AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನೇಪಾಳದಲ್ಲಿ ಹಿಂದಿ ಸಿನಿಮಾ ‘ಉಡ್ತಾ ತೀರ್’ ಮೇಲೆ ನಿಷೇಧ: ಕಾರಣವೇನು?

ಆಸ್ಕರ್ ವಿಜೇತ ನಿರ್ಮಾಪಕಿ ಗುನೀತ್ ಮೊಂಗ ನಿರ್ಮಾಣ ಮಾಡಿರುವ ಈ ಸಿನಿಮಾ ಟ್ರೈಲರ್ ಮೂಲಕ ಸಾಕಷ್ಟು ಗಮನ ಸೆಳೆದಿದೆ. ಆದರೆ ಈ ಸಿನಿಮಾ ರಿಲೀಸ್ ಆಗುವ ಮುಂಚೆಯೇ ನೆರೆಯ ನೇಪಾಳದಲ್ಲಿ ಸಿನಿಮಾದ ಮೇಲೆ ನಿಷೇಧ ಹೇರಲಾಗಿದೆ. ಹಾಸ್ಯ ಪ್ರಧಾನವಾದ ಈ ಸಿನಿಮಾನಲ್ಲಿ ನಿಷೇಧ ಹೇರುವಂಥಹದ್ದು ಏನಿದೆ? ಸಿನಿಮಾದ ನಿಷೇಧಕ್ಕೆ ಕಾರಣವೇನು? ಮಾಹಿತಿ ಇಲ್ಲಿದೆ...

ನೇಪಾಳದಲ್ಲಿ ಹಿಂದಿ ಸಿನಿಮಾ ‘ಉಡ್ತಾ ತೀರ್’ ಮೇಲೆ ನಿಷೇಧ: ಕಾರಣವೇನು?
Udta Teer
ಮಂಜುನಾಥ ಸಿ.
|

Updated on: Oct 20, 2026 | 1:28 PM

Share

ಮುಖ್ಯಾಂಶಗಳು

  • ಹಿಂದಿ ಸಿನಿಮಾಕ್ಕೆ ನೇಪಾಳದಲ್ಲಿ ನಿಷೇಧ
  • ‘ಉಡ್ತಾ ತೀರ್’ ಸಿನಿಮಾ ಮೇಲೆ ನಿಷೇಧ ಹೇರಿದ ನೇಪಾಳ
  • ಪಾಕಿಸ್ತಾನದ ಕತೆ ಇರುವ ಕಾರಣ ಸಿನಿಮಾಕ್ಕೆ ನಿಷೇಧ

ನಟರಾದ ಆಯುಷ್ಮಾನ್ ಖುರಾನಾ ಮತ್ತು ಸಾರಾ ಅಲಿ ಖಾನ್ ಅವರ ಮುಂಬರುವ ‘ಉಡ್ತಾ ತೀರ್’ ಸಿನಿಮಾ ಅಕ್ಟೋಬರ್ 23ರಂದು ಬಿಡುಗಡೆ ಆಗಲಿದೆ. ಆಸ್ಕರ್ ವಿಜೇತ ನಿರ್ಮಾಪಕಿ ಗುನೀತ್ ಮೊಂಗ ನಿರ್ಮಾಣ ಮಾಡಿರುವ ಈ ಸಿನಿಮಾ ಟ್ರೈಲರ್ ಮೂಲಕ ಸಾಕಷ್ಟು ಗಮನ ಸೆಳೆದಿದೆ. ಆದರೆ ಈ ಸಿನಿಮಾ ರಿಲೀಸ್ ಆಗುವ ಮುಂಚೆಯೇ ನೆರೆಯ ನೇಪಾಳದಲ್ಲಿ ಸಿನಿಮಾದ ಮೇಲೆ ನಿಷೇಧ ಹೇರಲಾಗಿದೆ. ಹಾಸ್ಯ ಪ್ರಧಾನವಾದ ಈ ಸಿನಿಮಾನಲ್ಲಿ ನಿಷೇಧ ಹೇರುವಂಥಹದ್ದು ಏನಿದೆ? ಸಿನಿಮಾದ ನಿಷೇಧಕ್ಕೆ ಕಾರಣವೇನು? ಮಾಹಿತಿ ಇಲ್ಲಿದೆ…

