‘ಜವಾನ್​ 2’ ಬಗ್ಗೆ ಈಗಲೇ ಶುರುವಾಗಿದೆ ಚರ್ಚೆ; ನಟಿ ಸಾನ್ಯಾ ಮಲ್ಹೋತ್ರಾ ಹೇಳೋದೇನು?

‘ದಂಗಲ್​’ ಸಿನಿಮಾದಿಂದ ಭಾರಿ ಜನಪ್ರಿಯತೆ ಪಡೆದವರು ನಟಿ ಸಾನ್ಯಾ ಮಲ್ಹೋತ್ರಾ. ‘ಜವಾನ್​’ ಸಿನಿಮಾದಲ್ಲಿ ಅವರು ಮಾಡಿದ ಎರಡು ಶೇಡ್​ನ ಪಾತ್ರ ಕ್ಲಿಕ್​ ಆಗಿದೆ. ಈ ಪಾತ್ರವನ್ನು ಇನ್ನೂ ಹೆಚ್ಚು ಹೊತ್ತು ತೆರೆಮೇಲೆ ನೋಡಬೇಕು ಎಂದು ಅಭಿಮಾನಿಗಳು ಬಯಸುತ್ತಿದ್ದಾರೆ. ಅದಕ್ಕಾಗಿ ‘ಜವಾನ್​ ಪಾರ್ಟ್​ 2’ ಮಾಡಬೇಕು ಎಂಬ ಅಭಿಪ್ರಾಯ ವ್ಯಕ್ತವಾಗಿದೆ.

‘ಜವಾನ್​ 2’ ಬಗ್ಗೆ ಈಗಲೇ ಶುರುವಾಗಿದೆ ಚರ್ಚೆ; ನಟಿ ಸಾನ್ಯಾ ಮಲ್ಹೋತ್ರಾ ಹೇಳೋದೇನು?
ಸಾನ್ಯಾ ಮಲ್ಹೋತ್ರಾ, ಶಾರುಖ್​ ಖಾನ್​
Follow us
ಮದನ್​ ಕುಮಾರ್​
|

Updated on: Sep 13, 2023 | 5:44 PM

ಎಲ್ಲ ಕಡೆಗಳಲ್ಲಿ ‘ಜವಾನ್​’ ಸಿನಿಮಾ (Jawan Movie) ಅಬ್ಬರಿಸಿದೆ. ಸೆಪ್ಟೆಂಬರ್​ 7ರಂದು ಬಿಡುಗಡೆ ಆಗಿರುವ ಈ ಸಿನಿಮಾ ವಿಶ್ವಾದ್ಯಂತ 6 ದಿನಕ್ಕೆ 621 ಕೋಟಿ ರೂಪಾಯಿಗೂ ಹೆಚ್ಚು ಕಲೆಕ್ಷನ್​ ಮಾಡಿ ಮುನ್ನುಗ್ಗುತ್ತಿದೆ. ಇನ್ನೂ ಹಲವು ದಿನಗಳ ಕಾಲ ಈ ಚಿತ್ರದ ಹವಾ ಮುಂದುವರಿಯಲಿದೆ. ನಟ ಶಾರುಖ್​ ಖಾನ್​ ಅವರು ‘ಜವಾನ್​’ ಸಿನಿಮಾ ಮೂಲಕ ಈ ವರ್ಷದಲ್ಲಿ ಎರಡನೇ ಗೆಲುವು ಕಂಡಿದ್ದಾರೆ. 2023ರ ಆರಂಭದಲ್ಲಿ ಬಿಡುಗಡೆ ಆಗಿದ್ದ ‘ಪಠಾಣ್​’ ಸಿನಿಮಾ ಕೂಡ ಇದೇ ರೀತಿ ಗೆದ್ದು ಬೀಗಿತ್ತು. ಯಾವುದೇ ಚಿತ್ರ ಸೂಪರ್​ ಹಿಟ್​ ಆದರೆ ಅದಕ್ಕೆ ಸೀಕ್ವೆಲ್​ ಮಾಡುವ ಬಗ್ಗೆ ಮಾತುಕತೆಗಳು ಬರುತ್ತವೆ. ಈಗ ‘ಜವಾನ್​’ ಚಿತ್ರಕ್ಕೂ ಹಾಗೆಯೇ ಆಗುತ್ತಿದೆ. ‘ಜವಾನ್​ 2’ (Jawan 2) ಸಿನಿಮಾ ಬರುತ್ತಾ ಎಂಬ ಪ್ರಶ್ನೆ ಮೂಡಿದೆ. ಅದಕ್ಕೆ ಇಂಬು ನೀಡುವಂತಹ ಮಾತುಗಳನ್ನು ಈ ಸಿನಿಮಾದ ನಟಿ ಸಾನ್ಯಾ ಮಲ್ಹೋತ್ರಾ (Sanya Malhotra) ಹೇಳಿದ್ದಾರೆ.

