Vivek Agnihotri: ‘ಕಾನ್​ ಅಂದ್ರೆ ಚಿತ್ರೋತ್ಸವವೇ ಹೊರತು ಫ್ಯಾಷನ್​ ಶೋ ಅಲ್ಲ’: ಚಾಟಿ ಬೀಸಿದ ವಿವೇಕ್​ ಅಗ್ನಿಹೋತ್ರಿ

Cannes Film Festival 2023: ವಿವೇಕ್​ ಅಗ್ನಿಹೋತ್ರಿ ಅವರು ಟ್ವಿಟರ್​ ಬಳಕೆಯಲ್ಲಿ ಸಕ್ರಿಯರಾಗಿದ್ದಾರೆ. ಕಾನ್​ ಚಿತ್ರೋತ್ಸವದ ಬಗ್ಗೆ ಅವರು ಮಾಡಿರುವ ಟ್ವೀಟ್​ ವೈರಲ್​ ಆಗಿದೆ.

Vivek Agnihotri: ‘ಕಾನ್​ ಅಂದ್ರೆ ಚಿತ್ರೋತ್ಸವವೇ ಹೊರತು ಫ್ಯಾಷನ್​ ಶೋ ಅಲ್ಲ’: ಚಾಟಿ ಬೀಸಿದ ವಿವೇಕ್​ ಅಗ್ನಿಹೋತ್ರಿ
ವಿವೇಕ್ ಅಗ್ನಿಹೋತ್ರಿ
Follow us
ಮದನ್​ ಕುಮಾರ್​
|

Updated on: May 21, 2023 | 7:29 AM

ನಿರ್ದೇಶಕ ವಿವೇಕ್​ ಅಗ್ನಿಹೋತ್ರಿ (Vivek Agnihotri) ಅವರು ಕೆಲವೇ ದಿನಗಳ ಹಿಂದೆ ಕಾನ್ ಚಿತ್ರೋತ್ಸವದ ಬಗ್ಗೆ ಟ್ವೀಟ್​ ಮಾಡಿದ್ದರು. ಈ ಪ್ರತಿಷ್ಠಿತ ಸಿನಿಮೋತ್ಸವದಲ್ಲಿ ಐಶ್ವರ್ಯಾ ರೈ ಬಚ್ಚನ್​ ಅವರು ಧರಿಸಿದ್ದ ಕಾಸ್ಟ್ಯೂಮ್​ ಬಗ್ಗೆ ವಿವೇಕ್​ ಅಗ್ನಿಹೋತ್ರಿ ಅವರು ಕಟು ಟೀಕೆ ವ್ಯಕ್ತಪಡಿಸಿದ್ದರು. ಈಗ ಮತ್ತೆ ಅವರು ಕಾನ್​ ಚಿತ್ರೋತ್ಸವದ ಬಗ್ಗೆ ತಮ್ಮ ಅನಿಸಿಕೆ ಹಂಚಿಕೊಂಡಿದ್ದಾರೆ. ಈ ಫಿಲ್ಮ್​ ಫೆಸ್ಟಿವಲ್​ನಲ್ಲಿ (Cannes Film Festival 2023) ಸೆಲೆಬ್ರಿಟಿಗಳು ಬಗೆಬಗೆಯ ಕಾಸ್ಟ್ಯೂಮ್​ ಧರಿಸಿ, ರೆಡ್​ ಕಾರ್ಪೆಟ್​ನಲ್ಲಿ ಪೋಸ್​ ಕೊಡುವುದು ಸಾಕಷ್ಟು ಹೈಲೈಟ್​ ಆಗುತ್ತದೆ. ಅದರ ಬಗ್ಗೆ ವಿವೇಕ್​ ಅಗ್ನಿಹೋತ್ರಿ ಅವರು ತಕರಾರು ತೆಗೆದಿದ್ದಾರೆ. ‘ದಿ ಕಾಶ್ಮೀರ್​ ಫೈಲ್ಸ್’ ಸಿನಿಮಾ ಹಿಟ್​ ಆದ ಬಳಿಕ ವಿವೇಕ್​ ಅಗ್ನಿಹೋತ್ರಿ ಅವರ ಖ್ಯಾತಿ ಹೆಚ್ಚಾಯಿತು. ಆ ನಂತರ ಅವರು ಅನೇಕ ವಿಚಾರಗಳ ಬಗ್ಗೆ ತಮ್ಮ ಅನಿಸಿಕೆ ಹಂಚಿಕೊಳ್ಳಲು ಆರಂಭಿಸಿದರು. ಈಗ ಕಾನ್​ ಚಿತ್ರೋತ್ಸವದ ರೆಡ್​ ಕಾರ್ಪೆಟ್​ (Red Carpet) ಬಗ್ಗೆ ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ವಿವೇಕ್​ ಅಗ್ನಿಹೋತ್ರಿ ಅವರು ಟ್ವಿಟರ್​ನಲ್ಲಿ ಸಕ್ರಿಯರಾಗಿದ್ದಾರೆ. ಕಾನ್​ ಚಿತ್ರೋತ್ಸವದ ಬಗ್ಗೆ ಅವರು ಮಾಡಿರುವ ಟ್ವೀಟ್​ ವೈರಲ್​ ಆಗಿದೆ. ‘ಕಾನ್​ ಚಲನಚಿತ್ರೋತ್ಸವವು ಸಿನಿಮಾಗಳಿಗೆ ಸಂಬಂಧಿಸಿದ್ದು ಎಂದು ನಿಮಗೆ ತಿಳಿದಿದೆಯೇ? ಇದು ಫ್ಯಾಶನ್ ಶೋ ಅಂತ ನೀವು ಭಾವಿಸುತ್ತಿದ್ದರೆ ನಾನು ನಿಮಗೆ ನೆನಪಿಸುತ್ತಿದ್ದೇನೆ’ ಎಂದು ಅವರು ಟ್ವೀಟ್​ ಮಾಡಿದ್ದಾರೆ.

