Vinod Thomas: ನಿಲ್ಲಿಸಿದ್ದ ಕಾರಿನೊಳಗೆ ಶವವಾಗಿ ಪತ್ತೆಯಾದ ಖ್ಯಾತ ನಟ; ನಿಧನಕ್ಕೆ ಕಾರಣವಾಯ್ತಾ ಕಾರಿನ ಎ.ಸಿ.?
ಕಾರಿನಲ್ಲಿ ಇರುವ ಎಸಿಯಿಂದ ವಿಷಕಾರಿ ಗ್ಯಾಸ್ ಲೀಕ್ ಆಗಿರಬಹುದು. ಅದು ವಿನೋದ್ ಥಾಮಸ್ ಅವರ ದೇಹದೊಳಗೆ ಸೇರಿದ ಪರಿಣಾಮವಾಗಿ ಅವರು ಕೊನೆಯುಸಿರು ಎಳೆದಿರಬಹುದು ಎಂದು ಶಂಕಿಸಲಾಗಿದೆ ಆದರೆ ಪೊಲೀಸರು ಇದನ್ನು ಖಚಿತಪಡಿಸಿಲ್ಲ. ಸದ್ಯಕ್ಕೆ ಅವರ ದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳಿಸಲಾಗಿದೆ.
ಮಲಯಾಳಂ ಚಿತ್ರರಂಗದಲ್ಲಿ (Mollywood) ಗುರುತಿಸಿಕೊಂಡಿದ್ದ ನಟ ವಿನೋದ್ ಥಾಮಸ್ (Vinod Thomas) ಅವರು ನಿಧನರಾಗಿದ್ದಾರೆ. ಅವರ ಸಾವಿನ ಸುತ್ತ ಹಲವು ಅನುಮಾನಗಳು ಹುಟ್ಟಿಕೊಂಡಿವೆ. ಶನಿವಾರ (ನವೆಂಬರ್ 18) ಹೋಟೆಲ್ನ ಪಾರ್ಕಿಂಗ್ನಲ್ಲಿ ನಿಲ್ಲಿಸಿದ್ದ ಕಾರಿನೊಳಗೆ ವಿನೋದ್ ಥಾಮಸ್ ಅವರ ಶವ ಪತ್ತೆ ಆಗಿದೆ. ಅವರ ನಿಧನಕ್ಕೆ ಕಾರಣ ಏನು ಎಂಬ ಬಗ್ಗೆ ಸಾಕಷ್ಟು ಚರ್ಚೆ ಆಗುತ್ತಿದೆ. ಹಲವು ಸಿನಿಮಾಗಳಲ್ಲಿ ನಟಿಸುವ ಮೂಲಕ ಅವರು ಖ್ಯಾತಿ ಪಡೆದಿದ್ದರು. ಅವರಿಗೆ 45 ವರ್ಷ ವಯಸ್ಸಾಗಿತ್ತು. ಮರಣೋತ್ತರ ಪರೀಕ್ಷೆಯ ವರದಿ ಬಂದ ಬಳಿಕ ಸಾವಿಗೆ ಕಾರಣ ಏನು ಎಂಬ ಬಗ್ಗೆ ನಿಖರ ಮಾಹಿತಿ ಸಿಗಲಿದೆ. ಕಾರಿನೊಳಗಿನ ಎಸಿಯಿಂದ ವಿನೋದ್ ಥಾಮಸ್ ಅವರ ಸಾವು (Vinod Thomas Death) ಸಂಭವಿಸಿರಬಹುದು ಎಂದು ಕೆಲವರು ಅನುಮಾನ ವ್ಯಕ್ತಪಡಿಸಿದ್ದಾರೆ.
