400 ಕೋಟಿ ರೂಪಾಯಿ ದಾಟಿದ ‘ಛಾವ’ ಸಿನಿಮಾ ಬಾಕ್ಸ್ ಆಫೀಸ್ ಕಲೆಕ್ಷನ್

ವಾರಾಂತ್ಯ ಮಾತ್ರವಲ್ಲದೇ ವಾರದ ದಿನಗಳಲ್ಲಿ ಕೂಡ ‘ಛಾವ’ ಸಿನಿಮಾ ಅತ್ಯುತ್ತಮವಾಗಿ ಪ್ರದರ್ಶನ ಕಾಣುತ್ತಿದೆ. ಅದರ ಪರಿಣಾಮವಾಗಿ ಸಿನಿಮಾದ ಕಲೆಕ್ಷನ್ ಹೆಚ್ಚಾಗಿದೆ. 400 ಕೋಟಿ ರೂಪಾಯಿಗೂ ಅಧಿಕ ಕಲೆಕ್ಷನ್ ಮಾಡಿದೆ. ವಿಕ್ಕಿ ಕೌಶಲ್ ನಟನೆಯ ಈ ಸಿನಿಮಾಗೆ 3ನೇ ವೀಕೆಂಡ್ ಕೂಡ ಭರ್ಜರಿ ಕಮಾಯಿ ಆಗುವುದು ಖಚಿತವಾಗಿದೆ.

400 ಕೋಟಿ ರೂಪಾಯಿ ದಾಟಿದ ‘ಛಾವ’ ಸಿನಿಮಾ ಬಾಕ್ಸ್ ಆಫೀಸ್ ಕಲೆಕ್ಷನ್
Vicky Kaushal

Updated on: Feb 27, 2025 | 10:55 PM

‘ಛಾವ’ ಸಿನಿಮಾ ಈ ಪರಿ ಅಬ್ಬರಿಸುತ್ತದೆ ಎಂದು ಬಹುತೇಕರು ಅಂದುಕೊಂಡಿರಲಿಲ್ಲ. ಯಾಕೆಂದರೆ ಬಿಡುಗಡೆಗೂ ಮುನ್ನ ಅಡ್ವಾನ್ಸ್ ಬುಕಿಂಗ್ ಅಷ್ಟು ಚೆನ್ನಾಗಿ ಆಗಿರಲಿಲ್ಲ. ಹಾಗಾಗಿ ಸಿನಿಮಾ ಸೂಪರ್ ಹಿಟ್ ಆಗುತ್ತೆ ಎಂಬ ಸೂಚನೆ ಸಿಕ್ಕಿರಲಿಲ್ಲ. ಆದರೆ ರಿಲೀಸ್ ಆದ ಬಳಿಕ ಈ ಸಿನಿಮಾ ದೊಡ್ಡ ಮ್ಯಾಜಿಕ್ ಮಾಡಿತು. ಜನರಿಂದ ‘ಛಾವ’ ಸಿನಿಮಾಗೆ ಪಾಸಿಟಿವ್ ಪ್ರತಿಕ್ರಿಯೆ ಸಿಕ್ಕಿದ್ದರಿಂದ ಏಕಾಏಕಿ ಕಲೆಕ್ಷನ್ ಜಾಸ್ತಿ ಆಯಿತು. ನೋಡನೋಡುತ್ತಿದ್ದಂತೆಯೇ ಈ ಚಿತ್ರದ ಕಲೆಕ್ಷನ್ 400 ಕೋಟಿ ರೂಪಾಯಿ ದಾಟಿದೆ. ಈ ಮೂಲಕ ನಟ ವಿಕ್ಕಿ ಕೌಶಲ್ ಅವರಿಗೆ ವೃತ್ತಿ ಜೀವನದ ಅತಿ ದೊಡ್ಡ ಸಕ್ಸಸ್ ತಂದುಕೊಟ್ಟಿದೆ.

ಛತ್ರಪತಿ ಸಂಭಾಜಿ ಮಹಾರಾಜ್ ಜೀವನವನ್ನು ಆಧರಿಸಿದ ‘ಛಾವ’ ಸಿನಿಮಾ ಮೂಡಿಬಂದಿದೆ. ಐತಿಹಾಸಿಕ ಕಥೆ ಇರುವ ಈ ಸಿನಿಮಾವನ್ನು ಪ್ರೇಕ್ಷಕರು ಮೆಚ್ಚಿಕೊಂಡಿದ್ದಾರೆ. ಲಕ್ಷ್ಮಣ್ ಉಟೇಕರ್ ನಿರ್ದೇಶನ ಮಾಡಿದ ಈ ಚಿತ್ರಕ್ಕೆ ರಶ್ಮಿಕಾ ಮಂದಣ್ಣ ಅವರು ನಾಯಕಿ ಆಗಿದ್ದಾರೆ. ಅಕ್ಷಯ್ ಖನ್ನಾ ಅವರು ಔರಂಗಜೇಬ್ ಪಾತ್ರವನ್ನು ಮಾಡಿ ಸೈ ಎನಿಸಿಕೊಂಡಿದ್ದಾರೆ. ಎಲ್ಲರ ಶ್ರಮದಿಂದಾಗಿ ಸಿನಿಮಾ ಸೂಪರ್ ಹಿಟ್ ಆಗಿದೆ.

