ಬಾಲಿವುಡ್ ಬಾಡಿಗಾರ್ಡ್ಗಳ ಸಂಬಳ ಕೇಳಿದ್ರೆ ಶಾಕ್ ಆಗೋದು ಗ್ಯಾರಂಟಿ
ಶಾರುಖ್ ಖಾನ್, ಕತ್ರಿನಾ ಕೈಫ್, ಸಲ್ಮಾನ್ ಖಾನ್ ಸೇರಿದಂತೆ ಅನೇಕರು ಅಂಗರಕ್ಷಕರ ಜೊತೆ ಓಡಾಡುತ್ತಾರೆ. ಇವರ ಸಂಬಳದ ಬಗ್ಗೆ ಅನೇಕರಿಗೆ ಕುತೂಹಲ ಇದೆ. ಇವರಿಗೆ ಕೋಟ್ಯಂತರ ರೂಪಾಯಿ ಸಂಬಳ ಇದೆ. ಕತ್ರಿನಾ ಕೈಫ್ ಅವರ ಅಂಗರಕ್ಷಕ ದೀಪಕ್ ಸಿಂಗ್ ವರ್ಷಕ್ಕೆ ಒಂದು ಕೋಟಿ ರೂಪಾಯಿ ಪಡೆಯುತ್ತಾರೆ.
ಸೆಲೆಬ್ರಿಟಿಗಳು (Bollywood Celebrities) ಸಾರ್ವಜನಿಕವಾಗಿ ಕಾಣಿಸಿಕೊಂಡಾಗ ಅಭಿಮಾನಿಗಳು ಮುತ್ತಿಕೊಳ್ಳುತ್ತಾರೆ. ಅವರನ್ನು ನಿಯಂತ್ರಿಸೋಕೆ ಎಂದೇ ಸೆಲೆಬ್ರಿಟಿಗಳು ಬಾಡಿಗಾರ್ಡ್ನ (Bodyguard) ಇಟ್ಟುಕೊಳ್ಳುತ್ತಾರೆ. ಎಲ್ಲೇ ಹೋದರೂ ಅವರನ್ನು ಬಾಡಿಗಾರ್ಡ್ ರಕ್ಷಿಸುತ್ತಾರೆ. ಶಾರುಖ್ ಖಾನ್, ಕತ್ರಿನಾ ಕೈಫ್, ಸಲ್ಮಾನ್ ಖಾನ್ ಸೇರಿದಂತೆ ಅನೇಕರು ಅಂಗರಕ್ಷಕರ ಜೊತೆ ಓಡಾಡುತ್ತಾರೆ. ಇವರ ಸಂಬಳದ (Bodyguard Salary) ಬಗ್ಗೆ ಅನೇಕರಿಗೆ ಕುತೂಹಲ ಇದೆ. ಇವರಿಗೆ ಕೋಟ್ಯಂತ ರೂಪಾಯಿ ಸಂಬಳ ಇದೆ.
ಕತ್ರಿನಾ ಕೈಫ್ ಬಾಡಿಗಾರ್ಡ್ ದೀಪಕ್ ಸಿಂಗ್: ನಟಿ ಕತ್ರಿನಾ ಕೈಫ್ ಅವರ ಅಂಗರಕ್ಷಕನಾಗಿ ದೀಪಕ್ ಸಿಂಗ್ ಇದ್ದಾರೆ. ಹಲವು ವರ್ಷಗಳಿಂದ ಅವರು ಕತ್ರಿನಾ ಜೊತೆ ಇದ್ದಾರೆ. ಅವರು ದೀಪಕ್ ಸಿಂಗ್ಗೆ ವರ್ಷಕ್ಕೆ ಒಂದು ಕೋಟಿ ರೂಪಾಯಿ ಸಂಭಾವನೆ ನೀಡುತ್ತಾರೆ. ಕತ್ರಿನಾ ಕೈಫ್ ಎಲ್ಲೇ ಹೋದರು ಅವರು ಕತ್ರಿನಾ ಜೊತೆ ಇರುತ್ತಾರೆ. ವಿಕ್ಕಿ ಕೌಶಲ್ನ ಮದುವೆ ಆಗಿ ಕತ್ರಿನಾ ಹಾಯಾಗಿದ್ದಾರೆ.
ಆಲಿಯಾ ಭಟ್ ಬಾಡಿಗಾರ್ಡ್ ಸುನೀಲ್ ತಲೇಕರ್: ನಟಿ ಆಲಿಯಾ ಭಟ್ ಅವರನ್ನು ಸುನೀಲ್ ತಲೇಕರ್ ರಕ್ಷಿಸುತ್ತಾ ಬರುತ್ತಿದ್ದಾರೆ. ಸಣ್ಣ ವಯಸ್ಸಿನಿಂದಲೂ ಆಲಿಯಾಗೆ ಸುನೀಲ್ ರಕ್ಷಣೆ ನೀಡುತ್ತಾ ಬರುತ್ತಿದ್ದಾರೆ. ಎಲ್ಲೇ ಹೋದರೂ ಅವರನ್ನು ನೋಡಿಕೊಳ್ಳುತ್ತಾರೆ ಸುನೀಲ್. ಅವರಿಗೆ ವರ್ಷಕ್ಕೆ 50 ಲಕ್ಷ ರೂಪಾಯಿ ಸಂಬಳ ಇದೆ. ಆಲಿಯಾ ಇತ್ತೀಚೆಗೆ ನ್ಯಾಷನಲ್ ಅವಾರ್ಡ್ ಸ್ವೀಕರಿಸಿದ್ದಾರೆ.
