ಮುಂಬೈನ ಸಮುದ್ರ ತೀರದ ಐಷಾರಾಮಿ ಹಡಗಿನಲ್ಲಿ ಅ.2ರ ರಾತ್ರಿ ರೇವ್ ಪಾರ್ಟಿ ಆಯೋಜಿಸಲಾಗಿತ್ತು. ಅದರಲ್ಲಿ ಬಾಲಿವುಡ್ನ ಸ್ಟಾರ್ ನಟ ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್ ಕೂಡ ಭಾಗಿ ಆಗಿದ್ದರು. ಹಾಗಾಗಿ ಅವರನ್ನು ಎನ್ಸಿಬಿ ಅಧಿಕಾರಿಗಳು ಬಂಧಿಸಿದ್ದಾರೆ. ಈ ಘಟನೆಯಿಂದಾಗಿ ಶಾರುಖ್ ಕುಟುಂಬಕ್ಕೆ ಸಂಕಷ್ಟ ಎದುರಾಗಿದೆ. ಅಚ್ಚರಿ ಏನೆಂದರೆ, ಹಲವು ವರ್ಷಗಳ ಹಿಂದೆಯೇ ಶಾರುಖ್ ಖಾನ್ ಅವರು ಮಗನ ಬಗ್ಗೆ ಮಾತನಾಡಿದ್ದರು. ತಮ್ಮ ಪುತ್ರ ಡ್ರಗ್ಸ್ ಸೇವಿಸಲಿ, ಹುಡುಗಿಯರ ಹಿಂದೆ ಬೇಕಾದರೂ ಹೋಗಲಿ ಎಂದು ಅವರು ಹೇಳಿರುವ ವಿಡಿಯೋ ಈಗ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.
ಅದು 1997ರಲ್ಲಿ ಶಾರುಖ್ ಖಾನ್ ಮತ್ತು ಗೌರಿ ಖಾನ್ ಜೊತೆಯಾಗಿ ನೀಡಿದ್ದ ಸಂದರ್ಶನ. ಅದರಲ್ಲಿ ಅವರು ತಮ್ಮ ಪುತ್ರ ಆರ್ಯನ್ ಖಾನ್ ಬಗ್ಗೆ ಮಾತನಾಡಿದ್ದರು. ‘ಆರ್ಯನ್ಗೆ ನಾನು ಹೇಳಿಬಿಟ್ಟಿದ್ದೇನೆ. ಅವನು ಹುಡುಗಿಯರ ಹಿಂದೆ ಹೋಗಬಹುದು. ಎಷ್ಟು ಬೇಕಾದರೂ ಸಿಗರೇಟ್ ಸೇದಬಹುದು. ಡ್ರಗ್ಸ್ ಸೇವಿಸಬಹುದು ಮತ್ತು ಸೆ*ಕ್ಸ್ ಕೂಡ ಮಾಡಬಹುದು. ನಾನು ಏನೆಲ್ಲ ಮಾಡಿಲ್ಲವೋ ಅದನ್ನೆಲ್ಲ ಆರ್ಯನ್ ಮಾಡಬಹುದು. ಚಿಕ್ಕವಯಸ್ಸಿನಲ್ಲೇ ಶುರುಮಾಡಲಿ. ಲೈಫ್ ಎಂಜಾಯ್ ಮಾಡಲಿ’ ಎಂದು ಶಾರುಖ್ ಹೇಳಿದ್ದರು.
ಪಕ್ಕದಲ್ಲೇ ಕುಳಿತು ಇದನ್ನೆಲ್ಲ ಕೇಳಿಸಿಕೊಂಡಿದ್ದ ಗೌರಿ ಖಾನ್ ಕಿಸಿಕಿಸಿ ನಕ್ಕಿದ್ದರು. ಆ ವಿಡಿಯೋ ಈಗ ಸಖತ್ ವೈರಲ್ ಆಗುತ್ತಿದೆ. ಅದನ್ನು ಕಂಡು ಜನರು ಖಾರವಾಗಿ ಟೀಕೆ ಮಾಡುತ್ತಿದ್ದಾರೆ. ಹೀಗೆ ಬೆಳೆಸಿದ್ದರ ಪರಿಣಾಮವಾಗಿಯೇ ಆರ್ಯನ್ ಖಾನ್ ಇಂದು ಹಾದಿ ತಪ್ಪಿದ್ದಾರೆ ಎಂದು ನೆಟ್ಟಿಗರು ಕಮೆಂಟ್ ಮಾಡುತ್ತಿದ್ದಾರೆ.
Looks like #AryanKhan took his father’s advice seriously! pic.twitter.com/LRzFarBDOh
— Shefali Vaidya. ?? (@ShefVaidya) October 3, 2021
ಅಂದಹಾಗೆ, ಈ ಎಲ್ಲ ಮಾತುಗಳನ್ನು ಶಾರುಖ್ ಖಾನ್ ಅವರು ತಮಾಷೆಗೆ ಹೇಳಿರಬಹುದು. ಆದರೆ ಅದೆಲ್ಲವೂ ಇಂದು ನಿಜವಾಗಿದೆ. ಹಾಗಾಗಿ ಶಾರುಖ್ ಅವರನ್ನು ಹಿಗ್ಗಾಮುಗ್ಗಾ ಟ್ರೋಲ್ ಮಾಡಲಾಗುತ್ತಿದೆ. ಈಗ ಆರ್ಯನ್ ಖಾನ್ ಸಂಕಷ್ಟಕ್ಕೆ ಸಿಲುಕಿದ್ದಾರೆ. ಅವರನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದ್ದು, ವರದಿಗಾಗಿ ನಿರೀಕ್ಷಿಸಲಾಗುತ್ತಿದೆ.
ಇದನ್ನೂ ಓದಿ:
ಶಾರುಖ್ ಪತ್ನಿ ಗೌರಿ ಖಾನ್ಗೂ ಅಂಟಿತ್ತು ಗಾಂಜಾ ಕಳಂಕ; ಏರ್ಪೋರ್ಟ್ನಲ್ಲಿ ನಡೆದ ಆ ಘಟನೆ ನಿಜವೇ?
ಡ್ರಗ್ಸ್ ಪಾರ್ಟಿಯಲ್ಲಿ ಸಿಕ್ಕಿಬಿದ್ದ ಶಾರುಖ್ ಪುತ್ರನ ಹಿನ್ನೆಲೆ ಏನು? ಇಲ್ಲಿದೆ ಆರ್ಯನ್ ಖಾನ್ ಇತಿಹಾಸ
Published On - 9:02 am, Mon, 4 October 21