AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Dr Priya: 8 ತಿಂಗಳ ಗರ್ಭಿಣಿ, ಕಿರುತೆರೆ ನಟಿ ಹೃದಯಾಘಾತದಿಂದ ನಿಧನ; ಮಗು ಪರಿಸ್ಥಿತಿ ಏನು?

ನಟಿ ಪ್ರಿಯಾ ಅವರಿಗೆ 35 ವರ್ಷ ವಯಸ್ಸಾಗಿತ್ತು. 8 ತಿಂಗಳ ಗರ್ಭಿಣಿ ಆಗಿದ್ದ ಅವರು ಮಗುವಿನ ಆಗಮನಕ್ಕೆ ದಿನಗಣನೆ ಮಾಡುತ್ತಿದ್ದರು. ಆಗಲೇ ವಿಧಿ ತನ್ನ ಕ್ರೂರ ದೃಷ್ಟಿ ಬೀರಿದೆ. ಮಂಗಳವಾರ (ಅಕ್ಟೋಬರ್​ 31) ಪ್ರಿಯಾ ಅವರಿಗೆ ಹೃದಯಾಘಾತ ಆಗಿದ್ದು, ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರು ಎಳೆದಿದ್ದಾರೆ. ಆ ಬಗ್ಗೆ ಇಲ್ಲಿದೆ ವಿವರ..

Dr Priya: 8 ತಿಂಗಳ ಗರ್ಭಿಣಿ, ಕಿರುತೆರೆ ನಟಿ ಹೃದಯಾಘಾತದಿಂದ ನಿಧನ; ಮಗು ಪರಿಸ್ಥಿತಿ ಏನು?
ನಟಿ ಪ್ರಿಯಾ
ಮದನ್​ ಕುಮಾರ್​
|

Updated on:Nov 01, 2023 | 7:35 PM

Share

ಮಲಯಾಳಂ (Malayalam) ಕಿರುತೆರೆಗೆ ಒಂದರ ಮೇಲೊಂದು ಆಘಾತ ಎದುರಾಗುತ್ತಿದೆ. ಇತ್ತೀಚೆಗಷ್ಟೇ ನಟಿ ರಂಜುಶಾ ಮೆನನ್​ ಅವರು ಆತ್ಮಹತ್ಯೆಗೆ ಶರಣಾದರು. ಆ ನೋವು ಮರೆಯಾಗುವುದಕ್ಕೂ ಮುನ್ನವೇ ಇನ್ನೊಂದು ಕಹಿ ಸುದ್ದಿ ಕೇಳಿಬಂದಿದೆ. ಮಲಯಾಳಂನ ಅನೇಕ ಧಾರಾವಾಹಿಗಳಲ್ಲಿ ನಟಿಸಿದ್ದ ಡಾಕ್ಟರ್​ ಪ್ರಿಯಾ (Dr Priya) ಅವರು ಹೃದಯಾಘಾತದಿಂದ (Heart Attack) ನಿಧನರಾಗಿದ್ದಾರೆ. ಅತಿ ದುಃಖದ ಸಂಗತಿ ಏನೆಂದರೆ, ಅವರು 8 ತಿಂಗಳ ಗರ್ಭಿಣಿ ಆಗಿದ್ದರು. ಈಗ ಅವರ ಮಗು ಐಸಿಯುನಲ್ಲಿದೆ. ಪ್ರಿಯಾ ನಿಧನದಿಂದಾಗಿ ಅವರ ಕುಟುಂಬದವರಿಗೆ, ಅಭಿಮಾನಿಗಳಿಗೆ ಮತ್ತು ಆಪ್ತರಿಗೆ ತೀವ್ರ ನೋವುಂಟಾಗಿದೆ. ಪ್ರಿಯಾ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಎಲ್ಲರೂ ಪ್ರಾರ್ಥಿಸುತ್ತಿದ್ದಾರೆ.

ನಟಿ ಪ್ರಿಯಾ ಅವರಿಗೆ 35 ವರ್ಷ ವಯಸ್ಸಾಗಿತ್ತು. 8 ತಿಂಗಳ ಗರ್ಭಿಣಿ ಆಗಿದ್ದ ಅವರು ಮಗುವಿನ ಆಗಮನಕ್ಕೆ ದಿನಗಣನೆ ಮಾಡುತ್ತಿದ್ದರು. ಆಗಲೇ ವಿಧಿ ತನ್ನ ಕ್ರೂರ ದೃಷ್ಟಿ ಬೀರಿದೆ. ಮಂಗಳವಾರ (ಅಕ್ಟೋಬರ್​ 31) ಪ್ರಿಯಾ ಅವರಿಗೆ ಹೃದಯಾಘಾತವಾಗಿದ್ದು, ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರು ಎಳೆದಿದ್ದಾರೆ. ಇತ್ತೀಚೆಗಷ್ಟೇ ಅವರು ರೆಗ್ಯುಲರ್​ ಚೆಕಪ್​ ಮಾಡಿಸಿಕೊಂಡಿದ್ದರು. ಅದರ ಬೆನ್ನಲ್ಲೇ ಹಾರ್ಟ್​ ಅಟ್ಯಾಕ್​ ಆಗಿರುವುದು ಬೇಸರ ಮೂಡಿಸಿದೆ. ಅವರ ಮಗುವನ್ನು ತೀವ್ರ ನಿಗಾ ಘಟಕದಲ್ಲಿ ಇರಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಇದನ್ನೂ ಓದಿ: ಅನುಮಾನಾಸ್ಪದ ರೀತಿಯಲ್ಲಿ ಮೃತಪಟ್ಟ ಕಿರುತೆರೆ ನಟಿ; ಪೊಲೀಸರಿಂದ ತನಿಖೆ

