Sanjay Gadhvi: ಹೃದಯಾಘಾತದಿಂದ ಮೃತಪಟ್ಟ ‘ಧೂಮ್’ ಸಿನಿಮಾ ನಿರ್ದೇಶಕ ಸಂಜಯ್
ಇಂದು ಸಂಜಯ್ ಮನೆಯಲ್ಲೇ ಇದ್ದರು. ಬೆಳಿಗ್ಗೆ 8.45ಕ್ಕೆ ಅವರಿಗೆ ಹೃದಯಾಘಾತ ಆಗಿದೆ. ಆಗ ಅವರು ಕುಸಿದು ಬಿದ್ದಿದ್ದಾರೆ. ಅವರನ್ನು ಆಸ್ಪತ್ರೆಗೆ ಕರೆದೊಯ್ದರೂ ಯಾವುದೇ ಪ್ರಯೋಜನ ಆಗಿಲ್ಲ.
ಚಿತ್ರರಂಗಕ್ಕೆ ಒಂದಾದಮೇಲೆ ಒಂದರಂತೆ ಆಘಾತ ಎದುರಾಗುತ್ತಿದೆ. ಮಲಯಾಳಂನ ಖ್ಯಾತ ನಟ ವಿನೋದ್ ಥಾಮಸ್ (Vinodh Thomas) ಅವರು ಕಾರಿನಲ್ಲಿ ಶವವಾಗಿ ಪತ್ತೆ ಆಗಿದ್ದಾರೆ. ಈ ಬೆನ್ನಲ್ಲೇ ‘ಧೂಮ್’ (Dhoom Movie), ‘ಧೂಮ್ 2’ ಸಿನಿಮಾ ನಿರ್ದೇಶಕ ಸಂಜಯ್ ಘಡ್ವಿ ಅವರು ಹೃದಯಾಘಾತದಿಂದ ಮೃತಪಟ್ಟಿರುವ ಸುದ್ದಿ ಹೊರ ಬಿದ್ದಿದೆ. ಇದು ಚಿತ್ರರಂಗದವರಿಗೆ ಸಾಕಷ್ಟು ಆಘಾತ ಉಂಟು ಮಾಡಿದೆ. ಅವರಿಗೆ 57 ವರ್ಷ ವಯಸ್ಸಾಗಿತ್ತು. ಸಂಜಯ್ ಸಾವಿಗೆ ಚಿತ್ರರಂಗದವರು ಸಂತಾಪ ಸೂಚಿಸುತ್ತಿದ್ದಾರೆ.
ಇಂದು (ನವೆಂಬರ್ 19) ಸಂಜಯ್ ಮನೆಯಲ್ಲೇ ಇದ್ದರು. ಬೆಳಿಗ್ಗೆ 8.45ಕ್ಕೆ ಅವರಿಗೆ ಹೃದಯಾಘಾತ ಆಗಿದೆ. ಆಗ ಅವರು ಕುಸಿದು ಬಿದ್ದಿದ್ದಾರೆ. ಅವರನ್ನು ಆಸ್ಪತ್ರೆಗೆ ಕರೆದೊಯ್ದರೂ ಯಾವುದೇ ಪ್ರಯೋಜನ ಆಗಿಲ್ಲ. ಈ ವಿಚಾರವನ್ನು ಖ್ಯಾತ ನಿರ್ಮಾಪಕ ಬೋನಿ ಕಪೂರ್ ಅವರು ಖಚಿತಪಡಿಸಿದ್ದಾರೆ.
