ನಟ ವಿದ್ಯುತ್ ಜಮ್ವಾಲ್ ವರ್ಕೌಟ್, ಹಣೆ ಮೇಲೆ 30 ಕೆಜಿ ಡಂಬಲ್

|

Updated on: Aug 29, 2023 | 4:11 PM

Vidyut Jamwal: ಇದೀಗ ತಮ್ಮ ವರ್ಕೌಟ್​ನ ಹೊಸ ವಿಡಿಯೋ ಒಂದನ್ನು ವಿದ್ಯುತ್ ಹಂಚಿಕೊಂಡಿದ್ದು, ವಿಡಿಯೋ ನೋಡಿದ ಹಲವರು ಗಾಬರಿಯಾಗಿದ್ದಾರೆ. ಏಕೆಂದರೆ ಅಷ್ಟು ಅಪಾಯಕಾರಿವಾದ ವರ್ಕೌಟ್ ಅನ್ನು ವಿದ್ಯುತ್ ವಿಡಿಯೋದಲ್ಲಿ ಮಾಡಿದ್ದಾರೆ.

ನಟ ವಿದ್ಯುತ್ ಜಮ್ವಾಲ್ ವರ್ಕೌಟ್, ಹಣೆ ಮೇಲೆ 30 ಕೆಜಿ ಡಂಬಲ್
ವಿದ್ಯುತ್ ಜಮ್ವಾಲ್
Follow us on

ಬಾಲಿವುಡ್ (Bollywood) ನಟರು ಫಿಟ್​ನೆಸ್ (Fitness) ಬಗ್ಗೆ ಅತಿಯಾಗಿ ಕಾಳಜಿವಹಿಸುತ್ತಾರೆ. ಸಿಕ್ಸ್ ಪ್ಯಾಕ್, 8 ಪ್ಯಾಕ್ ಇಲ್ಲದಿದ್ದರೆ ನಟನಾಗಲು ಯೋಗ್ಯನೇ ಅಲ್ಲ ಎಂದು ಬಾಲಿವುಡ್ ನಿಶ್ಚಯಿಸಿದಂತಿದೆ. ಬಾಲಿವುಡ್​ನಲ್ಲಿ ನಟನಾಗಬೇಕೆಂದರೆ ಅವನಿಗೆ ಹುರಿಗಟ್ಟಿದ ದೇಹ ಇರಬೇಕು ಎಂಬುದು ಅಲಿಖಿತ ನಿಯಮವಾಗಿದೆ. ಇದೇ ಕಾರಣಕ್ಕೆ ಹಲವು ನಟರು ಜಿಮ್, ವರ್ಕೌಟ್ ಗಳನ್ನು ನಿತ್ಯದ ಜೀವನದ ಭಾಗ ಮಾಡಿಕೊಂಡಿದ್ದಾರೆ. ಕೆಲವು ನಟರಂತೂ ಕಠಿಣಾತಿಕಠಿಣ ಮಾದರಿಯ ವರ್ಕೌಟ್​ಗಳನ್ನು ಮಾಡುತ್ತಾರೆ, ಅದರಲ್ಲಿ ನಟ ವಿದ್ಯುತ್ ಜಮ್ವಾಲ್ ಸಹ ಒಬ್ಬರು.

ಕೆಲವೇ ಸಿನಿಮಾಗಳಲ್ಲಿ ನಟಿಸಿದ್ದರು, ತಮ್ಮ ದೇಹದಾಢ್ಯ ಹಾಗೂ ಸ್ಟಂಟ್​ಗಳಿಂದ ಪ್ರತ್ಯೇಕ ಅಭಿಮಾನಿ ವರ್ಗ ಹೊಂದಿರುವ ವಿದ್ಯುತ್, ಬಾಲಿವುಡ್ ನಟರಲ್ಲಿಯೇ ಅತ್ಯಂತ ಕಠಿಣವಾದ ವರ್ಕೌಟ್ ಮಾಡುವ, ಮಾರ್ಷಲ್ ಆರ್ಟ್ಸ್ ತರಬೇತಿ ಪಡೆವ ನಟ. ಜಿಮ್ ವರ್ಕೌಟ್ ಜೊತೆಗೆ ಕಠಿಣವಾದ ಮಾರ್ಷಲ್ ಆರ್ಟ್ಸ್ ತರಬೇತಿಯನ್ನು ಸಹ ವಿದ್ಯುತ್ ಪ್ರತಿದಿನ ಪಡೆಯುತ್ತಾರೆ.

