‘ಜವಾನ್’ ಚಿತ್ರದಿಂದ ಬದಲಾಯ್ತು ಸಾನ್ಯಾ ಮಲ್ಹೋತ್ರಾ ವೃತ್ತಿ ಬದುಕು; ಅಟ್ಲಿ ಸಿನಿಮಾದಲ್ಲಿ ಚಾನ್ಸ್

ಅಟ್ಲಿ ಅವರು ಮತ್ತೊಂದು ಬಾಲಿವುಡ್​ ಸಿನಿಮಾ ಕೈಗೆತ್ತಿಕೊಂಡಿದ್ದಾರೆ. ಈ ಚಿತ್ರಕ್ಕೆ ವರುಣ್ ಧವನ್ ಹೀರೋ. ಕೀರ್ತಿ ಸುರೇಶ್ ಅವರು ವರುಣ್​ಗೆ ಜೊತೆಯಾಗಿದ್ದಾರೆ. ಈ ಸಿನಿಮಾಗೆ ತಾತ್ಕಾಲಿಕವಾಗಿ ‘VD18’ ಎಂದು ಶೀರ್ಷಿಕೆ ಕೊಡಲಾಗಿದೆ. ಈ ಸಿನಿಮಾ ತಂಡಕ್ಕೆ ಸಾನ್ಯಾ ಕೂಡ ಸೇರಿಕೊಂಡಿದ್ದಾರೆ ಎನ್ನಲಾಗಿದೆ.

‘ಜವಾನ್’ ಚಿತ್ರದಿಂದ ಬದಲಾಯ್ತು ಸಾನ್ಯಾ ಮಲ್ಹೋತ್ರಾ ವೃತ್ತಿ ಬದುಕು; ಅಟ್ಲಿ ಸಿನಿಮಾದಲ್ಲಿ ಚಾನ್ಸ್
ಸಾನ್ಯಾ ಮಲ್ಹೋತ್ರಾ
Follow us
 ಶ್ರೀಲಕ್ಷ್ಮೀ ಎಚ್
| Updated By: ಮದನ್​ ಕುಮಾರ್​

Updated on: Oct 20, 2023 | 5:56 PM

ಯಾವುದಾದರೂ ಸಿನಿಮಾ ಸೂಪರ್ ಹಿಟ್ ಆದರೆ, ಆ ಚಿತ್ರದಲ್ಲಿ ನಟಿಸಿದ ಬಹುತೇಕ ಎಲ್ಲಾ ಕಲಾವಿದರ ಜನಪ್ರಿಯತೆ ಹೆಚ್ಚಾಗುತ್ತದೆ. ಹಲವು ಆಫರ್​ಗಳು ಅವರನ್ನು ಹುಡುಕಿ ಬರುತ್ತವೆ. ‘ಜವಾನ್’ (Jawan) ಸಿನಿಮಾದಲ್ಲಿ ನಟಿಸಿ ಖ್ಯಾತಿ ಹೆಚ್ಚಿಸಿಕೊಂಡ ಸಾನ್ಯಾ ಮಲ್ಹೋತ್ರಾ (Sanya Malhotra) ಅವರಿಗೂ ಈಗ ಹಾಗೆಯೇ ಆಗಿದೆ. ಹಲವು ಆಫರ್​ಗಳು ಅವರನ್ನು ಹುಡುಕಿ ಬರುತ್ತಿವೆ. ನಿರ್ದೇಶಕ ಅಟ್ಲಿ (Atlee) ಅವರೇ ತಮ್ಮ ನಿರ್ದೇಶನದ ಹೊಸ ಸಿನಿಮಾದಲ್ಲಿ ನಟಿಸೋಕೆ ಅವರಿಗೆ ಆಫರ್ ನೀಡಿದ್ದಾರೆ ಎಂದು ವರದಿ ಆಗಿದೆ. ಈ ವಿಚಾರ ಕೇಳಿ ಫ್ಯಾನ್ಸ್ ಖುಷಿ ಪಟ್ಟಿದ್ದಾರೆ.

2016ರಲ್ಲಿ ರಿಲೀಸ್ ಆದ ‘ದಂಗಲ್’ ಚಿತ್ರದಲ್ಲಿ ಸಾನ್ಯಾ ಬಣ್ಣ ಹಚ್ಚಿದರು. ಇದು ಅವರ ಮೊದಲ ಸಿನಿಮಾ. ಬಬಿತಾ ಕುಮಾರಿ ಆಗಿ ಅವರು ಗಮನ ಸೆಳೆದಿದ್ದರು. ಮೊದಲ ಸಿನಿಮಾ ಹಿಟ್ ಆದ ಬಳಿಕ ಅವರನ್ನು ಹುಡುಕಿ ಹಲವು ಆಫರ್​ಗಳು ಬಂದವು. ಅವರು ಎಲ್ಲವನ್ನೂ ಒಪ್ಪಿ ನಟಿಸಿದರು. ಆದರೆ, ಅವರಿಗೆ ದೊಡ್ಡ ಮಟ್ಟದ ಗೆಲುವು ಸಿಗಲಿಲ್ಲ. ‘ಜವಾನ್’ ಸಿನಿಮಾದಿಂದ ಅವರು ಮತ್ತೆ ಗೆಲುವಿನ ನಗೆ ಬೀರಿದ್ದಾರೆ. ಅವರು ಮಾಡಿರೋ ಡಾಕ್ಟರ್ ಈರಮ್ ಪಾತ್ರ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ಎರಡು ಶೇಡ್​ನಲ್ಲಿ ಅವರು ಮಿಂಚಿದ್ದಾರೆ. ಈಗ ಅವರು ಮತ್ತೆ ಅಟ್ಲಿ ಜೊತೆ ಕೈ ಜೋಡಿಸುತ್ತಿದ್ದಾರೆ.

