AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಜವಾನ್’ ಸಿನಿಮಾ ಶೂಟಿಂಗ್ ಸೆಟ್​​ನಲ್ಲಿ ಶಾರುಖ್ ಖಾನ್ ತಮಿಳು ಮಾತನಾಡಿದ ಅಪರೂಪದ ವಿಡಿಯೋ

‘ಜವಾನ್’ಸಿನಿಮಾದಲ್ಲಿ ‘ಚಲಿಯಾ..’ ಹಾಡು ಇದೆ. ಈ ಹಾಡಿನಲ್ಲಿ ಬರುವ ತಮಿಳಿನ ಸಾಲಿಗಾಗಿ ಅವರು ಈ ತಯಾರಿ ಮಾಡಿಕೊಂಡಿದ್ದರು. ಶಾರುಖ್ ಖಾನ್ ಅವರು ಸೆಟ್​ನಲ್ಲಿ ತಮಿಳು ಮಾತನಾಡುತ್ತಿರುವ ವಿಡಿಯೋ ಒಂದು ವೈರಲ್ ಆಗಿದೆ. ಅವರು ಕಷ್ಟಪಟ್ಟು ಅಟ್ಲಿ ಜೊತೆ ತಮಿಳಿನಲ್ಲಿ ಮಾತನಾಡುತ್ತಾರೆ. ಈ ವಿಡಿಯೋ ಸಖತ್ ಫನ್ನಿಯಾಗಿದೆ.

‘ಜವಾನ್’ ಸಿನಿಮಾ ಶೂಟಿಂಗ್ ಸೆಟ್​​ನಲ್ಲಿ ಶಾರುಖ್ ಖಾನ್ ತಮಿಳು ಮಾತನಾಡಿದ ಅಪರೂಪದ ವಿಡಿಯೋ
ಶಾರುಖ್-ಅಟ್ಲಿ
ರಾಜೇಶ್ ದುಗ್ಗುಮನೆ
|

Updated on: Sep 14, 2023 | 10:55 AM

Share

‘ಜವಾನ್’ ಸಿನಿಮಾ (Jawan Movie) ಬಗ್ಗೆ ಅಭಿಮಾನಿಗಳಿಗೆ ಸಾಕಷ್ಟು ನಿರೀಕ್ಷೆ ಇತ್ತು. ಈ ನಿರೀಕ್ಷೆ ಹುಸಿ ಆಗಿಲ್ಲ. ವಾರದ ದಿನಗಳಲ್ಲೂ ಸಿನಿಮಾ ಕೋಟಿ ಕೋಟಿ ರೂಪಾಯಿ ಗಳಿಕೆ ಮಾಡುತ್ತಿದೆ. ಬುಧವಾರ (ಸೆಪ್ಟೆಂಬರ್ 14) ಈ ಚಿತ್ರ ಹಿಂದಿಯಲ್ಲಿ 21 ಕೋಟಿ ರೂಪಾಯಿ ಗಳಿಕೆ ಮಾಡಿಕೊಂಡಿದೆ. ಈ ಚಿತ್ರದ ಶೂಟಿಂಗ್ ಸಖತ್ ಫನ್ ಆಗಿತ್ತು. ಅದನ್ನು ತಂಡದವರು ಹಲವು ಬಾರಿ ಹೇಳಿಕೊಂಡಿದ್ದಿದೆ. ಈಗ ‘ಜವಾನ್’ ಸಿನಿಮಾ ಶೂಟಿಂಗ್ ಸಂದರ್ಭದ ವಿಡಿಯೋ ಒಂದು ವೈರಲ್ ಆಗಿದೆ.

ಶಾರುಖ್ ಖಾನ್ ಬಾಲಿವುಡ್​ನವರು. ಅವರು ಹಿಂದಿಯನ್ನೇ ಮಾತನಾಡುತ್ತಾ ಬರುತ್ತಿದ್ದಾರೆ. ಹೀಗಾಗಿ ಅವರಿಗೆ ತಮಿಳು ಭಾಷೆ ಹೊಸದು. ಆದರೆ, ‘ಜವಾನ್’ ಸಿನಿಮಾದಲ್ಲಿ ತಮಿಳು ಮಾತನಾಡುವವರ ಜೊತೆ ಒಳ್ಳೆಯ ಒಡನಾಟ ಬೆಳೆಯಿತು. ನಿರ್ದೇಶಕ ಅಟ್ಲಿ ಅವರು ತಮಿಳುನಾಡಿನವರು. ಪಾತ್ರವರ್ಗದಲ್ಲಿರುವ ನಯನತಾರಾ, ವಿಜಯ್ ಸೇತುಪತಿ ಹಾಗೂ ಪ್ರಿಯಾಮಣಿಗೂ ತಮಿಳು ಭಾಷೆ ಬರುತ್ತದೆ. ಈ ಕಾರಣದಿಂದ ಸಿನಿಮಾದ ಹಾಡೊಂದರಲ್ಲಿ ತಮಿಳಿನ ಸಾಲನ್ನು ಬೆರೆಸಲಾಗಿದೆ.

