AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಶಾರುಖ್ ಖಾನ್ ಜೊತೆ ‘ಜವಾನ್’ ಬಳಿಕ ಮತ್ತೊಬ್ಬ ಸ್ಟಾರ್ ಸಿನಿಮಾದಲ್ಲಿ ಪ್ರಿಯಾಮಣಿ

Priyamani: ಬೆಂಗಳೂರಿನ ಚೆಲುವೆ, ರಾಷ್ಟ್ರಪ್ರಶಸ್ತಿ ವಿಜೇತ ನಟಿ ಪ್ರಿಯಾಮಣಿ, ಶಾರುಖ್ ಖಾನ್ ನಟನೆಯ 'ಜವಾನ್' ಸಿನಿಮಾದಲ್ಲಿ ನಟಿಸಿದ್ದರು. ಈಗ ಮತ್ತೊಬ್ಬ ಸೂಪರ್ ಸ್ಟಾರ್ ನಟನೊಟ್ಟಿಗೆ ನಟಿಸುವ ಅವಕಾಶ ಬಾಚಿಕೊಂಡಿದ್ದಾರೆ.

ಶಾರುಖ್ ಖಾನ್ ಜೊತೆ 'ಜವಾನ್' ಬಳಿಕ ಮತ್ತೊಬ್ಬ ಸ್ಟಾರ್ ಸಿನಿಮಾದಲ್ಲಿ ಪ್ರಿಯಾಮಣಿ
ಪ್ರಿಯಾಮಣಿ
ಮಂಜುನಾಥ ಸಿ.
|

Updated on: Sep 13, 2023 | 9:30 PM

Share

ಕರ್ನಾಟಕದ ಚೆಲುವೆ, ರಾಷ್ಟ್ರಪ್ರಶಸ್ತಿ ವಿಜೇತ ನಟಿ ಪ್ರಿಯಾಮಣಿ (Priyamani) ಪರಭಾಷೆಗಳಲ್ಲಿ ಮಿಂಚಿದ್ದೇ ಹೆಚ್ಚು. ಕನ್ನಡ ಸಿನಿಮಾಗಳಲ್ಲಿ ನಟಿಸಿದ್ದಾರಾದರೂ ಪರಭಾಷೆಯ ಸಿನಿಮಾಗಳಲ್ಲಿ ತುಸು ಹೆಚ್ಚೇ ನಟಿಸಿದ್ದಾರೆ. ಇತ್ತೀಚೆಗೆ ಬಿಡುಗಡೆ ಆಗಿ ಸೂಪರ್ ಹಿಟ್ ಆಗಿರುವ ಶಾರುಖ್ ಖಾನ್ ನಟನೆಯ ‘ಜವಾನ್’ ಸಿನಿಮಾದಲ್ಲಿ ನಟಿಸಿರುವ ಪ್ರಿಯಾಮಣಿ ಈಗ ಮತ್ತೊಬ್ಬ ಸ್ಟಾರ್ ನಟನೊಟ್ಟಿಗೆ ಅವಕಾಶ ಬಾಚಿಕೊಂಡಿದ್ದಾರೆ.

ಪ್ರಿಯಾಮಣಿ ಇದೀಗ ಮಲಯಾಳಂ ಸೂಪರ್ ಸ್ಟಾರ್ ಮೋಹನ್​ಲಾಲ್ ಜೊತೆಗೆ ಹೊಸ ಸಿನಿಮಾ ಒಂದರಲ್ಲಿ ನಟಿಸಲಿದ್ದಾರೆ. ಮೋಹನ್​ಲಾಲ್ ನಟಿಸುತ್ತಿರುವ ‘ನೇರು’ ಸಿನಿಮಾದ ಮುಖ್ಯ ಪಾತ್ರಕ್ಕೆ ಪ್ರಿಯಾಮಣಿ ಬಣ್ಣಹಚ್ಚಲಿದ್ದಾರೆ. ಈ ಬಗ್ಗೆ ಪ್ರಿಯಾಮಣಿ ತಮ್ಮ ಸಾಮಾಜಿಕ ಜಾಲತಾಣ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದ್ದು, ಈಗಾಗಲೇ ‘ನೇರು’ ಸಿನಿಮಾಕ್ಕಾಗಿ ಚಿತ್ರೀಕರಣವನ್ನೂ ಪ್ರಾರಂಭಿಸಿದ್ದಾರೆ ನಟಿ ಪ್ರಿಯಾಮಣಿ.