ಕೇರಳದ ಕೊಟ್ಟಾಯಂನಲ್ಲಿನ ಒಂದು ಹೋಟೆಲ್ನಲ್ಲಿ ವಿನೋದ್ ಥಾಮಸ್ ಅವರ ಕಾರು ಪಾರ್ಕ್ ಮಾಡಲಾಗಿತ್ತು. ಬಹಳ ಹೊತ್ತಿನಿಂದ ಅವರು ಕಾರಿನಲ್ಲೇ ಇರುವುದನ್ನು ಗಮನಿಸಿದ ಹೋಟೆಲ್ ಸಿಬ್ಬಂದಿಯು ಪೊಲೀಸರಿಗೆ ಮಾಹಿತಿ ತಿಳಿಸಿದರು. ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದ ಪೊಲೀಸರು ಕೂಡಲೇ ವಿನೋದ್ ಥಾಮಸ್ ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋದರು. ಆದರೆ ಅಷ್ಟರಲ್ಲಾಗಲೇ ಅವರ ಪ್ರಾಣಪಕ್ಷಿ ಹಾರಿ ಹೋಗಿದೆ ಎಂದು ವೈದ್ಯರು ಖಚಿತ ಪಡಿಸಿದರು.
Malayalam serial and movie actor vinod Thomas was found dead in his car outside a bar at Pambady near Kottayam yday evening. pic.twitter.com/XrPZWAO25V
— മുരളി (@muralewrites) November 18, 2023
ಕಾರಿನಲ್ಲಿ ಇರುವ ಎಸಿಯಿಂದ ವಿಷಕಾರಿ ಗ್ಯಾಸ್ ಲೀಕ್ ಆಗಿರಬಹುದು. ಅದು ವಿನೋದ್ ಥಾಮಸ್ ಅವರ ದೇಹದೊಳಗೆ ಸೇರಿದ ಪರಿಣಾಮವಾಗಿ ಅವರು ಕೊನೆಯುಸಿರು ಎಳೆದಿರಬಹುದು ಎಂದು ಕೆಲವರು ಶಂಕಿಸಿದ್ದಾರೆ. ಆದರೆ ಪೊಲೀಸರು ಇದನ್ನು ಖಚಿತಪಡಿಸಿಲ್ಲ. ಸದ್ಯಕ್ಕೆ ವಿನೋದ್ ಥಾಮಸ್ ಅವರ ದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳಿಸಲಾಗಿದೆ. ಮರಣೋತ್ತರ ಪರೀಕ್ಷೆಯ ಸಂಪೂರ್ಣ ವರದಿ ಕೈ ಸೇರಿದ ಬಳಿಕ ಅವರ ಸಾವಿಗೆ ಸ್ಪಷ್ಟ ಕಾರಣ ಏನು ಎಂಬುದು ಹೊರಬೀಳಲಿದೆ.
ಇದನ್ನೂ ಓದಿ: 8 ತಿಂಗಳ ಗರ್ಭಿಣಿ, ಕಿರುತೆರೆ ನಟಿ ಹೃದಯಾಘಾತದಿಂದ ನಿಧನ; ಮಗು ಪರಿಸ್ಥಿತಿ ಏನು?
ಮಲಯಾಳಂನ ಅನೇಕ ಸಿನಿಮಾಗಳಲ್ಲಿ ವಿನೋದ್ ಥಾಮಸ್ ನಟಿಸಿದ್ದರು. ‘ಅಯ್ಯಪ್ಪನುಂ ಕೋಶಿಯಿಂ’, ‘ಹ್ಯಾಪಿ ವೆಡ್ಡಿಂಗ್’, ‘ಜೂನ್’ ಮುಂತಾದ ಸಿನಿಮಾಗಳಲ್ಲಿ ಅವರು ಅಭಿನಯಿಸಿದ್ದರು. ಕಿರುತೆರೆಯಲ್ಲೂ ನಟಿಸಿ ಜನರಿಗೆ ಪರಿಚಿತರಾಗಿದ್ದರು. ಅವರ ಅಕಾಲಿಕ ಮರಣದಿಂದ ಎಲ್ಲರಿಗೂ ಶಾಕ್ ಆಗಿದೆ. ವಿನೋದ್ ಥಾಮಸ್ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಅಭಿಮಾನಿಗಳು, ಆಪ್ತರು ಪ್ರಾರ್ಥಿಸುತ್ತಿದ್ದಾರೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 11:44 am, Sun, 19 November 23