ಫೆಬ್ರವರಿ 14ರಂದು ‘ಛಾವ’ ಸಿನಿಮಾ ತೆರೆಕಂಡಿತ್ತು. ಅಂದಿನಿಂದ ಈವರೆಗೂ ಉತ್ತಮವಾಗಿ ಪ್ರದರ್ಶನ ಕಾಣುತ್ತಲೇ ಇದೆ. ಭಾರತದ ಬಾಕ್ಸ್ ಆಫೀಸ್​ ನಲ್ಲಿ ಒಟ್ಟು 13 ದಿನಕ್ಕೆ ಈ ಚಿತ್ರದ ಕಲೆಕ್ಷನ್ 397 ಕೋಟಿ ರೂಪಾಯಿ ಆಗಿತ್ತು. 14ನೇ ದಿನದ ಆರಂಭದಲ್ಲೇ 400 ಕೋಟಿ ರೂಪಾಯಿ ಮೀರಿದೆ. ಈ ಗೆಲುವನ್ನು ‘ಛಾವ’ ಚಿತ್ರತಂಡ ಸಂಭ್ರಮಿಸುತ್ತಿದೆ. ವಿಕ್ಕಿ ಕೌಶಲ್ ಅವರು ಸೂಪರ್ ಸ್ಟಾರ್ ಆಗಿ ಮಿಂಚುತ್ತಿದ್ದಾರೆ.

ಇದನ್ನೂ ಓದಿ
ಹೇಗಿದೆ ರಶ್ಮಿಕಾ-ವಿಕ್ಕಿ ಕೌಶಲ್​ರ ‘ಛಾವಾ’, ನೆಟ್ಟಿಗರು ಹೇಳಿದ್ದು ಹೀಗೆ
ಪತ್ನಿ ಕತ್ರಿನಾ ಕೈಫ್ ವಿಚಿತ್ರ ಪ್ರಾಣಿ ಎಂದ ವಿಕ್ಕಿ ಕೌಶಲ್; ವಿಡಿಯೋ ವೈರಲ್
ವಿಕ್ಕಿ ಕೌಶಲ್ ಹಾಗೂ ಕತ್ರಿನಾ ನಡುವೆ ಜಗಳ ಏರ್ಪಡಲು ಕಾರಣವಾಗ್ತಿದೆ ಈ ವಿಚಾರ
ಒಟ್ಟಿಗೆ ನಟಿಸಿದ ಹೊರತಾಗಿಯೂ ವಿಕ್ಕಿ-ಅಕ್ಷಯ್ ಮಾತನಾಡಿಕೊಳ್ಳಲೇ ಇಲ್ಲ

ಇದನ್ನೂ ನೋಡಿ: ‘ಛಾವಾ’ ಸಿನಿಮಾಕ್ಕೆ ವಿಕ್ಕಿ ಕೌಶಲ್ ಪಟ್ಟ ಶ್ರಮಕ್ಕೆ ಸಾಕ್ಷಿ ಈ ವಿಡಿಯೋ

ಶಿವರಾತ್ರಿ ಹಬ್ಬದ ರಜೆ ಇರುವುದರಿಂದ ಅಪಾರ ಸಂಖ್ಯೆಯ ಪ್ರೇಕ್ಷಕರು ಚಿತ್ರಮಂದಿರಕ್ಕೆ ಬಂದಿದ್ದಾರೆ. ಭಾರತದಲ್ಲಿ ಮಾತ್ರವಲ್ಲದೇ ವಿದೇಶದಲ್ಲಿ ಕೂಡ ಈ ಸಿನಿಮಾ ಉತ್ತಮವಾಗಿ ಪ್ರದರ್ಶನವಾಗುತ್ತಿದೆ. ರಶ್ಮಿಕಾ ಮಂದಣ್ಣ ಅವರು ಸೂಪರ್​ ಹಿಟ್ ಸಿನಿಮಾಗಳ ಸಾಲಿಗೆ ‘ಛಾವ’ ಕೂಡ ಸೇರ್ಪಡೆ ಆಗಿದೆ. ಆ ಮೂಲಕ ಅವರು ಲಕ್ಕಿ ಹೀರೋಯಿನ್ ಎಂಬುದು ಇನ್ನೊಮ್ಮೆ ಸಾಬೀತಾಗಿದೆ. ಈ ಮೊದಲು ಅವರು ನಟಿಸಿದ ‘ಅನಿಮಲ್’, ‘ಪುಷ್ಪ 2’ ಮುಂತಾದ ಸಿನಿಮಾಗಳು ಧೂಳೆಬ್ಬಿಸಿದ್ದವು. ಈಗ ‘ಛಾವ’ ಕೂಡ ಯಶಸ್ವಿ ಆಗಿದೆ.

​ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Loading...
Unable to load recommendations.
Follow Us