‘ಜವಾನ್’ಸಿನಿಮಾದಲ್ಲಿ ‘ಚಲಿಯಾ..’ ಹಾಡು ಇದೆ. ಈ ಹಾಡಿನಲ್ಲಿ ಬರುವ ತಮಿಳಿನ ಸಾಲಿಗಾಗಿ ಅವರು ಈ ತಯಾರಿ ಮಾಡಿಕೊಂಡಿದ್ದರು. ಶಾರುಖ್ ಖಾನ್ ಅವರು ಸೆಟ್​ನಲ್ಲಿ ತಮಿಳು ಮಾತನಾಡುತ್ತಿರುವ ವಿಡಿಯೋ ಒಂದು ವೈರಲ್ ಆಗಿದೆ. ಅವರು ಕಷ್ಟಪಟ್ಟು ಅಟ್ಲಿ ಜೊತೆ ತಮಿಳಿನಲ್ಲಿ ಮಾತನಾಡುತ್ತಾರೆ. ಈ ವಿಡಿಯೋ ಸಖತ್ ಫನ್ನಿಯಾಗಿದೆ. ಸದ್ಯ ಅಭಿಮಾನಿಗಳ ವಲಯದಲ್ಲಿ ಈ ವಿಡಿಯೋ ವೈರಲ್ ಆಗುತ್ತಿದೆ. ಶಾರುಖ್ ಖಾನ್ ಅವರು ಸಾಕಷ್ಟು ಶ್ರದ್ಧೆಯಿಂದ ಈ ಸಾಲುಗಳನ್ನು ಕಲಿತು ಹೇಳಿದ್ದಾರೆ.

View this post on Instagram

A post shared by Maha (@mahasrk1)

ಇದನ್ನೂ ಓದಿ: ‘ಜವಾನ್​ 2’ ಬಗ್ಗೆ ಈಗಲೇ ಶುರುವಾಗಿದೆ ಚರ್ಚೆ; ನಟಿ ಸಾನ್ಯಾ ಮಲ್ಹೋತ್ರಾ ಹೇಳೋದೇನು?

‘ಜವಾನ್’ ಸಿನಿಮಾ ಸೆಪ್ಟೆಂಬರ್ 7ರಂದು ರಿಲೀಸ್ ಆಗಿ ಸೂಪರ್ ಹಿಟ್ ಆಯಿತು. ಮೊದಲ ದಿನವೇ ಈ ಚಿತ್ರ ವಿಶ್ವ ಬಾಕ್ಸ್ ಆಫೀಸ್​ನಲ್ಲಿ ನೂರಾರು ಕೋಟಿ ರೂಪಾಯಿ ಬಾಚಿಕೊಂಡಿದೆ. ಈ ಸಿನಿಮಾ ಈಗಲೂ ಒಳ್ಳೆಯ ಗಳಿಕೆ ಮಾಡುತ್ತಿದೆ. ಹಿಂದಿ ಭಾಗದಲ್ಲಿ ಚಿತ್ರಕ್ಕೆ ಒಳ್ಳೆಯ ಗಳಿಕೆ ಆಗುತ್ತಿದೆ. ಮುಂದಿನ ವಾರ ಗಣೇಶ ಚತುರ್ಥಿ ಪ್ರಯುಕ್ತ ರಜೆ ಇದೆ. ಇದು ಚಿತ್ರಕ್ಕೆ ಸಹಕಾರಿ ಆಗಲಿದೆ. ಶೀಘ್ರವೇ ಶಾರುಖ್ ಖಾನ್ ಅವರು ‘ಡಂಕಿ’ ಸಿನಿಮಾ ಕೆಲಸಗಳಲ್ಲಿ ತೊಡಗಿಕೊಳ್ಳಲಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