ಹಿಂದಿ ಸಿನಿಮಾಗಳಿಗೆ ನೇಪಾಳದಲ್ಲಿ ಒಳ್ಳೆಯ ಮಾರುಕಟ್ಟೆ ಇದೆ. ಭಾರತದ ವಿಶೇಷವಾಗಿ ಬಾಲಿವುಡ್​​ನ ಹಲವಾರು ಸಿನಿಮಾಗಳು ಅಲ್ಲಿ ಬಿಡುಗಡೆ ಆಗುತ್ತವೆ. ಆದರೆ ಇದೀಗ ಬಾಲಿವುಡ್​​ನ ಹಾಸ್ಯಪ್ರಧಾನ ಸಿನಿಮಾ ‘ಉಡ್ತಾ ತೀರ್’ ಸಿನಿಮಾಕ್ಕೆ ನೇಪಾಳದಲ್ಲಿ ಸಾರ್ವಜನಿಕ ಪ್ರದರ್ಶನಕ್ಕೆ ಅನುಮತಿ ನಿರಾಕರಿಸಲಾಗಿದೆ. ನೇಪಾಳದ ಸೆಂಟ್ರಲ್ ಫಿಲ್ಮ್ ಸೆನ್ಸಾರ್ ಬೋರ್ಡ್ ಚಲನಚಿತ್ರದ ವಿಷಯವು ದೇಶದ ಸಿನಿಮಾ ಕಾನೂನಿನಲ್ಲಿ ನಿರ್ದಿಷ್ಟಪಡಿಸಿದ ನಿಬಂಧನೆಗಳ ಅಡಿಯಲ್ಲಿ ಬರುತ್ತದೆ ಎಂದು ಕಾರಣ ನೀಡಿ ಈ ನಿರ್ಬಂಧ ಹೇರಿದ್ದಾರೆ.

ನೇಪಾಳದ ಸಂವಹನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯವು ಹೊರಡಿಸಿದ ಅಧಿಕೃತ ಪತ್ರದ ಪ್ರಕಾರ, ರಾಷ್ಟ್ರೀಯ ಸಿನಿಮಾ ಕಾಯ್ದೆ, 2026 ರ ಸೆಕ್ಷನ್ 8(3) ರ ಅಡಿಯಲ್ಲಿ ಚಿತ್ರವನ್ನು ಸಾರ್ವಜನಿಕವಾಗಿ ಪ್ರದರ್ಶಿಸಲು ಸಾಧ್ಯವಿಲ್ಲ ಎಂದು ತಿಳಿಸಲಾಗಿದೆ. ಚಲನಚಿತ್ರ ಸೆನ್ಸಾರ್ ಮಂಡಳಿಯು ಚಲನಚಿತ್ರವನ್ನು ಪರಿಶೀಲಿಸಿದೆ ಎಂದು ಪತ್ರದಲ್ಲಿ ತಿಳಿಸಲಾಗಿದೆ. ಇದರ ವಿಷಯವು ಕಾನೂನಿನಿಂದ ನಿರ್ಬಂಧಿಸಲ್ಪಟ್ಟ ವರ್ಗದ ಅಡಿಯಲ್ಲಿ ಬರುತ್ತದೆ ಎಂದು ಮಂಡಳಿಯು ಕಂಡುಕೊಂಡಿದೆ ಮತ್ತು ಆದ್ದರಿಂದ ಸಾರ್ವಜನಿಕ ಪ್ರದರ್ಶನಕ್ಕೆ ಅನುಮತಿ ನೀಡದಿರಲು ನಿರ್ಧರಿಸಿದೆ.