‘ನೇರು’ ಸಿನಿಮಾವನ್ನು ಮಲಯಾಳಂನ ಜನಪ್ರಿಯ ನಿರ್ದೇಶಕ ಜೀತು ಜೋಸೆಫ್ ನಿರ್ದೇಶನ ಮಾಡಲಿದ್ದಾರೆ. ಈ ಹಿಂದೆ ಮೋಹನ್​ಲಾಲ್ ನಟನೆಯ ಸೂಪರ್-ಡೂಪರ್ ಹಿಟ್ ಸಿನಿಮಾ ‘ದೃಶ್ಯಂ’, ‘ದೃಶ್ಯಂ 2’ ಸಿನಿಮಾಗಳನ್ನು ಇವರೇ ನಿರ್ದೇಶಿಸಿದ್ದರು. ‘ನೇರು’ ಜೀತು ಜೋಸೆಫ್ ಹಾಗೂ ಮೋಹನ್​ಲಾಲ್ ಒಟ್ಟಿಗೆ ಕೆಲಸ ಮಾಡುತ್ತಿರುವ ಐದನೇ ಸಿನಿಮಾ ಆಗಿದೆ. ಈ ಸಿನಿಮಾ ಕೋರ್ಟ್ ರೂಂ ಡ್ರಾಮಾ ಆಗಿರಲಿದ್ದು, ಮೋಹನ್​ಲಾಲ್ ವಕೀಲನ ಪಾತ್ರದಲ್ಲಿ ನಟಿಸಲಿದ್ದಾರೆ ಎನ್ನಲಾಗುತ್ತಿದೆ. ಪ್ರಿಯಾಮಣಿಗೂ ವಕೀಲೆಯ ಪಾತ್ರವೇ ಇರಲಿದೆ ಎಂಬ ಸುದ್ದಿಗಳೂ ಇವೆ.

ಇದನ್ನೂ ಓದಿ:ಕೋಟಿ ಸಂಭಾವನೆ ಕೊಟ್ಟರೂ ತೆರೆಮೇಲೆ ಪ್ರಿಯಾಮಣಿ ಕಿಸ್ ಮಾಡೋದಿಲ್ಲ ಏಕೆ? ನಟಿ ಕೊಟ್ರು ಉತ್ತರ

ಬೆಂಗಳೂರಿನಲ್ಲಿ ಜನಿಸಿದ ಪ್ರಿಯಾಮಣಿ ನಟನೆ ಆರಂಭಿಸಿದ್ದು ತಮಿಳು ಸಿನಿಮಾದ ಮೂಲಕ ಆದರೆ ಅವರು ನಟಿಸಿದ ಎರಡನೇ ಸಿನಿಮಾ ತೆಲುಗಿನ ‘ಎವರೀ ಆಟಗಾಡು’ ಮೊದಲು ಬಿಡುಗಡೆ ಆಯ್ತು. ಆ ನಂತರ ತಮಿಳು ಹಾಗೂ ತೆಲುಗು ಭಾಷೆಗಲ್ಲಿ ಹಲವು ಸಿನಿಮಾಗಳಲ್ಲಿ ಪ್ರಿಯಾಮಣಿ ನಟಿಸಿದರು. 2007 ರಲ್ಲಿ ಬಿಡುಗಡೆ ಆದ ತಮಿಳಿನ ‘ಪರುತ್ತಿವೀರನ್’ ಸಿನಿಮಾದಲ್ಲಿನ ಅವರ ನಟನೆಗೆ ರಾಷ್ಟ್ರ ಪ್ರಶಸ್ತಿ ಸಹ ದೊರಕಿತು. 2003 ರಲ್ಲಿಯೇ ನಟನೆ ಆರಂಭಿಸಿದ ಪ್ರಿಯಾಮಣಿ ಕನ್ನಡಕ್ಕೆ ಬಂದಿದ್ದು 2009 ರಲ್ಲಿ ಬಿಡುಗಡೆ ಆದ ಪುನೀತ್ ರಾಜ್​ಕುಮಾರ್ ನಟನೆಯ ‘ರಾಮ್ ‘ ಸಿನಿಮಾ ಮೂಲಕ ಆ ಬಳಿಕ ಹಲವು ಕನ್ನಡ ಸಿನಿಮಾಗಳಲ್ಲಿ ಪ್ರಿಯಾಮಣಿ ನಟಿಸಿದರು.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