ಇದನ್ನೂ ಓದಿ: ಶಾರುಖ್ ಖಾನ್ಗೆ ಕೊಲೆ ಬೆದರಿಕೆ; ವೈ ಪ್ಲಸ್ ಭದ್ರತೆ ನೀಡಿದ ಸರ್ಕಾರ
ಸಲ್ಮಾನ್ ಖಾನ್ ಅವರ ಅಂಗರಕ್ಷಕ ಷೇರಾ: ಸಲ್ಮಾನ್ ಖಾನ್ ಅವರಿಗೆ ಆಗಾಗ ಕೊಲೆ ಬೆದರಿಕೆ ಬರುತ್ತಲೇ ಇರುತ್ತಿದೆ. ಅವರನ್ನು ರಕ್ಷಿಸುವ ಜವಾಬ್ದಾರಿ ಬಾಡಿಗಾರ್ಡ್ ಷೇರಾ ಮೇಲಿದೆ. ಅವರು ಹಲವು ವರ್ಷಗಳಿಂದ ಸಲ್ಲುನ ಜೊತೆಗಿದ್ದಾರೆ. 2 ಕೋಟಿ ರೂಪಾಯಿ ಸಂಭಾವನೆ ಪಡೆಯುತ್ತಾರೆ. ಸಲ್ಲು ಎಲ್ಲೇ ಹೋದರು ಅವರ ಜೊತೆಗಿದ್ದಾರೆ.
ಅಕ್ಷಯ್ ಬಾಡಿಗಾರ್ಡ್ ಶ್ರೇಯಸೇಯ: ಅಕ್ಷಯ್ ಕುಮಾರ್ ಅವರು ಬಾಲಿವುಡ್ನ ಬೇಡಿಕೆಯ ಹೀರೋ. ಅವರು ಹಲವು ಸಿನಿಮಾಗಳಲ್ಲಿ ಬ್ಯುಸಿ ಇದ್ದಾರೆ. ಈ ಕಾರಣಕ್ಕೆ ಅವರು ಹಲವು ಕಡೆಗಳಲ್ಲಿ ಓಡಾಡಬೇಕಾಗುತ್ತದೆ. ಪ್ರತಿ ಕ್ಷಣದಲ್ಲೂ ಅಕ್ಷಯ್ ಜೊತೆ ಇರುವವರು ಶ್ರೇಯಸೇಯ ಥೆಲೆ. ಅವರಿಗೆ 1.2 ಕೋಟಿ ರೂಪಾಯಿ ಸಂಬಳ ಇದೆ.
ಇದನ್ನೂ ಓದಿ: ಕೋಟ್ಯಂತರ ರೂಪಾಯಿ ಸಂಭಾವನೆ ಪಡೆವ ಸಲ್ಮಾನ್ ಖಾನ್ ಮೊದಲ ಸಂಬಳ ಎಷ್ಟು ಗೊತ್ತೆ?
ಶಾರುಖ್ ಖಾನ್ ಬಾಡಿಗಾರ್ಡ್ ರವಿ: ಶಾರುಖ್ ಖಾನ್ ಅವರು ‘ಜವಾನ್’ ಸಿನಿಮಾ ಮೂಲಕ ಜನಪ್ರಿಯತೆ ಹೆಚ್ಚಿಸಿಕೊಂಡಿದ್ದಾರೆ. ಇವರನ್ನು ರಕ್ಷಣೆ ಮಾಡುವ ರವಿಗೆ ವರ್ಷಕ್ಕೆ 2.5 ಕೋಟಿ ರೂಪಾಯಿ ಸಂಬಳ ಇದೆ. ಶಾರುಖ್ ಖಾನ್ ಅವರು ಸಾರ್ವಜನಿಕವಾಗಿ ಕಾಣಿಸಿಕೊಂಡಾಗ ಸಾಕಷ್ಟು ಜನರು ಮುತ್ತಿಕೊಳ್ಳುತ್ತಾರೆ. ಅವರನ್ನು ರಕ್ಷಣೆ ಮಾಡುವ ಜವಾಬ್ದಾರಿ ರವಿ ಮೇಲಿದೆ.
ದೀಪಿಕಾ ಪಡುಕೋಣೆ ಬಾಡಿಗಾರ್ಡ್ ಜಲಾಲ್: ‘ಪಠಾಣ್’ ನಟಿ ದೀಪಿಕಾ ಪಡುಕೋಣೆ ಅವರು ಜಲಾಲ್ ಅವರನ್ನು ಬಾಡಿಗಾರ್ಡ್ ಆಗಿ ಇಟ್ಟುಕೊಂಡಿದ್ದಾರೆ. ಅವರು ರಾಖಿ ಬ್ರದರ್ ಎನಿಸಿಕೊಂಡಿದ್ದಾರೆ. ಸಹೋದರಿಯಂತೆ ದೀಪಿಕಾನ ಅವರು ರಕ್ಷಿಸುತ್ತಾರೆ. ವರ್ಷಕ್ಕೆ ಇವರಿಗೆ ಸಿಗ್ತಿರೋದು 80 ಲಕ್ಷ ರೂಪಾಯಿ.
ಅಮಿತಾಭ್ ಬಚ್ಚನ್ ಬಾಡಿಗಾರ್ಡ್ ಜಿತೇಂದ್ರ ಶಿಂದೆ: ಅಮಿತಾಭ್ ಬಚ್ಚನ್ ಅವರ ಬಾಡಿಗಾರ್ಡ್ ಜಿತೇಂದ್ರ ಶಿಂದೆ ಇದ್ದಾರೆ. ಅಮಿತಾಭ್ ಅವರನ್ನು ಕಾಯುತ್ತಿದ್ದಾರೆ. ಅವರು ವರ್ಷಕ್ಕೆ ಪಡೆಯುತ್ತಿರುವುದು 1.2 ಕೋಟಿ ರೂಪಾಯಿ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.