‘ದಿ ಕಾಶ್ಮೀರ್​ ಫೈಲ್ಸ್​ ಚಿತ್ರ ಆಸ್ಕರ್​ಗೆ ಹೋದ್ರೆ ಭಾರತಕ್ಕೆ ಮುಜುಗರ; ಇದು ದ್ವೇಷ ಹಬ್ಬಿಸುವ ಕಸ’: ಕೇಳಿಬಂತು ಕಟು ಟೀಕೆ

| Updated By: ಮದನ್​ ಕುಮಾರ್​

Updated on: Aug 18, 2022 | 11:40 AM

Dylan Mohan Gray | Vivek Agnihotri: ಆಸ್ಕರ್​ ಪ್ರಶಸ್ತಿ ಕಣಕ್ಕೆ ‘ದಿ ಕಾಶ್ಮೀರ್​ ಫೈಲ್ಸ್​’ ಸಿನಿಮಾ ಆಯ್ಕೆ ಆಗಬೇಕೋ ಬೇಡವೋ ಎಂಬ ಬಗ್ಗೆ ಚರ್ಚೆ ನಡೆಯುತ್ತಿದೆ. ಈ ವಿಚಾರದಲ್ಲಿ ನಿರ್ದೇಶಕ ಡಿಲನ್​​ ಮೋಹನ್​ ಗ್ರೇ ಅವರು ತಮ್ಮ ಅನಿಸಿಕೆ ಹಂಚಿಕೊಂಡಿದ್ದಾರೆ.

‘ದಿ ಕಾಶ್ಮೀರ್​ ಫೈಲ್ಸ್​ ಚಿತ್ರ ಆಸ್ಕರ್​ಗೆ ಹೋದ್ರೆ ಭಾರತಕ್ಕೆ ಮುಜುಗರ; ಇದು ದ್ವೇಷ ಹಬ್ಬಿಸುವ ಕಸ’: ಕೇಳಿಬಂತು ಕಟು ಟೀಕೆ
ದಿ ಕಾಶ್ಮೀರ್ ಫೈಲ್ಸ್
Follow us on

ಕಡಿಮೆ ಬಜೆಟ್​ನಲ್ಲಿ ತಯಾರಾಗಿ 250 ಕೋಟಿ ರೂಪಾಯಿಗೂ ಅಧಿಕ ಕಲೆಕ್ಷನ್​ ಮಾಡಿದ ‘ದಿ ಕಾಶ್ಮೀರ್​ ಫೈಲ್ಸ್​’ (The Kashmir Files) ಸಿನಿಮಾದ ಯಶಸ್ಸು ತುಂಬ ದೊಡ್ಡದು. ಬಾಕ್ಸ್​ ಆಫೀಸ್​ ದೃಷ್ಟಿಯಿಂದ ಮಾತ್ರವಲ್ಲದೇ ಕಂಟೆಂಟ್​ ವಿಚಾರದಿಂದಲೂ ಈ ಚಿತ್ರ ಹೆಚ್ಚು ಚರ್ಚೆಗೆ ಒಳಗಾಗಿದೆ. ಇಂದಿಗೂ ಈ ಸಿನಿಮಾ ಬಗ್ಗೆ ಪರ-ವಿರೋಧ ವಾದ ನಡೆಯುತ್ತಲೇ ಇದೆ. ಕೆಲವರು ‘ದಿ ಕಾಶ್ಮೀರ್​ ಫೈಲ್ಸ್​’ ಸಿನಿಮಾವನ್ನು ಹಾಡಿ ಹೊಗಳಿದರೆ, ಇನ್ನೂ ಕೆಲವರು ತೆಗಳುತ್ತಿದ್ದಾರೆ. ಈಗ ಈ ಸಿನಿಮಾ ಆಸ್ಕರ್​ ಪ್ರಶಸ್ತಿ (Oscar Awards) ಕಣದಲ್ಲಿ ಸ್ಪರ್ಧಿಸಬೇಕೋ ಬೇಡವೋ ಎಂಬ ಬಗ್ಗೆ ಚರ್ಚೆ ಆಗುತ್ತಿದೆ. ಈ ಸಂದರ್ಭದಲ್ಲಿ ಕೆನಡಾದ ನಿರ್ದೇಶಕ ಡಿಲನ್​​ ಮೋಹನ್​ ಗ್ರೇ (Dylan Mohan Gray) ಅವರು ಕಟು ಟೀಕೆ ಮಾಡಿದ್ದಾರೆ.

ಪ್ರತಿ ವರ್ಷ ಆಸ್ಕರ್​ ಕಣಕ್ಕೆ ಭಾರತದಿಂದ ಒಂದು ಸಿನಿಮಾವನ್ನು ಆಯ್ಕೆ ಮಾಡಿ ಕಳಿಸಲಾಗುತ್ತದೆ. ‘ಆರ್​ಆರ್​ಆರ್​’ ಸಿನಿಮಾ ಆಯ್ಕೆ ಆಗಬಹುದು ಎಂದು ನಿರ್ದೇಶಕ ಅನುರಾಗ್​ ಕಶ್ಯಪ್​ ಹೇಳಿದ್ದಾರೆ. ‘ದಿ ಕಾಶ್ಮೀರ್​ ಫೈಲ್ಸ್​’ ಚಿತ್ರ ಆಯ್ಕೆ ಆಗದಿರಲಿ ಎಂದು ಅವರು ಆಶಿಸಿದ್ದಾರೆ. ಈ ವಿಚಾರಕ್ಕೆ ಪ್ರತಿಕ್ರಿಯಿಸಿ ವಿವೇಕ್​ ಅಗ್ನಿಹೋತ್ರಿ ಟ್ವೀಟ್​ ಮಾಡಿದ್ದಾರೆ. ಈ ವಾದದಲ್ಲಿ ನಿರ್ದೇಶಕ ಡಿಲನ್​ ಮೋಹನ್​ ಗ್ರೇ ಅವರು ತಮ್ಮ ಅನಿಸಿಕೆ ಹಂಚಿಕೊಂಡಿದ್ದಾರೆ.

