ರಿಷಭ್ ಪಂತ್ (Rishabh Pant) ಅವರು ಇತ್ತೀಚೆಗೆ ರಸ್ತೆ ಅಪಘಾತಕ್ಕೆ ಒಳಗಾಗಿದ್ದರು. ಆ ಬಳಿಕ ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಸದ್ಯ ರಿಷಭ್ ಪಂತ್ಗೆ ಚಿಕಿತ್ಸೆ ಮುಂದುವರಿದಿದೆ. ಅನೇಕರು ರಿಷಭ್ ಪಂತ್ ಬೇಗ ಗುಣಮುಖರಾಗಲಿ ಎಂದು ಪ್ರಾರ್ಥಿಸುತ್ತಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಪೋಸ್ಟ್ ಮಾಡಲಾಗುತ್ತಿದೆ. ಊರ್ವಶಿ ರೌಟೇಲಾ (Urvashi Rautela) ಅವರ ತಾಯಿ ಮೀರಾ ರೌಟೇಲಾ ಕೂಡ ರಿಷಭ್ ಬೇಗ ಗುಣಮುಖರಾಗಲಿ ಎಂದು ಕೋರಿದ್ದರು. ಈ ವಿಚಾರದಲ್ಲಿ ಅವರು ಟ್ರೋಲ್ ಆಗಿದ್ದಾರೆ.
ರಿಷಭ್ ಪಂತ್ ಅವರು ಕಾರಿನಲ್ಲಿ ದೆಹಲಿ-ಡೆಹಾರಾಡೂನ್ ಹೈವೇಯಲ್ಲಿ ಡಿಸೆಂಬರ್ 30ರಂದು ಪ್ರಯಾಣ ಮಾಡುವಾಗ ಅಪಘಾತ ಸಂಭವಿಸಿತ್ತು. ಅವರ ಕಾರು ಹೊತ್ತಿ ಉರಿದಿತ್ತು. ಅವರು ಅದೃಷ್ಟರೀತಿಯಲ್ಲಿ ಬಚಾವ್ ಆಗಿದ್ದರು. ಅವರನ್ನು ಡೆಹಾರಾಡೂನ್ನ ಮ್ಯಾಕ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಊರ್ವಶಿ ರೌಟೇಲಾ ತಾಯಿ ರಿಷಭ್ ಪಂತ್ ಫೋಟೋ ಹಾಕಿದ್ದರು. ಈ ಫೋಟೋಗೆ ‘ಸೋಶಿಯಲ್ ಮೀಡಿಯಾದ ವದಂತಿಗಳು ಒಂದು ಕಡೆ, ನಿಮ್ಮ ಆರೋಗ್ಯ ಇನ್ನೊಂದು ಕಡೆ. ರಿಷಭ್ ಬೇಗ ಗುಣಮುಖರಾಗಲಿ ಎಂದು ಪ್ರಾರ್ಥಿಸೋಣ’ ಎಂದು ಮೀರಾ ರೌಟೇಲಾ ಇನ್ಸ್ಟಾಗ್ರಾಮ್ನಲ್ಲಿ ಬರೆದುಕೊಂಡಿದ್ದರು. ಅನೇಕರು ಇದನ್ನು ಟೀಕಿಸಿದ್ದಾರೆ. ಖಡಕ್ ಆಗಿ ಹೇಳಿದ್ದಾರೆ.
‘ಅಳಿಯನ ಪರವಾಗಿ ಅತ್ತೆ ದೇವರಲ್ಲಿ ಪ್ರಾರ್ಥಿಸಿಕೊಳ್ಳುತ್ತಿದ್ದಾರೆ’ ಎಂದು ಒಂದಷ್ಟು ಮಂದಿ ಬರೆದುಕೊಂಡಿದ್ದಾರೆ. ಇನ್ನೂ ಕೆಲವರು ಇದು ಊರ್ವಶಿ ಅವರ ಕೆಲಸ ಎಂದಿದ್ದಾರೆ. ‘ಊರ್ವಶಿ ಅವರೇ ನಿಮ್ಮ ನಿಜವಾದ ಖಾತೆಯಿಂದ ಈ ಪೋಸ್ಟ್ನ ಪೋಸ್ಟ್ ಮಾಡಿ. ಬೇರೆ ಯಾವುದೋ ಖಾತೆಯಿಂದ ಇದನ್ನು ಹಾಕುವುದಲ್ಲ’ ಎಂದು ಟೀಕೆ ಮಾಡಿದ್ದಾರೆ.
ಇದನ್ನೂ ಓದಿ: ‘ಆರ್ಪಿ ಎಂದರೆ ರಿಷಬ್ ಪಂತ್ ಅಲ್ಲ’; ಬಹುದಿನಗಳ ವದಂತಿ ಬಗ್ಗೆ ಮೌನ ಮುರಿದ ನಟಿ ಊರ್ವಶಿ ರೌಟೇಲಾ
ನೆಟ್ಫ್ಲಿಕ್ಸ್ ಇತ್ತೀಚೆಗೆ ವಿಡಿಯೋ ಒಂದನ್ನು ಹಂಚಿಕೊಂಡಿತ್ತು. ತನ್ನ ಪ್ಲಾಟ್ಫಾರ್ಮ್ನಲ್ಲಿರುವ ಸಿನಿಮಾಗಳ ಪಾತ್ರಗಳನ್ನೇ ಇಟ್ಟುಕೊಂಡು ವಿಡಿಯೋ ಮಾಡಲಾಗಿದೆ. ಈ ವಿಡಿಯೋದಲ್ಲಿ ಉರ್ಫಿ ಜಾವೇದ್ ಮೊದಲಾದವರು ಇದ್ದಾರೆ. ಊರ್ವಶಿ ಅವರು ಕೂಡ ಈ ವಿಡಿಯೋದಲ್ಲಿದ್ದಾರೆ. ಹಾಲಿವುಡ್ ನಟ ರೈನ್ ಗಾಸ್ಲಿಂಗ್ ಹಾಗೂ ಊರ್ವಶಿ ಎದುರುಬದುರು ಕೂತಿರುತ್ತಾರೆ. ಊರ್ವಶಿ ಕೈ ಮೇಲೆ ‘RP’ ಎಂದು ಬರೆದುಕೊಂಡಿದ್ದಾರೆ. P ಮೇಲೆ ಗೀಟು ಹಾಕಿ ‘ಜಿ’ ಎಂದು ಬರೆದುಕೊಂಡಿದ್ದಾರೆ. ಆರ್ ಜಿ ಎಂದರೆ ರೈನ್ ಗಾಸ್ಲಿಂಗ್ ಎಂದರ್ಥ. ಕೆಲವೇ ಸೆಕೆಂಡ್ನಲ್ಲಿ ಮುಗಿಯುವ ಈ ದೃಶ್ಯಕ್ಕೆ ಅವರು 15 ಕೋಟಿ ರೂ. ಚಾರ್ಜ್ ಮಾಡಿದ್ದಾರೆ ಎನ್ನಲಾಗಿದೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 12:09 pm, Wed, 4 January 23