ನಟಿ ಉರ್ಫಿ ಜಾವೇದ್ (Urfi Javed) ಅವರಿಗೆ ಕೆಲವರು ಕೊಲೆ ಮತ್ತು ರೇಪ್ ಬೆದರಿಕೆ ಹಾಕಿದ್ದಾರೆ. ಅದಕ್ಕೆ ಕಾರಣ ಆಗಿರುವುದು ಒಂದು ಡ್ರೆಸ್. ಹೌದು, ಉರ್ಫಿ ಜಾವೇದ್ ಅವರು ಇತ್ತೀಚೆಗೆ ಹಾಲೋವೀನ್ ಪ್ರಯುಕ್ತ ವಿಶೇಷವಾದ ಕಾಸ್ಟ್ಯೂಮ್ ಧರಿಸಿದ್ದರು. ‘ಭೂಲ್ ಭುಲಯ್ಯ’ ಸಿನಿಮಾದಲ್ಲಿ ರಾಜ್ಪಾಲ್ ಯಾದವ್ (Rajpal Yadav) ಅವರು ಮಾಡಿದ್ದ ಚೋಟಾ ಪಂಡಿತ್ ಎಂಬ ಪಾತ್ರದ ರೀತಿಯಲ್ಲಿ ಉರ್ಫಿ ವೇಷ ಹಾಕಿಕೊಂಡಿದ್ದರು. ಆ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಕೆಲವರಿಗೆ ಈ ಗೆಟಪ್ ಕಿಂಚಿತ್ತೂ ಇಷ್ಟ ಆಗಿಲ್ಲ. ಹಾಗಾಗಿ ಸಖತ್ ಟ್ರೋಲ್ ಮಾಡಲಾಗಿದೆ. ಬರೀ ಟ್ರೋಲ್ ಆಗಿದ್ದರೆ ಉರ್ಫಿ ತಲೆ ಕೆಡಿಸಿಕೊಳ್ಳುತ್ತಿರಲಿಲ್ಲ. ಆದರೆ ಅವರಿಗೆ ಈಗ ರೇಪ್ ಮತ್ತು ಕೊಲೆ ಬೆದರಿಕೆ (Death Threat) ಹಾಕಲಾಗಿದೆ. ಈ ಬಗ್ಗೆ ಸ್ವತಃ ಉರ್ಫಿ ಜಾವೇದ್ ಮಾಹಿತಿ ಹಂಚಿಕೊಂಡಿದ್ದಾರೆ.
ಉರ್ಫಿ ಜಾವೇದ್ ಅವರು ಇನ್ಸ್ಟಾಗ್ರಾಮ್ನಲ್ಲಿ ಈ ಬಗ್ಗೆ ಬರೆದುಕೊಂಡಿದ್ದಾರೆ. ‘ರಾಜ್ಪಾಲ್ ಯಾದವ್ ಈ ಡ್ರೆಸ್ ಹಾಕಿದ್ದಾಗ ಯಾರಿಗೂ ತೊಂದರೆ ಆಗಿರಲಿಲ್ಲ. ಆದರೆ ನಾನು ಈ ಡ್ರೆಸ್ ಹಾಕಿದಾಗ ಎಲ್ಲರಿಗೂ ನನ್ನಿಂದ ತೊಂದರೆ ಆಯಿತು. ಕಾರಣವೇ ಇಲ್ಲದೇ ನನಗೆ ಅನೇಕರಿಂದ ರೇಪ್ ಮತ್ತು ಕೊಲೆ ಬೆದರಿಗೆ ಬಂದಿದೆ. ಭೂಲ್ ಭುಲಯ್ಯ ಸಿನಿಮಾ ಬಿಡುಗಡೆ ಆಗಿ 10 ವರ್ಷ ಕಳೆದಿದೆ. ಈಗ ನಾನು ಈ ಬಟ್ಟೆ ಧರಿಸಿದಾಗ ಧರ್ಮ ರಕ್ಷಕರು ಎನಿಸಿಕೊಂಡವರಿಗೆ ಸಡನ್ ಆಗಿ ಎಚ್ಚರವಾಗಿದೆ. ಯಾವುದೇ ಬಣ್ಣ, ಅಗರ್ಬತ್ತಿ, ಹೂವು ಇವುಗಳು ಯಾವುದೇ ಧರ್ಮಕ್ಕೆ ಸೀಮಿತವಲ್ಲ’ ಎಂದು ಉರ್ಫಿ ಜಾವೇದ್ ಬರೆದುಕೊಂಡಿದ್ದಾರೆ.