ಇದನ್ನೂ ಓದಿ
ಒಟಿಟಿಗೆ ಬರ್ತಿದೆ ‘ದಿ ಕಾಶ್ಮೀರ್​ ಫೈಲ್ಸ್​’ ಚಿತ್ರ; ಕನ್ನಡ ಪ್ರೇಕ್ಷಕರಿಗೂ ಇಲ್ಲಿದೆ ಒಂದು ಗುಡ್​ ನ್ಯೂಸ್​
‘ದಿ ಕಾಶ್ಮೀರ್​ ಫೈಲ್ಸ್​’ ನಟನ ಅಚ್ಚರಿಯ ಬದಲಾವಣೆ; ಹೇಗಿದ್ದ ಅನುಪಮ್​ ಖೇರ್​ ಹೇಗಾದ್ರು ನೋಡಿ
‘ದಿ ಕಾಶ್ಮೀರ್​ ಫೈಲ್ಸ್​’ ಚಿತ್ರದ್ದು ‘ಬಾಹುಬಲಿ’ಗಿಂತಲೂ ದೊಡ್ಡ ಗೆಲುವು: ಇದು ಆಮಿರ್ ಖಾನ್ ಫಾರ್ಮುಲಾ
ಸೀಕ್ರೇಟ್​ ಆಗಿ ಮತ್ತೊಂದು ಸಿನಿಮಾ ಶೂಟಿಂಗ್ ಮುಗಿಸಿದ ‘ದಿ ಕಾಶ್ಮೀರ್​ ಫೈಲ್ಸ್​’ ನಿರ್ದೇಶಕ ವಿವೇಕ್​ ಅಗ್ನಿಹೋತ್ರಿ

ವಿವೇಕ್​ ಅಗ್ನಿಹೋತ್ರಿ ಹೇಳಿದ್ದೇನು?

‘ಹತ್ಯಾಕಾಂಡ ನಡೆದೇ ಇಲ್ಲ ಎಂದು ವಾದಿಸುವ ಬಾಲಿವುಡ್​ ಮಂದಿಯಿಂದ ನಮ್ಮ ‘ದಿ ಕಾಶ್ಮೀರ್​ ಫೈಲ್​’ ಸಿನಿಮಾ ಆಸ್ಕರ್​ಗೆ ಆಯ್ಕೆ ಆಗದಂತೆ ಲಾಬಿ ಶುರುವಾಗಿದೆ. ‘ದೋಬಾರಾ’ ಚಿತ್ರದ ನಿರ್ದೇಶಕ ಅನುರಾಗ್​ ಕಶ್ಯಪ್​ ಅವರ ನಾಯಕತ್ವದಲ್ಲಿ ಈ ಕೆಲಸ ಆಗುತ್ತಿದೆ’ ಎಂದು ವಿವೇಕ್​ ಅಗ್ನಿಹೋತ್ರಿ ಟ್ವೀಟ್​ ಮಾಡಿದ್ದಾರೆ.

ವಿವೇಕ್​ ಅಗ್ನಿಹೋತ್ರಿ ಅವರ ಟ್ವೀಟ್​ಗೆ ಡಿಲನ್​ ಮೋಹಲ್​ ಗ್ರೇ ಪ್ರತಿಕ್ರಿಯೆ ನೀಡಿದ್ದಾರೆ. ‘ಈ ಚಿತ್ರವು ಕಲಾತ್ಮಕ ಅರ್ಹತೆ ಇಲ್ಲದ, ದ್ವೇಷ ಹಬ್ಬಿಸುವ ಕಸದ ರೀತಿ ಇದೆ. ಇದು ಆಸ್ಕರ್​ಗೆ ಆಯ್ಕೆಯಾದರೆ ಭಾರತಕ್ಕೆ ಮುಜಗರ ಉಂಟುಮಾಡುತ್ತದೆ. ದೇಶಕ್ಕೆ ಇರುವ ಒಳ್ಳೆಯ ಹೆಸರು ಉಳಿಸಲು ಅನುರಾಗ್​ ಕಶ್ಯಪ್​ ಪ್ರಯತ್ನಿಸುತ್ತಿದ್ದಾರೆ’ ಎಂದು ಡಿಲನ್​ ಮೋಹಲ್​ ಗ್ರೇ ಟ್ವೀಟ್​ ಮಾಡಿದ್ದಾರೆ. ಇದರಿಂದ ವಿವಾದ ಹೆಚ್ಚುವ ಸಾಧ್ಯತೆ ದಟ್ಟವಾಗಿದೆ.

ಕಾಶ್ಮೀರಿ ಪಂಡಿತರ ವಲಸೆ ಮತ್ತು ಹತ್ಯೆಯನ್ನು ಆಧರಿಸಿ ‘ದಿ ಕಾಶ್ಮೀರ್​ ಫೈಲ್ಸ್​’ ಸಿನಿಮಾ ತಯಾರಾಗಿದೆ. ಅನುಪಮ್​ ಖೇರ್​, ದರ್ಶನ್ ಕುಮಾರ್​, ಪಲ್ಲವಿ ಜೋಶಿ, ಪ್ರಕಾಶ್​ ಬೆಳವಾಡಿ, ವಿಥುನ್​ ಚಕ್ರವರ್ತಿ ಮುಂತಾದವರು ಈ ಸಿನಿಮಾದಲ್ಲಿ ನಟಿಸಿ ಗಮನ ಸೆಳೆದಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