ಇದನ್ನೂ ಓದಿ: ‘ಜವಾನ್’ ಸಿನಿಮಾ ಮೂಲಕ ಕಮಾಲ್ ಮಾಡಿದ ಸಾನ್ಯಾ ಮಲ್ಹೋತ್ರಾ

ಅಟ್ಲಿ ಅವರು ಮತ್ತೊಂದು ಬಾಲಿವುಡ್​ ಸಿನಿಮಾ ಕೈಗೆತ್ತಿಕೊಂಡಿದ್ದಾರೆ. ಈ ಚಿತ್ರಕ್ಕೆ ವರುಣ್ ಧವನ್ ಹೀರೋ. ಕೀರ್ತಿ ಸುರೇಶ್ ಅವರು ವರುಣ್​ಗೆ ಜೊತೆಯಾಗಿದ್ದಾರೆ. ಈ ಸಿನಿಮಾಗೆ ತಾತ್ಕಾಲಿಕವಾಗಿ ‘VD18’ ಎಂದು ಶೀರ್ಷಿಕೆ ಕೊಡಲಾಗಿದೆ. ಈ ಸಿನಿಮಾ ತಂಡಕ್ಕೆ ಸಾನ್ಯಾ ಕೂಡ ಸೇರಿಕೊಂಡಿದ್ದಾರೆ ಎನ್ನಲಾಗಿದೆ. ಅಂದಹಾಗೆ, ಸಾನ್ಯಾ ಮಲ್ಹೋತ್ರಾ ಅವರು ನಾಯಕಿ ಪಾತ್ರ ಮಾಡುತ್ತಿಲ್ಲ. ಅವರದ್ದು ಅತಿಥಿ ಪಾತ್ರ. ಇದನ್ನು ಸಾನ್ಯಾ ಅವರು ಒಪ್ಪಿಕೊಂಡಿದ್ದಾರೆ. ಅಟ್ಲಿ ಕೆಲಸದ ಬಗ್ಗೆ ಅವರಿಗೆ ಖುಷಿ. ಸಾನ್ಯಾ ನಟನೆಯನ್ನು ಅಟ್ಲಿ ಮೆಚ್ಚಿಕೊಂಡಿದ್ದಾರೆ. ಈ ಕಾರಣದಿಂದಲೇ ಅತಿಥಿ ಪಾತ್ರದ ಅವಕಾಶವನ್ನು ಅವರಿಗೆ ನೀಡಿದ್ದಾರೆ. ಈ ಚಿತ್ರದ ಶೂಟಿಂಗ್ ಶೀಘ್ರವೇ ನಡೆಯಲಿದೆಯಂತೆ.

ಇದನ್ನೂ ಓದಿ: ಸಾಂಪ್ರದಾಯಿಕ ದಿರಿಸಿನಲ್ಲಿ ಮಿಂಚುವ ಸಾನ್ಯಾ ಮಲ್ಹೋತ್ರಾ

ಅಟ್ಲಿ ಸಿನಿಮಾದಲ್ಲಿ ಸಖತ್ ಆ್ಯಕ್ಷನ್ ಇರುತ್ತದೆ. ಈ ಚಿತ್ರದಲ್ಲೂ ಮಾಸ್ ಅಂಶ ಹೆಚ್ಚಿರಲಿದೆ. ವರುಣ್ ಧವನ್ ಅವರು ಪೊಲೀಸ್ ಅಧಿಕಾರಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಕೀರ್ತಿ ಸುರೇಶ್ ಅವರು ವರುಣ್ ಪತ್ನಿಯ ಪಾತ್ರ ಮಾಡುತ್ತಿದ್ದಾರೆ. ರಾಜ್​ಪಾಲ್ ಯಾದವ್ ಮೊದಲಾದವರು ಈ ಚಿತ್ರದಲ್ಲಿ ನಟಿಸಿದ್ದಾರೆ. ಸದ್ಯ ಅಟ್ಲಿ ನಿರ್ದೇಶನದ ‘ಜವಾನ್’ ಸಿನಿಮಾ 1100+ ಕೋಟಿ ರೂಪಾಯಿ ಗಳಿಕೆ ಮಾಡಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?