ಜಾಕಿ ಶ್ರಾಫ್​ ಕೊಟ್ಟ ಬನಿಯನ್​ ಧರಿಸಿ ಡ್ಯಾನ್ಸ್​ ಮಾಡಿದ್ದ ಉರ್ಮಿಳಾ; ‘ರಂಗೀಲಾ’ ಹಾಡಿನ ಫನ್ನಿ ಕಥೆ

| Updated By: ಮದನ್​ ಕುಮಾರ್​

Updated on: Oct 03, 2021 | 9:58 AM

ಹಾಡುಗಳಲ್ಲಿ ನಟ-ನಟಿಯರ ಕಾಸ್ಟ್ಯೂಮ್​ ಬಗ್ಗೆ ಹೆಚ್ಚು ಕಾಳಜಿ ವಹಿಸಲಾಗುತ್ತದೆ. ಅದಕ್ಕಾಗಿ ಸಾಕಷ್ಟು ತಯಾರಿಯನ್ನೂ ಮಾಡಿಕೊಳ್ಳಲಾಗುತ್ತದೆ. ಆದರೆ ‘ರಂಗೀಲಾ’ ಸಿನಿಮಾದ ‘ತನ್ಹಾ.. ತನ್ಹಾ..’ ಹಾಡಿನಲ್ಲಿ ಊರ್ಮಿಳಾ ಆಯ್ಕೆ ಮಾಡಿಕೊಂಡ ಕಾಸ್ಟ್ಯೂಮ್​ ಫನ್ನಿಯಾಗಿತ್ತು.

ಜಾಕಿ ಶ್ರಾಫ್​ ಕೊಟ್ಟ ಬನಿಯನ್​ ಧರಿಸಿ ಡ್ಯಾನ್ಸ್​ ಮಾಡಿದ್ದ ಉರ್ಮಿಳಾ; ‘ರಂಗೀಲಾ’ ಹಾಡಿನ ಫನ್ನಿ ಕಥೆ
ಊರ್ಮಿಳಾ ಮಾತೋಂಡ್ಕರ್
Follow us on

ಒಂದು ಕಾಲದಲ್ಲಿ ಬಹುಬೇಡಿಕೆಯ ನಟಿ ಆಗಿದ್ದರು ಊರ್ಮಿಳಾ ಮಾತೋಂಡ್ಕರ್​. 1995ರಲ್ಲಿ ತೆರೆಕಂಡ ‘ರಂಗೀಲಾ’ ಸಿನಿಮಾದಿಂದ ಅವರಿಗೆ ಸಿಕ್ಕ ಖ್ಯಾತ ಅಷ್ಟಿಷ್ಟಲ್ಲ. ಆ ಸಿನಿಮಾದ ಹಾಡುಗಳೆಲ್ಲ ಸೂಪರ್​ ಹಿಟ್​ ಆಗಿದ್ದವು. ಆ ಗೀತೆಗಳಲ್ಲಿ ಊರ್ಮಿಳಾ ಕಾಣಿಸಿಕೊಂಡ ಪರಿಗೆ ಸಿನಿಪ್ರಿಯರು ಫಿದಾ ಆಗಿದ್ದರು. ಆ ಎಲ್ಲ ಕಾರಣಗಳಿಂದಾಗಿ ಈಗಲೂ ಅವರನ್ನು ರಂಗೀಲಾ ಹುಡುಗಿ ಅಂತಲೇ ಜನರು ಗುರುತಿಸುತ್ತಾರೆ. ಆ ಸಿನಿಮಾದಲ್ಲಿ ‘ತನ್ಹಾ.. ತನ್ಹಾ..’ ಹಾಡಿನ ಶೂಟಿಂಗ್​ ವೇಳೆ ನಡೆದ ಒಂದು ಘಟನೆಯನ್ನು ಈಗ ಊರ್ಮಿಳಾ ವಿವರಿಸಿದ್ದಾರೆ.

ಸಾಮಾನ್ಯವಾಗಿ ಹಾಡುಗಳಲ್ಲಿ ನಟ-ನಟಿಯರ ಕಾಸ್ಟ್ಯೂಮ್​ ಬಗ್ಗೆ ಹೆಚ್ಚು ಕಾಳಜಿ ವಹಿಸಲಾಗುತ್ತದೆ. ಅದಕ್ಕಾಗಿ ಸಾಕಷ್ಟು ತಯಾರಿಯನ್ನೂ ಮಾಡಿಕೊಳ್ಳಲಾಗುತ್ತದೆ. ಆದರೆ ‘ರಂಗೀಲಾ’ ಸಿನಿಮಾದ ‘ತನ್ಹಾ.. ತನ್ಹಾ..’ ಹಾಡಿನಲ್ಲಿ ಊರ್ಮಿಳಾ ಅವರು ಸಹನಟನ ಬನಿಯನ್​ ಧರಿಸಿ ಡ್ಯಾನ್ಸ್​ ಮಾಡಿದ್ದರು ಎಂಬುದು ಅನೇಕರಿಗೆ ಗೊತ್ತಿರದ ವಿಚಾರ.

