ವಿಶ್ವಕಪ್​ ಸೋಲಿನ ನೋವಿನ ನಡುವೆಯೂ ಟೀಮ್​ ಇಂಡಿಯಾದ ಬೆನ್ನು ತಟ್ಟಿದ ಸೆಲೆಬ್ರಿಟಿಗಳು

|

Updated on: Nov 20, 2023 | 7:33 AM

‘ನಿಮ್ಮನ್ನು ನಾವು ಪ್ರೀತಿಸುತ್ತೇವೆ. ನಿಮ್ಮ ಜೊತೆ ನಾವು ಬೆಂಬಲವಾಗಿ ನಿಂತುಕೊಳ್ಳುತ್ತೇವೆ. ನಿಮ್ಮ ಬಗ್ಗೆ ನಮಗೆ ಹೆಮ್ಮೆ ಇದೆ’ ಎಂದು ರಿತೇಶ್​​ ದೇಶಮುಖ್​ ಬರೆದುಕೊಂಡಿದ್ದಾರೆ. ‘ಕಳೆದ ವಾರಗಳಲ್ಲಿ ನೀವು ನಮಗೆ ಸ್ಮರಣೀಯ ಕ್ಷಣಗಳನ್ನು ನೀಡಿದ್ದೀರಿ. ಅದಕ್ಕಾಗಿ ಧನ್ಯವಾದಗಳು’ ಎಂದು ದಿಯಾ ಮಿರ್ಜಾ ಅವರು ಟೀಮ್​ ಇಂಡಿಯಾದ ಬೆನ್ನು ತಟ್ಟಿದ್ದಾರೆ.

ವಿಶ್ವಕಪ್​ ಸೋಲಿನ ನೋವಿನ ನಡುವೆಯೂ ಟೀಮ್​ ಇಂಡಿಯಾದ ಬೆನ್ನು ತಟ್ಟಿದ ಸೆಲೆಬ್ರಿಟಿಗಳು
ಟೀಮ್​ ಇಂಡಿಯಾ
Follow us on

‘ವಿಶ್ವಕಪ್​ 2023’ ಫೈನಲ್​ನಲ್ಲಿ (ICC World Cup 2023 Final) ಭಾರತ ಗೆದ್ದೇ ಗೆಲ್ಲುತ್ತದೆ ಎಲ್ಲರೂ ಭಾವಿಸಿದ್ದರು. ಆದರೆ ಆ ಊಹೆ ನಿಜವಾಗಲಿಲ್ಲ. ಆಸ್ಟ್ರೇಲಿಯಾ ತಂಡವನ್ನು ಮಣಿಸಲು ಭಾರತಕ್ಕೆ ಸಾಧ್ಯವಾಗಲೇ ಇಲ್ಲ. ಅದರಿಂದ ಕೋಟ್ಯಂತರ ಹೃದಯಗಳಿಗೆ ನೋವಾಗಿದೆ. ಬಾಲಿವುಡ್​ನ (Bollywood) ಸೆಲೆಬ್ರಿಟಿಗಳಿಗೂ ನಿರಾಸೆ ಆಗಿದೆ. ಹಾಗಂತ ಟೀಮ್​ ಇಂಡಿಯಾವನ್ನು (Team India) ಅವರು ನಿಂದಿಸುತ್ತಿಲ್ಲ. ಇಷ್ಟು ದಿನ ಉತ್ತಮ ಪರ್ಫಾರ್ಮೆನ್ಸ್​ ನೀಡಿದ ನಮ್ಮ ಆಟಗಾರರನ್ನು ಎಲ್ಲರೂ ಅಭಿನಂದಿಸುತ್ತಿದ್ದಾರೆ. ಮುಂದೆ ಇನ್ನೂ ಚೆನ್ನಾಗಿ ಆಡಲಿ ಎಂದು ಹುರಿದುಂಬಿಸಲಾಗುತ್ತಿದೆ. ಅಜಯ್​ ದೇವಗನ್​, ಅಭಿಷೇಕ್​ ಬಚ್ಚನ್​, ದಿಯಾ ಮಿರ್ಜಾ, ರಿತೇಶ್​ ದೇಶಮುಖ್​ ಸೇರಿದಂತೆ ಅನೇಕರು ಟೀಮ್ ಇಂಡಿಯಾ ಆಟಗಾರರಿಗೆ ಬೆಂಬಲ ಸೂಚಿಸಿದ್ದಾರೆ.

