ಬಾಲಿವುಡ್​ ಪ್ರೇಕ್ಷಕರು ಎಂದಿಗೂ ಮರೆಯದ ‘ಡಿಡಿಎಲ್​ಜೆ’ ಸಿನಿಮಾಗೆ ಈಗ 28 ವರ್ಷ

ಭಾರತೀಯ ಸಿನಿಮಾ ಇತಿಹಾಸದಲ್ಲಿ ಅತಿ ಹೆಚ್ಚು ವರ್ಷಗಳ ಕಾಲ ಪ್ರದರ್ಶನ ಕಂಡ ಸಿನಿಮಾ ಎಂಬ ಖ್ಯಾತಿ ‘ಡಿಡಿಎಲ್​ಜೆ’ ಚಿತ್ರಕ್ಕೆ ಸಲ್ಲುತ್ತದೆ. ಶಾರುಖ್​ ಖಾನ್​ ಮತ್ತು ಕಾಜೋಲ್​ ನಟನೆಯ ಈ ಸಿನಿಮಾ ಮಾಡಿರುವ ಮೋಡಿ ಅಂಥದ್ದು. ಈ ಸಿನಿಮಾ ಮೇಲೆ ಅಭಿಮಾನಿಗಳು ತೋರಿಸಿದ ಪ್ರೀತಿಗೆ ಕಾಜೋಲ್​ ಅವರು ಧನ್ಯವಾದ ಸಲ್ಲಿಸಿದ್ದಾರೆ.

ಬಾಲಿವುಡ್​ ಪ್ರೇಕ್ಷಕರು ಎಂದಿಗೂ ಮರೆಯದ ‘ಡಿಡಿಎಲ್​ಜೆ’ ಸಿನಿಮಾಗೆ ಈಗ 28 ವರ್ಷ
ಶಾರುಖ್​ ಖಾನ್​, ಕಾಜೋಲ್​
Follow us
ಮದನ್​ ಕುಮಾರ್​
|

Updated on: Oct 20, 2023 | 4:20 PM

ಕೆಲವು ಸಿನಿಮಾಗಳು ಪ್ರೇಕ್ಷಕರ ಮನದಲ್ಲಿ ಶಾಶ್ವತವಾದ ಸ್ಥಾನ ಪಡೆದುಕೊಳ್ಳುತ್ತವೆ. ಬಾಲಿವುಡ್​ನ ‘ಡಿಡಿಎಲ್​ಜೆ’ (DDLJ) ಸಿನಿಮಾಗೆ ಆ ಸ್ಥಾನ ಸಿಕ್ಕಿದೆ. ಈ ಸಿನಿಮಾ ಬಿಡುಗಡೆಯಾಗಿ ಎರಡೂವರೆ ದಶಕ ಕಳೆದಿದ್ದರೂ ಕೂಡ ಇದರ ಚಾರ್ಮ್​ ಕಡಿಮೆ ಆಗಿಲ್ಲ. ಇಂದಿಗೆ (ಅಕ್ಟೋಬರ್​ 20) ‘ಡಿಡಿಎಲ್​ಜೆ’ ಸಿನಿಮಾ 28 ವರ್ಷಗಳನ್ನು ಪೂರೈಸಿದೆ. ಈ ವಿಶೇಷ ಕ್ಷಣಕ್ಕಾಗಿ ನಟಿ ಕಾಜೋಲ್​ (Kajol) ಅವರು ಒಂದು ಪೋಸ್ಟ್​ ಮಾಡಿದ್ದಾರೆ. ಶಾರುಖ್​ ಖಾನ್​ (Shah Rukh Khan), ಕಾಜೋಲ್​, ಅಮರೀಶ್​ ಪುರಿ, ಅನುಪಮ್​ ಖೇರ್​ ಮುಂತಾದವರು ಮುಖ್ಯ ಭೂಮಿಕೆ ನಿಭಾಯಿಸಿದ ಈ ಸಿನಿಮಾ ಇಂದಿಗೂ ಎವರ್​ಗ್ರೀನ್​ ಆಗಿ ಉಳಿದುಕೊಂಡಿದೆ.

‘ದಿಲ್​ವಾಲೆ ದುಲ್ಹನಿಯಾ ಲೇ ಜಾಯೆಂಗೆ’ ಎಂಬುದು ‘ಡಿಡಿಎಲ್​ಜೆ’ ಶೀರ್ಷಿಕೆಯ ವಿಸ್ತೃತ ರೂಪ. 1995ರ ಅಕ್ಟೋಬರ್​ 20ರಂದು ಈ ಸಿನಿಮಾ ಬಿಡುಗಡೆ ಆಗಿತ್ತು. ಯಶ್​ ಚೋಪ್ರಾ ನಿರ್ಮಾಣದ ಈ ಚಿತ್ರಕ್ಕೆ ಆದಿತ್ಯ ಚೋಪ್ರಾ ನಿರ್ದೇಶನ ಮಾಡಿದ್ದರು. ಕರಣ್​ ಜೋಹರ್​ ಕೂಡ ಈ ಸಿನಿಮಾದಲ್ಲಿ ಒಂದು ಪಾತ್ರ ಮಾಡಿದ್ದರು. ಶಾರುಖ್​ ಖಾನ್​ ಮತ್ತು ಕಾಜೋಲ್​ ಅವರ ಕಾಂಬಿನೇಷನ್​ ನೋಡಿ ಪ್ರೇಕ್ಷಕರು ಸಖತ್​ ಇಷ್ಟಪಟ್ಟರು. ಅವರು ಚಿತ್ರರಂಗದಲ್ಲಿ ಭದ್ರವಾಗಿ ನೆಲೆ ಕಂಡುಕೊಳ್ಳಲು ಈ ಸಿನಿಮಾ ಕಾರಣವಾಯಿತು. ಆ ಸವಿ ನೆನಪುಗಳನ್ನು ಕಾಜೋಲ್​ ಈಗ ಮೆಲುಕು ಹಾಕಿದ್ದಾರೆ.