ಇತ್ತೀಚೆಗೆ ಟಿವಿ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದಾಗ ಊರ್ಮಿಳಾ ಅವರು ಈ ವಿಚಾರ ಹಂಚಿಕೊಂಡಿದ್ದಾರೆ. ‘ರಂಗೀಲಾ’ ಸಿನಿಮಾದಲ್ಲಿ ಆಮೀರ್​ ಖಾನ್​ ಮತ್ತು ಜಾಕಿ ಶ್ರಾಫ್​ ಪ್ರಮುಖ ಪಾತ್ರ ಮಾಡಿದ್ದರು. ಜಾಕಿ ಶ್ರಾಫ್​ ಅವರ ಬನಿಯನ್​ ಧರಿಸಿ ಊರ್ಮಿಳಾ ‘ತನ್ಹಾ.. ತನ್ಹಾ..’ ಹಾಡಿನಲ್ಲಿ ಹೆಜ್ಜೆ ಹಾಕಿದರು. ಸಮುದ್ರ ತೀರದಲ್ಲಿ ಅವರು ಸ್ಲೋ ಮೋಷನ್​ನಲ್ಲಿ ಓಡಿಬರುವ ಆ ದೃಶ್ಯವನ್ನು ಅಭಿಮಾನಿಗಳು ಇನ್ನೂ ಮರೆತಿಲ್ಲ. ಅದರ ಕಾಸ್ಟ್ಯೂಮ್​ ಕಹಾನಿ ಮಾತ್ರ ಫನ್ನಿಯಾಗಿದೆ.

‘ಈ ವಿಚಾರ ಯಾರಿಗೂ ಗೊತ್ತಿಲ್ಲ. ಆ ಹಾಡಿನಲ್ಲಿ ನಾನು ಜಾಕಿ ಶ್ರಾಫ್​ ಅವರ ಬನಿಯನ್​ ಧರಿಸಿದ್ದೆ. ಆ ದೃಶ್ಯ ತುಂಬ ಹೊಸದಾಗಿ ಕಾಣಿಸಬೇಕಿತ್ತು. ತುಂಬ ಸಹಜವಾಗಿ ದೃಶ್ಯ ಮೂಡಿಬರಬೇಕು ಎಂಬುದು ಉದ್ದೇಶ ಆಗಿತ್ತು. ಆಗ ತಮ್ಮ ಬನಿಯನ್​ ಧರಿಸುವಂತೆ ಜಾಕಿ ಶ್ರಾಫ್​ ನನಗೆ ಹೇಳಿದರು. ಅದೇಕೋ ನನಗೆ ಸರಿ ಎನಿಸಲಿಲ್ಲ. ಆದರೂ ದೇವರ ಮೇಲೆ ಭಾರ ಹಾಕಿ ಒಪ್ಪಿಕೊಂಡೆ. ಆದರೆ ಆ ದೃಶ್ಯ ಚೆನ್ನಾಗಿ ಮೂಡಿಬಂತು. ಪ್ರೇಕ್ಷಕರಿಗೂ ಇಷ್ಟವಾಯಿತು’ ಎಂದು ಊರ್ಮಿಳಾ ಹೇಳಿದ್ದಾರೆ.

‘ರಂಗೀಲಾ’ ಚಿತ್ರಕ್ಕೆ ರಾಮ್​ ಗೋಪಾಲ್​ ವರ್ಮಾ ನಿರ್ದೇಶನ ಮಾಡಿದ್ದರು. ಎ.ಆರ್​. ರೆಹಮಾನ್​ ಸಂಗೀತ ನಿರ್ದೇಶನದಲ್ಲಿ ಮೂಡಿಬಂದಿದ್ದ ಎಲ್ಲ ಹಾಡುಗಳು ಸೂಪರ್​ ಹಿಟ್​ ಆಗಿದ್ದವು. ಇಂದಿಗೂ ಅವು ಕೇಳುಗರ ಫೇವರಿಟ್​ ಆಗಿ ಉಳಿದುಕೊಂಡಿವೆ.

ಇದನ್ನೂ ಓದಿ:

ಡ್ರಗ್ಸ್​ ಪಾರ್ಟಿ: ಎನ್​ಸಿಬಿ ಬಲೆಗೆ ಬಿದ್ದ ಶಾರುಖ್​ ಖಾನ್​ ಪುತ್ರ ಆರ್ಯನ್​ ಖಾನ್​?

Salman Khan: ಟೈಗರ್​ ಶ್ರಾಫ್​ ಪ್ರೇಯಸಿ ದಿಶಾಗೆ ಸಲ್ಮಾನ್​ ಕಿಸ್​ ಮಾಡಿದ್ದು ನಿಜ; ಆದರೆ ಇಲ್ಲಿದೆ ಟ್ವಿಸ್ಟ್​