ಇದೀಗ ತಮ್ಮ ವರ್ಕೌಟ್​ನ ಹೊಸ ವಿಡಿಯೋ ಒಂದನ್ನು ವಿದ್ಯುತ್ ಹಂಚಿಕೊಂಡಿದ್ದು, ವಿಡಿಯೋ ನೋಡಿದ ಹಲವರು ಗಾಬರಿಯಾಗಿದ್ದಾರೆ. ಏಕೆಂದರೆ ಅಷ್ಟು ಅಪಾಯಕಾರಿವಾದ ವರ್ಕೌಟ್ ಅನ್ನು ವಿದ್ಯುತ್ ವಿಡಿಯೋದಲ್ಲಿ ಮಾಡಿದ್ದಾರೆ. ತಮ್ಮ ಕತ್ತಿನ ಭಾಗದ ಸ್ನಾಯುಗಳನ್ನು ಗಟ್ಟಿಕೊಳಿಸಲು ಹಾಗೂ ಕತ್ತು ಸೂಕ್ತವಾದ ಶೇಪ್​ಗೆ ಬರಲೆಂದು ಭಿನ್ನವಾದ ವರ್ಕೌಟ್ ಅನ್ನು ಮಾಡಿದ್ದಾರೆ. ಆಕಾಶ ನೋಡುವಂತೆ ತಲೆಯನ್ನು ಮೇಲಕ್ಕೆತ್ತಿ, ಹಣೆಯ ಮೇಲೆ ಬರೋಬ್ಬರಿ 30 ಕೆಜಿಯ ಡಂಬಲ್ ಅನ್ನು ಇರಿಸಿಕೊಂಡಿದ್ದಾರೆ ವಿದ್ಯುತ್.

ಇದನ್ನೂ ಓದಿ:ಜಿಮ್​ನಲ್ಲಿ ಬೆವರು ಹರಿಸಿದ ಸೋನು ಗೌಡ; ಇಲ್ಲಿವೆ ವರ್ಕೌಟ್​ ನಂತರದ ಫೋಟೋಗಳು

ಸಾಮಾನ್ಯರಿಗೆ 30 ಕೆಜಿ ಡಂಬಲ್ ಅನ್ನು ಕೈಯಲ್ಲಿ ಎತ್ತುವುದೇ ಕಷ್ಟ, ಅಂಥಹದರಲ್ಲಿ 30 ಕೆಜಿ ಡಂಬಲ್ ಅನ್ನು ಹಣೆಯ ಮೇಲೆ ಎತ್ತಿದ್ದಾರೆ ವಿದ್ಯುತ್. ಅಷ್ಟಕ್ಕೆ ವಿದ್ಯುತ್ ಸಾಹಸ ನಿಂತಿಲ್ಲ, ನೆಲದ ಮೇಲೆ ಮಲಗಿ ಕಪಾಳ ಹಾಗೂ ತಲೆಯ ಮೇಲೆ ತೂಕದ ವ್ಯಕ್ತಿಯೊಬ್ಬನನ್ನು ನಿಲ್ಲಿಸಿಕೊಂಡಿದ್ದಾರೆ. ವಿದ್ಯುತ್​ರ ಈ ವರ್ಕೌಟ್ ನೋಡಿ ಹಲವರು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.

ಅರ್ಜುನ್ ರಾಮ್​ಪಾಲ್ ಸೇರಿದಂತೆ ಇನ್ನೂ ಕೆಲವು ಬಾಲಿವುಡ್ ನಟ-ನಟಿಯರು ವಿದ್ಯುತ್​ರ ಈ ಕಠಿಣವಾದ ವರ್ಕೌಟ್ ವಿಡಿಯೋಕ್ಕೆ ಪ್ರತಿಕ್ರಿಯೆ ನೀಡಿದ್ದು, ಭೇಷ್ ಎಂದಿದ್ದಾರೆ. ಇನ್ನು ಕೆಲವರು ಇದೆಲ್ಲ ಬಹಳ ಅಪಾಯಕಾರಿ ಎಂದಿದ್ದಾರೆ. ಇನ್ನು ಕೆಲವರಾದರೆ ಇಂಥಹಾ ಅಪಾಯಕಾರಿ ವಿಡಿಯೋಗಳನ್ನು ನಟರು ಹಂಚಿಕೊಳ್ಳುವುದು ಸರಿಯಲ್ಲವೆಂದು, ಇಂಥಹಾ ವಿಡಿಯೋಗಳನ್ನು ನೋಡಿ ಯುವಕರು ಹೀಗೆಯೇ ಮಾಡಲು ಹೋಗಿ ದೇಹಕ್ಕೆ ಅಪಾಯ ತಂದೊಡ್ಡಿಕೊಳ್ಳುವ ಅಪಾಯವಿದೆ ಎಂದಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 3:55 pm, Tue, 29 August 23