ಅಜಯ್ ದೇವಗನ್ ಫಿಲ್ಮ್ಸ್ನ ಮಾಜಿ ಸಿಇಒ ಮೀನಾ ಐಯ್ಯರ್ ಅವರು ಸಂಜಯ್ ಸಾವಿಗೆ ಸಂತಾಪ ಸೂಚಿಸಿದ್ದಾರೆ. ‘ಶಾಕಿಂಗ್ ಸುದ್ದಿ. ಸಂಜಯ್ ಘಡ್ವಿ ಮೃತಪಟ್ಟಿದ್ದಾರೆ. ಕಳೆದ ವಾರ ಸಿನಿಮಾ ಒಂದನ್ನು ವೀಕ್ಷಿಸಲು ಹೋದಾಗ ಪಿವಿಆರ್ನಲ್ಲಿ ಭೇಟಿ ಆಗಿದ್ದೆವು’ ಎಂದು ಅವರು ಹೇಳಿದ್ದಾರೆ.
Shocking: Sanjay Gadhvi’s passing. I met him last week at PVR watching Killers of The Flower Moon. We exchanged pleasantries and I thought all day of #Dhoom. Rest in peace 🙏
— Meena Iyer (@Meena_Iyer) November 19, 2023
ಸಂಜಯ್ ಅವರು ಬಾಲಿವುಡ್ಗೆ ಕಾಲಿಟ್ಟಿದ್ದು 2001ರಲ್ಲಿ. ‘ತೇರೆ ಲಿಯೇ’ ಅವರ ನಿರ್ದೇಶನದ ಮೊದಲ ಸಿನಿಮಾ. ಅವರು ಕೆಲವು ವರ್ಷ ಸೈಕಲ್ ಹೊಡೆದರು. 2004ರಲ್ಲಿ ಅವರು ನಿರ್ದೇಶನ ಮಾಡಿದ ‘ಧೂಮ್’ ಸಿನಿಮಾ ಸೂಪರ್ ಹಿಟ್ ಆಯಿತು. ರಾಬರಿ ಕಥೆಯನ್ನು ಈ ಸಿನಿಮಾ ಹೊಂದಿತ್ತು. ಯಶ್ ರಾಜ್ ಫಿಲ್ಮ್ಸ್ ಈ ಚಿತ್ರವನ್ನು ನಿರ್ಮಾಣ ಮಾಡಿತ್ತು. ಅಭಿಷೇಕ್ ಬಚ್ಚನ್, ಜಾನ್ ಅಬ್ರಾಹಂ, ಉದಯ್ ಚೋಪ್ರಾ ಮೊದಲಾದವರು ಈ ಸಿನಿಮಾದಲ್ಲಿ ನಟಿಸಿದ್ದರು. ಇದು ಅವರ ವೃತ್ತಿ ಜೀವನವನ್ನೇ ಬದಲಿಸಿತು.
ಇದನ್ನೂ ಓದಿ: Vinod Thomas: ನಿಲ್ಲಿಸಿದ್ದ ಕಾರಿನೊಳಗೆ ಶವವಾಗಿ ಪತ್ತೆಯಾದ ಖ್ಯಾತ ನಟ; ನಿಧನಕ್ಕೆ ಕಾರಣವಾಯ್ತಾ ಕಾರಿನ ಎ.ಸಿ.?
2006ರಲ್ಲಿ ಅವರ ನಿರ್ದೇಶನದ ‘ಧೂಮ್ 2’ ಸಿನಿಮಾ ರಿಲೀಸ್ ಆಯಿತು. ಹೃತಿಕ್ ರೋಷನ್, ಐಶ್ವರ್ಯಾ ರೈ ಮೊದಲಾದವರು ಈ ಸಿನಿಮಾದಲ್ಲಿ ನಟಿಸಿದ್ದರು. ಇದಾದ ಬಳಿಕ ಅವರಿಗೆ ಹೇಳಿಕೊಳ್ಳುವಂಥ ಗೆಲುವು ಸಿಗಲೇ ಇಲ್ಲ. ಅವರು ಇತ್ತೀಚೆಗೆ ಯಾವುದೇ ಹೊಸ ಸಿನಿಮಾ ನಿರ್ದೇಶನ ಮಾಡಿಲ್ಲ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 12:43 pm, Sun, 19 November 23