ಇದನ್ನೂ ಓದಿ: Vivek Agnihotri: ಐಶ್ವರ್ಯಾ ರೈ ವರ್ತನೆ ಕಂಡು ಸ್ಟುಪಿಡ್​ ಎಂದ ವಿವೇಕ್​ ಅಗ್ನಿಹೋತ್ರಿ; ನಟಿಯಿಂದ ಆದ ತಪ್ಪೇನು?

ಅನೇಕ ಸೆಲೆಬ್ರಿಟಿಗಳು ವಿವೇಕ್ ಅಗ್ನಿಹೋತ್ರಿಯವರ ಟ್ವೀಟ್​ಗೆ ಪ್ರತಿಕ್ರಿಯೆ ನೀಡಿದ್ದಾರೆ. ನಟಿ ಮೀರಾ ಚೋಪ್ರಾ ಅವರು ಸಹಮತ ವ್ಯಕ್ತಪಡಿಸಿದ್ದಾರೆ. ‘ಇದು ತುಂಬಾ ಬೇಸರದ ಸಂಗತಿ. ಕಳೆದ ವರ್ಷ ನಾನು ಅಲ್ಲಿಗೆ ಹೋದಾಗ ಅದೇ ಮಾತನ್ನು ಹೇಳಿದ್ದೆ. ಇದು ಫ್ಯಾಶನ್ ಪರೇಡ್ ಆಗಿದೆ. ನೀವು ಏನನ್ನು ಧರಿಸಿದ್ದೀರಿ ಮತ್ತು ನಿಮ್ಮೆಲ್ಲರನ್ನು ಮಾಧ್ಯಮಗಳಲ್ಲಿ ಹೇಗೆ ತೋರಿಸಲಾಗಿದೆ ಎಂಬುದರ ಬಗ್ಗೆ ಬಾಲಿವುಡ್ ಮಾತ್ರ ತಲೆ ಕೆಡಿಸಿಕೊಳ್ಳುತ್ತದೆ. ಅದು ಒತ್ತಡವನ್ನು ಉಂಟುಮಾಡುತ್ತದೆ. ಬೇರೆ ದೇಶದವರಲ್ಲಿ ಈ ರೀತಿ ಇಲ್ಲ ಅಂತ ನನಗೆ ಅನಿಸುತ್ತದೆ. ಫ್ಯಾಷನ್​ ಬಗ್ಗೆ ಅವರು ನಮ್ಮಷ್ಟು ತಲೆ ಕೆಡಿಸಿಕೊಂಡಿಲ್ಲ’ ಎಂದು ಮೀರಾ ಚೋಪ್ರಾ ಟ್ವೀಟ್​ ಮಾಡಿದ್ದಾರೆ.

ಕಾನ್​ ಚಿತ್ರೋತ್ಸವದಲ್ಲಿ ಐಶ್ವರ್ಯಾ ರೈ ಬಚ್ಚನ್​ ಅವರು ತಮ್ಮಿಷ್ಟದ ಕಾಸ್ಟ್ಯೂಮ್​ ಧರಿಸಿ ಪೋಸ್​ ನೀಡಿದರು. ಆದರೆ ಅವರ ಉದ್ದದ ಬಟ್ಟೆಯನ್ನು ನಿಭಾಯಿಸಲು ಓರ್ವ ವ್ಯಕ್ತಿಯನ್ನು ಅವರು ನೇಮಿಸಿಕೊಂಡಿದ್ದರು. ಆ ರೀತಿಯ ಸಹಾಯಕರಿಗೆ ‘ಕಾಸ್ಟ್ಯೂಮ್ ಸ್ಲೇವ್ಸ್’ ಎಂದು ಕರೆಯಲಾಗುತ್ತದೆ. ಇಂಥ ಪದ್ಧತಿ ಸರಿಯಲ್ಲ ಎಂದು ವಿವೇಕ್​ ಅಗ್ನಿಹೋತ್ರಿ ಅವರು ಟೀಕೆ ಮಾಡಿದ್ದರು. ಅಲ್ಲದೇ ಇದನ್ನು ಮೂರ್ಖತನ ಎಂದು ಅವರು ಕರೆದಿದ್ದರು. ಇದು ಐಶ್ವರ್ಯಾ ರೈ ಬಚ್ಚನ್​ ಅವರ ಅಭಿಮಾನಿಗಳ ಕೋಪಕ್ಕೆ ಕಾರಣ ಆಯಿತು.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