Parva: ‘ಪರ್ವ’ ಕಾದಂಬರಿ ಆಧರಿಸಿ ವಿವೇಕ್​ ಅಗ್ನಿಹೋತ್ರಿ ಸಿನಿಮಾ; ಟೈಟಲ್​ ಲಾಂಚ್​ ಮಾಡಿದ ಎಸ್​.ಎಲ್​. ಭೈರಪ್ಪ

|

Updated on: Oct 21, 2023 | 12:46 PM

Vivek Agnihotri: ಈ ಸಿನಿಮಾ ಮೂರು ಪಾರ್ಟ್​ಗಳಲ್ಲಿ ಬರುತ್ತದೆ ಎಂದು ನಿರ್ದೇಶಕ ವಿವೇಕ್​ ಅಗ್ನಿಹೋತ್ರಿ ಹೇಳಿದ್ದಾರೆ. ಬೆಂಗಳೂರಿನ ಚೌಡಯ್ಯ ಮೆಮೋರಿಯಲ್​ ಹಾಲ್​ನಲ್ಲಿ ಸುದ್ದಿಗೋಷ್ಠಿ ನಡೆಸಿ ‘ಪರ್ವ’ ಸಿನಿಮಾ ಬಗ್ಗೆ ಮಾಹಿತಿ ಹಂಚಿಕೊಳ್ಳಲಾಗಿದೆ. ಎಸ್​.ಎಲ್​. ಭೈರಪ್ಪ ಅವರು ಟೈಟಲ್​ ಲಾಂಚ್​ ಮಾಡಿದ್ದಾರೆ.

Parva: ‘ಪರ್ವ’ ಕಾದಂಬರಿ ಆಧರಿಸಿ ವಿವೇಕ್​ ಅಗ್ನಿಹೋತ್ರಿ ಸಿನಿಮಾ; ಟೈಟಲ್​ ಲಾಂಚ್​ ಮಾಡಿದ ಎಸ್​.ಎಲ್​. ಭೈರಪ್ಪ
ಎಸ್​.ಎಲ್​. ಭೈರಪ್ಪ, ಪರ್ವ ಕಾದಂಬರಿ, ವಿವೇಕ್​ ಅಗ್ನಿಹೋತ್ರಿ
Follow us on

ಕನ್ನಡದ ಖ್ಯಾತ ಲೇಖಕ ಎಸ್​.ಎಲ್​. ಭೈರಪ್ಪ (SL Bhyrappa) ಅವರ ‘ಪರ್ವ’ ಕಾದಂಬರಿಯನ್ನು ಆಧರಿಸಿ ಈಗ ಸಿನಿಮಾ ತಯಾರಾಗುತ್ತಿದೆ. ಇತ್ತೀಚೆಗೆ ಇದೇ ಕೃತಿಯನ್ನು ಇಟ್ಟುಕೊಂಡು ನಟ, ರಂಗಕರ್ಮಿ ಪ್ರಕಾಶ್​ ಬೆಳವಾಡಿ ಅವರು ಇಂಗ್ಲಿಷ್​ನಲ್ಲಿ ನಾಟಕ ಪ್ರದರ್ಶನ ಮಾಡಿದ್ದರು. ಈಗ ಬಾಲಿವುಡ್​ ನಿರ್ದೇಶಕ ವಿವೇಕ್​ ಅಗ್ನಿಹೋತ್ರಿ ಅವರು ಇದನ್ನು ಸಿನಿಮಾ ಮಾಡಲು ನಿರ್ಧರಿಸಿದ್ದಾರೆ. ಇಂದು (ಅಕ್ಟೋಬರ್​ 21) ಬೆಂಗಳೂರಿನಲ್ಲಿ ಈ ಸಿನಿಮಾದ ಟೈಟಲ್​ ಲಾಂಚ್​ ಮಾಡಲಾಗಿದೆ. ‘ದಿ ಕಾಶ್ಮೀರ್​ ಫೈಲ್ಸ್​’, ‘ದಿ ವ್ಯಾಕ್ಸಿನ್​ ವಾರ್​’ ರೀತಿಯ ಸಿನಿಮಾಗಳ ಮೂಲಕ ಅಪಾರ ಜನಪ್ರಿಯತೆ ಪಡೆದಿರುವ ವಿವೇಕ್​ ಅಗ್ನಿಹೋತ್ರಿ (Vivek Agnihotri) ಅವರು ಈಗ ‘ಪರ್ವ’ (Parva) ಕೃತಿಯನ್ನು ಕೈಗೆತ್ತಿಕೊಂಡಿರುವುದು ವಿಶೇಷ.