ಇದನ್ನೂ ಓದಿ: Kajol: ಜನಾಂಗೀಯ ನಿಂದನೆ ಮಾಡುವಂತಹ ಪದ ಬಳಸಿದ ಕಾಜೋಲ್​​​ ವಿಡಿಯೋ ವೈರಲ್​; ನೆಟ್ಟಿಗರಿಂದ ಕ್ಲಾಸ್​

ಲವ್​, ಕಾಮಿಡಿ, ಫ್ಯಾಮಿಲಿ ಸೆಂಟಿಮೆಂಟ್​ ಮುಂತಾದ ಅಂಶಗಳನ್ನು ಒಳಗೊಂಡ ಕಥೆ ‘ಡಿಡಿಎಲ್​ಜೆ’ ಸಿನಿಮಾದಲ್ಲಿದೆ. ಈಗಾಗಲೇ ಮದುವೆ ನಿಶ್ಚಯ ಆಗಿರುವ ಹುಡುಗಿಯನ್ನು ಹೀರೋ ಪ್ರೀತಿಸುತ್ತಾನೆ. ಆಕೆಯನ್ನು ಪಡೆದುಕೊಳ್ಳಲು ಆತ ಸಖತ್​ ಕಷ್ಟಪಡುತ್ತಾನೆ. ಆ ಕಹಾನಿಗೆ ಜನರು ಮನ ಸೋತರು. ಜತಿನ್​-ಲಲಿತ್​ ಸಂಗೀತ ನಿರ್ದೇಶನ ಮಾಡಿದ ಹಾಡುಗಳು ಭಾರಿ ಜನಪ್ರಿಯತೆ ಪಡೆದುಕೊಂಡವು. ಇಂದಿಗೂ ಈ ಗೀತೆಗಳು ಕೇಳುಗರ ಫೇವರಿಟ್​ ಆಗಿ ಉಳಿದುಕೊಂಡಿವೆ. ಪ್ರತಿ ಬಾಲಿವುಡ್​ ಪ್ರೇಮಿಯ ಹೃದಯದಲ್ಲಿ ಈ ಸಾಂಗ್ಸ್​ ಗುನುಗುಡುತ್ತಿವೆ.

View this post on Instagram

A post shared by Kajol Devgan (@kajol)

ಭಾರತೀಯ ಸಿನಿಮಾ ಇತಿಹಾಸದಲ್ಲಿ ಅತಿ ಹೆಚ್ಚು ವರ್ಷಗಳ ಕಾಲ ಪ್ರದರ್ಶನ ಕಂಡ ಚಿತ್ರ ಎಂಬ ಖ್ಯಾತಿ ‘ಡಿಡಿಎಲ್​ಜೆ’ ಸಿನಿಮಾಗೆ ಸಲ್ಲುತ್ತದೆ. 1995ರಿಂದು ಇಂದಿನ ತನಕ ಮುಂಬೈನ ‘ಮರಾಠ ಮಂದಿರ’ ಥಿಯೇಟರ್​ನಲ್ಲಿ ಈ ಸಿನಿಮಾ ಪ್ರದರ್ಶನ ಕಾಣುತ್ತಲೇ ಇದೆ. ಪ್ರತಿ ದಿನ ಮಾರ್ಗಿಂಗ್​ ಶೋ ‘ಡಿಡಿಎಲ್​ಜೆ’ ಚಿತ್ರಕ್ಕೆ ಮೀಸಲಾಗಿದೆ. ಆ ಮೂಲಕ ಈ ಕ್ಲಾಸಿಕ್ ಚಿತ್ರಕ್ಕೆ ಗೌರವ ಸಲ್ಲಿಸಲಾಗುತ್ತಿದೆ. ಅಭಿಮಾನಿಗಳು ಈ ಪರಿ ಪ್ರೀತಿ ತೋರಿಸುತ್ತಿರುವುದಕ್ಕೆ ಕಾಜೋಲ್​ ಅವರು ಧನ್ಯವಾದ ಸಲ್ಲಿಸಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್
ಕರ್ನಾಟಕದ ಭಕ್ತರು ಯಾರೂ ಮೃತಪಟ್ಟಿಲ್ಲ ಎಂದ ಸಚಿವ ರಾಮಲಿಂಗಾರೆಡ್ಡಿ
ಕರ್ನಾಟಕದ ಭಕ್ತರು ಯಾರೂ ಮೃತಪಟ್ಟಿಲ್ಲ ಎಂದ ಸಚಿವ ರಾಮಲಿಂಗಾರೆಡ್ಡಿ
ಕೆಪಿಸಿಸಿ ಅಧ್ಯಕ್ಷನ ಬಗ್ಗೆ ಕಾಂಗ್ರೆಸ್ ನಾಯಕರಿಗೆ ಭಯವಿಲ್ಲ: ಯತ್ನಾಳ್
ಕೆಪಿಸಿಸಿ ಅಧ್ಯಕ್ಷನ ಬಗ್ಗೆ ಕಾಂಗ್ರೆಸ್ ನಾಯಕರಿಗೆ ಭಯವಿಲ್ಲ: ಯತ್ನಾಳ್