AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಜಹೀರ್ ಇಕ್ಬಾಲ್ ಜತೆ ಮದುವೆ ಆದ ಬಳಿಕ ಸೋನಾಕ್ಷಿ ಯಾಕೆ ಮತಾಂತರ ಆಗಲಿಲ್ಲ? ಕಾರಣ ತಿಳಿಸಿದ ನಟಿ

ಸೋನಾಕ್ಷಿ ಸಿನ್ಹಾ ಮತ್ತು ಜಹೀರ್ ಇಕ್ಬಾಲ್ ಅವರದ್ದು ಅಂತರ್ ಧರ್ಮೀಯ ವಿವಾಹ. ಹಾಗಾಗಿ ಮತಾಂತರದ ಪ್ರಶ್ನೆ ಎದುರಾಗುತ್ತದೆ. ಆದರೆ ಸೋನಾಕ್ಷಿ ಸಿನ್ಹಾ ಅವರು ಮತಾಂತರ ಆಗಿಲ್ಲ. ಅದಕ್ಕೆ ಕಾರಣ ಏನು ಎಂಬುದನ್ನು ಅವರು ಈಗ ತಿಳಿಸಿದ್ದಾರೆ. ತಮ್ಮ ಮದುವೆ ಮತ್ತು ಸಂಸಾರದ ಬಗ್ಗೆ ಅವರು ಕೆಲವು ವಿಷಯಗಳನ್ನು ಹಂಚಿಕೊಂಡಿದ್ದಾರೆ.

ಜಹೀರ್ ಇಕ್ಬಾಲ್ ಜತೆ ಮದುವೆ ಆದ ಬಳಿಕ ಸೋನಾಕ್ಷಿ ಯಾಕೆ ಮತಾಂತರ ಆಗಲಿಲ್ಲ? ಕಾರಣ ತಿಳಿಸಿದ ನಟಿ
Sonakshi Sinha, Zaheer Iqbal
Follow us
ಮದನ್​ ಕುಮಾರ್​
|

Updated on: Feb 27, 2025 | 10:03 PM

ಬಾಲಿವುಡ್ ನಟಿ ಸೋನಾಕ್ಷಿ ಸಿನ್ಹಾ (Sonakshi Sinha)  ಅವರ ಮದುವೆ ಬಗ್ಗೆ ಸಖತ್ ಚರ್ಚೆ ಆಗಿತ್ತು. ಪ್ರಿಯಕರ ಜಹೀರ್ ಇಕ್ಬಾಲ್ ಜೊತೆ ಅವರು ಮದುವೆ ಆಗುತ್ತಾರೆ ಎಂಬುದು ತಿಳಿದ ಬಳಿಕ ಅನೇಕರಿಗೆ ಅಚ್ಚರಿ ಆಗಿತ್ತು. ಯಾಕೆಂದರೆ, ಅವರಿಬ್ಬರದ್ದು ಬೇರೆ ಬೇರೆ ಧರ್ಮ. ಅಲ್ಲದೇ ಈ ಮದುವೆಗೆ ಸೋನಾಕ್ಷಿ ಸಿನ್ಹಾ ತಂದೆ ಶತ್ರುಘ್ನ ಸಿನ್ಹಾ ಒಪ್ಪಿರಲಿಲ್ಲ ಎಂದು ಕೂಡ ಹೇಳಲಾಗಿತ್ತು. ಆದರೆ ಮದುವೆಗೆ ಶತ್ರುಘ್ನ ಸಿನ್ಹಾ ಕೂಡ ಹಾಜರಿ ಹಾಕಿದ್ದರಿಂದ ಎಲ್ಲ ಊಹಾಪೋಹಗಳು ಅಂತ್ಯವಾದವು. ಈಗ ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಸೋನಾಕ್ಷಿ ಸಿನ್ಹಾ ಅವರು ಧರ್ಮದ ವ್ಯತ್ಯಾಸದ ಬಗ್ಗೆ ಮಾತನಾಡಿದ್ದಾರೆ.

