ಮುಜುಗರ ಆಗುವಂತಹ ಡ್ಯಾನ್ಸ್ ಕಂಡು ತೃಪ್ತಿ ದಿಮ್ರಿ ಅಭಿಮಾನಿಗಳು ಗರಂ

‘ಅನಿಮಲ್’ ಸಿನಿಮಾದಲ್ಲಿ ನಟಿ ತೃಪ್ತಿ ದಿಮ್ರಿ ಅವರು ಬೋಲ್ಡ್​ ಆಗಿ ಕಾಣಿಸಿಕೊಂಡಿದ್ದರು. ಹಾಗಂತ ಅವರು ಅದೇ ರೀತಿಯ ಇಮೇಜ್​ಗೆ ಅಂಟಿಕೊಳ್ಳಬೇಕಾ ಎಂದು ಫ್ಯಾನ್ಸ್​ ಪ್ರಶ್ನೆ ಮಾಡುತ್ತಿದ್ದಾರೆ. ‘ವಿಕ್ಕಿ ವಿದ್ಯಾ ಕಾ ವೋ ವಾಲಾ ವಿಡಿಯೋ’ ಚಿತ್ರದ ಸಾಂಗ್​ನಲ್ಲಿ ತೃಪ್ತಿ ದಿಮ್ರಿ ಡ್ಯಾನ್ಸ್​ ಮಾಡಿದ್ದು ಕಂಡು ಅಭಿಮಾನಿಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಮುಜುಗರ ಆಗುವಂತಹ ಡ್ಯಾನ್ಸ್ ಕಂಡು ತೃಪ್ತಿ ದಿಮ್ರಿ ಅಭಿಮಾನಿಗಳು ಗರಂ
ತೃಪ್ತಿ ದಿಮ್ರಿ

Updated on: Sep 24, 2024 | 10:46 PM

ನಟಿ ತೃಪ್ತಿ ದಿಮ್ರಿ ಅವರಿಗೆ ಸಿಕ್ಕಾಪಟ್ಟೆ ಬೇಡಿಕೆ ಇದೆ. ‘ಅನಿಮಲ್’ ಸಿನಿಮಾ ಸಕ್ಸಸ್ ಆದ ಬಳಿಕ ಅವರು ಅನೇಕ ಸಿನಿಮಾಗಳನ್ನು ಒಪ್ಪಿಕೊಂಡರು. ಈಗ ಅವರು ನಟಿಸಿರುವ ‘ವಿಕ್ಕಿ ವಿದ್ಯಾ ಕಾ ವೋ ವಾಲಾ ವಿಡಿಯೋ’ ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಅಕ್ಟೋಬರ್​ 11ರಂದು ಈ ಸಿನಿಮಾ ತೆರೆಕಾಣಲಿದೆ. ಈಗಾಗಲೇ ಟ್ರೇಲರ್​ ಮತ್ತು ಟೀಸರ್​ ಮೂಲಕ ಸಖತ್​ ಕೌತುಕ ಸೃಷ್ಟಿ ಮಾಡಿದೆ. ಪ್ರಚಾರದ ಸಲುವಾಗಿ ಸಿನಿಮಾ ತಂಡದಿಂದ ಹೊಸ ಸಾಂಗ್​ ಕೂಡ ಬಿಡುಗಡೆ ಆಗಿದೆ. ಆದರೆ ಈ ಹಾಡನ್ನು ನೋಡಿದ ಬಳಿಕ ತೃಪ್ತಿ ದಿಮ್ರಿ ಅವರ ಅಭಿಮಾನಿಗಳು ಬೇಸರ ವ್ಯಕ್ತಪಡಿಸಿದ್ದಾರೆ.

‘ವಿಕ್ಕಿ ವಿದ್ಯಾ ಕಾ ವೋ ವಾಲಾ ವಿಡಿಯೋ’ ಸಿನಿಮಾದಲ್ಲಿ ರಾಜ್​ಕುಮಾರ್​ ರಾವ್ ಮತ್ತು ತೃಪ್ತಿ ದಿಮ್ರಿ ಅವರು ಜೋಡಿಯಾಗಿ ನಟಿಸಿದ್ದಾರೆ. ಈ ಸಿನಿಮಾದ ‘ಮೇರಿ ಮೆಹಬೂಬ್..’ ಹಾಡು ರಿಲೀಸ್​ ಆಗಿದ್ದು, ಅದರಲ್ಲಿ ತೃಪ್ತಿ ದಿಮ್ರಿ ಅವರು ಬಿಂದಾಸ್​ ಆಗಿ ಡ್ಯಾನ್ಸ್​ ಮಾಡಿದ್ದಾರೆ. ಆದರೆ ಇದರಲ್ಲಿನ ಕೆಲವು ಡ್ಯಾನ್ಸ್ ಸ್ಟೆಪ್​ಗಳು ನಟಿಗೆ ಮುಜುಗರ ತರಿಸುವಂತಿವೆ ಎಂಬುದು ಒಂದಷ್ಟು ಅಭಿಮಾನಿಗಳ ಅಭಿಪ್ರಾಯ.