ಇದನ್ನೂ ಓದಿ: ಉರ್ಫಿ ಜಾವೇದ್ ಹಾಲೋವೀನ್ ಅವತಾರ; ಎಲ್ಲ ದಿನವೂ ಡಿಫರೆಂಟ್ ವೇಷ
ಈ ಪೋಸ್ಟ್ಗೆ ದಿವ್ಯಾ ಅಗರ್ವಾಲ್ ಅವರು ಪ್ರತಿಕ್ರಿಯೆ ನೀಡಿದ್ದಾರೆ. ‘ಹುಚ್ಚರು ಅವರು. ನನಗೂ ಬೆದರಿಕೆ ಬಂದಿತ್ತು’ ಎಂದು ಅವರು ಹೇಳಿದ್ದಾರೆ. ಉರ್ಫಿ ಅವರು ಈ ರೀತಿ ಬಟ್ಟೆ ಧರಿಸಿದ್ದಕ್ಕೆ ಕೆಲವರ ಬೆಂಬಲ ಸೂಚಿಸಿದ್ದಾರೆ ಕೂಡ. ‘ನಿಮಗೆ ಪ್ರಬುದ್ಧತೆ ಬಂದಾಗ ಉರ್ಫಿ ಅವರೇ ಸರಿ ಎನಿಸತ್ತದೆ’ ಎಂದು ನೆಟ್ಟಿಗರೊಬ್ಬರು ಕಮೆಂಟ್ ಮಾಡಿದ್ದಾರೆ. ಒಟ್ಟಿನಲ್ಲಿ ಈ ವಿಚಾರವಾಗಿ ಸೋಶಿಯಲ್ ಮೀಡಿಯಾದಲ್ಲಿ ಪರ-ವಿರೋಧದ ಚರ್ಚೆ ನಡೆಯುತ್ತಿದೆ. ಕೆಲವರು ಎಂದಿನಂತೆ ಉರ್ಫಿಯನ್ನು ಟ್ರೋಲ್ ಮಾಡುವುದನ್ನು ಮುಂದುವರಿಸಿದ್ದಾರೆ.
I’m just shocked and appalled by this country mahn , I’m getting death threats in recreating a character from a movie where as that character didn’t get any backlash :/ pic.twitter.com/pOl9FvTYzT
— Uorfi (@uorfi_) October 30, 2023
ತಮಗೆ ಬಂದ ಕೊಲೆ ಬೆದರಿಕೆ ಸಂದೇಶದ ಸ್ಕ್ರೀನ್ ಶಾಟ್ಗಳನ್ನು ಉರ್ಫಿ ಜಾವೇದ್ ಅವರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಅಂದಹಾಗೆ, ಅವರಿಗೆ ಈ ರೀತಿ ಬೆದರಿಕೆ ಬಂದಿರುವುದು ಇದೇ ಮೊದಲೇನೂ ಅಲ್ಲ. ಈ ಹಿಂದೆ ಕೂಡ ಅವರು ಬೋಲ್ಡ್ ಆಗಿ ಕಾಣಿಸಿಕೊಂಡಿದ್ದಕ್ಕೆ ಅನೇಕರು ಬೆದರಿಕೆ ಹಾಕಿದ್ದರು. ಅಲ್ಲದೇ ಉರ್ಫಿ ಮೇಲೆ ಎಫ್ಐಆರ್ ಕೂಡ ದಾಖಲಿಸಲಾಗಿತ್ತು. ಪ್ರತಿ ದಿನವೂ ವಿಚಿತ್ರ ಎನಿಸುವಂತಹ ಬಟ್ಟೆಗಳನ್ನು ಧರಿಸಿ ಉರ್ಫಿ ಪೋಸ್ ನೀಡುತ್ತಾರೆ. ಇದೇ ಅವರಿಗೆ ಫುಲ್ಟೈಮ್ ಕಾಯಕ ಆಗಿದೆ. ಇದರಿಂದ ಹತ್ತು ಹಲವು ಕಿರಿಕ್ ಕೂಡ ಎದುರಾಗುತ್ತಿದೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.