ಪ್ರಿಯಾ ಅವರ ನಿಧನದ ಸುದ್ದಿಯನ್ನು ನಟ ಕಿಶೋರ್​ ಸತ್ಯ ಅವರು ಖಚಿತಪಡಿಸಿದ್ದಾರೆ. ಸೋಶಿಯಲ್​ ಮೀಡಿಯಾ ಅವರು ಈ ವಿಚಾರ ಹಂಚಿಕೊಂಡಿದ್ದಾರೆ.

View this post on Instagram

A post shared by Kishor Satya (@kishor.satya)

‘ಮಲಯಾಳಂ ಕಿರುತೆರೆಯಲ್ಲಿ ಮತ್ತೊಂದು ಅನಿರೀಕ್ಷಿತ ಸಾವು. ಡಾ. ಪ್ರಿಯಾ ಅವರು ಹೃದಯಾಘಾತದಿಂದ ನಿನ್ನೆ ನಿಧನರಾಗಿದ್ದಾರೆ. ಅವರು 8 ತಿಂಗಳ ಗರ್ಭಿಣಿ ಆಗಿದ್ದರು. ಮಗು ಐಸಿಯುನಲ್ಲಿದೆ. ಬೇರೆ ಯಾವುದೇ ಆರೋಗ್ಯ ಸಮಸ್ಯೆ ಇರಲಿಲ್ಲ’ ಎಂದು ಕಿಶೋರ್​ ಸತ್ಯ ಅವರು ಬರೆದುಕೊಂಡಿದ್ದಾರೆ.

ಇದನ್ನೂ ಓದಿ: ಮ್ಯಾಥ್ಯು ಪೆರ್ರಿ ಸಾವಿಗೆ ಮರಣೋತ್ತರ ಪರೀಕ್ಷೆಯಲ್ಲಿ ಕಾರಣ ತಿಳಿಯಲಿಲ್ಲವೇ?

‘ಮಗಳ ಸಾವನ್ನು ಅರಗಿಸಿಕೊಳ್ಳಲು ಸಾಧ್ಯವಾಗದೇ ಅವರ ತಾಯಿ ಅಳುತ್ತಿದ್ದಾರೆ. ಪ್ರಿಯಾ ಅವರ ಪತಿ ಕಳೆದ 6 ತಿಂಗಳಿಂದ ಎಲ್ಲಿಗೂ ಹೋಗದೇ ಜೊತೆಯಲ್ಲೇ ಇದ್ದು ಕಾಳಜಿ ವಹಿಸುತ್ತಿದ್ದರು. ನಂಬಿಕೆ ಇಟ್ಟ ಮುಗ್ಧ ಜನರಿಗೆ ದೇವರು ಯಾಕೆ ಇಂಥ ಕ್ರೂರ ಪರಿಸ್ಥಿತಿ ಕೊಡುತ್ತಾನೆ. ಉತ್ತರ ಇಲ್ಲದ ಈ ಪ್ರಶ್ನೆಗಳೇ ತಲೆಯಲ್ಲಿ ಮತ್ತೆ ಮತ್ತೆ ಕೊರೆಯುತ್ತಿವೆ. ಈ ನೋವಿನಿಂದ ಪ್ರಿಯಾ ಅವರ ತಾಯಿ ಮತ್ತು ಪತಿ ಹೇಗೆ ಹೊರಬರುತ್ತಾರೋ ಗೊತ್ತಿಲ್ಲ. ಅವರಿಗೆ ದೇವರು ಶಕ್ತಿ ನೀಡಲಿ’ ಎಂದು ಕಿಶೋರ್​ ಸತ್ಯ ಅವರು ಇನ್​ಸ್ಟಾಗ್ರಾಮ್​ನಲ್ಲಿ ಪೋಸ್ಟ್​ ಮಾಡಿದ್ದಾರೆ. ಈ ಸುದ್ದಿ ಕೇಳಿ ಅನೇಕ ಸೆಲೆಬ್ರಿಟಿಗಳು ಮತ್ತು ಅಭಿಮಾನಿಗಳು ಕಂಬನಿ ಮಿಡಿದಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 7:34 pm, Wed, 1 November 23