ಪ್ರಕಾಶ್​ ಬೆಳವಾಡಿ ಅವರು ‘ಪರ್ವ’ ಕೃತಿಯನ್ನು ಆಧರಿಸಿದ ಇಂಗ್ಲಿಷ್​ ನಾಟಕಕ್ಕೆ ನಿರ್ದೇಶನ ಮಾಡಿದ್ದಾರೆ. ಇದು 8 ಗಂಟೆ ಅವಧಿಯ ದೀರ್ಘ ನಾಟಕ. ಇಂದು (ಅಕ್ಟೋಬರ್​ 21) ಬೆಂಗಳೂರಿನ ಚೌಡಯ್ಯ ಮೆಮೋರಿಯಲ್​ ಹಾಲ್​ನಲ್ಲಿ ಈ ನಾಟಕ ಪ್ರದರ್ಶನ ಆಗುತ್ತಿದೆ. ಅದಕ್ಕೂ ಮುನ್ನ ವಿವೇಕ್​ ಅಗ್ನಿಹೋತ್ರಿ ಅವರು ಸುದ್ದಿಗೋಷ್ಠಿ ನಡೆಸಿ ‘ಪರ್ವ’ ಸಿನಿಮಾ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ.

ಇದನ್ನೂ ಓದಿ: ‘ಆಸ್ಕರ್​’ ಮೂಲಕ ‘ದಿ ವ್ಯಾಕ್ಸಿನ್ ವಾರ್​’ ಚಿತ್ರಕ್ಕೆ ವಿಶೇಷ ಗೌರವ; ವಿವೇಕ್​ ಅಗ್ನಿಹೋತ್ರಿ ಗುಡ್​ ನ್ಯೂಸ್​

‘ಒಂದು ವರ್ಷದ ಹಿಂದೆ ಪ್ರಕಾಶ್ ಬೆಳವಾಡಿ ನನಗೆ ಕರೆ ಮಾಡಿದ್ದರು. ಭೈರಪ್ಪನವರ ಜೊತೆ ಮಾತನಾಡುವಂತೆ ಹೇಳಿದ್ದರು. ದಿ ಕಾಶ್ಮೀರ್ ಫೈಲ್ಸ್ ಸಿನಿಮಾವನ್ನು ನೋಡಿ ಅವರು ಪರ್ವ ಸಿನಿಮಾ ಮಾಡುವಂತೆ ಹೇಳಿದರು. ಮಹಾಭಾರತದಲ್ಲಿ ನಾವು ಕೇಳದೆ ಇರುವಂತಹ ವಿಷಯಗಳನ್ನ ಬರೆದಿದ್ದಾರೆ. ಇದಕ್ಕಾಗಿ ಸಾಕಷ್ಟು ವರ್ಷಗಳ ಕಾಲ ಶ್ರಮಿಸಿದ್ದಾರೆ. ಈ ಸಿನಿಮಾ ಮೂರು ಪಾರ್ಟ್​ಗಳಲ್ಲಿ ಬರುತ್ತದೆ’ ಎಂದು ವಿವೇಕ್​ ಅಗ್ನಿಹೋತ್ರಿ ಹೇಳಿದ್ದಾರೆ.

‘ಸಾಯುವುದಕ್ಕೂ ಮೊದಲು ನಾನು ‘ಪರ್ವ’ ಚಿತ್ರ ನಿರ್ದೇಶನ ಮಾಡಬೇಕು. ಮಹಾಭಾರತದ ಎಂದರೆ ಭಾರತದ ಸಾಕ್ಷಿಪ್ರಜ್ಞೆ. ಸಾಕಷ್ಟು ಅಧ್ಯಯನ ನಡೆಸಿ ಭೈರಪ್ಪ ಅವರು ಈ ಪುಸ್ತಕ ಬರೆದಿದ್ದಾರೆ. ಈ ಚಿತ್ರವನ್ನು ನಿರ್ದೇಶಿಸುವ ಚಾನ್ಸ್​ ಸಿಕ್ಕಿದ್ದಕ್ಕೆ ಹಾಗೂ ನನ್ನ ಮೇಲೆ ಭೈರಪ್ಪ ಅವರು ಭರವಸೆ ಇಟ್ಟಿದ್ದಕ್ಕೆ ಕೃಷ್ಣ ಪರಮಾತ್ಮನಿಗೆ ಧನ್ಯವಾದ ಹೇಳುತ್ತೇನೆ’ ಎಂದಿದ್ದಾರೆ ವಿವೇಕ್​ ಅಗ್ನಿಹೋತ್ರಿ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 10:03 am, Sat, 21 October 23