‘ಇದು ಒಂದು ಕೆಟ್ಟ ದಿನ ಅಷ್ಟೇ. 2023ರ ವಿಶ್ವಕಪ್​ನಲ್ಲಿ ಕಠಿಣ ಸ್ಪರ್ಧಿಯಾಗಿ ನೀವು ಎಂದೆಂದಿಗೂ ನೆನಪಿನಲ್ಲಿ ಉಳಿಯುತ್ತೀರಿ. ಚೆನ್ನಾಗಿ ಆಡಿದ್ದೀರಿ’ ಎಂದು ಆಯುಷ್ಮಾನ್​ ಖುರಾನಾ ಪೋಸ್ಟ್​ ಮಾಡಿದ್ದಾರೆ. ‘ಇಡೀ ಟೂರ್ನಿಯಲ್ಲಿ ನೀವು ಆಟ ಆಡಿದ ರೀತಿಯೇ ಗೆಲುವಿಗೆ ಸಮಾನ. ಹೆಮ್ಮೆಯಿಂದ ಇರಿ’ ಎಂದು ಅಜಯ್​ ದೇವಗನ್​ ಅವರು ಟ್ವೀಟ್​ ಮಾಡಿದ್ದಾರೆ.

‘ಸೋತು ಗೆಲ್ಲುವವರನ್ನು ಬಾಜಿಗರ್​ ಎನ್ನುತ್ತೇವೆ. ಇಂಡಿಯಾ ಚೆನ್ನಾಗಿ ಆಡಿದೆ. ವರ್ಲ್ಡ್​ ಕಪ್​ ಗೆದ್ದ ಆಸ್ಟ್ರೇಲಿಯಾಗೆ ಅಭಿನಂದನೆಗಳು’ ಎಂದು ಬರೆದುಕೊಂಡಿದ್ದಾರೆ ಕಾಜೋಲ್​.

‘ಮನಸ್ಸಿಗೆ ನೋವಾಗಿದೆ. ಇಡೀ ಸರಣಿಯಲ್ಲಿ ನಮ್ಮ ತಂಡದವರು ತುಂಬಾ ಚೆನ್ನಾಗಿ ಆಡಿದ್ದಾರೆ. ನಾವು ಎಂದೆಂದಿಗೂ ನಮ್ಮ ಆಟಗಾರರ ದೊಡ್ಡ ಅಭಿಮಾನಿಗಳಾಗಿರುತ್ತೇವೆ. ಮುಂದಿನ ವರ್ಲ್ಡ್​ ಕಪ್​​ ನಮ್ಮದಾಗಲಿದೆ’ ಎಂದು ವಿವೇಕ್​ ಒಬೆಯಾರ್​ ಬರೆದುಕೊಂಡಿದ್ದಾರೆ.

‘ಕಠಿಣ ಪರಿಶ್ರಮದ ನಡುವೆ ಬಂದ ಸೋಲು ಇದು. ಎಲ್ಲ ಪಂದ್ಯಗಳಲ್ಲೂ ನಮ್ಮವರ ಪ್ರಯತ್ನ ಚೆನ್ನಾಗಿತ್ತು. ಹೆಮ್ಮೆಯಿಂದಿರಿ. ಈ ಜರ್ನಿಗೆ ಧನ್ಯವಾದಗಳು’ ಎಂದು ಅಭಿಷೇಕ್​ ಬಚ್ಚನ್​ ಅವರು ಪೋಸ್ಟ್​ ಮಾಡಿದ್ದಾರೆ.

ಇದನ್ನೂ ಓದಿ: ಗೆದ್ದ ಆಸ್ಟ್ರೇಲಿಯಾಕ್ಕೆ ಸಿಕ್ಕಿದ್ದೆಷ್ಟು? ಸೋತ ಭಾರತ ಗೆದ್ದಿದ್ದು ಎಷ್ಟು ಕೋಟಿ? ಇಲ್ಲಿದೆ ಬಹುಮಾನದ ವಿವರ

‘ನಿಮ್ಮನ್ನು ನಾವು ಪ್ರೀತಿಸುತ್ತೇವೆ. ನಿಮ್ಮ ಜೊತೆ ನಾವು ಬೆಂಬಲವಾಗಿ ನಿಂತುಕೊಳ್ಳುತ್ತೇವೆ. ನಿಮ್ಮ ಬಗ್ಗೆ ನಮಗೆ ಹೆಮ್ಮೆ ಇದೆ’ ಎಂದು ರಿತೇಶ್​​ ದೇಶಮುಖ್​ ಅವರು ಬರೆದುಕೊಂಡಿದ್ದಾರೆ.

‘ಕಳೆದ ವಾರಗಳಲ್ಲಿ ನೀವು ನಮಗೆ ಸ್ಮರಣೀಯ ಕ್ಷಣಗಳನ್ನು ನೀಡಿದ್ದೀರಿ. ಅದಕ್ಕಾಗಿ ಧನ್ಯವಾದಗಳು. ಚೆನ್ನಾಗಿ ಆಡಿದ್ದೀರಿ. ನಿಮ್ಮ ಬಗ್ಗೆ ನಮಗೆ ಹೆಮ್ಮೆ ಇದೆ’ ಎಂದು ಟೀಮ್​ ಇಂಡಿಯಾದ ಬೆನ್ನು ತಟ್ಟಿದ್ದಾರೆ ದಿಯಾ ಮಿರ್ಜಾ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.