ತುಟಿ ಸೌಂದರ್ಯ ಹೆಚ್ಚಿಸಿಕೊಳ್ಳಲು ಹೋಗಿ ಇಂಥ ಸ್ಥಿತಿಗೆ ಬಂದ ಉರ್ಫಿ ಜಾವೇದ್

ವೈರಲ್ ಹುಡುಗಿ ಉರ್ಫಿ ಜಾವೇದ್ ಅವರಿಗೆ ಈ ಗತಿ ಬಂದಿದೆ. ಏನೋ ಮಾಡಲು ಹೋಗಿ ಇನ್ನೇನೋ ಆಗಿದೆ. ಸೋಶಿಯಲ್ ಮೀಡಿಯಾದಲ್ಲಿ ಉರ್ಫಿ ಜಾವೇದ್ ಅವರ ವಿಡಿಯೋ ವೈರಲ್ ಆಗಿದೆ. ಸೌಂದರ್ಯ ಹೆಚ್ಚಿಸಿಕೊಳ್ಳಬೇಕು ಎಂಬ ಆಸೆಯಲ್ಲಿ ಇದ್ದ ಉರ್ಫಿ ಜಾವೇದ್ ಅವರು ಈ ರೀತಿ ಕಷ್ಟಪಡುವಂತಾಗಿದೆ.

ತುಟಿ ಸೌಂದರ್ಯ ಹೆಚ್ಚಿಸಿಕೊಳ್ಳಲು ಹೋಗಿ ಇಂಥ ಸ್ಥಿತಿಗೆ ಬಂದ ಉರ್ಫಿ ಜಾವೇದ್
Urfi Javed

Updated on: Jul 21, 2025 | 10:41 PM

ಸೋಶಿಯಲ್ ಮೀಡಿಯಾದಲ್ಲಿ ಸೆನ್ಸೇಷನ್ ಸೃಷ್ಟಿ ಮಾಡುವ ಉರ್ಫಿ ಜಾವೇದ್ (Urfi Javed) ಅವರು ಒಂದು ವಿಚಿತ್ರ ಕಾರಣದಿಂದ ಈಗ ಸುದ್ದಿ ಆಗಿದ್ದಾರೆ. ಯಾವಾಗಲೂ ಅವರ ಡಿಫರೆಂಟ್ ಬಟ್ಟೆಯ ವಿಡಿಯೋಗಳು ವೈರಲ್ ಆಗುತ್ತಿದ್ದವು. ಆದರೆ ಈಗ ಅವರ ವಿಕಾರವಾದ ಮುಖದ ವಿಡಿಯೋ (Urfi Javed Video) ವೈರಲ್ ಆಗಿದೆ. ಹಾಗಂತ ಇದು ಯಾರೋ ಹರಿಬಿಟ್ಟಿರುವ ವಿಡಿಯೋ ಅಲ್ಲ. ಬದಲಿಗೆ, ಸ್ವತಃ ಉರ್ಫಿ ಜಾವೇದ್ ಅವರೇ ಈ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ತಮ್ಮ ತುಟಿಯ ಸೌಂದರ್ಯವನ್ನು ಹೆಚ್ಚಿಸಿಕೊಳ್ಳಲು ಹೋಗಿ ಸಂಕಷ್ಟಕ್ಕೆ ಸಿಲುಕಿಕೊಂಡ ವಿಷಯವನ್ನು ಅವರು ಈ ಮೂಲಕ ಬಹಿರಂಗಪಡಿಸಿದ್ದಾರೆ.

ತುಟಿ ಚೆನ್ನಾಗಿ ಕಾಣಬೇಕು ಎಂದು ಉರ್ಫಿ ಜಾವೇದ್ ಅವರು ಫಿಲ್ಲರ್ ಮಾಡಿಸಿಕೊಂಡಿದ್ದರು. ಆದರೆ ಅವರು ಅಂದುಕೊಂಡಿದ್ದು ಒಂದು, ಆಗಿದ್ದೇ ಮತ್ತೊಂದು. ತುಟಿಗಳ ಅಂದ ಹೆಚ್ಚುವ ಬದಲು ಸಿಕ್ಕಪಟ್ಟೆ ವಿಕಾರ ಆಯಿತು. ಇದ್ದಕ್ಕಿದ್ದಂತೆ ತುಟಿಗಳು ಊದಿಕೊಂಡವು. ಆ ಯಾತನೆ ಹೇಗಿತ್ತು ಎಂಬುದನ್ನು ತಿಳಿಸಲು ಉರ್ಫಿ ಜಾವೇದ್ ಅವರು ಈ ವಿಡಿಯೋವನ್ನು ಪೋಸ್ಟ್ ಮಾಡಿದ್ದಾರೆ.