ಜಮ್ಮು-ಕಾಶ್ಮೀರದ ಗಡಿಯಲ್ಲಿ 5 ಪಾಕಿಸ್ತಾನಿ ಡ್ರೋನ್​ಗಳು ಪತ್ತೆ, ಹೈ ಅಲರ್ಟ್​
ಜಮ್ಮು-ಕಾಶ್ಮೀರದ ಗಡಿಯಲ್ಲಿ 5 ಪಾಕಿಸ್ತಾನಿ ಡ್ರೋನ್​ಗಳು ಪತ್ತೆ, ಹೈ ಅಲರ್ಟ್​
ಪತಿಯ ಅಂತ್ಯಕ್ರಿಯೆಗೆ ಕಂದನ ಜತೆ ಸ್ಟ್ರೆಚರ್​ನಲ್ಲಿ ಬಂದ ಸೈನಿಕನ ಪತ್ನಿ
ಪತಿಯ ಅಂತ್ಯಕ್ರಿಯೆಗೆ ಕಂದನ ಜತೆ ಸ್ಟ್ರೆಚರ್​ನಲ್ಲಿ ಬಂದ ಸೈನಿಕನ ಪತ್ನಿ
ಶುಕ್ರವಾರದಂದು ಹುಳಿ ಪದಾರ್ಥ ತಿನ್ನಲೇಬಾರದು ಯಾಕೆ ಗೊತ್ತಾ?
ಶುಕ್ರವಾರದಂದು ಹುಳಿ ಪದಾರ್ಥ ತಿನ್ನಲೇಬಾರದು ಯಾಕೆ ಗೊತ್ತಾ?
ಇಂದು ಈ ರಾಶಿಯವರಿಗೆ ಹಣಕಾಸು ವಿಚಾರದಲ್ಲಿ ಅದೃಷ್ಟ!
ಇಂದು ಈ ರಾಶಿಯವರಿಗೆ ಹಣಕಾಸು ವಿಚಾರದಲ್ಲಿ ಅದೃಷ್ಟ!
ಬೆಂಗಳೂರಿನಲ್ಲಿ ಅಕ್ರಮವಾಗಿ ನೆಲೆಸಿದ್ದ ಬಾಂಗ್ಲಾ ವಲಸಿಗರ ಬಂಧನ
ಬೆಂಗಳೂರಿನಲ್ಲಿ ಅಕ್ರಮವಾಗಿ ನೆಲೆಸಿದ್ದ ಬಾಂಗ್ಲಾ ವಲಸಿಗರ ಬಂಧನ
ಬೆಂಗಳೂರಿನಲ್ಲಿ ಭಾರೀ ಅಗ್ನಿ ಅವಘಡ: ಹತ್ತಾರು ಬೈಕ್ ಸುಟ್ಟು ಭಸ್ಮ
ಬೆಂಗಳೂರಿನಲ್ಲಿ ಭಾರೀ ಅಗ್ನಿ ಅವಘಡ: ಹತ್ತಾರು ಬೈಕ್ ಸುಟ್ಟು ಭಸ್ಮ
ಬೇಡ್ತಿ-ವರದಾ ಯೋಜನೆ ವಿರೋಧಿಸುತ್ತಿರುವುದೇಕೆ? ಸ್ವಾಮೀಜಿ ಶಾಕಿಂಗ್​ ಹೇಳಿಕೆ
ಬೇಡ್ತಿ-ವರದಾ ಯೋಜನೆ ವಿರೋಧಿಸುತ್ತಿರುವುದೇಕೆ? ಸ್ವಾಮೀಜಿ ಶಾಕಿಂಗ್​ ಹೇಳಿಕೆ
ವರದಾ-ಬೇಡ್ತಿ ನದಿ ಪ್ರಾಜೆಕ್ಟ್: ಕಾಗೇರಿ-ವೈದ್ಯ ಮಧ್ಯೆ ಟಾಕ್ ವಾರ್
ವರದಾ-ಬೇಡ್ತಿ ನದಿ ಪ್ರಾಜೆಕ್ಟ್: ಕಾಗೇರಿ-ವೈದ್ಯ ಮಧ್ಯೆ ಟಾಕ್ ವಾರ್
ಬೆಂಗಳೂರಿನಲ್ಲಿ ‘ಜನ ನಾಯಗನ್’ ಸ್ವಾಗತಕ್ಕೆ ಹೀಗೆ ಮಾಡಿದ್ದರು ತಯಾರಿ
ಬೆಂಗಳೂರಿನಲ್ಲಿ ‘ಜನ ನಾಯಗನ್’ ಸ್ವಾಗತಕ್ಕೆ ಹೀಗೆ ಮಾಡಿದ್ದರು ತಯಾರಿ
ಸಿಎಂ ಕ್ಷೇತ್ರದಲ್ಲೇ ಹೀಗ್ ಮಾಡಿದ್ರೆ ಹೇಗೆ? ಅಧಿಕಾರಿಗೆ ಯತೀಂದ್ರ ಕ್ಲಾಸ್!
ಸಿಎಂ ಕ್ಷೇತ್ರದಲ್ಲೇ ಹೀಗ್ ಮಾಡಿದ್ರೆ ಹೇಗೆ? ಅಧಿಕಾರಿಗೆ ಯತೀಂದ್ರ ಕ್ಲಾಸ್!