ಇದನ್ನೂ ಓದಿ: ಪ್ರಿಯಕರನ ಜೊತೆ ಡೇಟಿಂಗ್​ ಮಾಡುತ್ತಿರುವ ‘ತೋಬಾ ತೋಬಾ’ ಸುಂದರಿ ತೃಪ್ತಿ ದಿಮ್ರಿ

ಸೋಶಿಯಲ್​ ಮೀಡಿಯಾದಲ್ಲಿ ಈ ಹಾಡಿನ ಸ್ಕ್ರೀನ್​ಶಾಟ್​ ಹಂಚಿಕೊಳ್ಳಲಾಗುತ್ತಿದೆ. ಇಂತಹ ಡ್ಯಾನ್ಸ್ ಸ್ಟೆಪ್ಸ್​ ಅವಶ್ಯಕತೆ ಏನಿತ್ತು ಎಂದು ಹಲವರು ಪ್ರಶ್ನೆ ಮಾಡಿದ್ದಾರೆ. ಇದನ್ನು ನೋಡಲು ಮುಜುಗರ ಆಗುತ್ತಿದೆ ಎಂದು ಕೂಡ ನೆಟ್ಟಿಗರು ಕಮೆಂಟ್​ ಮಾಡಿದ್ದಾರೆ. ತೃಪ್ತಿ ದಿಮ್ರಿ ಅವರು ಇಂಥದ್ದನ್ನು ಒಪ್ಪಿಕೊಳ್ಳಬಾರದಿತ್ತು ಎಂಬ ಅಭಿಪ್ರಾಯ ಕೂಡ ಅಭಿಮಾನಿಗಳಿಂದ ವ್ಯಕ್ತವಾಗಿದೆ.

ಈ ಹಾಡಿಗೆ ಬಾಲಿವುಡ್​ನ ಖ್ಯಾತ ಕೋರಿಯೋಗ್ರಾಫರ್​ ಗಣೇಶ್ ಆಚಾರ್ಯ ಅವರು ನೃತ್ಯ ನಿರ್ದೇಶನ ಮಾಡಿದ್ದಾರೆ. ಅವರು ಈ ಟೀಕೆಗೆ ಯಾವ ರೀತಿ ಉತ್ತರ ನೀಡುತ್ತಾರೆ ಎಂಬುದನ್ನು ಕಾದು ನೋಡಬೇಕು.

Mere Mehboob | Vicky Vidya Ka Woh Wala Video | Rajkummar | Triptii Dimri |Sachin-Jigar,Shilpa,Sachet

ಈ ವರ್ಷ ತೃಪ್ತಿ ದಿಮ್ರಿ ನಟನೆಯ ‘ಬ್ಯಾಡ್​ ನ್ಯೂಸ್​’ ಸಿನಿಮಾ ಬಿಡುಗಡೆ ಆಯಿತು. ಅದರಲ್ಲಿನ ‘ತೋಬಾ ತೋಬಾ..’ ಹಾಡು ಸಿಕ್ಕಾಪಟ್ಟೆ ಫೇಮಸ್​ ಆಗಿತ್ತು. ಅದೇ ರೀತಿ ‘ವಿಕ್ಕಿ ವಿದ್ಯಾ ಕಾ ವೋ ವಾಲಾ ವಿಡಿಯೋ’ ಸಿನಿಮಾದ ‘ಮೇರಿ ಮೆಹಬೂಬ್..’ ಸಾಂಗ್​ ಕೂಡ ಹಿಟ್​ ಆಗಬಹುದು ಎಂದುಕೊಂಡಿದ್ದ ಚಿತ್ರತಂಡಕ್ಕೆ ಟೀಕೆ ಎದುರಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಮದನ್​ ಕುಮಾರ್​

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Loading...
Unable to load recommendations.
Follow Us