ಇದನ್ನೂ ಓದಿ
ಅರ್ಧ ಬಟ್ಟೆ ಹಾಕುವ ಖುಷಿ ಮುಖರ್ಜಿಯ ಉಡುಗೆ ಬಗ್ಗೆ ಟೀಕೆ ಮಾಡಿದ ಉರ್ಫಿ ಜಾವೇದ
ಗುಟ್ಟಾಗಿ ನಿಶ್ಚಿತಾರ್ಥ ಮಾಡಿಕೊಂಡ ಉರ್ಫಿ ಜಾವೇದ್? ಲೀಕ್ ಆಯ್ತು ಫೋಟೋ
ನಡೆಯಲೂ ಆಗದಷ್ಟು ಕುಡಿದ ಉರ್ಫಿ ಜಾವೇದ್; ವೈರಲ್ ವಿಡಿಯೋದ ಅಸಲಿಯತ್ತು ಏನು?
Urfi Javed: ಮಾದಕವಾಗಿ ಸೀರೆ ಧರಿಸಿ ಉಯ್ಯಾಲೆಯಿಂದ ಬಿದ್ದ ಉರ್ಫಿ ಜಾವೇದ್​; ಕಾಪಾಡಲು ಬಂದಿದ್ದು 9 ಪುರುಷರು

ಆದ ಅನಾಹುತದಿಂದ ಪರಿಹಾರ ಪಡೆಯಲು ಉರ್ಫಿ ಜಾವೇದ್ ಅವರು ಫಿಲ್ಲರ್ ತೆಗೆಸಿದ್ದಾರೆ. ಆ ಪ್ರಕ್ರಿಯೆ ಕೂಡ ಅವರಿಗೆ ನೋವು ತಂದಿತು. ಒಟ್ಟಿನಲ್ಲಿ ಅವರಿಗೆ ಫಿಲ್ಲರ್ ಕಾರಣದಿಂದ ಇಷ್ಟೆಲ್ಲ ತೊಂದರೆ ಆಗಿದೆ. ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ಈ ವಿಡಿಯೋವನ್ನು ಕಂಡು ಜನರಿಗೆ ಶಾಕ್ ಆಗಿದೆ. ‘ಇಂಥ ವಿಡಿಯೋ ಪೋಸ್ಟ್ ಮಾಡಲು ಕೂಡ ಧೈರ್ಯ ಬೇಕು’ ಎಂದು ಅಭಿಮಾನಿಗಳು ಕಮೆಂಟ್ ಮಾಡಿದ್ದಾರೆ.

ಉರ್ಫಿ ಜಾವೇದ್ ವೈರಲ್ ವಿಡಿಯೋ:

ಹಾಗಂತ ಉರ್ಫಿ ಜಾವೇದ್ ಅವರು ಮತ್ತೆ ಫಿಲ್ಲರ್​ ಸಹವಾಸಕ್ಕೆ ಹೋಗುವುದಿಲ್ಲ ಅಂತೇನೂ ಇಲ್ಲ. ಕೆಲವು ದಿನಗಳ ಬಳಿಕ ಅವರು ಮತ್ತೆ ತುಟಿಗಳಿಗೆ ಫಿಲ್ಲರ್ ಮಾಡಿಸಲಿದ್ದಾರೆ. ಆದರೆ ನ್ಯಾಚುರಲ್ ಆಗಿ ಮಾಡಿಸುವುದಾಗಿ ಅವರು ಹೇಳಿದ್ದಾರೆ. ಅಂತಿಮವಾಗಿ ತಮ್ಮ ತುಟಿಗಳಿಗೆ ಯಾವ ಸ್ಥಿತಿ ಬಂದಿದೆ ಎಂಬುದನ್ನು ಶೀಘ್ರವೇ ತಿಳಿಸುವುದಾಗಿ ಅವರು ಹೇಳಿದ್ದಾರೆ.

ಇದನ್ನೂ ಓದಿ: ಡ್ರೆಸ್ ಹಾಕಿಕೊಳ್ಳಲು ಉರ್ಫಿ ಜಾವೇದ್ ಪಟ್ಟ ಕಷ್ಟ ಅಷ್ಟಿಷ್ಟಲ್ಲ

ಸೌಂದರ್ಯ ವರ್ಧಿಸಲು ಹಲವು ದಾರಿಗಳಿವೆ. ಆದರೆ ಸರಿಯಾದ ತಜ್ಞರು ಮಾತ್ರ ಅದನ್ನು ಮಾಡಲು ಸಾಧ್ಯ. ನಕಲಿಗಳ ಕೈಗೆ ಸಿಕ್ಕರೆ ಉರ್ಫಿ ಜಾವೇದ್​ ಅವರಿಗೆ ಆದ ಸ್ಥಿತಿಯೇ ಬೇರೆಯವರಿಗೂ ಆಗಬಹುದು. ಆ ಸಂದೇಶ ನೀಡುವ ಸಲುವಾಗಿಯೇ ಉರ್ಫಿ ಜಾವೇದ್ ಅವರು ಈ ವಿಡಿಯೋ ಹಂಚಿಕೊಂಡಿದ್ದಾರೆ. ಈ ವಿಡಿಯೋ 8 ಮಿಲಿಯನ್​ಗಿಂತಲೂ ಹೆಚ್ಚು ವೀಕ್ಷಣೆ ಕಂಡಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.