ಸೋನಾಕ್ಷಿ ಸಿನ್ಹಾ ಅವರು ಹಿಂದೂ ಧರ್ಮಕ್ಕೆ ಸೇರಿದವರು. ಅವರ ಪತಿ ಜಹೀರ್ ಇಕ್ಬಾಲ್ ಅವರದ್ದು ಮುಸ್ಲಿಂ ಧರ್ಮ. ಹಾಗಿದ್ದರೂ ಕೂಡ ಸೋನಾಕ್ಷಿ ಸಿನ್ಹಾ ಅವರು ಮದುವೆ ನಂತರ ಇಸ್ಲಾಂ ಧರ್ಮಕ್ಕೆ ಮತಾಂತರ ಆಗಿಲ್ಲ. ಅದಕ್ಕೆ ಕಾರಣ ಏನು ಎಂಬುದನ್ನು ಈಗ ಅವರು ವಿವರಿಸಿದ್ದಾರೆ. ‘ಮತಾಂತರದ ಪ್ರಶ್ನೆಯೇ ಬರಲಿಲ್ಲ. ನಾವು ಪರಸ್ಪರ ಪ್ರೀತಿಸುತ್ತೇನೆ. ಅಷ್ಟು ಸಾಕು’ ಎಂದು ಸೋನಾಕ್ಷಿ ಸಿನ್ಹಾ ಹೇಳಿದ್ದಾರೆ.

‘ನಾವು ಧರ್ಮವನ್ನು ನೋಡುತ್ತಲೇ ಇಲ್ಲ. ಪ್ರೀತಿಸುತ್ತಿರುವ ಇಬ್ಬರು ವ್ಯಕ್ತಿಗಳು ಮದುವೆ ಆದೆವು. ಅವರು ತಮ್ಮ ಧರ್ಮವನ್ನು ನನ್ನ ಮೇಲೆ ಹೇರಿಲ್ಲ. ಹಾಗೆಯೇ ನಾನು ನನ್ನ ಧರ್ಮವನ್ನು ಅವರ ಮೇಲೆ ಹೇರಿಲ್ಲ. ನಾವು ಧರ್ಮದ ಬಗ್ಗೆ ಚರ್ಚೆ ಮಾಡುವುದೇ ಇಲ್ಲ. ಇಬ್ಬರೂ ಕುಳಿತುಕೊಂಡು ಅದರ ಬಗ್ಗೆ ಮಾತನಾಡುವುದಿಲ್ಲ’ ಎಂದಿದ್ದಾರೆ ಸೋನಾಕ್ಷಿ ಸಿನ್ಹಾ.

ಇದನ್ನೂ ಓದಿ
Image
ಮುಸ್ಲಿಂ ಹುಡುಗನ ಮದುವೆ ಆದ ಸೋನಾಕ್ಷಿ ಬಗ್ಗೆ ಟೀಕೆ; ಪ್ರತಿಕ್ರಿಯಿಸಿದ ಶತ್ರು
Image
ಖುಷಿಯಿಂದ ನಡೆಯಿತು ಸೋನಾಕ್ಷಿ ಸಿನ್ಹಾ-ಝಹೀರ್ ಇಖ್ಬಾಲ್ ಅಂತರ್​ಧರ್ಮೀಯ ವಿವಾಹ
Image
‘ಆಮಂತ್ರಿಸಿದರೆ ಹೋಗಿ ಆಶೀರ್ವದಿಸುತ್ತೇವೆ’; ಶತ್ರುಘ್ನ ಸಿನ್ಹಾ ಮಾತು
Image
90 ಕೆಜಿ ಇದ್ದ ಸೋನಾಕ್ಷಿ ಸಿನ್ಹಾ; 30 ಕೆಜಿ ದೇಹ ತೂಕ ಇಳಿಸಿಕೊಂಡಿದ್ದು ಹೇಗೆ