ಇದನ್ನೂ ಓದಿ:ಥಿಯೇಟರ್​​ನಲ್ಲಿ ರಿಲೀಸ್ ಆದ ತಿಂಗಳೊಳಗೆ ಒಟಿಟಿಗೆ ಕಾಲಿಟ್ಟ ‘ಪ್ಯಾರಡೈಸ್’ ಸಿನಿಮಾ

‘ಉಡ್ತಾ ತೀರ್’ ಸಿನಿಮಾ ಒಂದು ಹಾಸ್ಯ ಪ್ರಧಾನ ಸಿನಿಮಾ ಆಗಿದೆ. ಸಿನಿಮಾನಲ್ಲಿ ನಾಯಕ ಆಯುಷ್ಮಾನ್ ಖುರಾನಾ ಪಾಕಿಸ್ತಾನದಿಂದ ಭಾರತಕ್ಕೆ ಬಂದ ಗೂಢಚಾರಿಯ ಪಾತ್ರದಲ್ಲಿ ನಟಿಸಿದ್ದಾರೆ. ಹೀಗೆ ಭಾರತಕ್ಕೆ ಬರುವ ಗೂಢಚಾರಿ ಇಲ್ಲಿ ಬಂದು ಅಪಘಾತವೊಂದರಲ್ಲಿ ತನ್ನ ನೆನಪು ಕಳೆದುಕೊಳ್ಳುತ್ತಾನೆ. ತನ್ನದು ಭಾರತವೋ, ಪಾಕಿಸ್ತಾನವೋ ಎಂಬುದನ್ನು ಮರೆತು ಹೋಗುತ್ತಾನೆ. ಇದು ಸಿನಿಮಾದ ಕತೆ. ಸಿನಿಮಾ ಸಾಕಷ್ಟು ಹಾಸ್ಯಮಯ ದೃಶ್ಯಗಳನ್ನು ಒಳಗೊಂಡಿದೆ.

ಆದರೆ ನೇಪಾಳದ ಮಾಹಿತಿ ಮತ್ತು ಪ್ರಸಾರ ಇಲಾಖೆ ಹೇಳಿರುವಂತೆ, ಈ ಸಿನಿಮಾವು ಭಾರತ ಮತ್ತು ಪಾಕಿಸ್ತಾನದ ನಡುವಿರುವ ಉದ್ವಿಗ್ನತೆಯ ವಿಷಯವನ್ನು ಒಳಗೊಂಡಿದೆ. ಈ ಸಿನಿಮಾವು ನೇಪಾಳದ ರಾಷ್ಟ್ರೀಯ ಹಿತಾಸಕ್ತಿಗಳ ಮೇಲೆ ಪರಿಣಾಮ ಬೀರುತ್ತದೆ ಹಾಗಾಗಿ ಸಿನಿಮಾ ನಿರ್ಬಂಧಿಸಲಾಗಿದೆ. ಅಂದಹಾಗೆ ಇಲ್ಲಿ ಗಮನಿಸಬೇಕಾದ ಅಂಶವೆಂದರೆ ಇದೇ ನೇಪಾಳದಲ್ಲಿ ‘ಧುರಂಧರ್’ ಹಾಗೂ ‘ಧುರಂಧರ್ 2’ ಎರಡೂ ಸಿನಿಮಾಗಳು ಬಿಡುಗಡೆ ಆಗಿದ್ದವು.

ಆಯುಷ್ಮಾನ್ ಖುರಾನಾ, ಸಾರಾ ಅಲಿ ಖಾನ್ ನಟಿಸಿರುವ ‘ಉಡ್ತಾ ತೀರ್’ ಸಿನಿಮಾ ಅಕ್ಟೋಬರ್ 23ಕ್ಕೆ ಬಿಡುಗಡೆ ಆಗಲಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
ಮಂಜುನಾಥ ಸಿ.
ಮಂಜುನಾಥ ಸಿ.

