೇನೆ) ಎಂಬ ಸಂಭಾಷಣೆ ಸೇರಿಸಿದೆ. ಇದು ಮಾತ್ರವೇ ಅಲ್ಲದೆ ‘ಅಲೆಕ್ಸಾಂಡರ್’ ಪದವನ್ನು ತೆಗೆದು ಹಾಕಿದೆ. ಅದರ ಬದಲಿಗೆ ಚಿತ್ರತಂಡ ‘ಸಿಖಂಧರ್’ ಪದವನ್ನು ಸೇರಿಸಿದೆ. ಸಿನಿಮಾದಲ್ಲಿದ್ದ ‘ಅಶ್ವತ್ಥಾಮ’ ಸಂಭಾಷಣೆಯನ್ನು ಸಹ ಮ್ಯೂಟ್ ಮಾಡಲಾಗಿದೆ. ಇದೊಂದು ಹಾರರ್ ಸಿನಿಮಾ ಆಗಿದ್ದು ಸಿನಿಮಾನಲ್ಲಿದ್ದ ರಕ್ತ ಕುಡಿಯುವ ಶಬ್ದವನ್ನು ಸಹ ಮ್ಯೂಟ್ ಮಾಡಲಾಗಿದೆ. ಸಿನಿಮಾಕ್ಕೆ ಅಂತಿಮವಾಗಿ ಯು/ಎ ಪ್ರಮಾಣ ಪತ್ರ ನೀಡಲಾಗಿದೆ.
‘ಥಮ’ ರಶ್ಮಿಕಾರ ಮೊದಲ ಹಾರರ್ ಸಿನಿಮಾ ಆಗಿದ್ದು, ಸಿನಿಮಾನಲ್ಲಿ ಆಯುಷ್ಮಾನ್ ಖುರಾನಾ ನಾಯಕ. ನವಾಜುದ್ಧೀನ್ ಸಿದ್ಧಿಖಿ ವಿಲನ್. ಸಿನಿಮಾ ಅನ್ನು ಮ್ಯಾಡ್ಲಾಕ್ ಸ್ಟುಡಿಯೋಸ್ ನಿರ್ಮಾಣ ಮಾಡಿದೆ. ನಿರ್ದೇಶನ ಮಾಡಿರುವುದು ಆದಿತ್ಯ ಸರ್ಪೋಟ್ಧಾರ್. ಸಿನಿಮಾ ಅಕ್ಟೋಬರ್ 21 ರಂದು ಬಿಡುಗಡೆ ಆಗಲಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