ಇದನ್ನೂ ನೋಡಿ: ಪತಿಯ ಜೊತೆ ಹಿಂದೂ ಹಬ್ಬ ಆಚರಿಸಿದ ಸೋನಾಕ್ಷಿ ಸಿನ್ಹಾ

‘ಧರ್ಮದ ಬಗ್ಗೆ ಮಾತನಾಡುವ ಬದಲು ನಾವು ಪರಸ್ಪರರ ಸಂಸ್ಕೃತಿಯನ್ನು ಗೌರವಿಸುತ್ತೇವೆ ಮತ್ತು ಅರ್ಥ ಮಾಡಿಕೊಳ್ಳುತ್ತೇವೆ. ಅವರ ಮನೆಯಲ್ಲಿ ಕೆಲವು ಸಂಪ್ರದಾಯವನ್ನು ಪಾಲಿಸುತ್ತಾರೆ. ನನಗೆ ನನ್ನದೇ ಆದ ಸಂಪ್ರದಾಯಗಳು ಇವೆ. ನಾನು ಅವರ ಸಂಪ್ರದಾಯವನ್ನು ಗೌರವಿಸುತ್ತೇನೆ. ಅವರು ನನ್ನ ಸಂಸ್ಕೃತಿಯನ್ನು ಗೌರವಿಸುತ್ತಾರೆ. ಇದು ಹೀಗೆಯೇ ಇರಬೇಕು’ ಎಂದು ಸೋನಾಕ್ಷಿ ಸಿನ್ಹಾ ಹೇಳಿದ್ದಾರೆ.