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More
ತುಮಕೂರು ದಸರಾ: ಚಾಮುಂಡೇಶ್ವರಿಗೆ ಪೂಜೆ ಸಲ್ಲಿಸಿದ ಡಿಸಿಎಂ ಪರಮೇಶ್ವರ್
ತುಮಕೂರು ದಸರಾ: ಚಾಮುಂಡೇಶ್ವರಿಗೆ ಪೂಜೆ ಸಲ್ಲಿಸಿದ ಡಿಸಿಎಂ ಪರಮೇಶ್ವರ್
ದಸರಾ ಆನೆಗಳ ಗುಣ, ಸ್ವಭಾವದ ಬಗ್ಗೆ ಸಿಬ್ಬಂದಿ ಹೇಳಿದ ಮಾತುಗಳನ್ನು ಕೇಳಿ!
ದಸರಾ ಆನೆಗಳ ಗುಣ, ಸ್ವಭಾವದ ಬಗ್ಗೆ ಸಿಬ್ಬಂದಿ ಹೇಳಿದ ಮಾತುಗಳನ್ನು ಕೇಳಿ!
ಭೂಗತ ಪಾತಕಿ ಹೇಮಂತ್ ಪೂಜಾರಿ ಹೆಸರಲ್ಲಿ ಕರಾವಳಿ ಉದ್ಯಮಿಗಳಿಗೆ ಬೆದರಿಕೆ ಕರೆ!
ಭೂಗತ ಪಾತಕಿ ಹೇಮಂತ್ ಪೂಜಾರಿ ಹೆಸರಲ್ಲಿ ಕರಾವಳಿ ಉದ್ಯಮಿಗಳಿಗೆ ಬೆದರಿಕೆ ಕರೆ!
ಮೈಸೂರು ದಸರಾ: ಅರಮನೆಯಲ್ಲಿ ಯದುವೀರ್ ನೇತೃತ್ವದಲ್ಲಿ ಅದ್ದೂರಿ ಆಯುಧ ಪೂಜೆ
ಮೈಸೂರು ದಸರಾ: ಅರಮನೆಯಲ್ಲಿ ಯದುವೀರ್ ನೇತೃತ್ವದಲ್ಲಿ ಅದ್ದೂರಿ ಆಯುಧ ಪೂಜೆ
ರಾಜ್ಯ ಬಿಜೆಪಿ ಕಚೇರಿಯಲ್ಲಿ ಆಯುಧ ಪೂಜೆ ಸಂಭ್ರಮದ ಆಚರಣೆ
ರಾಜ್ಯ ಬಿಜೆಪಿ ಕಚೇರಿಯಲ್ಲಿ ಆಯುಧ ಪೂಜೆ ಸಂಭ್ರಮದ ಆಚರಣೆ
ಆಯುಧ ಪೂಜೆ ಸಂಭ್ರಮ:ದೊಡ್ಡ ಗಣಪತಿ ಮತ್ತು ಸರ್ಕಲ್ ಮಾರಮ್ಮ ದೇಗುಲಗಳಲ್ಲಿ ಪೂಜೆ
ಆಯುಧ ಪೂಜೆ ಸಂಭ್ರಮ:ದೊಡ್ಡ ಗಣಪತಿ ಮತ್ತು ಸರ್ಕಲ್ ಮಾರಮ್ಮ ದೇಗುಲಗಳಲ್ಲಿ ಪೂಜೆ
ಆರ್‌ಎಸ್‌ಎಸ್ ವಿಜಯದಶಮಿ ಉತ್ಸವದಲ್ಲಿ ಮೋಹನ್ ಭಾಗವತ್ ಮಾತು
ಆರ್‌ಎಸ್‌ಎಸ್ ವಿಜಯದಶಮಿ ಉತ್ಸವದಲ್ಲಿ ಮೋಹನ್ ಭಾಗವತ್ ಮಾತು
ವೇದಿಕೆ ಮೇಲೆ ರಚಿತಾ ರಾಮ್ ಅವರನ್ನು ಎಳೆದಾಡಿದ ಅಭಿಮಾನಿ: ವಿಡಿಯೋ
ವೇದಿಕೆ ಮೇಲೆ ರಚಿತಾ ರಾಮ್ ಅವರನ್ನು ಎಳೆದಾಡಿದ ಅಭಿಮಾನಿ: ವಿಡಿಯೋ
ಬೆಂಗಳೂರು: ಶಾಂತಿನಗರದಲ್ಲಿ ಮೂರು ದಿನಗಳ ದುರ್ಗಾದೇವಿ ಉತ್ಸವ
ಬೆಂಗಳೂರು: ಶಾಂತಿನಗರದಲ್ಲಿ ಮೂರು ದಿನಗಳ ದುರ್ಗಾದೇವಿ ಉತ್ಸವ
ಹಬ್ಬ ಹಿನ್ನೆಲೆ ಕೆ. ಆರ್ ಮಾರ್ಕೆಟ್​ನಲ್ಲಿ ಖರೀದಿ ಭರಾಟೆ ಜೋರು!
ಹಬ್ಬ ಹಿನ್ನೆಲೆ ಕೆ. ಆರ್ ಮಾರ್ಕೆಟ್​ನಲ್ಲಿ ಖರೀದಿ ಭರಾಟೆ ಜೋರು!