ಸೊಸೆಗೆ ನೌಕರಿ ಕೊಟ್ಟಿಲ್ಲವೆಂದು ಅಂಗನವಾಡಿಗೆ ಬೀಗ ಜಡಿದ ಮಾಲೀಕ!
ಸೊಸೆಗೆ ನೌಕರಿ ಕೊಟ್ಟಿಲ್ಲವೆಂದು ಅಂಗನವಾಡಿಗೆ ಬೀಗ ಜಡಿದ ಮಾಲೀಕ!
ರಸ್ತೆಯಲ್ಲಿ ಹೋಗುತ್ತಿದ್ದ 3 ವರ್ಷದ ಬಾಲಕನ ಮೇಲೆ ಬೀದಿ ನಾಯಿಗಳ ದಾಳಿ
ರಸ್ತೆಯಲ್ಲಿ ಹೋಗುತ್ತಿದ್ದ 3 ವರ್ಷದ ಬಾಲಕನ ಮೇಲೆ ಬೀದಿ ನಾಯಿಗಳ ದಾಳಿ
ಧ್ರುವಂತ್ ಮೇಲೆ ರಕ್ಷಿತಾ ಶೆಟ್ಟಿಗೆ ಮೂಡಿದೆ ಕರುಣೆ: ಕರಗಿತು ಮನಸ್ಸು
ಧ್ರುವಂತ್ ಮೇಲೆ ರಕ್ಷಿತಾ ಶೆಟ್ಟಿಗೆ ಮೂಡಿದೆ ಕರುಣೆ: ಕರಗಿತು ಮನಸ್ಸು
ಹುಬ್ಬಳ್ಳಿ ಕೇಸ್​: ನಾಪತ್ತೆಯಾಗಿದ್ದ ಕೈ ಸದಸ್ಯೆ ಪೊಲೀಸ್​​ ವಶಕ್ಕೆ
ಹುಬ್ಬಳ್ಳಿ ಕೇಸ್​: ನಾಪತ್ತೆಯಾಗಿದ್ದ ಕೈ ಸದಸ್ಯೆ ಪೊಲೀಸ್​​ ವಶಕ್ಕೆ
ಯಶ್ ರೇಂಜ್ ಸಾಮಾನ್ಯದ್ದಲ್ಲ: ವಿವರಿಸಿದ ನಿರ್ಮಾಪಕ ಕೆ ಮಂಜು
ಯಶ್ ರೇಂಜ್ ಸಾಮಾನ್ಯದ್ದಲ್ಲ: ವಿವರಿಸಿದ ನಿರ್ಮಾಪಕ ಕೆ ಮಂಜು
ಕಠಿಣವಾಗುತ್ತಿವೆ ಟಾಸ್ಕ್​​ಗಳು, ಗೆಲ್ಲುವರು ಯಾರು? ಬೀಳುವರು ಯಾರು?
ಕಠಿಣವಾಗುತ್ತಿವೆ ಟಾಸ್ಕ್​​ಗಳು, ಗೆಲ್ಲುವರು ಯಾರು? ಬೀಳುವರು ಯಾರು?
ಗೃಹಲಕ್ಷ್ಮಿ ಹಣದ ಬಗ್ಗೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಶಾಕಿಂಗ್ ಹೇಳಿಕೆ
ಗೃಹಲಕ್ಷ್ಮಿ ಹಣದ ಬಗ್ಗೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಶಾಕಿಂಗ್ ಹೇಳಿಕೆ
ಕರ್ನಾಟಕದ ಆಸ್ತಿ ಮಾಲೀಕರಿಗೆ ಗುಡ್​​ ನ್ಯೂಸ್: ಸಂಪುಟದಲ್ಲಿ ಮಹತ್ವದ ತೀರ್ಮಾನ
ಕರ್ನಾಟಕದ ಆಸ್ತಿ ಮಾಲೀಕರಿಗೆ ಗುಡ್​​ ನ್ಯೂಸ್: ಸಂಪುಟದಲ್ಲಿ ಮಹತ್ವದ ತೀರ್ಮಾನ
ಧುರಂಧರ್ 2 Vs ಟಾಕ್ಸಿಕ್: ಟೀಕೆ ಮಾಡಿದವರಿಗೆ ತಿರುಗೇಟು ಕೊಟ್ಟ ಕೆ. ಮಂಜು
ಧುರಂಧರ್ 2 Vs ಟಾಕ್ಸಿಕ್: ಟೀಕೆ ಮಾಡಿದವರಿಗೆ ತಿರುಗೇಟು ಕೊಟ್ಟ ಕೆ. ಮಂಜು
ಕೋಗಿಲು ಆಯ್ತು ಈಗ ಥಣಿಸಂದ್ರದಲ್ಲಿ ಆಪರೇಷನ್ ಒತ್ತುವರಿ
ಕೋಗಿಲು ಆಯ್ತು ಈಗ ಥಣಿಸಂದ್ರದಲ್ಲಿ ಆಪರೇಷನ್ ಒತ್ತುವರಿ