ಸೋನಾಕ್ಷಿ ಸಿನ್ಹಾ ಅವರು ಮೊದಲ ಬಾರಿಗೆ ತಮ್ಮ ಪ್ರೀತಿಯ ಬಗ್ಗೆ ತಂದೆ ಶತ್ರುಘ್ನ ಸಿನ್ಹಾ ಜೊತೆ ಹೇಳಿಕೊಂಡಾಗ ಅವರು ಸಮಾಧಾನದಿಂದಲೇ ಪ್ರತಿಕ್ರಿಯಿಸಿದ್ದರಂತೆ. ಮಗಳ ಖುಷಿ ಮುಖ್ಯ ಎಂಬ ಕಾರಣಕ್ಕೆ ಅವರು ಈ ಮದುವೆಗೆ ಒಪ್ಪಿಗೆ ಸೂಚಿಸಿದ್ದರು ಎಂಬುದನ್ನು ಈಗ ಸೋನಾಕ್ಷಿ ವಿವರಿಸಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ದಿನಕ್ಕೆ 10 ಗಂಟೆ ಕೆಲಸದ ಅವಧಿ ಬಗ್ಗೆ ಸಚಿವ ಸಂತೋಷ್ ಲಾಡ್ ಹೇಳಿದ್ದಿಷ್ಟು!
ದಿನಕ್ಕೆ 10 ಗಂಟೆ ಕೆಲಸದ ಅವಧಿ ಬಗ್ಗೆ ಸಚಿವ ಸಂತೋಷ್ ಲಾಡ್ ಹೇಳಿದ್ದಿಷ್ಟು!
ಇಲ್ಲಿಂದ ಮೇಲೆತ್ತಿ ಎಂಬಂತೆ ಅಸಾಹಯಕತೆಯಿಂದ ಜನರತ್ತ ನೋಡುತ್ತಿರುವ ನಾಯಿ
ಇಲ್ಲಿಂದ ಮೇಲೆತ್ತಿ ಎಂಬಂತೆ ಅಸಾಹಯಕತೆಯಿಂದ ಜನರತ್ತ ನೋಡುತ್ತಿರುವ ನಾಯಿ
ಹಿಮಾಚಲ ಪ್ರದೇಶದಲ್ಲಿ ಭಾರೀ ಮಳೆಯಿಂದ ಭೂಕುಸಿತ; ಹಲವು ರಸ್ತೆಗಳು ಬಂದ್
ಹಿಮಾಚಲ ಪ್ರದೇಶದಲ್ಲಿ ಭಾರೀ ಮಳೆಯಿಂದ ಭೂಕುಸಿತ; ಹಲವು ರಸ್ತೆಗಳು ಬಂದ್
ಸೂಲಿಬೆಲೆ ನಮ್ಮ ಸಂಸ್ಕೃತಿ ಮತ್ತು ಇತಿಹಾಸದ ಬಗ್ಗೆ ಮಾತಾಡುತ್ತಾರೆ: ಯತ್ನಾಳ್
ಸೂಲಿಬೆಲೆ ನಮ್ಮ ಸಂಸ್ಕೃತಿ ಮತ್ತು ಇತಿಹಾಸದ ಬಗ್ಗೆ ಮಾತಾಡುತ್ತಾರೆ: ಯತ್ನಾಳ್
ಅಣ್ಣಾವ್ರ ಸಿನಿಮಾದ ಹಾಡು ಹಾಡಿದ ಬಾಲಿವುಡ್ ಸ್ಟಾರ್ ನಟ: ವಿಡಿಯೋ ನೋಡಿ
ಅಣ್ಣಾವ್ರ ಸಿನಿಮಾದ ಹಾಡು ಹಾಡಿದ ಬಾಲಿವುಡ್ ಸ್ಟಾರ್ ನಟ: ವಿಡಿಯೋ ನೋಡಿ
ಮಂದ್ಸೌರ್ ಹೆದ್ದಾರಿಯಲ್ಲಿ ಕಾರನ್ನು 100 ಮೀಟರ್ ದೂರ ಎಳೆದೊಯ್ದ ಟ್ರಕ್
ಮಂದ್ಸೌರ್ ಹೆದ್ದಾರಿಯಲ್ಲಿ ಕಾರನ್ನು 100 ಮೀಟರ್ ದೂರ ಎಳೆದೊಯ್ದ ಟ್ರಕ್
ಮಕ್ಕಳ ಮಾನಸಿಕ, ದೈಹಿಕ ಆರೋಗ್ಯಕ್ಕೆ ಈ ಯೋಗಗಳು ಒಳ್ಳೆಯದು
ಮಕ್ಕಳ ಮಾನಸಿಕ, ದೈಹಿಕ ಆರೋಗ್ಯಕ್ಕೆ ಈ ಯೋಗಗಳು ಒಳ್ಳೆಯದು
ಬಿಜೆಪಿ ಭಿನ್ನರ ಸಭೆಯಲ್ಲಿ ಪ್ರತ್ಯಕ್ಷ: ಕೊನೆಗೂ ಸ್ಪಷ್ಟನೆ ಕೊಟ್ಟ ಸೋಮಣ್ಣ!
ಬಿಜೆಪಿ ಭಿನ್ನರ ಸಭೆಯಲ್ಲಿ ಪ್ರತ್ಯಕ್ಷ: ಕೊನೆಗೂ ಸ್ಪಷ್ಟನೆ ಕೊಟ್ಟ ಸೋಮಣ್ಣ!
ಸಿದ್ದೇಶ್ವರ ಬಂಡಾಯ ಬಿಜೆಪಿ ನಾಯಕರ ಗುಂಪಿನಲ್ಲಿ ಗುರುತಿಸಿಕೊಂಡಿದ್ದಾರೆ!
ಸಿದ್ದೇಶ್ವರ ಬಂಡಾಯ ಬಿಜೆಪಿ ನಾಯಕರ ಗುಂಪಿನಲ್ಲಿ ಗುರುತಿಸಿಕೊಂಡಿದ್ದಾರೆ!
ರಸ್ತೆ ಬದಿ ನಿಂತಿದ್ದ ಆಟೋಗೆ ಅಪ್ಪಳಿಸಿದ ಲಾರಿ ಚಕ್ರಗಳು: ಭಯಾನಕ ದೃಶ್ಯ ಸೆರೆ
ರಸ್ತೆ ಬದಿ ನಿಂತಿದ್ದ ಆಟೋಗೆ ಅಪ್ಪಳಿಸಿದ ಲಾರಿ ಚಕ್ರಗಳು: ಭಯಾನಕ ದೃಶ್ಯ ಸೆರೆ