‘ದಂಗಲ್​’ ಸಿನಿಮಾದಿಂದ ಭಾರಿ ಜನಪ್ರಿಯತೆ ಪಡೆದವರು ನಟಿ ಸಾನ್ಯಾ ಮಲ್ಹೋತ್ರಾ. ಆಮಿರ್​ ಖಾನ್​ ಬಳಗದಲ್ಲಿ ಗುರುತಿಸಿಕೊಂಡಿದ್ದ ಅವರಿಗೆ ಶಾರುಖ್​ ಖಾನ್​ ಕೂಡ ಒಳ್ಳೆಯ ಅವಕಾಶ ನೀಡಿದರು. ‘ಜವಾನ್​’ ಸಿನಿಮಾದಲ್ಲಿ ಅವರು ಮಾಡಿದ ಎರಡು ಶೇಡ್​ನ ಪಾತ್ರ ಕ್ಲಿಕ್​ ಆಗಿದೆ. ಈ ಪಾತ್ರವನ್ನು ಇನ್ನೂ ಹೆಚ್ಚು ಹೊತ್ತು ತೆರೆಮೇಲೆ ನೋಡಬೇಕು ಎಂದು ಅಭಿಮಾನಿಗಳು ಬಯಸುತ್ತಿದ್ದಾರೆ. ಅದಕ್ಕಾಗಿ ‘ಜವಾನ್​ ಪಾರ್ಟ್​ 2’ ಮಾಡಬೇಕು ಎಂಬ ಅಭಿಪ್ರಾಯ ವ್ಯಕ್ತವಾಗಿದೆ.

ಇದನ್ನೂ ಓದಿ: ‘ಜವಾನ್​’ ಚಿತ್ರದಲ್ಲಿ ಶಾರುಖ್​ ಖಾನ್​ ಜೊತೆ ಮಿಂಚಿದ ಕಲಾವಿದರು

‘ಜವಾನ್​’ ಸಿನಿಮಾದಲ್ಲಿ ಡಿಲೀಟ್​ ಅಥವಾ ಎಡಿಟ್​ ಆದ ದೃಶ್ಯಗಳನ್ನೂ ಸೇರಿಸಿ ಈ ಚಿತ್ರವನ್ನು ವಿಸ್ತೃತ ರೂಪದಲ್ಲಿ ಬಿಡುಗಡೆ ಮಾಡಲಿ ಎಂದು ಕೆಲವರು ಆಸೆಪಟ್ಟಿದ್ದಾರೆ. ಸಾನ್ಯಾ ಮಲ್ಹೋತ್ರಾ ಅವರಿಗೂ ಅದೇ ಆಸೆ ಇದೆ. ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಅವರು ಈ ಕುರಿತು ಮಾತನಾಡಿದ್ದಾರೆ. ‘ಪ್ರೇಕ್ಷಕಳಾಗಿ ನಾನು ಕೂಡ ಈ ಸಿನಿಮಾವನ್ನು ವಿಸ್ತೃತ ರೂಪದಲ್ಲಿ ನೋಡಲು ಬಯಸುತ್ತೇನೆ. ಅದನ್ನು ಚಿತ್ರತಂಡದವರು ಬಿಡುಗಡೆ ಮಾಡುತ್ತಾರೆ ಎಂದುಕೊಳ್ಳುತ್ತೇನೆ. ಒಂದು ವೇಳೆ ಅದು ಸಾಧ್ಯವಾಗದೇ ಇದ್ದರೆ ಅವರು ‘ಜವಾನ್​ 2’ ಸಿನಿಮಾ ಮಾಡುತ್ತಾರೆ ಹಾಗೂ ಆ ಚಿತ್ರದಲ್ಲಿ ನಟಿಸಲು ನನಗೆ ಅವಕಾಶ ನೀಡುತ್ತಾರೆ ಅಂತ ಭಾವಿಸಿದ್ದೇನೆ’ ಎಂದು ಸಾನ್ಯಾ ಮಲ್ಹೋತ್ರಾ ಹೇಳಿದ್ದಾರೆ.

ಇದನ್ನೂ ಓದಿ: Jawan Movie Review: ಶಾರುಖ್​ ಖಾನ್​ ಅಭಿಮಾನಿಗಳಿಗಾಗಿ ಅಟ್ಲಿ ಮಾಡಿದ ಮಿಕ್ಸ್​ ಮಸಾಲಾ ಸಿನಿಮಾ

ಡಾ. ಈರಂ ಎಂಬ ಪಾತ್ರಕ್ಕೆ ಸಾನ್ಯಾ ಮಲ್ಹೋತ್ರಾ ಬಣ್ಣ ಹಚ್ಚಿದ್ದಾರೆ. ರಿಯಲ್​ ಲೈಫ್​ ಘಟನೆಗಳಿಂದ ಸ್ಫೂರ್ತಿ ಪಡೆದು ಈ ಪಾತ್ರವನ್ನು ಕಟ್ಟಿಕೊಡಲಾಗಿದೆ ಎಂದು ಪ್ರೇಕ್ಷಕರು ಅಭಿಪ್ರಾಯಪಟ್ಟಿದ್ದಾರೆ. ‘ಜವಾನ್​’ ಸಿನಿಮಾದಲ್ಲಿ ಈ ಪಾತ್ರವನ್ನು ನೋಡಿದ ಎಲ್ಲರಿಗೂ ಗೋರಕ್​ಪುರ ಆಸ್ಪತ್ರೆ ದುರಂತದ ಕೇಸ್​ನಲ್ಲಿ ಅರೆಸ್ಟ್​ ಆಗಿದ್ದ ಡಾ. ಕಫೀಲ್​ ಖಾನ್​ ಅವರ ನೆನಪಾಗಿದೆ. ಒಟ್ಟಿನಲ್ಲಿ ಈ ಸಿನಿಮಾದ ಪಾತ್ರಗಳನ್ನು ಜನರು ಈ ಪರಿ ಇಷ್ಟಪಟ್ಟಿರುವುದು ಸಾನ್ಯಾ ಮಲ್ಹೋತ್ರಾ ಅವರಿಗೆ ಖುಷಿ ನೀಡಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